40, 80 ಕೋಟಿ ಮೌಲ್ಯದ ಮನೆ ಬಿಡುತ್ತಿದ್ದಾರಾ ಕೊಹ್ಲಿ-ಅನುಷ್ಕಾ.. ಹೊಸ ಮನೆಯ ಸ್ಪೆಷಲಿಟಿ ಏನು?

author-image
Bheemappa
Updated On
40, 80 ಕೋಟಿ ಮೌಲ್ಯದ ಮನೆ ಬಿಡುತ್ತಿದ್ದಾರಾ ಕೊಹ್ಲಿ-ಅನುಷ್ಕಾ.. ಹೊಸ ಮನೆಯ ಸ್ಪೆಷಲಿಟಿ ಏನು?
Advertisment
  • ಐಷಾರಾಮಿಯಾಗಿರುವ ಕಟ್ಟಡದ ಈ ರೂಮ್​ನಲ್ಲಿ ಟಿವಿನೇ ಇಲ್ವಾ?
  • ನಿವಾಸದಲ್ಲಿ ಟೆಂಪರೆಚರ್​ ಕಂಟ್ರೋಲ್​ ಸ್ವಿಮ್ಮಿಂಗ್ ​ಪೂಲ್ ಇದೆಯಾ​
  • ಹಾಲಿಡೇ ಹೌಸ್​ನಲ್ಲಿ ಎಷ್ಟು ಐಷಾರಾಮಿ ಲಕ್ಸುರಿ ಬೆಡ್​​ ರೂಮ್ ಇವೆ.?

ಸಾವಿರಾರು ಕೋಟಿಯ ಒಡೆಯ ಕಿಂಗ್​ ಕೊಹ್ಲಿ ಅಲಿಬಾಗ್​ನಲ್ಲಿ ಕಟ್ಟಿಸಿರುವ ಹೊಸ ಮನೆ ಹೇಗಿದೆ ಅನ್ನೋ ಕುತೂಹಲ ಇದೆ. ಎಷ್ಟು ಬೆಡ್​ ರೂಮ್​ ಇವೆ, ಕಿಚನ್​​​ ಹೇಗಿದೆ, ಮನೆ ಯಾವ ಶೈಲಿಯಲ್ಲಿದೆ, ಬಾಂದ್ರಾ ತೊರೆದು ಅಲಿಭಾಗ್​ಗೆ ಕೊಹ್ಲಿ ಸ್ಥಳಾಂತರ ಆಗುತ್ತಿರುವುದು ಏಕೆ ಹೀಗೆ ಹಲವು ಪ್ರಶ್ನೆಗಳು ಕಾಡುತ್ತಿವೆ. ಈ ಕುತೂಹಲಕ್ಕೆ ಉತ್ತರ ಇಲ್ಲಿದೆ.

ಬಾರ್ಡರ್​-ಗವಾಸ್ಕರ್​ ಸರಣಿಯ ಫ್ಲಾಪ್​​ ಶೋ, ಸಾಲು ಸಾಲು ಟೀಕೆಗಳು, ಅತಂತ್ರ ಸಿಲುಕಿದ ಕರಿಯರ್​, ಡೊಮೆಸ್ಟಿಕ್​​ ಕ್ರಿಕೆಟ್​ ಆಡುವಂತೆ ಕೂಗು.. ಹೀಗೆ ವಿರಾಟ್ ಕೊಹ್ಲಿಯ ಸುತ್ತ ಭಾರತೀಯ ಕ್ರಿಕೆಟ್​ ಲೋಕ ಗಿರಕಿ ಹೊಡೀತಿದೆ. ಆದ್ರೆ, ಕೊಹ್ಲಿ ಮಾತ್ರ ಇದು ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಫುಲ್​ ಜಾಲಿ ಜಾಲಿ ಅಂತಿರೋ ಕೊಹ್ಲಿ, ಗೃಹಪ್ರವೇಶದ ಸಂಭ್ರಮದಲ್ಲಿದ್ದಾರೆ.

publive-image

ಕನಸಿನ ಮನೆಯ ಗೃಹಪ್ರವೇಶದಲ್ಲಿ ಕೊಹ್ಲಿ

ಮುಂಬೈನಿಂದ ಅಲಿಬಾಗ್​ಗೆ ಓಡಾಟ ನಡೆಸುತ್ತಿರುವ ಕೊಹ್ಲಿ, ಅನುಷ್ಕಾ ಅದ್ಧೂರಿ ಗೃಹಪ್ರವೇಶ ಸಮಾರಂಭಕ್ಕೆ ಪ್ಲಾನ್​ ಮಾಡುತ್ತಿದ್ದಾರೆ. ಮನೆಯ ಸುತ್ತ ಸಂಭ್ರಮದ ವಾತಾವರಣ ನಿರ್ಮಾಣ ಆಗಿದೆ. ಇದರ ನಡುವೆ ಮುಂಬೈನ ಪ್ರತಿಷ್ಠಿತ ಏರಿಯಾ ಆದ ಬಾಂದ್ರಾನ ಬಿಟ್ಟು ವಿರಾಟ್ ದೂರದ ಅಲಿಬಾಗ್​​​​ಗೆ ಶಿಫ್ಟ್​ ಆಗುತ್ತಿರುವುದು ಏಕೆ ಅನ್ನೋ ಕುತೂಹಲ ಹಲವರಲ್ಲಿದೆ.

ಬಾಂದ್ರಾ ಬಿಟ್ಟು ಅಲಿಬಾಗ್​​ನತ್ತ ಕೊಹ್ಲಿ ಹೊರಟಿದ್ದೇಕೆ.?

ಆರಂಭದಲ್ಲಿ ಈ ಅಲಿಬಾಗ್​ನ ಕನಸಿನ ಮನೆಯನ್ನ ರಜಾದಿನಗಳನ್ನ ಕಳೆಯೋ ಉದ್ದೇಶಕ್ಕೆ ನಿರ್ಮಿಸಲಾಗಿತ್ತು. ಇದೀಗ ಫರ್ಮನೆಂಟ್​ ಆಗಿ ಬಾಂದ್ರಾ ಬಿಟ್ಟು ಅಲಿಬಾಗ್​​ಗೆ ಶಿಫ್ಟ್ ಆಗಲು ನಿರ್ಧರಿಸಿದ್ದಾರೆ. ಇದಕ್ಕೆ ಹಲವು ಕಾರಣಗಳಿವೆ. ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಕೆಲ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಮಕ್ಕಳಾದ ವಮಿಕಾ ಹಾಗೂ ಅಕಾಯ್​ ಬೆಳವಣಿಗೆಯ ಹಂತದಲ್ಲಿದ್ದಾರೆ. ಹೀಗಾಗಿ, ಜನಜಂಗುಳಿ, ಸೌಂಡ್​ ಪೊಲ್ಯೂಶನ್, ಏರ್​ ಪೊಲ್ಯೂಶನ್​ನಿಂದ ದೂರ ಉಳಿಯಲು ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಕೊಹ್ಲಿ ಕೂಡ ನಿವೃತ್ತಿಯ ಅಂಚಿನಲ್ಲಿದ್ದು, ರಿಟೈರ್​ಮೆಂಟ್​ ಲೈಫ್​ನ ಪೀಸ್​​ಫುಲ್​ ಆಗಿ ಪ್ರಕೃತಿಯ ಮದ್ಯೆಯಿರೋ ಅಲಿಬಾಗ್​​ ಮನೆಯಲ್ಲಿ ಕಳೆಯೋದು ಕೂಡ ಒಂದು ಉದ್ದೇಶವಾಗಿದೆ.

ಕಿಂಗ್​​ ಕೊಹ್ಲಿಯ ಕನಸಿನ ಮನೆ ಹೇಗಿದೆ ಗೊತ್ತಾ.?

ವಿರಾಟ್​ ಕೊಹ್ಲಿಯ ಅಲಿಬಾಗ್​ ಮನೆ ಬರೋಬ್ಬರಿ 10,000 ಸ್ಕೈರ್​​ಫೀಟ್​ನಲ್ಲಿ ನಿರ್ಮಿಸಲಾಗಿದೆ. ಸರಿ ಸುಮಾರು 30 ಕೋಟಿ ವೆಚ್ಚದಲ್ಲಿ ಕ್ಯಾಲಿಫೋರ್ನಿಯನ್​ ಕೊಂಕಣ್​ ಸ್ಟೈಲ್​ನಲ್ಲಿ ಮನೆಯನ್ನ ಕಟ್ಟಲಾಗಿದೆ.

2 ಅಂತಸ್ತಿನ ವಿಲ್ಲಾ, 4 ಲಕ್ಸುರಿ ಬೆಡ್​ ರೂಮ್.!

ಕಿಂಗ್​ ಕೊಹ್ಲಿಯ ಹಾಲಿಡೇ ಹೌಸ್​​ 2 ಅಂತಸ್ತಿನ ವಿಲ್ಲಾ ಆಗಿದೆ. ಒಟ್ಟು 4 ಲಕ್ಸುರಿ ಬೆಡ್​​ ರೂಮ್​ಗಳು ಇದ್ರಲ್ಲಿವೆ. ನ್ಯಾಚುರಲ್​ ಆಗಿರಲಿ ಅನ್ನೋ ಉದ್ದೇಶದಿಂದ ಪ್ರಿಸ್ಟೀನ್​ ಸ್ಟೋನ್ಸ್​, ಇಟಾಲಿಯನ್​ ಮಾರ್ಬಲ್ಸ್​, ಹಾಗೂ ಟರ್ಕಿಶ್​ ಲೈಮ್​ ಸ್ಟೋನ್​ಗಳನ್ನ ಬಳಸಲಾಗಿದೆ. ಜರ್ಮನ್​​ ಕಸ್ಟಮೈಜಡ್​​ ಕಿಚನ್​ ವಿಲ್ಲಾದಲ್ಲಿದ್ದು, ಟೆಂಪರೆಚರ್​​ ಕಂಟ್ರೋಲ್​ ಸ್ವಿಮ್ಮಿಂಗ್​ ಪೂಲ್​​ ಇಲ್ಲಿದೆ.

ಇದನ್ನೂ ಓದಿ:BBK11; ಬಿಗ್ ಸರ್ಪ್ರೈಸ್.. ಶಿಶಿರ್, ಗೋಲ್ಡ್ ಸುರೇಶ್, ಅನುಷಾ, ಹಂಸ, ಯಮುನಾ, ಮಾನಸ ರೀ ಎಂಟ್ರಿ

publive-image

ಲಿವಿಂಗ್​ ರೂಮ್​ನಲ್ಲಿಲ್ಲ ಟಿವಿ.! ನೈಸರ್ಗಿಕ ಗಾಳಿ ಬೆಳಕಿಗೆ ಆದ್ಯತೆ.!

ಅದ್ಧೂರಿಯಾಗಿ ವಿಲ್ಲಾ ಕಟ್ಟಿಸಿರುವ ಕಿಂಗ್​ ಕೊಹ್ಲಿ, ಲಿವಿಂಗ್​ ರೂಮ್​ನಿಂದ ಟಿವಿಗೆ ಗೇಟ್​ಪಾಸ್ ಕೊಟ್ಟಿದ್ದಾರೆ. ನೈಸರ್ಗಿಕ ಗಾಳಿ ಬೆಳಕಿಗೆ ಹೆಚ್ಚು ಆದ್ಯತೆ ನೀಡಿದ್ದು, ಇದೇ ಕೊಹ್ಲಿಗೆ ಹೆಚ್ಚು ಇಷ್ಟವಾಗಿರೋ ವಿಚಾರವಂತೆ.

ಅತಿ ಹೆಚ್ಚು ಸಮಯವನ್ನ ಕುಟುಂಬವನ್ನು ಬಿಟ್ಟು ದೂರವೇ ಕಳೆಯೋ ಕೊಹ್ಲಿ, ಫ್ಯಾಮಿಲಿ ಜೊತೆ ಇದ್ದಷ್ಟು ಸಮಯ ಖುಷಿಯಿಂದ ಕಳೆಯಲು ಬಯಸುತ್ತಾರೆ. ಹೀಗಾಗಿಯೇ ಮನೆಯಲ್ಲಿ ಸ್ಪೆಷಲ್​ ಡಿನ್ನರ್​ ಟೇಬಲ್​ ಮಾಡಿಸಿದ್ದಾರೆ. ​​

ಇದು ಲಿವಿಂಗ್​ ರೂಮ್​. ತುಂಬಾ ಇಷ್ಟವಾಗಿದ್ದು, ಇಲ್ಲಿರುವ ಡಬಲ್​​​ ಹೈಡ್​​ ಕಟೌಟ್​. ಇದು ನನಗೆ ತುಂಬಾ ಮುಖ್ಯ. ಯಾಕಂದ್ರೆ ನೈಸರ್ಗಿಕ ಬೆಳಕು ನಂಗಿಷ್ಟ. ನೀವು ನೋಡಬಹುದು ಇಲ್ಲಿ ಟಿವಿ ಇಲ್ಲ. ಜೊತೆಗೆ ಬೇರೆ ಯಾವ ಎಂಟರ್​​ಟೈನ್​​ಮೆಂಟ್​ ಮೂಲಗಳೂ ಇಲ್ಲ.

ಹೆಚ್ಚು ಕಾಲ ನಾನು ಹೊರಗಡೆ ಕಾಲ ಕಳೆಯುತ್ತೇನೆ. ಯಾವಾಗ ನಾವೆಲ್ಲಾ ಒಟ್ಟಾಗುತ್ತೇವೋ, ಎಲ್ಲರೂ ಸೇರುವ ಒಂದು ಸ್ಥಳ ಡಿನ್ನರ್​ ಟೇಬಲ್​. ಎಲ್ಲಾರೂ ಒಟ್ಟಾಗಿ ಕುಳಿತು ಊಟ ಮಾಡುತ್ತೇವೆ. ನಾನು ಹೆಚ್ಚಾಗಿ ಇದನ್ನ ಮಾಡಲು ಸಾಧ್ಯವಿಲ್ಲ. ಆದ್ರೆ, ಸಾಧ್ಯವಾದಷ್ಟು ಮಾಡಬೇಕು.

ವಿರಾಟ್ ಕೊಹ್ಲಿ, ಭಾರತದ ಸ್ಟಾರ್ ಕ್ರಿಕೆಟ್ ಪ್ಲೇಯರ್

ಮನೆಯ ಸುತ್ತ ಹಸಿರು.. ಬ್ಯೂಟಿಫುಲ್​ ಸ್ವಿಮ್ಮಿಂಗ್​​ಪೂಲ್​.!

ವಿರಾಟ್​ ಕೊಹ್ಲಿ ಮಾತ್ರವಲ್ಲ.. ಅನುಷ್ಕಾ ಶರ್ಮಾ ಕೂಡ ಸದಾ ಕಾಲ ಬ್ಯುಸಿ ಆಗಿರುತ್ತಾರೆ. ಕೆಲಸಗಳ ನಡುವೆ ದೈಹಿಕವಾಗಿ ಮಾತ್ರವಲ್ಲದೇ, ಮಾನಸಿಕವಾಗಿ ದಣಿಯೋದು ಸಾಮಾನ್ಯವಾಗಿದೆ. ಮೆಂಟಲಿ ಸ್ಟ್ರೆಸ್​ ಆದಾಗ ಫ್ರೆಶ್​ ಆಗಲು ಈ ಮನೆಯ ವಾತಾವರಣ ಸಹಾಯ ಮಾಡುತ್ತೆ ಅನ್ನೋದು ಕೊಹ್ಲಿ ಮನದ ಮಾತು.

ನನ್ನ ಪ್ರಕಾರ ಹಸಿರನ್ನ ನೋಡಿದ್ರೆ ಮನಸ್ಸು ಶಾಂತವಾಗುತ್ತೆ. ಜೀವನದಲ್ಲಿ ಸದಾಕಾಲ ಏನಾದರೂ ನಡೆಯುತ್ತಲೇ ಇರುತ್ತೆ. ಅದರಿಂದ ಹೊರಬರಲು ಪ್ರಯತ್ನ ಮಾಡುತ್ತೇವೆ. ಅಲಿಬಾಗ್​ ಅದನ್ನ ಮಾಡಲು ಸಹಾಯ ಮಾಡುತ್ತೆ. ನಾನು ಇಲ್ಲಿದ್ದಾಗ ತುಂಬಾ ತುಂಬಾ ಚನ್ನಾಗಿರುತ್ತೇನೆ.

ಅನುಷ್ಕಾ ಶರ್ಮಾ, ಕೊಹ್ಲಿ ಪತ್ನಿ

ಮನೆಯೊಳಗೆ ಊಟ, ತಿಂಡಿ..! ಮನೆ ಹೊರಗೆ ಕಾಫಿ, ಟೀ.!

ಮನೆಯೊಳಗೆ ಎಲ್ಲರೂ ಕುಳಿತು ಊಟ, ತಿಂಡಿ ಮಾಡಲು ವಿಶೇಷ ಪ್ಲಾನ್​ ರೂಪಿಸಿ ಡೈನಿಂಗ್​ ಟೇಬಲ್​ ಡಿಸೈನ್​ ಮಾಡಿಸಿರೋ ಕೊಹ್ಲಿ, ಕಾಫಿ,ಟೀ ಕುಡಿಯಲು ಮತ್ತೊಂದು ಸ್ಪೆಷಲ್​ ಡಿಸೈನ್​ ಮಾಡಿಸಿದ್ದಾರೆ.

publive-image

ನಾವು ಕುಳಿತು ಕಾಫಿ ಕುಡಿದು ರಿಲ್ಯಾಕ್ಸ್​ ಮಾಡುವ ಜಾಗ. ನಾನು ಯಾವಾಗಲೂ ರಜಾದಿನದಲ್ಲಿ ಇರಲ್ಲ. ನಾನು ಯಾವಾಗಲೂ ಡಯಟ್​ನಲ್ಲಿ ಇರುತ್ತೇನೆ. ಟ್ರೈನಿಂಗ್​ ಮಾಡ್ತಿರುತ್ತೇನೆ. ನನ್ನ ಬೆಳಗಿನ ದಿನಚರಿ ಸಾಮಾನ್ಯವಾಗಿದೆ. ಎದ್ದೇಳೋದು, ರಿಲ್ಯಾಕ್ಸ್​ ಆಗೋದು, ನಿಂಬೆಹಣ್ಣಿನ ನೀರು ಅಥವಾ ಕಾಫಿ ಕುಡಿಯೋದು. ಬ್ರೇಕ್​ ಫಾಸ್ಟ್​ ಮಾಡೋದು. ಆ ಬಳಿಕ ದಿನ ಸ್ಟಾರ್ಟ್​ ಆಗೇ ಬಿಡುತ್ತೆ.

ವಿರಾಟ್ ಕೊಹ್ಲಿ, ಭಾರತದ ಸ್ಟಾರ್ ಕ್ರಿಕೆಟ್ ಪ್ಲೇಯರ್

ಬಾಂದ್ರಾದದಲ್ಲಿರುವ ಕೊಹ್ಲಿಯ ಮನೆ 40 ಕೋಟಿ ಮೌಲ್ಯದ್ದು, ಗುರಗ್ರಾಮ್​ದ ಮನೆ ಬರೋಬ್ಬರಿ 80 ಕೋಟಿ ಮೌಲ್ಯದ್ದು, ಆದ್ರೆ ಅಲಿಬಾಗ್​ನ ಮನೆ ಕೇವಲ 30 ಕೋಟಿ ಆಸುಪಾಸಿನಲ್ಲಿದ್ದು ಎನ್ನಲಾಗಿದೆ. ದುಬಾರಿ ಮನೆಗಳನ್ನ ಬಿಟ್ಟು ಅಲಿಬಾಗ್​ಗೆ ಕೊಹ್ಲಿ ಶಿಫ್ಟ್​ ಆಗಲು ಮುಂದಾಗಿರೋದ್ಯಾಕೆ ಅನ್ನೋ ಪ್ರಶ್ನೆಗೆ, ಮನೆ ಕಟ್ಟಿಸಿರೋ ಶೈಲಿ, ಅಲ್ಲಿನ ವಿನ್ಯಾಸ ಹಾಗೂ ವಿರುಷ್ಕಾ ಸದ್ಯ ಬದುಕುತ್ತಿರೋ ಲೈಫ್​​ಸ್ಟೈಲ್​ ಉತ್ತರವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment