/newsfirstlive-kannada/media/post_attachments/wp-content/uploads/2024/07/KOHLI-23.jpg)
ವಿಶ್ವಕಪ್ ಗೆಲುವಿನ ಬಳಿಕ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ವಿಶ್ರಾಂತಿಯಲ್ಲಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ, ಪುತ್ರಿ ವಾಮಿಕಾ ಹಾಗೂ ಪುತ್ರನ ಜೊತೆ ಲಂಡನ್ನಲ್ಲಿ ಕಾಲ ಕಳೆಯುತ್ತಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನೂತನ ಮನೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಮಹಾರಾಷ್ಟ್ರದ ಅಲಿಬಾಗ್ನಲ್ಲಿರುವ ಬಂಗಲೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮನೆಗಾಗಿ ಅವರು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಬಂಗಲೆ ಪೂರ್ಣಗೊಳ್ಳಲು ಸಾಕಷ್ಟು ಸಮಯ ಹಿಡಿದಿದೆ. ಇದೀಗ ಹೊಸ ಮನೆಗೆ ಪ್ರವೇಶ ಮಾಡಿರುವ ವಿರಾಟ್, ಖುದ್ದು ತಾವೇ ಅಡುಗೆ ಮಾಡಿ ಸವಿದಿದ್ದಾರೆ.
ಎಲ್ಲಿದೆ ಬಂಗಲೆ..?
ಕೊಹ್ಲಿ ಅವರ ಬಂಗಲೆಯು ಸಮುದ್ರದಿಂದ ಸ್ವಲ್ಪ ದೂರದಲ್ಲಿದೆ. ಈ ಮನೆಯನ್ನು ವಿಶೇಷ ರೀತಿಯಲ್ಲಿ ನಿರ್ಮಿಸಲಾಗಿದೆ. ಬಿಡುವಿನ ಸಂದರ್ಭದಲ್ಲಿ ಅಲ್ಲೇ ಉಳಿದುಕೊಳ್ಳುವುದು ಅವರ ಪ್ಲಾನ್. ಬಂಗಲೆಯಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳೂ ಇವೆ. ಜಿಮ್ ಮತ್ತು ಸ್ವಿಮ್ಮಿಂಗ್ ಪೂಲ್ ಇವೆ. ಈ ಮನೆಯನ್ನು ಅಲಂಕರಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಮನೆಯ ಒಳಗೂ ಮತ್ತು ಹೊರಗೂ ಐಷಾರಾಮಿ ವ್ಯವಸ್ಥೆಗಳಿವೆ. ಅಂದರೆ ಹೈಟೆಕ್ ಸೌಲಭ್ಯಗಳು ಅಲ್ಲಿವೆ.
ಮನೆ ಸಿದ್ಧವಾಗಲು ಒಂದು ವರ್ಷ..!
ಈ ಮನೆಯನ್ನು ಕಟ್ಟಲು ಸುಮಾರು ಒಂದು ವರ್ಷಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳಲಾಗಿದೆ. ಮನೆಯು ತುಂಬಾ ಚೆನ್ನಾಗಿ ಕಾಣುತ್ತದೆ ಎಂದು ವಿರಾಟ್ ಹೇಳಿದ್ದಾರೆ. ಮನೆಯ ಒಳಾಂಗಣ ನನಗೆ ತುಂಬಾ ಇಷ್ಟವಾಗಿದೆ ಎಂದಿದ್ದಾರೆ. ಮನೆಯ ಹೊರಗೆ ದೊಡ್ಡ ಉದ್ಯಾನವನ ಇದೆ. ಇಲ್ಲಿ ವಾಕಿಂಗ್, ಯೋಗ ಕೂಡ ಮಾಡಬಹುದು. ಈಜುಕೊಳ ಸ್ವಲ್ಪ ದೂರದಲ್ಲಿದೆ.
https://twitter.com/imVkohli/status/1810548379275170120
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್