/newsfirstlive-kannada/media/post_attachments/wp-content/uploads/2025/06/KOHLI_ENG.jpg)
ವಿರಾಟ್ ಕೊಹ್ಲಿ ಗ್ಲೋಬಲ್ ಐಕಾನ್​​​, ಸೂಪರ್ ಸ್ಟಾರ್​​​​​​, ಮಾಡ್ರನ್ ಕ್ರಿಕೆಟ್ ದೊರೆ. ಈ ಮಹಾದಿಗ್ಗಜನಿಗೆ ಇರುವಂತ ಹಾರ್ಡ್​ ಕೋರ್ ಫ್ಯಾನ್ಸ್​ ಮತ್ತಾರಿಗೂ ಇಲ್ಲ. ನಿಜಕ್ಕೂ ಕ್ರೇಜಿ ಫ್ಯಾನ್ಸ್​​​ ಅಂದರೂ ತಪ್ಪಲ್ಲ, ಅದು ಯಾಕೆ ಈ ಮಾತು ಹೇಳ್ತಿದ್ದೀವಿ ಅಂತೀರಾ.!
ವಿರಾಟ್ ಕೊಹ್ಲಿ ಈ ವಿಶ್ವದ ಅಗ್ರಗಣ್ಯ ಬ್ಯಾಟ್ಸ್​​​ಮನ್. ಮಾಡ್ರನ್​ ಕ್ರಿಕೆಟ್ ದೊರೆ. ಜಂಟಲ್​ಮನ್​​​​ ಗೇಮ್​​ನ ರಿಯಲ್​​ ಬ್ರಾಂಡ್ ಅಂಬಾಸಿಡರ್​​​. ವಿಶ್ವದಾದ್ಯಂತ ಅಸಂಖ್ಯಾತ ಅಭಿಮಾನಿಗಳ ಬಳಗವನ್ನ ಹೊಂದಿರುವ ವಿಶ್ವಸಾಮ್ರಾಟ. ಕೋಟ್ಯಾಂತರ ಅಭಿಮಾನಿಗಳ ಪಾಲಿನ ನೆಚ್ಚಿನ ಸ್ಟಾರ್​ ವಿರಾಟ್​​ ಕೊಹ್ಲಿ.
ವಿಶ್ವದಾದಂತ್ಯ ಫ್ಯಾನ್ ಫಾಲೋಯಿಂಗ್ ಹೊಂದಿರುವ ವಿರಾಟ್​​, ಕ್ರೀಸ್​​ಗೆ ಇಳಿದ್ರೆ ಸಾಕು ಕಣ್ತುಂಬಿಕೊಳ್ಳಲು ಫ್ಯಾನ್ಸ್​ ತುದಿಗಾಲಿನಲ್ಲಿ ನಿಲ್ತಾರೆ. ಸ್ಟೇಡಿಯಂನಲ್ಲೇ ಅಲ್ಲ, ಟಿವಿ ಮುಂದೆಯೂ ರೆಪ್ಪೆ ಆಡಿಸದೆ ಪಂದ್ಯ ವೀಕ್ಷಿಸೋ, ಕೊಹ್ಲಿಯ ಹೆಸರು, ಭಾವಚಿತ್ರವನ್ನು ಮೈಮೇಲೆ ಟ್ಯಾಟೋ ಹಾಕಿಸಿಕೊಂಡ ಅಭಿಮಾನಿಗಳ ಸಂಖ್ಯೆಯಂತೂ ಲೆಕ್ಕಕ್ಕಿಲ್ಲ. ಆದ್ರೀಗ ಕಿಂಗ್ ಕೊಹ್ಲಿಯ ಕ್ರೇಜ್​​ಗೆ ನ್ಯೂ ಎಕ್ಸಾಂಪಲ್ ಇಂಗ್ಲೆಂಡ್​ನ​​​​ ಲೀಡ್ಸ್.​
ವಿರಾಟ್​ ಕೊಹ್ಲಿಗೆ ರೆಸ್ಟೋರೆಂಟ್ ಕೊಠಡಿ ಅರ್ಪಣೆ..!
ಸಾಮಾನ್ಯವಾಗಿನ ಭಾರತದಲ್ಲಿ ವಿರಾಟ್​ ಕೊಹ್ಲಿ ಹೆಸರಿನ ಟ್ಯಾಟೋ, ಬೈಕ್​ ಮೇಲೆ ವಿರಾಟ್​ ಕೊಹ್ಲಿಯ ಹೆಸರು, ಜರ್ಸಿ ನಂಬರ್​​-18 ನೋಡ್ತೇವೆ. ಇದು ಕಾಮನ್​ ಸಹ. ಆದ್ರೆ, ಇಂಗ್ಲೆಂಡ್​ನ ಲೀಡ್ಸ್​ನ ರೆಸ್ಟೋರೆಂಟ್​ನ ಕೊಠಡಿಗೆ ವಿರಾಟ್​ ಕೊಹ್ಲಿಯ ಭಾವಚಿತ್ರದೊಂದಿಗೆ ನಂಬರ್​​.18 ಎಂದು ನಾಮಕರಣ ಮಾಡಿದ್ದಾರೆ. ಅಂದ್ಹಾಗೆ ಆ ರೆಸ್ಟೋರೆಂಟ್ ಹೆಸರು ಥರವಾಡು.. ವಿಶೇಷ ಅಂದ್ರೆ, ಇದರ ಮಾಲೀಕರು ಕೇರಳ ಮೂಲದವರು.
ಥರವಾಡು ಇದು ಲೀಡ್ಸ್​ನ ಫೇಮಸ್ ಇಂಡಿಯನ್ ರೆಸ್ಟೋರೆಂಟ್. ಈ ಹಿಂದೆ ಕೇವಲ 17 ಟೇಬಲ್​​​​ಗಳನ್ನೇ ಹೊಂದಿದ್ದ ಈ ರೆಸ್ಟೋರೆಂಟ್​​ನಲ್ಲಿ, ಈಗ 18ನೇ ಟೇಬಲ್​​​ ಸೇರಿಸಲಾಗಿದೆ. ಈ 18ನೇ ಟೇಬಲ್​​​​ಗೆ ವಿರಾಟ್​​ ಕೊಹ್ಲಿಗೆ ಡೆಡಿಕೇಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಹೋಟೆಲ್​​ಗೆ ಬರುವ ಮಂದಿಯ ಪ್ರವೈಸಿ ಕಾಪಾಡುವ ನಿಟ್ಟಿನಲ್ಲೇ ಈ ಕೊಠಡಿ ರೂಪಿಸಲಾಗಿದೆ.
2018ರಲ್ಲಿ ಈ ಹೋಟೆಲ್​​ಗೆ ಬೇಟಿ ನೀಡಿದ್ದ ವಿರುಷ್ಕಾ ಜೋಡಿ.!
2018ರಲ್ಲಿ ವಿರಾಟ್​​ ಕೊಹ್ಲಿ, ಅನುಷ್ಕಾ ಶರ್ಮಾ ಕೇರಳ ಮೂಲದ ಈ ಹೋಟೆಲ್​ಗೆ ಆಗಮಿಸಿದ್ದರು. ಇಲ್ಲಿನ ಆಹಾರಕ್ಕೆ ಫಿದಾ ಆಗಿದ್ದ ವಿರುಷ್ಕಾ ಜೋಡಿ, ಈ ಹೋಟೆಲ್​ ಬಗ್ಗೆ ಕೊಂಡಾಡಿದ್ದರು. ಅಷ್ಟೆ ಅಲ್ಲ, ಪಿಂಗಾಣಿ ತಟ್ಟೆಯಲ್ಲಿ ಈ ಬಗ್ಗೆ ಸಂದೇಶ ಬರೆದಿದ್ದ ವಿರುಷ್ಕಾ ಜೋಡಿ, ಸಹಿ ಹಾಕಿದ್ದರು. ಈಗಲೂ ಸಹ ವಿರುಷ್ಕಾ ಜೋಡಿ ಸಹಿ ಹಾಕಿರುವ ತಟ್ಟೆ ಹೋಟೆಲ್​​ನಲ್ಲಿ ಕಾಣ ಸಿಗುತ್ತೆ. ಕೋವಿಡ್ ವೇಳೆಯೂ ಮಾಸ್ಕ್​ ಧರಿಸಿ ಈ ಹೋಟೆಲ್​ಗೆ ವಿರುಷ್ಕಾ ದಂಪತಿ ಭೇಟಿ ನೀಡಿದ್ರಂತೆ. ವಿರುಷ್ಕಾ ಜೋಡಿಗೆ ಈ ರೆಸ್ಟೋರೆಂಟ್ ಎಷ್ಟು ಇಷ್ಟ ಅಂದ್ರೆ, ಲೀಡ್ಸ್​ಗೆ ಬಂದ್ರೆ, ಈ ಹೋಟೆಲ್​​​​ನಲ್ಲಿ ತಿನ್ನದೆ ಹಿಂತಿರುಗಲ್ವಂತೆ.
ಇದನ್ನೂ ಓದಿ: 15 ವರ್ಷದ ಹಿಂದೆ ಮದುವೆ.. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಗರ್ಭಿಣಿ ಮಹಿಳೆ, ಗಂಡ ನಿಧನ
ಥರವಾಡು ರೆಸ್ಟೋರೆಂಟ್​ಗೆ ಇದೆ ಕ್ರಿಕೆಟ್ ನಂಟು..!
ಕೇರಳ ಮೂಲದ ಈ ಇಂಡಿಯನ್ ರೆಸ್ಟೋರೆಂಟ್, ಕೇವಲ ಊಟಕ್ಕಷ್ಟೇ ಸೀಮಿತವಾಗಿಲ್ಲ. ಕ್ರಿಕೆಟ್​ ಹಾಗೂ ಕ್ರಿಕೆಟಿರಿಗೂ ನಂಟಿದೆ. ಯಾಕಂದ್ರೆ, ಈ ರೆಸ್ಟೋರೆಂಟ್​ನಲ್ಲಿ ಕೇವಲ ವಿರುಷ್ಕಾ ಜೋಡಿ ಸಹಿ ಮಾಡಿದ ತಟ್ಟೆ ಮಾತ್ರವಿಲ್ಲ. ಈ ಹಿಂದೆ ಧೋನಿ ನಾಯಕತ್ವದ ಟೀಮ್ ಇಂಡಿಯಾ ಆಟಗಾರರು ಸಹಿ ಮಾಡಿದ ಬ್ಯಾಟ್​​​​​​​​​​, ವಿರಾಟ್​ ಕೊಹ್ಲಿ ನಾಯಕಕತ್ವದ ಟೀಮ್ ಇಂಡಿಯಾ ಆಟಗಾರರು ಸಹಿ ಮಾಡಿದ ಬ್ಯಾಟ್​ ಕೂಡ ಈ ಹೋಟೆಲ್​ನಲ್ಲಿ ನೋಡಲು ಸಿಗುತ್ತೆ. ಇದಕ್ಕಾಗಿ ಪ್ರತ್ಯೇಕ ವಾಲ್​​ ಇದೆ.
ಹಿಂದೆ ವಿರಾಟ್ ಕೊಹ್ಲಿ ಭೇಟಿ ನೀಡಿದನ್ನೇ ರೆಸ್ಟೋರೆಂಟ್​​​ ಮಾಲೀಕರು, ಈಗ ಮಾರ್ಕೆಟಿಂಗ್ ಮಾಡ್ತಾ, ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಕಾರಣಕ್ಕೆ ಹೇಳುವುದು ವಿರಾಟ್ ಕೊಹ್ಲಿ ಗ್ಲೋಬಲ್ ಐಕಾನ್ ಅಂತಾ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ