IPLನಲ್ಲಿ ಈ ತಂಡದ ವಿರುದ್ಧ ಆಡುವಾಗ ಎಕ್ಸೈಟ್ ಆಗಿರ್ತೇನೆ-ಕೊಹ್ಲಿ ನೆಚ್ಚಿನ ತಂಡ ಯಾವ್ದು?

author-image
Ganesh
Updated On
RCBvsCSK ಪಂದ್ಯಕ್ಕೆ ಎಲ್ಲರ ಆಶೀರ್ವಾದವಿದೆ.. ಆದ್ರೆ ಅವನೊಬ್ಬನ ಆಶೀರ್ವಾದ ಬೇಕಷ್ಟೆ! ಯಾರವನು?
Advertisment
  • ಆರ್​ಸಿಬಿ ತಂಡದ ಭಾಗವಾಗಿರುವ ವಿರಾಟ್ ಕೊಹ್ಲಿ
  • RCB ಕಪ್ ಗೆಲ್ಲೋದು ಕೊಹ್ಲಿಯ ದೊಡ್ಡ ಕನಸು
  • ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟು ನಿನ್ನೆಗೆ 16 ವರ್ಷ

ಟೀಂ ಇಂಡಿಯಾದ ದಂತಕತೆ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ ನಿನ್ನೆಗೆ 16 ವರ್ಷಗಳನ್ನು ಪೂರೈಸಿದ್ದಾರೆ. ಈ ಬೆನ್ನಲ್ಲೇ ಕೊಹ್ಲಿಗೆ ಸಂಬಂಧಿಸಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ.

ಱಪಿಡ್ ಫೈರ್ ರೌಂಡ್‌ನಲ್ಲಿ ಸ್ಪೋರ್ಟ್ಸ್ ನೆಟ್‌ವರ್ಕ್‌ ಕೇಳಿದ ಪ್ರಶ್ನೆಗೆ ಕೊಹ್ಲಿ ಕುತೂಹಲಕಾರಿಯಾಗಿ ಉತ್ತರ ನೀಡಿದ್ದಾರೆ. ವಿರಾಟ್ ಕೊಹ್ಲಿಗೆ ಐಪಿಎಲ್‌ನಲ್ಲಿ ನಿಮ್ಮ ನೆಚ್ಚಿನ ಎದುರಾಳಿ ತಂಡ ಯಾವುದು ಎಂದು ಕೇಳಲಾಯಿತು.

ಇದನ್ನೂ ಓದಿ:ರಾಶಿ ಭವಿಷ್ಯದ ಪ್ರಕಾರ.. ಈ ಬಣ್ಣದ ರಾಖಿ ಕಟ್ಟಿದರೆ ನಿಮ್ಮ ಸಹೋದರನ ಅದೃಷ್ಟ ಬದಲಾಗುತ್ತೆ..

ಇದಕ್ಕೆ ತಮಾಷೆಯಾಗಿ ಉತ್ತರ ನೀಡಿರುವ ಕೊಹ್ಲಿ.. ಮೂರು ಬಾರಿಯ ಚಾಂಪಿಯನ್ ಆಗಿರುವ ಕೋಲ್ಕತ್ತಾ ನೈಟ್ ರೈಡರ್ಸ್ ನನ್ನ ಎದುರಾಳಿ ತಂಡ. ನಾನು ಈ ತಂಡದ ವಿರುದ್ಧ ಆಡಲು ಇಷ್ಟ ಪಡುತ್ತೇನೆ ಎಂದಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಈ ವೀಡಿಯೊವನ್ನು ಹಂಚಿಕೊಂಡಿದೆ.

2008ರಲ್ಲಿ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಪದಾರ್ಪಣೆ ಮಾಡಿದರು. ಇದಕ್ಕೂ ಮುನ್ನ ಕೊಹ್ಲಿ ನಾಯಕತ್ವದಲ್ಲಿ ಭಾರತ ಅಂಡರ್-19 ತಂಡ ವಿಶ್ವಕಪ್ ಗೆದ್ದಿತ್ತು. ಕೊಹ್ಲಿ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇಲ್ಲಿಯವರೆಗೂ ಆರ್​ಸಿಬಿ ಐಪಿಎಲ್ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ.

ಇದನ್ನೂ ಓದಿ:‘ಅವಕಾಶ ಸಿಕ್ಕರೆ..’ RCB ಅಭಿಮಾನಿಗಳ ನಿರೀಕ್ಷೆ ಹೆಚ್ಚು ಮಾಡಿದ ಮನಿಷ್ ಪಾಂಡೆ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment