/newsfirstlive-kannada/media/post_attachments/wp-content/uploads/2025/05/VIRAT_KOHLI_RCB_VS_LSG.jpg)
2025ರ ಐಪಿಎಲ್​ನ ಅಂತಿಮ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು​ ತಂಡ ಹೊಸ ಇತಿಹಾಸ ಬರೆದಿದೆ. ಬರೋಬ್ಬರಿ 228 ರನ್​ಗಳನ್ನು ಚೇಸ್ ಮಾಡುವ ಮೂಲಕ ಲಕ್ನೋ ಸೂಪರ್ ಜೆಂಟ್ಸ್​ ವಿರುದ್ಧ ರೋಚಕವಾದ ಗೆಲವು ಪಡೆದಿದೆ. ಈ ಮಹತ್ವದ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅರ್ಧಶತಕ ಬಾರಿಸೋ ಮೂಲಕ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ.
ಆರ್​ಸಿಬಿಯ ಸ್ಟಾರ್ ಬ್ಯಾಟರ್​​​​ ವಿರಾಟ್ ಕೊಹ್ಲಿ 2025ರ ಐಪಿಎಲ್​ ಟ್ರೋಫಿಯಲ್ಲಿ ಅತ್ಯುತ್ತಮ ಪರ್ಫಾಮೆನ್ಸ್​ನಲ್ಲಿ ಬ್ಯಾಟ್ ಬೀಸಿ ಒಂದೇ ಪಂದ್ಯದಲ್ಲಿ ಎರಡು ವಿಶ್ವದಾಖಲೆಗಳನ್ನು ಬರೆದರು. ಐಪಿಎಲ್​ನ ಒಂದು ಫ್ರಾಂಚೈಸಿ ಅಂದರೆ ಆರ್​ಸಿಬಿ ಪರವಾಗಿ 9,000 ರನ್ ಗಳಿಸಲು ಇನ್ನು 24 ರನ್​ಗಳು ಬಾಕಿ ಇದ್ದವು. ಕಿಂಗ್ ಕೊಹ್ಲಿ, ಲಕ್ನೋ ಜೊತೆಗಿನ ಪಂದ್ಯದಲ್ಲಿ 54 ರನ್​ಗಳಿಸೋ ಮೂಲಕ ವರ್ಲ್ಡ್​ ರೆಕಾರ್ಡ್​ ಮಾಡಿದರು.
ಐಪಿಎಲ್‌ನಲ್ಲಿ 2008ರಿಂದಲೂ ವಿರಾಟ್ ಕೊಹ್ಲಿ, ಆರ್‌ಸಿಬಿ ತಂಡದಲ್ಲಿ ಮಾತ್ರ ಬ್ಯಾಟ್ ಬೀಸಿದ್ದು ಇದುವರೆಗಿನ 18 ಸೀಸನ್​ಗಳ 270 ಇನ್ನಿಂಗ್ಸ್​ಗಳಲ್ಲಿ ಒಟ್ಟು 9,030 ರನ್​ ಗಳಿಸಿದಂತೆ ಆಗಿದೆ. ಈ 270 ಇನ್ನಿಂಗ್ಸ್​​ನಲ್ಲಿ 14 ಪಂದ್ಯಗಳಿಂದ 424 ರನ್‌ಗಳು ಚಾಂಪಿಯನ್ಸ್ ಲೀಗ್ (ಸಿಎಲ್)ನದ್ದು ಆಗಿವೆ. ಚಾಂಪಿಯನ್ಸ್ ಲೀಗ್​ನಲ್ಲಿ ವಿರಾಟ್​ ಕೊಹ್ಲಿ ಬ್ಯಾಟಿಂಗ್​ನಲ್ಲಿ ಪರಾಕ್ರಮ ಮೆರೆದಿದ್ದರು. ಆದರೆ ಇದು ಈಗ ಸ್ಥಗಿತಮಾಡಲಾಗಿದೆ. ಒಂದು ಫ್ರಾಂಚೈಸಿ ಪರ ಇಷ್ಟೊಂದು ರನ್​ ಗಳಿಸಿರೋದು ನಿಜಕ್ಕೂ ಐಪಿಎಲ್​ ಇತಿಹಾಸದಲ್ಲಿ ದೊಡ್ಡ ಸಾಧನೆಯೇ ಸರಿ.
ಕೊಹ್ಲಿಯ ಮತ್ತೊಂದು ರೆಕಾರ್ಡ್ ಎಂದರೆ.. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕ (ಫಿಫ್ಟಿ ಪ್ಲಸ್​) ಗಳಿಸಿದ ಬ್ಯಾಟರ್ ಎನ್ನುವ​ ಖ್ಯಾತಿಗೆ ಕಿಂಗ್ ಕೊಹ್ಲಿ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಬ್ಯಾಟರ್​ ಡೇವಿಡ್ ವಾರ್ನರ್​ ಅವರ ದಾಖಲೆಯನ್ನು ಬ್ರೇಕ್ ಮಾಡಲು ಕೇವಲ ಒಂದೇ ಒಂದು ಅರ್ಧಶತಕ ಅಗತ್ಯವಿತ್ತು. ಲಕ್ನೋ ತಂಡದ ವಿರುದ್ಧ 54 ರನ್​ ಬಾರಿಸುತ್ತಿದ್ದಂತೆ ಕೊಹ್ಲಿ ಒಟ್ಟು 63 ಬಾರಿ ಫಿಫ್ಟಿ ಪ್ಲಸ್​ ರನ್​​ಗಳನ್ನು ಬಾರಿಸಿದಂತೆ ಆಗಿದೆ. ಇದರಿಂದ​ ಕೊಹ್ಲಿ 63 ಬಾರಿ ಫಿಫ್ಟಿ ಪ್ಲಸ್​ ರನ್​ ಬಾರಿಸಿ ಆಸ್ಟ್ರೇಲಿಯಾದ ಮಾಜಿ ಪ್ಲೇಯರ್ ಡೇವಿಡ್ ವಾರ್ನರ್ ದಾಖಲೆಯನ್ನು ಮುರಿದರು.
ಐಪಿಎಲ್‌ನಲ್ಲಿ ಅತಿ ಹೆಚ್ಚು ಫಿಫ್ಟಿ ಪ್ಲಸ್ ರನ್​ ಗಳಿಸಿದ ಬ್ಯಾಟರ್ಸ್​
- ವಿರಾಟ್ ಕೊಹ್ಲಿ- 63
- ಡೇವಿಡ್ ವಾರ್ನರ್- 62
- ಶಿಖರ್ ಧವನ್- 51
- ರೋಹಿತ್ ಶರ್ಮಾ- 46
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ