/newsfirstlive-kannada/media/post_attachments/wp-content/uploads/2025/03/KOHLI_RAJAT.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 2ನೇ ಪಂದ್ಯ ಬದ್ಧವೈರಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯಲಿದೆ. ಆರ್ಸಿಬಿ ಅಭಿಮಾನಿಗಳೆಲ್ಲಾ ಈ ಪಂದ್ಯಕ್ಕಾಗಿ ಕಾತುರದಿಂದ ಇದ್ದು ಈ ಕಾದಾಟದ ರಸದೌತಣ ಸವಿಯಲು ಎರಡು ಕಡೆಯ ಫ್ಯಾನ್ಸ್ ಪಂದ್ಯಕ್ಕಾಗಿ ಕಾದು ಕುಳಿತ್ತಿದ್ದಾರೆ. ಮಾರ್ಚ್ 28 ರಂದು ನಡೆಯುವ ಬಿಗ್ ಬ್ಯಾಟಲ್ಗಾಗಿ ಆರ್ಸಿಬಿ ಪ್ಲೇಯರ್ಸ್ ಈಗಾಗಲೇ ಚೆನ್ನೈ ತಲುಪಿದ್ದಾರೆ.
ಆರ್ಸಿಬಿ ನಾಯಕ ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ಸಾಲ್ಟ್, ಕೃನಾಲ್ ಪಾಂಡ್ಯ, ಜಾಕಬ್ ಬೆಥೆಲ್, ಲಿವಿಂಗ್ಸ್ಟನ್, ದೇವದತ್ ಪಡಿಕ್ಕಲ್, ರಸಿಕ್ ದಾರ್, ಭುವನೇಶ್ವರ್ ಸೇರಿದಂತೆ ಎಲ್ಲರೂ ಚೆನ್ನೈನ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದಾರೆ. ಸದ್ಯ ಆರ್ಸಿಬಿ ಪ್ಲೇಯರ್ಸ್ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿವೆ.
ಇದನ್ನೂ ಓದಿ:ವಿಘ್ನೇಶ್ ಪುತೂರ್ ಕರ್ನಾಟಕದವ್ರಾ..? ಈ ಯುವ ಪ್ಲೇಯರ್ ತಂದೆ ಈಗಲೂ ಆಟೋ ಓಡಿಸ್ತಾರೆ!
ಇನ್ನು ವಿರಾಟ್ ಕೊಹ್ಲಿಯನ್ನು ನೋಡುತ್ತಿದ್ದಂತೆ ಚೆನ್ನೈನಲ್ಲಿರುವ ಆರ್ಸಿಬಿ ಫ್ಯಾನ್ಸ್ ಎಲ್ಲ ಥಲೈವಾ.. ಥಲೈವಾ ಎಂದು ಕೂಗಿದ್ದಾರೆ. ಇದರ ಜೊತೆಗೆ ಆರ್ಸಿಬಿ.. ಆರ್ಸಿಬಿ.. ಎನ್ನುವ ಘೋಷಣೆ ಕೂಡ ಜೋರಾಗಿ ಮೊಳಗಿದೆ. ಆಟಗಾರರೆಲ್ಲಾ ರೆಡ್ ಕಲರ್ ಡ್ರೆಸ್ನಲ್ಲಿದ್ದು ಕಣ್ಣಿಗೆ ಕೂಲಿಂಗ್ ಗ್ಲಾಸ್, ಕಿವಿಗೆ ಹೆಡ್ಫೋನ್ ಹಾಕಿಕೊಂಡು ಚೆನ್ನೈಗೆ ಗ್ರ್ಯಾಂಡ್ ಆಗಿ ಎಂಟ್ರಿಕೊಟ್ಟಿದ್ದಾರೆ.
ಆರ್ಸಿಬಿ ಮುಂದಿನ ಪಂದ್ಯ ಇದೇ ವಾರ ಮಾರ್ಚ್ 28, ಶುಕ್ರವಾರ ಸಂಜೆ 7:30ರಂದು ನಡೆಯಲಿದೆ. ಆರ್ಸಿಬಿ ಬದ್ಧವೈರಿ ಸಿಎಸ್ಕೆ ತಂಡದ ವಿರುದ್ಧ ಮ್ಯಾಚ್ ಇರುವುದರಿಂದ ಫ್ಯಾನ್ಸ್ ಕುತೂಹಲ ಹೆಚ್ಚಿಸಿದೆ. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಚೆನ್ನೈ ಹಾಗೂ ಬೆಂಗಳೂರು ನಡುವಿನ ಕಾದಾಟ ನಡೆಯಲಿದೆ. ಸದ್ಯ ಟೂರ್ನಿಯಲ್ಲಿ ಈ ಎರಡು ಟೀಮ್ಗಳು ಒಂದೊಂದು ಪಂದ್ಯವನ್ನು ಗೆದ್ದುಕೊಂಡಿವೆ.
THE CRAZE FOR KING KOHLI AT CHENNAI. 👑 pic.twitter.com/06TqNy1eRh
— Johns. (@CricCrazyJohns)
THE CRAZE FOR KING KOHLI AT CHENNAI. 👑 pic.twitter.com/06TqNy1eRh
— Johns. (@CricCrazyJohns) March 24, 2025
">March 24, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ