/newsfirstlive-kannada/media/post_attachments/wp-content/uploads/2025/04/Virat-kohli.jpg)
ವಿರಾಟ್ ಕೊಹ್ಲಿ ಮೇಲೆ ಕೆಲವು ಆರ್ಸಿಬಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಫೀಲ್ಡಿಂಗ್ ವೇಳೆ ಅವರು ನಡೆದುಕೊಳ್ಳುವ ರೀತಿಯನ್ನು ಪ್ರಶ್ನೆ ಮಾಡುತ್ತಿದ್ದಾರೆ.
ನಿನ್ನೆಯ ಪಂದ್ಯವು ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿತ್ತು. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಅವಧಿಯಲ್ಲಿ ಕ್ಯಾಪ್ಟನ್ ರಜತ್ ಪಾಟೀದಾರ್ ಮೇಲೆ ಬೇಸರಗೊಂಡಿದ್ದಾರೆ ಎನ್ನಲಾಗ್ತಿದೆ. ರಜತ್ ಪಾಟೀದಾರ್ ತೆಗೆದುಕೊಳ್ಳುವ ಕೆಲವು ನಿರ್ಧಾರಕ್ಕೆ ಕೊಹ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರಾ ಎಂಬ ಅನುಮಾನ ಮೂಡಿದೆ. ಅದಕ್ಕೆ ಪಂದ್ಯದ ಅವಧಿಯಲ್ಲಿ ಆಗಾಗ ವೈರಲ್ ಆಗುವ ಫೋಟೋ ಮತ್ತು ವಿಡಿಯೋಗಳು..
ಇದನ್ನೂ ಓದಿ: RCBಗೆ ತವರಲ್ಲಿ ಮೊದಲ ಗೆಲುವು.. ರೋಚಕ ಪಂದ್ಯದಲ್ಲಿ ರಾಯಲ್ಸ್ಗೆ ಪಂಚ್, ರಾಯಲ್ ಸಂಭ್ರಮ
ನಿನ್ನೆಯ ದಿನ ಏನಾಯ್ತು..?
ನಿನ್ನೆಯೂ ಕೂಡ ವಿರಾಟ್ ಕೊಹ್ಲಿ ಬೇಸರದಲ್ಲಿರುವ ಫೋಟೋ ವಿಡಿಯೋಗಳು ವೈರಲ್ ಆಗ್ತಿವೆ. ಫೋಟೋ ಒಂದರಲ್ಲಿ ಮುಖ್ಯ ಕೋಚ್ ಮತ್ತು ಮೆಂಟರ್ ಎದರು ತಲೆ ತಗ್ಗಿಸಿ ಕೈಮುಗಿಯುತ್ತಿರುವ ದೃಶ್ಯ ವೈರಲ್ ಆಗಿದೆ. ಇದನ್ನು ನೋಡಿದ ಕೆಲವು ಅಭಿಮಾನಿಗಳು, ವಿರಾಟ್ ಹೀಗೆ ಮಾಡಬಾರದು. ಕ್ಯಾಪ್ಟನ್ ರಜತ್ ಪಾಟೀದಾರ್ ನಿರ್ಧಾರದ ಮೇಲೆ ಅಸಮಾಧಾನ ವ್ಯಕ್ತವಾದಂತೆ ಇದೆ. ರಜತ್ ಪಾಟೀದಾರ್ ತಾವು ಏನು ಅನ್ನೋದನ್ನು ಪ್ರೂವ್ ಮಾಡಿಕೊಂಡಿದ್ದಾರೆ. ಕೊಹ್ಲಿ ರಜತ್ಗೆ ಮುಕ್ತವಾಗಿ ಕ್ಯಾಪ್ಟನ್ಸಿ ಮಾಡಲು ಅವಕಾಶ ಮಾಡಿಕೊಡಬೇಕು ಎಂಬ ಚರ್ಚೆ ಶುರುವಾಗಿದೆ.
ಇದನ್ನೂ ಓದಿ: ಮ್ಯಾಚ್ ಕೈತಪ್ಪಿ ಹೋಗಿತ್ತು.. ಕೊನೇ 2 ಓವರ್ನಲ್ಲಿ ರೋಚಕ ತಿರುವು.. RCB ಗೆಲ್ಲಿಸಿದ್ದು ಯಾರು?
ಮಾತ್ರವಲ್ಲ, ಪಂಜಾಬ್ ವಿರುದ್ಧ ಬೆಂಗಳೂರಲ್ಲಿ ಸೋತಾಗಲೂ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಪಂದ್ಯ ಸೋಲುವ ಹೊತ್ತಿಗೆ ಮೈದಾನದಲ್ಲೇ ದಿನೇಶ್ ಕಾರ್ತಿಕ್ ಜೊತೆ ವಾಗ್ವಾದಕ್ಕೆ ಇಳಿದಿದ್ದರು. ಇದನ್ನು ನೋಡಿದ ಕೆಲವು ಅಭಿಮಾನಿಗಳು, ರಜತ್ ಪಾಟೀದಾರ್ ಮೇಲೆ ಮುನಿಸಿಕೊಂಡಿದ್ದಾರೆ ಎಂದು ಅರ್ಥೈಸಿದ್ದರು.
ಇನ್ನು, ನಿನ್ನೆಯ ದಿನ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆಲ್ಲುವ ಮೂಲಕ ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಮೊದಲ ಗೆಲುವು ಸಾಧಿಸಿದೆ. 18ನೇ ಆವೃತ್ತಿಯಲ್ಲಿ ಇಲ್ಲಿಯವರೆಗೆ ಆರ್ಸಿಬಿ ಒಟ್ಟು ನಾಲ್ಕು ಪಂದ್ಯಗಳನ್ನು ಆಡಿದ್ದು, ನಾಲ್ಕರಲ್ಲಿ ಮೂರು ಮ್ಯಾಚ್ ಸೋತಿದೆ.
ಇದನ್ನೂ ಓದಿ: 22 ರನ್ ನೀಡಿದ ಭುವಿ.. ಕೈತಪ್ಪಿ ಹೋಗಿದ್ದ ಪಂದ್ಯಕ್ಕೆ ಹೇಜಲ್ವುಡ್ ತಿರುವು ಕೊಟ್ಟ ರೋಚಕತೆ ಹೇಗಿತ್ತು..?
Bruh…Rajat Patidar, those field placements are absolutely just lit man🔥
Virat Kohli needs to let him do what he does instead of getting disappointed unnecessarily.#RRvsRCBpic.twitter.com/qkavNsgLoo— Abhi (@abhi_is_online) April 24, 2025
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್