Advertisment

ಕೊನೆಗೂ ಈಡೇರಿತು ಕೊಹ್ಲಿಯ ಕನಸು.. ಜೊಕೊವಿಚ್-ಕೊಹ್ಲಿ ಗೆಳೆತನ ಆರಂಭವಾಗಿದ್ದೇಗೆ..?

author-image
Ganesh
Updated On
ಕೊನೆಗೂ ಈಡೇರಿತು ಕೊಹ್ಲಿಯ ಕನಸು.. ಜೊಕೊವಿಚ್-ಕೊಹ್ಲಿ ಗೆಳೆತನ ಆರಂಭವಾಗಿದ್ದೇಗೆ..?
Advertisment
  • ಒಂದು ತಿಂಗಳ ಬಳಿಕ ವಿರಾಟ್​ ಕೊಹ್ಲಿ ದರ್ಶನ
  • ಸ್ಟ್ಯಾಂಡ್​ನಿಂದ ಗೆಳೆಯನಿಗೆ ಚಿಯರ್​ ಮಾಡಿದ ಕೊಹ್ಲಿ
  • ಕೊನೆಗೂ ಈಡೇರಿತು ಕಿಂಗ್​ ಕೊಹ್ಲಿಯ ದೊಡ್ಡ ಕನಸು

ಎಬಿ ಡಿವಿಲಿಯರ್ಸ್-ವಿರಾಟ್​​ ಕೊಹ್ಲಿ. ಜೀವದ ಗೆಳೆಯರು ಅನ್ನೋದು ಇಡೀ ಜಗತ್ತಿಗೆ ಗೊತ್ತು. ಎಬಿಡಿಯಷ್ಟೇ ಮತ್ತೊಬ್ಬ ಆಪ್ತ ಸ್ನೇಹಿತ ಇದ್ದಾನೆ. ಈತ ಕ್ರಿಕೆಟ್​ ಅಂಗಳವನ್ನೂ ದಾಟಿದವ. ಈತ ಅಂತಿಂಥ ಗೆಳೆಯನಲ್ಲ. ಟೆನಿಸ್​​​​​​​ ಲೋಕದ ಭೀಷ್ಮ. ಈತನದ್ದು ಕೊಹ್ಲಿಯದ್ದು ವಿಶೇಷ ಬಂಧ. ಆ ದಿಗ್ಗಜ ಬೇರೆ ಯಾರೂ ಅಲ್ಲ. ನೋವಾಕ್​​ ಜೊಕೊವಿಚ್ (Virat Kohli and Novak Djokovic)​.

Advertisment

1 ತಿಂಗಳ ಬಳಿಕ ವಿರಾಟ್​ ಕೊಹ್ಲಿ ದರ್ಶನ

ಐಪಿಎಲ್​ ಅಂತ್ಯದ ಬಳಿಕ ವಿರಾಟ್​ ಕೊಹ್ಲಿ ಎಲ್ಲಿಗೆ ಹೋದರು ಅನ್ನೋದು ಯಾರಿಗೂ ಗೊತ್ತಾಗಿರಲಿಲ್ಲ. ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆರ್​​ಸಿಬಿ ವಿಕ್ಟರಿ ಪರೇಡ್​​ನಲ್ಲಿ ಕಾಣಿಸಿಕೊಂಡಿದ್ದ ವಿರಾಟ್​ ಕೊಹ್ಲಿ ಆ ಬಳಿಕ ಕಣ್ಮರೆಯಾಗಿ ಬಿಟ್ಟಿದ್ರು. ಸುಮಾರು ಒಂದು ತಿಂಗಳ ಬಳಿಕ ಕೊನೆಗೂ ವಿರಾಟನ ದರ್ಶನವಾಗಿದೆ. ವಿಂಬಲ್ಡನ್​ ಅಖಾಡದಲ್ಲಿ ( Wimbledon 2025) ಕಿಂಗ್​ ಕೊಹ್ಲಿ ಕಾಣಿಸಿಕೊಂಡಿದ್ದಾರೆ.

ಸ್ಟ್ಯಾಂಡ್​ನಿಂದ ಗೆಳೆಯನಿಗೆ ಚಿಯರ್​

ಇಂಗ್ಲೆಂಡ್​​ನಲ್ಲಿ ಬೀಡು ಬಿಟ್ಟಿರುವ ವಿರಾಟ್​ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಜೊತೆಗೂಡಿ ವಿಂಬಲ್ಡನ್​ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ. ಕೊಹ್ಲಿ ಅಲ್ಲಿಗೆ ಬಂದಿದ್ದು, ಗೆಳೆಯ ನೊವಾಕ್​ ಜೊಕೊವಿಚ್​ನ ಬೆಂಬಲಿಸಲು. ಅಲೆಕ್ಸ್​ ಡಿ ಮಿನೌರ್ (Alex de Minaur) ವಿರುದ್ಧದ ಪಂದ್ಯದಲ್ಲಿ ಜೊಕೊವಿಚ್​ ಜಯ ಸಾಧಿಸ್ತಿದ್ದಂತೆ ಕೊಹ್ಲಿ ಸಂಭ್ರಮಿಸಿದ್ದಾರೆ. ಇನ್ಸ್​​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಾಕಿ ಸಂಭ್ರಮಿಸಿದ್ದಾರೆ. ಕೊಹ್ಲಿ ಬೆಂಬಲಕ್ಕೆ ಸರ್ಬಿಯಾ ಸ್ಟಾರ್​​ ಕೂಡ​ ಖುಷಿಯಾಗಿದ್ದಾರೆ. ಕಿಂಗ್​ ಕೊಹ್ಲಿಗೆ ಧನ್ಯವಾದ ತಿಳಿಸಿ ಪೋಸ್ಟ್​ ಹಾಕಿದ್ದಾರೆ. ಆ ಬಳಿಕ ಗೇಮ್​ನ ಬಳಿಕ ಸ್ಪೆಷಲ್​ ಸಂದರ್ಶನದಲ್ಲಿ ಮಾತನಾಡಿರೋ ವಿರಾಟ್​ ಕೊಹ್ಲಿ ಗೆಳೆಯ ವಿಂಬಲ್ಡನ್​ ಗೆಲ್ಲಬೇಕು ಅಂದಿದ್ದಾರೆ.

ಇದನ್ನೂ ಓದಿ: ಗಿಲ್ ಬಲು ದುಬಾರಿ.. ಬ್ರಾಂಡ್ ವ್ಯಾಲ್ಯೂ ದುಪ್ಪಟ್ಟು ಏರಿಕೆ.. ಕೊಹ್ಲಿಯನ್ನೂ ಮೀರಿಸಿ ಬಿಟ್ರಾ..?

Advertisment

publive-image

ನಾನು ನೊವಾಕ್​ ಜೊತೆ ಕೆಲ ದಿನದಿಂದ ಟಚ್​ನಲ್ಲಿದ್ದೇನೆ. ಇಬ್ಬರೂ ಮೆಸೇಜ್​ ಮಾಡ್ತೀವಿ. ಅವರು ತುಂಬಾ ಒಳ್ಳೆಯ ವ್ಯಕ್ತಿ. ಸಂಪರ್ಕದಲ್ಲಿರಲು ಖುಷಿಯಾಗತ್ತೆ. ಹೀಗಾಗಿ ನನಗೆ ನೊವಾಕ್​ ಮತ್ತು ಕಾರ್ಲಸ್​ ಫೈನಲ್​ ಆಡಬೇಕು. ನೊವಾಕ್​ ಗೆಲ್ಲಬೇಕು. ಯಾಕಂದ್ರೆ ಕರಿಯರ್​​ನ ಈ ಹಂತದಲ್ಲಿ ಅದೊಂದು ದೊಡ್ಡ ಸಾಧನೆಯಾಗಲಿದೆ ಎಂದಿದ್ದಾರೆ ವಿರಾಟ್​ ಕೊಹ್ಲಿ.

ಕೊನೆಗೂ ಈಡೇರಿತು ಕಿಂಗ್​ ಕೊಹ್ಲಿಯ ಕನಸು

ಒಂದು ವೇಳೆ ನೊವಾಕ್ ಜೊಕೊವಿಚ್​ ಶೀಘ್ರದಲ್ಲೇ ಭಾರತಕ್ಕೆ ಬಂದರೆ ಭೇಟಿಯಾಗುತ್ತೇನೆ. ಇಲ್ಲ ವಿದೇಶದಲ್ಲಿ ಆಡುವಾಗ ಭೇಟಿ ಆಗುವೆ. ನಾನು ಖಂಡಿತ ಭೇಟಿಯಾಗಿ ಚಿಲ್​ ಮಾಡಬೇಕು. ಬಹುಶಃ ಒಂದೊಳ್ಳೆ ಕಾಫಿ ಕುಡಿಯಬಹುದು-ವಿರಾಟ್ ಕೊಹ್ಲಿ, ಕ್ರಿಕೆಟಿಗ

ಕಳೆದ ಕೆಲ ವರ್ಷಗಳಿಂದ ಹಿಂದೆ ವಿರಾಟ್​ ಕೊಹ್ಲಿಯೇ ಹೇಳಿದ ಮಾತಿದು. ಟೆನ್ನಿಸ್​​ ದಿಗ್ಗಜನ ಆಟಕ್ಕೆ ಕ್ಲೀನ್​ಬೋಲ್ಡ್ ಆಗಿದ್ದ ವಿರಾಟ್​ ಕೊಹ್ಲಿ, ಜೊಕೊವಿಚ್​​ನ ಭೇಟಿಯಾಗೋ ಆಸೆಯನ್ನ ಆಗಲೇ ವ್ಯಕ್ತಪಡಿಸಿದ್ರು. ಆದ್ರೆ, ಭೇಟಿ ಸಾಧ್ಯವಾಗಿರಲಿಲ್ಲ. ಇದೀಗ ಕೊಹ್ಲಿ ಕನಸು ನನಸಾಗಿದೆ. ವಿಂಬಲ್ಡನ್​ ಅಖಾಡಕ್ಕೆ ತೆರಳಿ ಸ್ಟ್ಯಾಂಡ್​ನಲ್ಲಿ ಕೂತು ಗೆಳೆಯನಿಗೆ ಚಿಯರ್​ ಮಾಡಿದ್ದಾರೆ.

Advertisment

ದಿಗ್ಗಜರ ಗೆಳೆತನಕ್ಕೆ ಇನ್​ಸ್ಟಾಗ್ರಾಮ್​​ ಅಡಿಗಲ್ಲು

ಕ್ರೀಡೆ ಯಾವುದೇ ಗಡಿಯಿಲ್ಲ. ಇದು ಎಲ್ಲವನ್ನೂ ಮೀರಿದ್ದು ಅನ್ನೋ ಮಾತು ಕ್ರಿಕೆಟ್​ ಸಾಮ್ರಾಟ ವಿರಾಟ್ ಕೊಹ್ಲಿ ಹಾಗೂ ಟೆನಿಸ್​​​ ಲೆಜೆಂಡ್​ ನೊವಾಕ್ ಜೊಕೊವಿಚ್​ ವಿಚಾರದಲ್ಲಿ ಪ್ರೂವ್ ಆಗಿದೆ. ಇವರಿಬ್ಬರ ಗೆಳೆತನ ಆರಂಭವಾಗಿದ್ದೇ, ಒಂಥರ ವಿಚಿತ್ರವಾಗಿದೆ. 82 ಸೆಂಚುರಿಗಳ ಒಡೆಯ ಕೊಹ್ಲಿ ಹಾಗೂ 24 ಗ್ರ್ಯಾನ್ ಸ್ಲಾಮ್​​​ ಒಡೆಯ ಜೊಕೊವಿಕ್​ ನಡುವೆ ಸ್ನೇಹ ಚಿಗುರೊಡೆದಿದ್ದು ಇನ್ಸ್​​ಸ್ಟಾಗ್ರಾಂನಿಂದ.

ಇದನ್ನೂ ಓದಿ: ಅಲಿಯಾ ಭಟ್​ಗೆ ಲಕ್ಷ ಲಕ್ಷ ವಂಚನೆ, ಬೆಂಗಳೂರಲ್ಲಿ ಆಪ್ತ ಸಹಾಯಕಿ ಅರೆಸ್ಟ್.. ಈಕೆ ವಂಚಿಸಿದ್ದೇ ಸಖತ್ ಇಂಟರೆಸ್ಟಿಂಗ್

publive-image

ಇನ್​ಸ್ಟಾಗ್ರಾಮ್​ನಲ್ಲಿ ನೊವಾಕ್ ಜೊಕೊವಿಚ್​​​​​​ ಪ್ರೊಫೈಲ್​​ ನೋಡಿ ಮೆಸೇಜ್​ ಬಟನ್ ಮೇಲೆ ಕ್ಲಿಕ್ ಮಾಡಿದೆ. ನನಗೆ ಮೆಸೇಜ್ ಮಾಡಬೇಕು ಅನ್ನಿಸಿತ್ತು. ನೋಡಿದ್ರೆ ಅವರೇ ನನಗೆ ನೇರವಾಗಿ ಮೆಸೇಜ್ ಕಳುಹಿಸಿದ್ದರು. ಆರಂಭದಲ್ಲಿ ಅದನ್ನ ಓಪನ್ ಮಾಡಿರಲಿಲ್ಲ. ಮೊದಲ ಬಾರಿ ನನಗೆ ಬಂದ ಮೆಸೇಜ್​​​​ ಓಪನ್ ಮಾಡಿದೆ. ಜೊಕೊವಿಚ್​ ಮೆಸೇಜ್ ಮಾಡಿದ್ರು. ಮೊದಲಿಗೆ ಇದು ಫೇಕ್ ಅಕೌಂಟ್​ ಇರಬಹುದು ಎಂದು ಭಾವಿಸಿದ್ದೆ. ಮತ್ತೊಮ್ಮೆ ಚೆಕ್ ಮಾಡಿದೆ. ಅದು ಅವರದ್ದೇ ಆಗಿತ್ತು. ಬಳಿಕ ಪರಸ್ಪರ ಮಾತನಾಡಲು ಶುರು ಮಾಡಿದೆವು-ವಿರಾಟ್ ಕೊಹ್ಲಿ, ಕ್ರಿಕೆಟಿಗ

Advertisment

ವಿಶ್ವ ದಾಖಲೆಯ 50ನೇ ಶತಕಕ್ಕೆ ಶುಭ ಕೋರಿದ್ದ ಜೊಕೊವಿಚ್​​

ಕೊಹ್ಲಿ 2023ರಲ್ಲಿ ಏಕದಿನ ಕ್ರಿಕೆಟ್​ನಲ್ಲಿ 50 ಶತಕಗಳನ್ನ ಬಾರಿಸಿ ಸಚಿನ್​​ ತೆಂಡೂಲ್ಕರ್​​​​​​​​​​ ಹೆಸರಿನಲ್ಲಿದ್ದ ದಾಖಲೆಯನ್ನ ಅಳಿಸಿಹಾಕಿದ್ರು. ಅಂದು ಜಗತ್ತೇ ಕೊಹ್ಲಿಯನ್ನ ಕೊಂಡಾಡಿತ್ತು. ಆಗ ಟೆನ್ನಿಸ್​​ ಅಧಿಪತಿ ಜೊಕೊವಿಚ್​​​ ಕೂಡ ಕೊಹ್ಲಿಗೆ ಭಿನ್ನವಾಗಿ ಶುಭಾಶಯ ಕೋರಿದ್ರು.

ನಾನು ಏಕದಿನದಲ್ಲಿ 50ನೇ ಶತಕ ಸಿಡಿಸಿದಾಗ ಜೊಕೊವಿಚ್​​​​​ ಒಂದು ಸ್ಟೋರಿ ಹಾಕಿದ್ರು. ಜೊತೆಗೆ ಮೆಸೇಜ್ ಕೂಡ ಕಳುಹಿಸಿದ್ದರು. ಅವರ ಅಭಿಮಾನ ಮತ್ತು ಗೌರವಕ್ಕೆ ನಾನು ಅಭಾರಿ. ಜಾಗತಿಕ ಕ್ರೀಡಾಪಟುಗಳು ಜೊತೆಯಾಗಿರುವುದಕ್ಕೆ ಬಹಳ ಸಂತಸವಿದೆ. ಇದು ಯುವ ಸಮುದಾಯಕ್ಕೆ ಸ್ಫೂರ್ತಿಯಾಗಲಿದೆ- ವಿರಾಟ್ ಕೊಹ್ಲಿ, ಕ್ರಿಕೆಟಿಗ

ಸತತ ಮೆಸೇಜ್​ಗಳ ಮೂಲಕ ಕೆಲ ವರ್ಷಗಳಿಂದ ಟಚ್​ನಲ್ಲಿದ್ರೂ ಇವರಿಬ್ಬರು ಲೆಜೆಂಡ್​ಗಳಿಗೆ ಮುಖತಃ ಭೇಟಿ ಮಾಡೋ ಅವಕಾಶವೇ ಸಿಕ್ಕಿರಲಿಲ್ಲ. ಕೊನೆಗೂ ಇಬ್ಬರ ಭೇಟಿಯಾಗಿದ್ದಾರೆ. ಇಬ್ಬರೂ ಫುಲ್​ ಖುಷ್​ ಆಗಿದ್ದಾರೆ. ಎಲ್ಲಿಯ ವಿರಾಟ್ ಕೊಹ್ಲಿ? ಎಲ್ಲಿಯ ನೊವಾಕ್​​ ಜೊಕೊವಿಚ್? ಎಲ್ಲಿಂದ ಎಲ್ಲಿಯ ಸಂಬಂಧ ? ಈ ಕ್ರೀಡೆಯ ತಾಕತ್ತೆ ಅಂಥದ್ದು, ಎಲ್ಲವನ್ನೂ, ಎಲ್ಲರನ್ನೂ ಬೆಸೆಯುವ ಗುಣವಿದೆ.

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment