/newsfirstlive-kannada/media/post_attachments/wp-content/uploads/2024/04/KOHLI-9.jpg)
ಇಂದು ಸಂಜೆ 7.30ಕ್ಕೆ ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಆರ್ಸಿಬಿ ಮತ್ತು ಎಸ್ಆರ್ಹೆಚ್ ತಂಡಗಳ ನಡುವೆ ಹೈ-ವೋಲ್ಟೇಜ್ ಪಂದ್ಯ ನಡೆಯಲಿದೆ. ರೋಚಕ ಪಂದ್ಯಗಳ ವೀಕ್ಷಣೆಗೆ ಅಭಿಮಾನಿಗಳು ಕುತೂಹಲದಿಂದ ಕಾದು ಕೂತಿದ್ದಾರೆ.
ಈ ಮಧ್ಯೆ ಅಭಿಮಾನಿಗಳಿಗೆ ಕ್ಯೂರಿಯಾಸಿಟಿ ಹೊಂದಿರುವ ವಿಡಿಯೋ ಒಂದನ್ನು ಆರ್ಸಿಬಿ ಹಂಚಿಕೊಂಡಿದೆ. ಮೈದಾನದಲ್ಲಿ ಕೊಹ್ಲಿ ಹಾಗೂ ಎಸ್ಆರ್ಹೆಚ್ ತಂಡದ ಕ್ಯಾಪ್ಟನ್ ಪ್ಯಾಟ್ ಕಮ್ಮಿನ್ಸ್ ನಡುವಿನ ಸಂಭಾಷಣೆ ಇದಾಗಿದೆ.
ಇದನ್ನೂ ಓದಿ:ಇನ್ನೇನು ಸಾಯುತ್ತಿದ್ದ ಮಹಿಳೆಗೆ ಹಂದಿಯ ಮೂತ್ರಪಿಂಡ ಕಸಿ ಯಶಸ್ವಿ, ಮರುಜನ್ಮ ಪಡೆದ ‘ಮಿರಾಕಲ್ ಗಟ್ಟಿಗಿತ್ತಿ’..!
ವಿಡಿಯೋದಲ್ಲಿ, ವಿರಾಟ್ ಕೊಹ್ಲಿ ಮೈದಾನದಲ್ಲಿ ಪ್ರ್ಯಾಕ್ಟೀಸ್ ಮಾಡುವ ವೇಳೆ ಕೂತು, ಏನೋ ತಿನ್ನುತ್ತ ಕೂತಿದ್ದಾರೆ. ಅಲ್ಲಿಗೆ ಬ್ಯಾಟ್ ಹಿಡಿದು ಕಮ್ಮಿನ್ಸ್ ಬರುತ್ತಾರೆ. ನಂತರ ಇಬ್ಬರ ಮಧ್ಯೆ ಸಂಭಾಷಣೆ ನಡೆದಿದೆ. ಈ ವಿಡಿಯೋವನ್ನು ಆರ್ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇಬ್ಬರ ನಡುವಿನ ಪರಸ್ಪರ ಗೌರವ ಮತ್ತು ಪ್ರೀತಿಯನ್ನು ಸೂಚಿಸುತ್ತಿರುವ ವಿಡಿಯೋ ಇದಾಗಿದ್ದು, ಅಭಿಮಾನಿಗಳಿಗೆ ಸ್ಫೂರ್ತಿ ನೀಡುತ್ತಿದೆ.
"You're too good, Pat" 😅
No 🤫 needed! A bit of banter ahead of our game tomorrow. 😬
This is Royal Challenge presents RCB Shorts. #PlayBold#ನಮ್ಮRCB#IPL2024#ChooseBoldpic.twitter.com/n8wegdTjUt— Royal Challengers Bengaluru (@RCBTweets) April 24, 2024
ಈ ವಿಡಿಯೋವನ್ನು ನೋಡಿದ ಕೆಲವು ಅಭಿಮಾನಿಗಳು ಇವತ್ತಿನ ಪಂದ್ಯದಲ್ಲಿ 300 ರನ್ಗಳ ಸ್ಕೂರ್ ಮಾಡುವ ಬಗ್ಗೆ ಮಾತುಕತೆ ನಡೆದಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಯಾಕಂದರೆ ಕಳೆದ ಬಾರಿ ಅಂದರೆ ಏಪ್ರಿಲ್ 15 ರಂದು ಎರಡು ತಂಡಗಳು ಮುಖಾಮುಖಿ ಆಗಿದ್ದವು. ಈ ವೇಳೆ ಮೊದಲು ಬ್ಯಾಟ್ ಮಾಡಿದ್ದ ಹೈದ್ರಾಬಾದ್ ತಂಡವು ಮೂರು ವಿಕೆಟ್ ಕಳೆದುಕೊಂಡು 287 ರನ್ಗಳಿಸಿತ್ತು. ಇನ್ನು, ಹೈದರಾಬಾದ್ ತಂಡವು ಮೊದಲು ಬ್ಯಾಟ್ ಮಾಡಿದ ಬಹುತೇಕ ಪಂದ್ಯಗಳಲ್ಲಿ 200+ ರನ್ ಮಾಡಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್