/newsfirstlive-kannada/media/post_attachments/wp-content/uploads/2025/04/RAJAT_KOHLI.jpg)
ಮಳೆಯ ಕಾರಣದಿಂದ ತಡವಾಗಿ ಪ್ರಾರಂಭಿಸಲಾಗಿದ್ದ ಪಂಜಾಬ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಆರ್ಸಿಬಿ ಓಪನರ್ಸ್ ಬ್ಯಾಟಿಂಗ್ನಲ್ಲಿ ತೀವ್ರ ಕೆಟ್ಟ ಪ್ರದರ್ಶನ ನೀಡಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಫಿಲಿಪ್ ಸಾಲ್ಟ್ ಹಾಗೇ ಬಂದು ಹೀಗೆ ಪೆವಿಲಿಯನ್ಗೆ ಓಡಿದರು.
ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್, ಆರ್ಸಿಬಿಯನ್ನ ಬ್ಯಾಟಿಂಗ್ಗೆ ಕರೆದರು. ಅದರಂತೆ ಆರ್ಸಿಬಿ ಪರ ಓಪನರ್ಗಳಾಗಿ ಬ್ಯಾಟಿಂಗ್ಗೆ ಬಂದ ವಿರಾಟ್ ಕೊಹ್ಲಿ ಹಾಗೂ ಫಿಲಿಪ್ ಸಾಲ್ಟ್ ಮತ್ತೊಮ್ಮೆ ತವರಿನ ನೆಲದಲ್ಲಿ ವಿಫಲ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾರೆ.
ಇದನ್ನೂ ಓದಿ:ಚಿನ್ನಸ್ವಾಮಿಯಲ್ಲಿ ಕ್ಯಾಪ್ಟನ್ ರಜತ್ಗೆ ದಕ್ಕದ ಟಾಸ್.. ಪ್ಲೇಯಿಂಗ್- 11ರಲ್ಲಿ ಯಾರ್ ಯಾರಿಗೆ ಚಾನ್ಸ್?
ಆರಂಭಿಕರಾದ ಫಿಲಿಪ್ ಸಾಲ್ಟ್ ಬಂದಷ್ಟೇ ವೇಗವಾಗಿ ಮೈದಾನದಿಂದ ಹೊರ ನಡೆದರು. ಕೇವಲ 4 ಬಾಲ್ಗಳನ್ನು ಎದುರಿಸಿದ ಸಾಲ್ಟ್ ಒಂದು ಬೌಂಡರಿ ಬಾರಿಸಿ ಔಟ್ ಆಗಿದ್ದಾರೆ. ಆರ್ಷ್ದೀಪ್ ಸಿಂಗ್ ಬೌಲಿಂಗ್ನಲ್ಲಿ ಜೋಶ್ ಇಂಗ್ಲೀಷ್ಗೆ ಕ್ಯಾಚ್ ಕೊಟ್ಟು ಬೇಸರದಿಂದ ಡ್ರೆಸ್ಸಿಂಗ್ ರೂಮ್ಗೆ ತೆರಳಿದರು.
ಇನ್ನು ಸಾಲ್ಟ್ ಹೋದ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೂಡ ಕ್ರೀಸ್ ಖಾಲಿ ಮಾಡಿದರು. ತಂಡದ ಮೊತ್ತ 21 ರನ್ ಆಗಿರುವಾಗ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದರು. ಆರ್ಷ್ದೀಪ್ ಸಿಂಗ್ ಬೌಲಿಂಗ್ನಲ್ಲಿ ಮಾರ್ಕೊ ಜಾನ್ಸನ್ಗೆ ಕ್ಯಾಚ್ ಕೊಟ್ಟರು. ಇಲ್ಲಿಗೆ ಆರ್ಸಿಬಿಯ ಬಲಿಷ್ಠ ಬ್ಯಾಟಿಂಗ್ ಪಡೆಗೆ ದೊಡ್ಡ ಪೆಟ್ಟು ಬಿದ್ದಿತು. ಏಕೆಂದರೆ ಸಾಲ್ಟ್ ಹಾಗೂ ಕೊಹ್ಲಿ ಈ ಇಬ್ಬರು ಕೊಂಚ ಸಮಯ ಕ್ರೀಸ್ನಲ್ಲಿದ್ರೆ ಉಳಿದ ಬ್ಯಾಟರ್ಗಳಿಗೆ ರನ್ಗಳಿಸಲು ಅನುಕೂಲವಾಗುತ್ತಿತ್ತು. ಇದು 14 ಓವರ್ಗಳ ಮ್ಯಾಚ್ ಆಗಿದ್ದು ಆರ್ಸಿಬಿ ಬ್ಯಾಟರ್ಗಳು ವಿಫಲ ಪ್ರದರ್ಶನ ನೀಡುತ್ತಿದ್ದಾರೆ. ಸದ್ಯ ಆರ್ಸಿಬಿ 40 ರನ್ಗೆ ಪ್ರಮುಖ 5 ವಿಕೆಟ್ಗಳನ್ನ ಕಳೆದುಕೊಂಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ