/newsfirstlive-kannada/media/post_attachments/wp-content/uploads/2025/05/VIRAT-KOHLI-11.jpg)
ಟೆಸ್ಟ್ ಕ್ರಿಕೆಟ್ಗೆ ಗುಡ್ ಬೈ ಹೇಳಿದ ಬೆನ್ನಲ್ಲೇ ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ (Virat Kohli) ಆಧ್ಯಾತ್ಮಿಕ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ. ಉತ್ತರ ಪ್ರದೇಶದ ವೃಂದಾವನಕ್ಕೆ (Vrindavan) ಭೇಟಿ ನೀಡಿರುವ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ದಂಪತಿ, ಪ್ರೇಮಾನಂದ ಜಿ ಮಹಾರಾಜ್ ಸ್ವಾಮೀಜಿಗಳ (Premanand Ji Maharaj) ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ಪ್ರೇಮಾನಂದ ಜಿ ಮಹಾರಾಜ್ ಸ್ವಾಮೀಜಿ ಅವರ ಪ್ರವಚನ ಕೇಳಿದ ಅನುಷ್ಕಾ ಶರ್ಮಾ ಕಣ್ಣೀರಿಟ್ಟಿದ್ದಾರೆ. ಎರಡನೇ ಬಾರಿಗೆ ಪ್ರೇಮಾನಂದ ಜಿ ಮಹಾರಾಜ್ ಸ್ವಾಮೀಜಿಗಳ ಆಶೀರ್ವಾದವನ್ನು ವಿರುಷ್ಕಾ ದಂಪತಿ ಪಡೆದುಕೊಂಡಿದೆ. ವಿರುಷ್ಕಾ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಭೇಟಿ ನೀಡಿರೋದು ವಿಶೇಷವಾಗಿತ್ತು. ಈ ಹಿಂದೆ ಜನವರಿಯಲ್ಲಿ ಇಲ್ಲಿಗೆ ಭೇಟಿ ನೀಡಿದ್ದರು.
ಇದನ್ನೂ ಓದಿ: ಕೊನೆಗೂ ಈಡೇರಲಿಲ್ಲ ಕೊಹ್ಲಿಯ ಆ ಒಂದು ಕನಸು.. ಸಾಧನೆಯ ಹಮ್ಮೀರನಿಗೆ ಅದೊಂದು ಕೊರಗು..!
Virat Kohli & Anushka Sharma से पूज्य महाराज जी की क्या वार्तालाप हुई ? Bhajan Marg pic.twitter.com/7IWWjIfJHB
— Bhajan Marg (@RadhaKeliKunj) May 13, 2025
ಈ ಸಮೃದ್ಧಿಯು ಕೇವಲ ಅನುಗ್ರಹವಲ್ಲ. ಅದು ಪುಣ್ಯದ ಫಲ. ಇದೊಂದು ದೈವಿಕ ಕಡೆಯ ಚಳವಳಿ. ನೀವು ಹೇಗೆ ಜೀವಿಸುತ್ತಿದ್ದೀರೋ ಹಾಗೆಯೇ ಇರಿ. ಜಗತ್ತಿಗೆ ನಿಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೀರಿ. ನಿಮ್ಮ ಒಳಮನಸ್ಸಿನ ಯೋಚನೆಗಳು ಬದಲಾಗಲಿ ಎಂದು ಪ್ರೇಮಾನಂದ ಜಿ ಮಹಾರಾಜರು ಆಶೀರ್ವಾದ ಮಾಡಿದ್ದಾರೆ ಎಂದು ವರದಿಯಾಗಿದೆ.
ವಿರಾಟ್ ಕೊಹ್ಲಿ ಒಬ್ಬ ದೈವ ಭಕ್ತ. ಬಿಡುವು ಸಿಕ್ಕಾಗ ದೇವಾಲಯಗಳಿಗೆ, ಭಕ್ತಿ ಮಂದಿರಗಳಿಗೆ ಭೇಟಿ ನೀಡುತ್ತಿರುತ್ತಾರೆ. 2023ರಲ್ಲಿ ಉಜ್ಜಯಿನಿಯ ಮಹಾಕಾಳೇಶ್ವರ ದೇಗುಲಕ್ಕೆ ಭೇಟಿ ನೀಡಿದ್ದರು.
ಇದನ್ನೂ ಓದಿ: ಐಪಿಎಲ್ಗೆ ಕೈಕೊಟ್ಟ ಇಂಗ್ಲೆಂಡ್ನ ಐದು ಸ್ಟಾರ್ ಆಟಗಾರರು.. ಆರ್ಸಿಬಿಗೂ ಆಘಾತ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ