/newsfirstlive-kannada/media/post_attachments/wp-content/uploads/2025/04/Virat-KOHLI-1.jpg)
ನಿನ್ನೆ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್.ರಾಹುಲ್ ನಡುವೆ ಮೈದಾನದಲ್ಲೇ ವಾಗ್ವಾದ ನಡೆದಿದೆ. ಆರ್ಸಿಬಿ ಬ್ಯಾಟಿಂಗ್ ಇನ್ನಿಂಗ್ಸ್ ವೇಳೆ ಈ ವಾಗ್ವಾದ ನಡೆದಿದೆ.
ಕೆ.ಎಲ್.ರಾಹುಲ್ ಇದ್ದಲ್ಲಿಗೆ ಬರುವ ವಿರಾಟ್ ಕೊಹ್ಲಿ ಮಾತಿಗೆ ಇಳಿದಿದ್ದಾರೆ. ಕೆ.ಎಲ್.ರಾಹುಲ್ ಕೂಡ ಏನೋ ಸಮರ್ಥನೆ ಮಾಡಿಕೊಂಡಂತೆ ವಿಡಿಯೋದಲ್ಲಿ ಕಾಣ್ತಿದೆ. ಆದರೆ ಇಬ್ಬರು ಸ್ಟಾರ್ಗಳು ಯಾವ ವಿಚಾರಕ್ಕೆ ವಾದ ಮಾಡುತ್ತಿದ್ದಾರೆ ಅನ್ನೋದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದರೆ ಇಬ್ಬರ ನಡುವೆ ಏನೋ ಉದ್ವಿಗ್ನತೆ ಇರೋದು ಸ್ಪಷ್ಟವಾಗಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಇದನ್ನೂ ಓದಿ: ಕಾಂತಾರ ಸ್ಟೈಲ್ನಲ್ಲೇ KL ರಾಹುಲ್ರ ಕಾಲೆಳೆದ ಕೊಹ್ಲಿ.. ಹೃದಯ ಗೆದ್ದ ಇಬ್ಬರ ಆತ್ಮೀಯತೆ.. VIDEO
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ಅನ್ನು 6 ವಿಕೆಟ್ಗಳಿಂದ ಸೋಲಿಸಿದೆ. ಆ ಮೂಲಕ ಚಿನ್ನಸ್ವಾಮಿಯಲ್ಲಿ ಆಗಿದ್ದ ಸೋಲಿನ ಸೇಡನ್ನು ತೀರಿಸಿಕೊಂಡಿದೆ. ಟಾಸ್ ಗೆದ್ದ ಆರ್ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ಗೆ ಆರ್ಸಿಬಿ ಬೌಲರ್ಸ್, ಚಮಕ್ ಕೊಟ್ಟರು. ನಿಗಧಿತ ಓವರ್ನಲ್ಲಿ 8 ವಿಕೆಟ್ ಕಳೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್, 162 ರನ್ಗಳಿಸಿತ್ತು. ಆರ್ಸಿಬಿ ಪರ ಭವಿ ಮೂರು ವಿಕೆಟ್ ಪಡೆದರು. ಇನ್ನು ಹೇಜಲ್ವುಡ್ 2, ಯಶ್ ದಯಾಳ್, ಕೃನಾಲ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದರು.
ಇನ್ನು 163 ರನ್ಗಳ ಗುರಿಯನ್ನು ಬೆನ್ನು ಹತ್ತಿದ್ದ ಆರ್ಸಿಬಿ, ಕೇವಲ 4 ವಿಕೆಟ್ ಕಳೆದುಕೊಂಡು 18.3 ಓವರ್ನಲ್ಲಿ ಗುರಿ ಮುಟ್ಟಿತು. ಆರ್ಸಿಬಿ ಪರ ವಿರಾಟ್ ಕೊಹ್ಲಿ 47 ಬಾಲ್ನಲ್ಲಿ 51 ರನ್ಗಳಿಸಿದರು. ಇನ್ನು, ಸ್ಫೋಟಕ ಬ್ಯಾಟಿಂಗ್ ನಡೆಸಿದ ಕೃನಾಲ್ ಪಾಂಡ್ಯ 47 ಬಾಲ್ನಲ್ಲಿ 73 ರನ್ ಚಚ್ಚಿದರು.
ಇದನ್ನೂ ಓದಿ: ಕೊಹ್ಲಿಗೂ ಅಲ್ಲ, ಕೃನಾಲ್ಗೂ ಅಲ್ಲ.. ಗೆಲುವಿನ ಕ್ರೆಡಿಟ್ ಯಾರಿಗೆ ಕೊಟ್ರು ರಜತ್ ಪಾಟೀದಾರ್..?
Things are heating up in Delhi! 🔥#ViratKohli and #KLRahul exchange a few words in this nail-biting match between #DC and #RCB. 💪
Watch the LIVE action ➡ https://t.co/2H6bmSltQD#IPLonJioStar 👉 #DCvRCB | LIVE NOW on Star Sports 1, Star Sports 1 Hindi, Star Sports 2, Star… pic.twitter.com/Oy2SPOjApz— Star Sports (@StarSportsIndia) April 27, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ