newsfirstkannada.com

12 ಲಕ್ಷದಿಂದ 17 ಕೋಟಿಯವರೆಗೆ.. ದಾಖಲೆಗಳ ಸರದಾರನಿಗೆ ಇದೆ ಒಂದೇ ಒಂದು ಕೊರಗು..!

Share :

Published March 12, 2024 at 11:55am

Update March 12, 2024 at 11:56am

    ಕೊಹ್ಲಿ- ಆರ್​​ಸಿಬಿ ಭಾಂದವ್ಯಕ್ಕೆ 16ರ ಸಂಭ್ರಮ

    ಒಂದೇ ಫ್ರಾಂಚೈಸಿ.. 16 ವರ್ಷದ ಸುದೀರ್ಘ ಜರ್ನಿ

    ಆರ್​​ಸಿಬಿ ಸಕ್ಸಸ್​ ಹಿಂದಿನ ಸೀಕ್ರೆಟ್​​​​ ವಿರಾಟ್ ಕೊಹ್ಲಿ

16 ವರ್ಷಗಳ ಐಪಿಎಲ್​ನ ಸುದೀರ್ಘ ಜರ್ನಿಯಲ್ಲಿ ಅದೆಷ್ಟೋ ಆಟಗಾರರು ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಬಂದ್ದಿದ್ದಾರೆ, ಹೋಗಿದ್ದಾರೆ. ಆರಂಭದಲ್ಲಿ ಆಟಗಾರರಾಗಿದ್ದವರು ಈಗ ಕೋಚ್​​ ಕೂಡ ಆಗಿದ್ದಾರೆ. ರನ್​​ ಹೊಳೆ ಹರಿದಿದೆ. ಬೌಂಡರಿ-ಸಿಕ್ಸರ್​ಗಳ ಸುರಿಮಳೆ ಸುರಿದಿದೆ. ಈ ಐಪಿಎಲ್​​ನ ಸುದೀರ್ಘ ಇತಿಹಾಸದಲ್ಲಿ ಬದಲಾಗದ ಸತ್ಯ ಒಂದಿದೆ. ಅದೇ ಕಿಂಗ್​ ಕೊಹ್ಲಿ ಮತ್ತು ಆರ್​​ಸಿಬಿ ನಡುವಿನ ಬಿಡಿಸಲಾಗದ ಬಂಧ.

2008ರಿಂದ 2024ರವರೆಗೆ..
VO: 11-03-2008.. ನಿನ್ನೆಗೆ ಸರಿಯಾಗಿ 16 ವರ್ಷಗಳ ಹಿಂದೆ… ಇಂಡಿಯನ್​ ಪ್ರೀಮಿಯರ್​​ ಲೀಗ್​ನಲ್ಲಿ ಕಿಂಗ್​​ ಕೊಹ್ಲಿಯ ಜರ್ನಿ ಆರಂಭವಾಗಿತ್ತು. ಅಂಡರ್​-19 ವಿಶ್ವಕಪ್​ನಲ್ಲಿ ಭರವಸೆ ಹುಟ್ಟು ಹಾಕಿದ್ದ ಯುವ ಆಟಗಾರ ಆರ್​​​ಸಿಬಿ ತೆಕ್ಕೆಗೆ ಬಿದ್ದಿದ್ದ. 12 ಲಕ್ಷಕ್ಕೆ ಆರ್​​​ಸಿಬಿ ಸೇರಿದ ಕೊಹ್ಲಿ ಇಂದು 17 ಕೋಟಿ ಸಂಪಾದನೆ ಮಾಡ್ತಿದ್ದಾರೆ.

ಆರಂಭಿಕ ಸೀಸನ್​ಗಳಲ್ಲಿ ವಿರಾಟ್​​ ಕೊಹ್ಲಿ ಫ್ಲಾಪ್​
ಆರ್​ಸಿಬಿ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡು ಕೊಹ್ಲಿಯನ್ನ ಆರಂಭಿಕ ಸೀಸನ್​ನಲ್ಲಿ ಖರೀದಿಸ್ತು. ಆದ್ರೆ, ಕೊಹ್ಲಿ ಫಸ್ಟ್​ 2 ಸೀಸನ್​ನಲ್ಲೇ ಫ್ಲಾಪ್​ ಆದ್ರು. ಆದ್ರೆ, ಫ್ರಾಂಚೈಸಿಗೆ ಕೊಹ್ಲಿಯ ಸಾಮರ್ಥ್ಯದ ಮೇಲೆ ನಂಬಿಕೆಯಿತ್ತು. ಬ್ಯಾಕ್​ ಮಾಡ್ತು. ಫ್ಲಾಪ್​ ಶೋ ನೀಡಿದ್ರೂ ಬ್ಯಾಕ್​ ಮಾಡಿದ ಫ್ರಾಂಚೈಸಿಯ ನಂಬಿಕೆಯನ್ನ ಕೊಹ್ಲಿ ಹುಸಿಗೊಳಿಸಲಿಲ್ಲ. ನಂತರದ ಸೀಸನ್​ಗಳಲ್ಲಿ ಉಗ್ರಾವತಾರ ಎತ್ತಿದ್ರು. ಈಗ ಐಪಿಎಲ್​​ನ ಕಿಂಗ್​ ಆಗಿದ್ದಾರೆ.

ಕೊಹ್ಲಿ ಸಕ್ಸಸ್​ ಹಿಂದಿದೆ ಆರ್​​ಸಿಬಿ ಫ್ರಾಂಚೈಸಿ
ವಿರಾಟ್​ ಕೊಹ್ಲಿ ಆರ್​​ಸಿಬಿ ಸೇರಿದ ಬಳಿಕ ಹಿಂದೆ ನೋಡಲಿಲ್ಲ.. ಫ್ರಾಂಚೈಸಿಯೂ ಹಿಂದೆ ನೋಡಿದ್ದಿಲ್ಲ.. ಅಂದಿನ ಸಾಮಾನ್ಯ ಕೊಹ್ಲಿ, ಇಂದು ಕಿಂಗ್​ ಆಗಿರೋದಕ್ಕೆ ಆರ್​​ಸಿಬಿ ಫ್ರಾಂಚೈಸಿ ಇಟ್ಟಿದ್ದ ನಂಬಿಕೆ ಮುಖ್ಯ ಕಾರಣ. ಅಂದು ಫೇಲಾದ ಕೊಹ್ಲಿಗೆ ಫ್ರಾಂಚೈಸಿ ಅವಕಾಶದ ಮೇಲೆ ಅವಕಾಶ ಕೊಡ್ತು. ಈ ಅವಕಾಶ ಸಕ್ಸಸ್​ ಕಂಡ ಕೊಹ್ಲಿ, ಆರ್​​ಸಿಬಿ ಫ್ರಾಂಚೈಸಿಯ ಗತ್ತು ಇಡೀ ವಿಶ್ವಕ್ಕೆ ಗೊತ್ತಾಗುವಂತೆ ಮಾಡಿದ್ರು. ಕೊಹ್ಲಿ ಅಬ್ಬರ ಹೆಚ್ಚಾದ್ದಂತೆ ಆರ್​​​ಸಿಬಿ ಫ್ಯಾನ್​​ ಬೇಸ್​​ ದುಪ್ಪಟ್ಟಾಯ್ತು. ಬ್ರ್ಯಾಂಡ್​ ವ್ಯಾಲ್ಯೂ ಗಗನದೆತ್ತರಕ್ಕೆ ಬೆಳೆಯಿತು.

ಆರ್​​ಸಿಬಿಯಲ್ಲೇ ಆರಂಭ, ಆರ್​​ಸಿಬಿಯಲ್ಲೇ ಅಂತ್ಯ
ಸದ್ಯದ ಪರಿಸ್ಥಿತಿ ಹೇಗಿದೆ ಅಂದ್ರೆ ವಿರಾಟ್​​ ಕೊಹ್ಲಿ ಅಂದ್ರೆ ಆರ್​​ಸಿಬಿ.. ಆರ್​​ಸಿಬಿ ಅಂದ್ರೆ ವಿರಾಟ್​ ಕೊಹ್ಲಿ ಅಂತಾ ಆಗ್ಬಿಟ್ಟಿದೆ..! ಪ್ರತಿ ಸೀಸನ್, ಪ್ರತಿ ಪಂದ್ಯ ನಡೆದಾಗಲೂ ಈ ಮಾತು ಪ್ರೂವ್​ ಆಗಿದೆ.. ಆರ್​​ಸಿಬಿಯಲ್ಲಿ ಸಿಕ್ಕ ಗೌರವ, ಹೆಸರು, ಪ್ರೀತಿ, ಸಕ್ಸಸ್​.. ಬಹುಷಃ ಕೊಹ್ಲಿ ಬೇರೆ ತಂಡದಲ್ಲಿದ್ರೆ, ಸಿಗ್ತಿತ್ತೋ ಇಲ್ವೋ ಗೊತ್ತಿಲ್ಲ.. ಬಟ್​​​ ಆರ್​​ಸಿಬಿಯಲ್ಲಂತೂ ಎಲ್ಲವೂ ಕೊಹ್ಲಿಗೆ ಸಿಕ್ಕಿದೆ. ಹೀಗಾಗಿಯೇ ಆರ್​​​ಸಿಬಿ ಫಸ್ಟ್​ ಆರ್​​ಸಿಬಿ ಲಾಸ್ಟ್​ ಅಂದಿರೋದು. ಆರ್​​ಸಿಬಿ ಬಿಟ್ಟು ಯಾವುದೇ ಕಾರಣಕ್ಕೂ ಬೇರೆ ಫ್ರಾಂಚೈಸಿಗೆ ಆಡಲ್ಲ ಅನ್ನೋದು ಕೊಹ್ಲಿ ಲಾಯಲ್​ ಮಾತು.

ದಾಖಲೆಗಳ ಸರದಾರನಿಗೆ ಒಂದೇ ಒಂದು ಕೊರಗು.!
ಆಡು ಮುಟ್ಟದ ಸೊಪ್ಪಿಲ್ಲ ಅನ್ನೋ ಮಾತಿನಂತೆ ಐಪಿಎಲ್​ನಲ್ಲಿ ಕೊಹ್ಲಿ ಮಾಡದ ದಾಖಲೆಯೇ ಆಗಿಲ್ಲ.. ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿಗೆ ಕಿಂಗ್​ ಕೊಹ್ಲಿ ಬಾಸ್​​. ಈ ಮಾತನ್ನ ಯಾರೂ ತೆಗೆದು ಹಾಕೋಕೆ ಸಾಧ್ಯಾನೆ ಇಲ್ಲ. ಒಂದಲ್ಲ.. ಎರಡಲ್ಲ.. ಐಪಿಎಲ್​ ಟೂರ್ನಿಯ ದಾಖಲೆಗಳ ಪುಟವನ್ನ ತಿರುವಿ ಹಾಕಿದ್ರೆ ಸಾಕು.. ಬಹುತೇಕ ಎಲ್ಲಾ ದಾಖಲೆಗಳಿಗೂ ಕಿಂಗ್​ ಕೊಹ್ಲಿಯೇ ಒಡೆಯ..! ಇಂತಾ ಕೊಹ್ಲಿಗೆ ಒಂದು ಕೊರಗು ಕಾಡ್ತಿದೆ. ಅದೇ ಐಪಿಎಲ್​ ಟ್ರೋಫಿ…!

ಐಪಿಎಲ್​ನಿಂದ ನೇಮ್​, ಫೇಮ್​, ಫ್ಯಾನ್​ ಬೇಸ್​​ ಎಲ್ಲವೂ ಕೊಹ್ಲಿಗೆ ಸಿಕ್ಕಿದೆ. 15 ವರ್ಷಗಳ ಅತ್ಯಂತ ಶ್ರೇಷ್ಠ ಭಾಂದವ್ಯ ಫ್ರಾಂಚೈಸಿಯ ಜೊತೆಗೂ ಇದೆ. ಆದ್ರೆ, ಅತ್ಯಂತ ಹೆಚ್ಚು ಪ್ರೀತಿ ನೀಡಿದ ಅಭಿಮಾನಿಗಳಿಗೆ, ಎಲ್ಲವನ್ನೂ ಕೊಟ್ಟ ಫ್ರಾಂಚೈಸಿಗೆ ನಾನು ಟ್ರೋಫಿ ಗೆಲ್ಲಿಸಿಕೊಡಲಿಲ್ಲ ಅನ್ನೋ ಕೊರಗು ಕೊಹ್ಲಿಗಿದೆ. ಆ ಕೊರಗು ಈ ಆವೃತ್ತಿಯಲ್ಲಾದ್ರೂ ನೀಗಲಿ ಅನ್ನೋದು ಫ್ಯಾನ್ಸ್​ ಆಶಯವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

12 ಲಕ್ಷದಿಂದ 17 ಕೋಟಿಯವರೆಗೆ.. ದಾಖಲೆಗಳ ಸರದಾರನಿಗೆ ಇದೆ ಒಂದೇ ಒಂದು ಕೊರಗು..!

https://newsfirstlive.com/wp-content/uploads/2024/03/KOHLI.jpg

Load More