/newsfirstlive-kannada/media/post_attachments/wp-content/uploads/2025/05/KOHLI-20.jpg)
ಐಪಿಎಲ್ ನಡುವೆ ಟೆಸ್ಟ್ ಕ್ರಿಕೆಟ್ಗೆ ಗುಡ್ ಬೈ ಹೇಳಿ ಶಾಕ್ ಕೊಟ್ಟ ವಿರಾಟ್ ಕೊಹ್ಲಿಯ ಟೆಂಪಲ್ ರನ್ ನಡೆಸ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ವೃಂದಾವನಕ್ಕೆ ತೆರಳಿ ಪರಮಗುರು ಪ್ರೇಮಾನಂದ ಜೀ ಆಶೀರ್ವಾದ ಪಡೆದ ವಿರಾಟ್ ಇದೀಗ ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಪತ್ನಿ ಅನುಷ್ಕಾ ಜೊತೆಗೂಡಿ ಹನುಮನ ದರ್ಶನ ಪಡೆದು ಪುನೀತರಾಗಿದ್ದಾರೆ.
ಅಯೋಧ್ಯೆಗೆ ಭೇಟಿ ನೀಡಿದ ಕೊಹ್ಲಿ
ಐಪಿಎಲ್ ಪಂದ್ಯದ ಕಾರಣಕ್ಕೆ ಕೊಹ್ಲಿ ಲಕ್ನೋದಲ್ಲಿ ಬೀಡು ಬಿಟ್ಟಿದ್ದಾರೆ. ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧದ ಪಂದ್ಯದ ಬಳಿಕ ವಿಶ್ರಾಂತಿಯಲ್ಲಿರೋ ವಿರಾಟ್ ಕೊಹ್ಲಿ, ಟೆಂಪಲ್ ರನ್ ನಡೆಸಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ ಜೊತೆಗೂಡಿ ಅಯೋಧ್ಯೆಯ ಹನುಮಾನ್ ಗರ್ಹಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ನಿನ್ನೆ ಬೆಳಗ್ಗೆ ಹನುಮಾನ್ ಗರ್ಜಿ ದೇವಸ್ಥಾನಕ್ಕೆ ತೆರೆಳಿದ ಕೊಹ್ಲಿ ದಂಪತಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಅರ್ಚಕರು ಪ್ರಸಾದದ ರೂಪದಲ್ಲಿ ಅನುಷ್ಕಾ ಹಾಗೂ ಕೊಹ್ಲಿಗೆ ಹಾರ ಹಾಕಿ, ಹಣೆಗೆ ತಿಲಕವಿಟ್ಟಿದ್ದಾರೆ.
ಇದನ್ನೂ ಓದಿ: ಶಮಿ, ಸರ್ಫರಾಜ್ ಖಾನ್ಗೂ ಆಘಾತ.. ಐದು ಬಿಗ್ಸ್ಟಾರ್ಗೆ ಬಿಸಿಸಿಐ ಶಾಕ್..!
ಅರ್ಚಕರೊಂದಿಗೆ ಆಧ್ಯಾತ್ಮದ ಬಗ್ಗೆ ಕೊಹ್ಲಿ ಚರ್ಚೆ
ಪೂಜೆ ಸಲ್ಲಿಸಿದ ನಂತರದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾರನ್ನ ಪುರಸ್ಕರಿಸಿದ್ದಾರೆ. ಇದೇ ವೇಳೆ ದೇವಸ್ಥಾನದ ವತಿಯಿಂದ ಹನುಮಾನ್ ಮೂರ್ತಿಯನ್ನ ನೀಡಿ ಕೊಹ್ಲಿಯನ್ನ ಗೌರವಿಸಿದ್ದಾರೆ. ಆ ಬಳಿಕ ಅರ್ಚಕರೊಂದಿಗೆ ವಿರುಷ್ಕಾ ದಂಪತಿ ಕೆಲ ಕಾಲ ಚರ್ಚೆ ನಡೆಸಿದ್ದಾರೆ. ಆಧ್ಯಾತ್ಮಿಕತೆ, ಸಂಸ್ಕೃತಿ, ದೇವರು ಹಾಗೂ ಪೌರಾಣಿಕ ವಿಚಾರಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಆಂಜನೇಯನ ಆರಾಧಕ ಕೊಹ್ಲಿ
ಕಳೆದ ಕೆಲ ವರ್ಷಗಳಲ್ಲಿ ವಿರಾಟ್ ಕೊಹ್ಲಿ ಜೀವನ ಸಾಕಷ್ಟು ಬದಲಾವಣೆಗೆ ಸಾಕ್ಷಿಯಾಗಿದೆ. ಪೂಜೆ-ಪುನಸ್ಕಾರ ಮಾಡುವವನಂತೆ ಕಾಣ್ತೀನಾ ಎಂದು ಕೇಳಿದ್ದ ಕೊಹ್ಲಿ ಈಗ ಆದ್ಯಾತ್ಮಿಕತೆಯ ಕಡೆಗೆ ಎಷ್ಟರ ಮಟ್ಟಿಗೆ ವಾಲಿದ್ದಾರೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಶಿವನ ಪರಮಭಕ್ತನಾಗಿ ಗುರುತಿಸಿಕೊಂಡಿರೋ ವಿರಾಟ್, ಆಂಜನೇಯನ ಆರಾಧಕನೂ ಹೌದು.
ಕೊಹ್ಲಿ ಜೊತೆಗೆ ಸದಾ ಕಾಲ ಆಂಜನೇಯ ಇರ್ತಾನೆ. ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ಕೊಹ್ಲಿಯ ಜೊತೆ ಶಕ್ತಿಯಾಗಿ ಇರ್ತಾನೆ. ಮಾಸ್ಟರ್ ಬ್ಲಾಸ್ಟರ್, ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಬ್ಯಾಗ್ನಲ್ಲಿ ವಿಘ್ನ ನಿವಾರಕ ಗಣೇಶ ಮೂರ್ತಿ ಸದಾ ಇರ್ತಿತ್ತು. ಅದೇ ರೀತಿ ವಿರಾಟ್ ಕೊಹ್ಲಿಯ ಬ್ಯಾಗ್ನಲ್ಲಿ ಹನುಮ ಮೂರ್ತಿ ಇದೆ. ತನ್ನ ಬ್ಯಾಗ್ನ ಜೀಪ್ಗೆ ವಿರಾಟ್ ಹನುಮಾನ್ ಕೀ ಚೈನ್ ಹಾಕಿದ್ದಾರೆ.
ಇದನ್ನೂ ಓದಿ: ಗೆಲುವಿನೊಂದಿಗೆ ಐಪಿಎಲ್ ಅಭಿಯಾನ ಮುಗಿಸಿದ SRH.. ಕೊನೆ ಪಂದ್ಯದಲ್ಲಿ ಕೆಕೆಆರ್ಗೆ ಭಾರೀ ಮುಖಭಂಗ!
ಪ್ರತಿ ದಿನ ಆಂಜನೇಯನ ಆರಾಧನೆ
ಕೊಹ್ಲಿಯ ಇನ್ಸ್ಟಾಗ್ರಾಂನಲ್ಲಿ ಸದಾ ಕಮರ್ಷಿಯಲ್ ಪೋಸ್ಟ್ಗಳೇ ಹೆಚ್ಚು ಕಾಣಿಸೋದು. ಅದ್ರ ಹೊರತಾಗಿ ಪತ್ನಿ ಮಕ್ಕಳ ಜೊತೆಗಿನ ಫೋಟೋಸ್ ಹಂಚಿಕೊಳ್ಳೋದು ಬಿಟ್ರೆ ಕೊಹ್ಲಿ ಬೇರಾವ ಪೋಸ್ಟ್ ಮಾಡಲ್ಲ. ಹನುಮ ಜಯಂತಿ ದಿನ ಕೊಹ್ಲಿ ಪೋಸ್ಟರ್ ಹಂಚಿಕೊಂಡು ಶುಭ ಕೋರಿದ್ರು. ಕೊಹ್ಲಿಯ ಈ ಭಕ್ತಿ ಹನುಮ ಜಯಂತಿಗೆ ಮಾತ್ರವೇ ಸೀಮಿತಗೊಂಡಿದಲ್ಲ. ಆಪ್ತ ಮೂಲಗಳ ಪ್ರಕಾರ ಕೊಹ್ಲಿ ಪ್ರತಿ ದಿನ ಕೂಡ ಆಂಜನೇಯನನ್ನ ಆರಾಧಿಸ್ತಾರೆ. ಸಾಧ್ಯವಾದ್ರೆ ಹನುಮಾನ್ ಚಾಲೀಸ ಪಠಿಸ್ತಾರೆ. ಇಲ್ಲ ಅಂದ್ರೆ ಕೇಳ್ತಾರಂತೆ.
ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಕೊಹ್ಲಿ ವೃಂದಾವನಕ್ಕೆ ಭೇಟಿ ನೀಡಿದ್ರು. ಪ್ರೇಮಾನಂದ ಮಾಹಾರಾಜ್ರ ಆಶೀರ್ವಾದ ಪಡೆದಿದ್ದ ವಿರುಷ್ಕಾ ಆಶೀರ್ವಚನ ಕೇಳಿದ್ರು. ಇನ್ನು, ನೀಮ್ ಕರೋಲಿ ಬಾಬಾರ ಪರ ಭಕ್ತನಾಗಿರೋ ವಿರಾಟ್ ಕೊಹ್ಲಿ ಆಗಾಗ ಸತ್ಸಂಗಗಳಲ್ಲಿ ಭಾಗಿಯಾಗಿದ್ದು ಇದೆ. ಇದೆಲ್ಲವನ್ನ ನೋಡಿದ್ರೆ ಕ್ರಿಕೆಟ್ನಿಂದ ವಿಮುಖರಾಗ್ತಿರೋ ವಿರಾಟ್ ಕೊಹ್ಲಿ, ಆದ್ಯಾತ್ಮದತ್ತ ಹೆಚ್ಚು ವಾಲ್ತಿದ್ದಾರೋದಂತೂ ಸ್ಪಷ್ಟ. ಕೊಹ್ಲಿ ಈ ಬದಲಾವಣೆಗೆ ಕಾರಣ ಏನು ಅನ್ನೋದು ನಿಗೂಢ.
ಇದನ್ನೂ ಓದಿ: ನಾಳೆ ಆರ್ಸಿಬಿಗೆ ಬಿಗ್ ಡೇ.. ಲುಂಗಿ, ಬೆಥೆಲ್ ಇಲ್ಲ, ಬಲಿಷ್ಠ ತಂಡದಲ್ಲಿ ಯಾರೆಲ್ಲ ಇರಬಹುದು..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ