ಶಿಶುವಿಹಾರದಲ್ಲಿ ಪ್ರಿನ್ಸಿಪಾಲ್​​ಗಾಗಿ ಟೀ ತಯಾರಿಸಿದ ಪುಟಾಣಿ ಮಕ್ಕಳು.. ವಿಡಿಯೋ ವೈರಲ್!

author-image
Gopal Kulkarni
Updated On
ಶಿಶುವಿಹಾರದಲ್ಲಿ ಪ್ರಿನ್ಸಿಪಾಲ್​​ಗಾಗಿ ಟೀ ತಯಾರಿಸಿದ ಪುಟಾಣಿ ಮಕ್ಕಳು.. ವಿಡಿಯೋ ವೈರಲ್!
Advertisment
  • ನೆಚ್ಚಿನ ಪ್ರಿನ್ಸಿಪಾಲರಿಗಾಗಿ ಟೀ ತಯಾರಿಸಿದ ಶಿಶುವಿಹಾರದ ಪುಟಾಣಿಗಳು
  • ತನ್ನ ಸಹಪಾಠಿಗಳಿಗೆ ಟೀ ಮಾಡುವ ವಿಧಾನ ತಿಳಿಸಿದನೊಬ್ಬ ಪುಟ್ಟ ಪೋರ
  • ಅವನ ಹೇಳಿದ ಸೂಚನೆಗಳನ್ನು ಅನುಸರಿಸಿ ಟೀ ತಯಾರಿಸಿದ ಮುದ್ದು ಮಕ್ಕಳು

ಇದೊಂದು ವಿಶೇಷ ಪಾಕ.. ಪುಟಾಣಿಗಳು ಕೆಲಕಾಲ ಪಾಠಶಾಲೆ ಮರೆತು, ಪಾಕಶಾಲೆಗೆ ಇಳಿದು, ಶಾಲೆಯ ಪ್ರಿನ್ಸಿಪಾಲ್​ಗೆ ತಯಾರಿಸಿದ ವಿಶೇಷ ಪಾನೀಯ. ಮುಗ್ದು ಮನಸ್ಸುಗಳ ಮುದ್ದಾದ ಉಡುಗೊರೆ. ಜಮ್ಮು ಕಾಶ್ಮೀರದಲ್ಲೊಂದು ತುಂಬಾ ಮನಮಿಡಿಯುವಂತ ದೃಶ್ಯಕ್ಕೆ ಸಾಕ್ಷಿಯಾಗಿದೆ ಒಂದು ಶಿಶುವಿಹಾರ. ಎಲ್ಲಾ ಮಕ್ಕಳು ಸೇರಿಕೊಂಡು ತಮ್ಮ ಪ್ರಿನ್ಸಿಪಾಲರಿಗಾಗಿ ಟೀ ಸಿದ್ಧಪಡಿಸಿದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾನಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆಗೆ ಸಂಬಂಧಿಸಿದ ಪುಟ್ಟ ವಿಡಿಯೋವೊಂದನ್ನು ಅನಿಲ್ ಚೌದರಿ ಎಂಬುವವರು ತನ್ನ ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೊಮಟೆಸ್ಸೊರಿ ನರ್ಗಿಸ್ ದತ್ತ ಪಬ್ಲಿಕ್​ ಶಾಲೆಯಲ್ಲಿ ನಡೆದ ವಿಶೇಷ ಘಟನೆಯಿದು.

ಇದನ್ನೂ ಓದಿ:Land Of Roti ಎಂದು ಯಾವ ರಾಜ್ಯವನ್ನು ಕರೆಯಲಾಗುತ್ತದೆ? ಎಷ್ಟು ಬಗೆಯ ರೋಟಿಗಳು ಇಲ್ಲುಂಟು?

ಈ ವಿಡಿಯೋದಲ್ಲಿ ಪುಟಾಣಿ ಹುಡುಗನೊಬ್ಬ ತನ್ನ ಸಹಪಾಠಿಗಳಿಗೆ ಚಹಾ ತಯಾರಿಸುವುದು ಹೇಗೆ ಎಂಬದುರ ಬಗ್ಗೆ ಸೂಚನೆಗಳನ್ನು ನೀಡುತ್ತಾ ಹೋಗುತ್ತಿದ್ದಾನೆ. ಅವನು ಹೇಳಿದಂತೆ ಹಂತ ಹಂತವಾಗಿ ಅವನ ಸಹಾಪಾಠಿಗಳು ಅನುಸುರಿಸಿದ್ದಾರೆ ಮೈಕ್ರೋಫೋನ್ ಮೂಲಕ ಚಹಾಗೆ ಏನೇನೂ ಹಾಕಬೇಕು. ಹೇಗೆ ತಯಾರಿಸಬೇಕು. ಸ್ಟೋವ್ ಆನ್ ಮಾಡುವುದರಿಂದ ಹಿಡಿದು ಚಹಾ ತಯಾರು ಆಗುವವರೆಗೂ ಆ ಪುಟಾಣಿ ಸೂಚನೆ ನೀಡುತ್ತಾ ಹೋಗಿದ್ದಾನೆ. ಸಹಪಾಠಿಗಳನ್ನು ಅದನ್ನು ಅನುಸರಿಸುತ್ತಾ ಹೋಗಿದ್ದಾರೆ.

ಈ ಎಲ್ಲಾ ಪುಟ್ಟ ದೃಶ್ಯಗಳು ಮುಗಿದ ಬಳಿಕ ಚಲೋ ಚಾಯ್ ಪೀತೆ ಹೈ ( ನಡೀರಿ ಚಹಾ ಕುಡಿಯೋಣ) ಎನ್ನುವುದರೊಂದಿಗೆ ಈ ವಿಡಿಯೋ ಮುಕ್ತಾಯಗೊಳ್ಳುತ್ತದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋದ ದೊಡ್ಡ ಸದ್ದು ಮಾಡುತ್ತಿದೆ. ಪುಟಾಣಿ ಮಕ್ಕಳ ಈ ಕಾರ್ಯಕ್ಕೆ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ.

ಹಲವರು ವಿಶ್ವದ ಸರ್ವಶ್ರೇಷ್ಠ ಶಿಶುವಿಹಾರವಿದು. ಇಂತಹ ವಿದ್ಯೆಗಳನ್ನೂ ಕೂಡ ಮಕ್ಕಳಿಗೆ ಕಲಿಸುವುದು ವಿಶೇಷವೇ ಸರಿ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಎಲ್ಲರೂ ಕ್ಯೂಟಿಗಳೇ. ನಾನು ಕೂಡ ಈಗ ಚಹಾ ಮಾಡುವುದು ಹೇಗೆ ಎಂದು ಕಲಿತೆ ಎಂದು ಕಮೆಂಟ್ ಹಾಕಿದ್ದಾರೆ.

ಇದನ್ನೂ ಓದಿ:ಭಾರತದಲ್ಲಿ ಅತಿಹೆಚ್ಚು ದ್ರಾಕ್ಷಿ ಉತ್ಪಾದನೆ ಮಾಡುವ 2ನೇ ಅತಿದೊಡ್ಡ ರಾಜ್ಯ ಕರ್ನಾಟಕ.. ನಂಬರ್ ಒನ್ ಯಾವುದು?

ಈ ಹಿಂದೆ ನಾಗಲ್ಯಾಂಡ್​ನ ಕೊಹಿಮಾದ ಸರ್ಕಾರಿ ಮಾಧ್ಯಮ ಶಾಲೆಯ ಮಕ್ಕಳು ಮಧ್ಯಾಹ್ನದ ಊಟಕ್ಕಾಗಿ ತರಕಾರಿ ಕೃಷಿ ಮಾಡುತ್ತಿರುವ ವಿಡಿಯೋವೊಂದು ದೊಡ್ಡದಾಗಿ ಸೌಂಡ್ ಮಾಡಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment