newsfirstkannada.com

ಮೈದಾನದಲ್ಲೇ ಕಣ್ಣೀರು ಸುರಿಸಿದ ಕೊಹ್ಲಿ.. ಇದು RCB ಅಭಿಮಾನಿಗಳ ಮನಮುಟ್ಟುವ ಸ್ಟೋರಿ

Share :

Published May 19, 2024 at 7:44am

Update May 19, 2024 at 7:45am

    ವರುಣನ ಅವಾಂತರದ ನಡುವೆಯೂ ಜಯಿಸಿದ ಆರ್​ಸಿಬಿ

    ಬ್ಯಾಟಿಂಗ್​ನಲ್ಲೂ ಫೀಲ್ಡಿಂಗ್​ನಲ್ಲೂ ವಿರಾಟ್​ ಕೊಹ್ಲಿ ಎತ್ತಿದ ಕೈ

    ಗಂಡನನ್ನು ನೋಡಿ ಕಣ್ಣೀರು ಸುರಿಸಿದ ಅನುಷ್ಕಾ ಶರ್ಮಾ

ನಿನ್ನೆ ಚಿನ್ನಸ್ವಾಮಿಯಲ್ಲಿ ನಂಬಲಸಾಧ್ಯವಾದ ಪಂದ್ಯ ಏರ್ಪಟ್ಟಿತ್ತು. ಮಳೆಯ ಅವಾಂತರದ ನಡುವೆಯೇ ಹೋರಾಡಿ ಕೊನೆಗೆ ಆರ್​ಸಿಬಿ ಚೆನ್ನೈ ವಿರುದ್ಧ 27 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಪ್ಲೇಆಫ್​ಗೆ ಕಾಲಿಟ್ಟಿದೆ. ಆದರೆ ಈ ಗೆಲುವು ಅಭಿಮಾನಿಗಳಿಗೆ ಮಾತ್ರವಲ್ಲದೆ, ಆರ್​ಸಿಬಿ ಕ್ರಿಕೆಟಗರಿಗೂ ಅಚ್ಚಳಿಯಾಗಿ ಉಳಿಯುವಂತೆ ಮಾಡಿದೆ. ಕಿಂಗ್​ ಕೊಹ್ಲಿಯಂತೂ ಗೆಲುವಿನ ಜೊತೆ ಜೊತೆಗೆ ಕಂಬನಿ ಸುರಿಸಿದ್ದಾರೆ. ಅತ್ತ ಸ್ಟೇಡಿಯಂನಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ಅನುಷ್ಕಾ ಶರ್ಮಾ ಕೂಡ ಗಂಡನನ್ನು ಕಂಡ ಸಂತಸದ ಕಣ್ಣೀರು ಹಾಕಿದ್ದಾರೆ.

ಪಂದ್ಯದ ವೇಳೆ ವರುಣನಿಂದ ಆದ ಅವಾಂತರ ಕಂಡಾಗ ಆರ್​ಸಿಬಿ ಗೆಲುವು ತುಸು ಕಷ್ಟ ಎಂಬಂತ್ತಿತ್ತು. ಏಕೆಂದರೆ ಆರ್​ಸಿಬಿ ಟಾಸ್​ ಸೋತು ಬ್ಯಾಟ್​​ ಬೀಸಲು ಮೈದಾನಕ್ಕೆ ಇಳಿದಿತ್ತು. ಮೊದಲ 10 ಓವರ್​ನಲ್ಲಿ ರನ್​ ಬಾರಿಸಲು ಆಟಗಾರರು ಪರದಾಡಿದರು. ಆದರೆ ಉಳಿದ 10 ಓವರ್​ನಲ್ಲಿ 218 ರನ್​ ಬಾರಿಸುವ ಮೂಲಕ ಸಿಎಸ್​​ಕೆಗೆ ಸವಾಲು ಎಸೆದರು.

ಮೊದಲ ಎಸೆತಕ್ಕೆ ಎಡವಿದ ಸಿಎಸ್​ಕೆ

ಆದರೆ ಅತ್ತ ಸಿಎಸ್​ಕೆ ಮೊದಲ ಎಸೆತದಲ್ಲೇ ಎಡವಿತ್ತು. ನಾಯಕ ರುತುರಾಜ್​ ಕ್ಯಾಚ್​ ನೀಡಿ ಔಟ್​ ಆಗಿದ್ದರು. ಇದು ಆರ್​ಸಿಬಿ ದಾರಿಯನ್ನು ಸುಗಮವಾಗಿಸಿತು. ಬೌಲಿಗರ ದಾಳಿಗೆ ಕ್ಯಾಚ್​ ನೀಡುತ್ತಾ ಸಿಎಸ್​ಕೆ ಆಟಗಾರರು ಹೊರನಡೆದರು. ನಿರೀಕ್ಷೆಯಲ್ಲಿ ಸಿಎಸ್​​ಕೆ ಅಭಿಮಾನಿಗಳಿಗೆ ನಿನ್ನೆಯ ಪಂದ್ಯ ಶಾಕ್​ ನೀಡಿದರೆ, ಆರ್​ಸಿಬಿ ಅಭಿಮಾನಿಗಳಿಗೆ ಸಿಹಿ ಊಟ ಉಣಬಡಿಸಿದಂತಿತ್ತು.

ಕೊಹ್ಲಿ ಕಣ್ಣೀರು

ಕೊನೆಗೂ ಮ್ಯಾಜಿಕ್​ ಸಿಎಸ್​ಕೆ ಆಟಗಾರರನ್ನು ಆರ್​ಸಿಬಿ ಕಲಿಗಳು ಕಟ್ಟಿಹಾಕಿದ್ದಂತೂ ಸುಳ್ಳಲ್ಲ. ಅದರಲ್ಲೂ ಮ್ಯಾಜಿಕ್​ ಎಂಬಂತೆ ಆರ್​ಸಿಬಿ ಜಯ ಮಾತ್ರ ಎಲ್ಲರನ್ನು ಸಂತಸದ ಕಡಲಲ್ಲಿ ತೇಲುವಂತೆ ಮಾಡಿದರೆ. ಅತ್ತ ಕೊಹ್ಲಿಗೆ ಈ ಗೆಲುವು ದೊಡ್ಡ ಸಮಧಾನ ನೀಡಿದೆ. ತನ್ನ ಛಲ, ಹೋರಾಟದ ಪ್ರತಿಫಲವಾಗಿ ಆರ್​ಸಿಬಿ ಪ್ಲೇಆಪ್​ಗೆ ಹೋಗಿರುವುದನ್ನು ತನ್ನಿಂದಲೇ ನಂಬಲಾಗುತ್ತಿಲ್ಲವೆಂಬಂತೆ ಮೈದಾನದಲ್ಲಿ ಕೊಹ್ಲಿ ಕಣ್ಣೀರು ಸುರಿಸಿದ್ದಾರೆ.

ಇದನ್ನೂ ಓದಿ: ಚೆನ್ನೈಯನ್ನು ಮನೆಗೆ ಕಳುಹಿಸಿದ ಬೆಂಗಳೂರು.. RCBಯ ಮುಂದಿನ ಪಂದ್ಯ ಯಾರ ಜೊತೆ?

ಅತ್ತ ಅನುಷ್ಕಾ ಶರ್ಮಾ ಕೂಡ ಗಂಡನ ಸಂತಸವನ್ನು ಕಣ್ಣಾರೆ ಕಂಡು ಮೈದಾನದಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಮಾತ್ರವಲ್ಲದೆ ಗಂಡನ ಖುಷಿಯನ್ನು ಕಂಡ ಕಣ್ಣೀರು ಸುರಿಸಿದ್ದಾರೆ. ಈ ದೃಶ್ಯ ಕ್ಯಾಮೆರಾ ಕಣ್ಣಿಗೆ ಸರಿಯಾಗಿ ಸಿಕ್ಕಿದ್ದು, ಸದ್ಯ ವೈರಲ್​ ಆಗುತ್ತಿದೆ.

ಅರ್ಧ ಶತಕದ ಹಾದಿಯಲ್ಲಿ ಎಡವಿದ್ರು

ಇನ್ನು ಕೊಹ್ಲಿ ಆಟವನ್ನು ಕಂಡು ಅಭಿಮಾನಿಗಳು ಕೊಂಡಾಡಿದ್ದಾರೆ. 29 ಎಸೆತದಲ್ಲಿ 47 ರನ್​ ಬಾರಿಸಿದ್ದಾರೆ. ಮಳೆಯ ಅವಾಂತರದಿಂದ ಪಿಚ್​ ಕೂಡ ಕೈಕೊಟ್ಟ ಸಮಯದಲ್ಲೂ ಅರ್ಧ ಶತಕದ ಹಾದಿಯಲ್ಲಿದ್ದರು. ಆದರೆ ಸಿಕ್ಸ್​ ಬಾರಿಸಲು ಹೋಗಿ ಕ್ಯಾಚ್​ ನೀಡಿ ಔಟ್​ ಆದರು. ಕೊಹ್ಲಿ ಮೂರು ಬೌಂಡರಿ, 4 ಸಿಕ್ಸ್​ ಬಾರಿಸಿದನ್ನು ನೆನಪಿಸಲೇಬೇಕು.

ಇದನ್ನೂ ಓದಿ: ಮಳೆಯಬ್ಬರಕ್ಕೆ ಬೆಟ್ಟದಲ್ಲಿ ಜಲಪಾತ ಸೃಷ್ಟಿ! ಹೊಲ, ಗದ್ದೆ ಜಲಾವೃತ.. ರಾಜ್ಯದಲ್ಲಿ ವರಣಾರ್ಭಟಕ್ಕೆ ಜನರು ತತ್ತರ

ಕೊಹ್ಲಿ ಅಲ್ಲ..ಕಿಂಗ್​ ಕೊಹ್ಲಿ

ಬ್ಯಾಟಿಂಗ್​ ಮಾತ್ರವಲ್ಲ, ಫೀಲ್ಡಿಂಗ್​ನಲ್ಲೂ ಪೂರ್ಣ ಪ್ರಮಾಣದ ಆಟವನ್ನು ಕೊಹ್ಲಿ ಆಡಿದ್ದಾರೆ. ತನ್ನತ್ತ ಬಂದ ಕ್ಯಾಚ್​ ಅನ್ನು ಹಿಡಿಯುವ ಮೂಲಕ ಆರ್​ಸಿಬಿ ಗೆಲುವಿಗೆ ಸಹಾಯ ಮಾಡಿದ್ದಾರೆ. ಇಷ್ಟೆಲ್ಲಾ ಹೋರಾಡಿ ಕೊನೆಗೆ ತಂಡವನ್ನು ಗೆಲುವಿನ ಲಯಕ್ಕೆ ಮತ್ತು ಪ್ಲೇಆಫ್​ಗೆ ಕೊಡೊಯ್ದಲು ಶ್ರಮಪಟ್ಟ ಕೊಹ್ಲಿ ಖುಷಿಯಲ್ಲಿ ಕಣ್ಣೀರು ಹಾಕದೆ ಇರುತ್ತಾರೆಯೇ?. ಅದಕ್ಕೆ ಹೇಳೋದು ಕಿಂಗ್​ ಕೊಹ್ಲಿ ಅಂತ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಮೈದಾನದಲ್ಲೇ ಕಣ್ಣೀರು ಸುರಿಸಿದ ಕೊಹ್ಲಿ.. ಇದು RCB ಅಭಿಮಾನಿಗಳ ಮನಮುಟ್ಟುವ ಸ್ಟೋರಿ

https://newsfirstlive.com/wp-content/uploads/2024/05/Kohli-8.jpg

Load More