/newsfirstlive-kannada/media/post_attachments/wp-content/uploads/2024/11/Siraj.jpg)
ನಾಳೆಯಿಂದ ಐಪಿಎಲ್ (IPL) ಹಬ್ಬ ಶುರುವಾಗುತ್ತಿದೆ. ಹೊಸದಾಗಿ ಗುಜರಾತ್ ಟೈಟನ್ಸ್ (Gujarat Titans) ತಂಡವನ್ನು ಸೇರಿರುವ ಆರ್ಸಿಬಿ ಮಾಜಿ ಆಟಗಾರ ಮೊಮ್ಮದ್ ಸಿರಾಜ್ (Mohammed Siraj) ಭಾವುಕರಾಗಿದ್ದಾರೆ. ಆರ್ಸಿಬಿಯಲ್ಲಿದ್ದಾಗ ವಿರಾಟ್ ಕೊಹ್ಲಿಯ (Virat Kohli) ಬೆಂಬಲವನ್ನು ಸ್ಮರಿಸಿ ಭಾವುಕರಾಗಿದ್ದಾರೆ.
ಸಿರಾಜ್ ಆರ್ಸಿಬಿ ಪರ ಒಟ್ಟು ಸೀಸನ್ ಆಡಿದ್ದಾರೆ. ಆರ್ಸಿಬಿಯ ನೆಚ್ಚಿನ ಆಟಗಾರರಲ್ಲಿ ಒಬ್ಬರಾಗಿದ್ದ ಸಿರಾಜ್ ಅವರನ್ನು ಈ ವರ್ಷ ತಂಡದಿಂದ ಬಿಡುಗಡೆ ಮಾಡಿದೆ. ಆರ್ಟಿಎಂ (RTM) ನಿಯಮದಡಿಯಲ್ಲಿ ಉಳಿಸಿಕೊಳ್ಳಲು ಅವಕಾಶವಿದ್ದರೂ ಆರ್ಸಿಬಿ, ಅವರನ್ನು ಕೈಬಿಟ್ಟಿತ್ತು. ಇದೀಗ ಗುಜರಾತ್ ತಂಡವನ್ನು ಸೇರಿದ ನಂತರ ಕೊಹ್ಲಿಯ ಬೆಂಬಲವನ್ನು ಸ್ಮರಿಸಿದ್ದಾರೆ.
ಇದನ್ನೂ ಓದಿ: ಯಜುವೇಂದ್ರ ಚಹಲ್, ಧನಶ್ರೀ ಡಿವೋರ್ಸ್ ಅಧಿಕೃತ; ಜೀವನಾಂಶ ₹60 ಕೋಟಿ ಅಲ್ಲ.. ಮತ್ತೆಷ್ಟು?
ಕೊಹ್ಲಿ ನಾಯಕತ್ವದಲ್ಲಿ ಸಿರಾಜ್ ಜನಪ್ರಿಯತೆಗೊಂಡರು. ಕೊಹ್ಲಿ ನೀಡಿದ ಅವಕಾಶ ಹಾಗೂ ಬೆಂಬಲದಿಂದಾಗಿ ಸಿರಾಜ್, ಟೀಂ ಇಂಡಿಯಾದ ಪ್ರಮುಖ ಬೌಲರ್ ಎನಿಸಿಕೊಂಡರು. ನಿನ್ನೆಯ ದಿನ ಮಾತನಾಡಿರುವ ಸಿರಾಜ್, ಗುಜರಾತ್ ತಂಡವನ್ನು ಸೇರಿಕೊಳ್ಳುತ್ತಿರೋದು ನಿಜಕ್ಕೂ ಖುಷಿ ಆಗುತ್ತಿದೆ. ಸಹೋದರ ವಿರಾಟ್ ಕೊಹ್ಲಿ ನನಗೆ ಕಠಿಣ ಸಂದರ್ಭದಲ್ಲೂ ಸಾಕಷ್ಟು ಬೆಂಬಲ ನೀಡಿದ್ದರು. ಅದರಿಂದ ಆರ್ಸಿಬಿಯನ್ನು ತೊರೆಯುವಾಗ ಬೇಸರವಾಯ್ತು. ಆದರೆ ಗಿಲ್ ನೇತೃತ್ವದಲ್ಲಿ ನಾವು ಅದ್ಭುತ ತಂಡ ಹೊಂದಿದ್ದೇವೆ ಎಂದಿದ್ದಾರೆ.
ಈ ಬಾರಿಯ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟನ್ಸ್ ತಂಡವು, ಸಿರಾಜ್ ಅವರನ್ನು 12.25 ಕೋಟಿಗೆ ಖರೀದಿ ಮಾಡಿದೆ. ಸಿರಾಜ್ ಅವರು 2017ರಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ನಲ್ಲಿ ಆಡುವ ಮೂಲಕ ಐಪಿಎಲ್ಗೆ ಪದಾರ್ಪಣೆ ಮಾಡಿದರು. 2018ರಲ್ಲಿ ಆರ್ಸಿಬಿ 2.20 ಕೋಟಿ ರೂಪಾಯಿ ಸಿರಾಜ್ ಅವರನ್ನು ಖರೀದಿ ಮಾಡಿತ್ತು.
ಇದನ್ನೂ ಓದಿ: ಇಂದಿನಿಂದ SSLC ಪರೀಕ್ಷೆ.. ಎಕ್ಸಾಂ ಬರೆಯಲು 8,96,447 ವಿದ್ಯಾರ್ಥಿಗಳು ನೋಂದಣಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ