newsfirstkannada.com

ಟಿ20 ವಿಶ್ವಕಪ್​​​ನಲ್ಲಿ ರೋಹಿತ್​ಗೆ ವಿರಾಟ್ ಸಾಥಿ; ಮಹತ್ವದ ನಿರ್ಧಾರದ ಹಿಂದಿನ ಅಸಲಿ ಲೆಕ್ಕಾಚಾರ ಇಲ್ಲಿದೆ..!

Share :

Published April 19, 2024 at 11:40am

  ಶುಭ್​​ಮನ್, ಜೈಸ್ವಾಲ್ ಬದಲಾಗಿ ವಿರಾಟ್ ಏಕೆ..?

  ಕೊಹ್ಲಿಯ ಟಿ20 ವಿಶ್ವಕಪ್​ ಭವಿಷ್ಯ ಹಾಟ್ ಡಿಬೇಟ್

  ಟಿ20 ವಿಶ್ವಕಪ್​ನಲ್ಲಿ ವಿರಾಟ್​ಗೆ ನಯಾ ರೋಲ್​?

ಐಪಿಎಲ್ ದಿನೆದಿನೇ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಫ್ಲೇ-ಆಫ್​​ಗೆ ಎಂಟ್ರಿ ನೀಡೋದ್ಯಾರು ಎಂಬ ಕ್ಯೂರಿಯಾಸಿಟಿ ಹುಟ್ಟುಹಾಕಿದೆ. ಈ ನಡುವೆ ಕೊಹ್ಲಿಯ ಟಿ20 ವಿಶ್ವಕಪ್​ ಭವಿಷ್ಯ ಹಾಟ್ ಡಿಬೇಟ್ ಆಗಿದೆ. ಇದಕ್ಕೆಲ್ಲಾ ಕಾರಣ ವಿರಾಟ್​ ಕೊಹ್ಲಿ ಸ್ಲಾಟ್​. ಅತ್ತ ಐಪಿಎಲ್​ ರಂಗೇರುತ್ತಿದ್ರೆ, ಇತ್ತ ಟಿ20 ವಿಶ್ವಕಪ್​ ಟೆನ್ಶನ್ ಜೋರಾಗಿದೆ. ಚುಟುಕು ಮಹಾ ಸಂಗ್ರಾಮಕ್ಕೆ ಟಿಕೆಟ್ ಪಡೆಯೋದ್ಯಾರು ಅನ್ನೋದು ಹಾಟ್ ಟಾಪಿಕ್​ ಆಗಿದೆ. ಈ ನಡುವೆ ವಿರಾಟ್​ ಕೊಹ್ಲಿಯ ಸ್ಲಾಟ್​, ಚರ್ಚೆಯ ಕೇಂದ್ರ ಬಿಂದುವಾಗಿದೆ. ಇದಕ್ಕೆಲ್ಲಾ ಕಾರಣ ವಿರಾಟ್​ ಕೊಹ್ಲಿಯ ನಯಾ ರೋಲ್.

ರನ್ ಮಷಿನ್ ವಿರಾಟ್​, ಟಿ20 ವಿಶ್ವಕಪ್​ ಫ್ಲೈಟ್ ಹತ್ತೋದು ಪಕ್ಕಾ ಆಗಿದೆ. ಈಗಾಗಲೇ ವಿರಾಟ್ ಕೊಹ್ಲಿ​ ಬಳಿ ಚರ್ಚಿಸಿರುವ ಸೆಲೆಕ್ಷನ್ ಕಮಿಟಿ ಮಹತ್ವದ ಹೆಜ್ಜೆಹಾಕಿದೆ. ಮೋಸ್ಟ್​ ಇಂಪಾರ್ಟೆಂಟ್ಲಿ.. ರೋಹಿತ್​​ ಶರ್ಮಾ ಜೊತೆ ವಿರಾಟ್​​ ಇನ್ನಿಂಗ್ಸ್​ ಆರಂಭಿಸುವ ಒಲವು ಹೊಂದಿದೆ. ಈ ಬಗ್ಗೆ ವಿರಾಟ್​​ಗೆ ಕ್ಲಾರಿಟಿ ನೀಡಿರುವ ಸೆಲೆಕ್ಷನ್ ಕಮಿಟಿ, ವಿಶ್ವಕಪ್​ಗೂ ಮುನ್ನವೇ ಮಾಸ್ಟರ್ ಸ್ಟ್ರೋಕ್ ನೀಡ್ತಿದೆ. ಈ ನಿರ್ಣಯದ ಹಿಂದೆ ಬಾರೀ ಲೆಕ್ಕಚಾರ ಹಾಗೂ ಕಾರಣಗಳೇ ಅಡಗಿವೆ.

ಇದನ್ನೂ ಓದಿ: ಮಂಡ್ಯದಲ್ಲಿ ಗಾಳಿ ಸಹಿತ ಭಾರೀ ಮಳೆ; ದೊಡ್ಡ ಅನಾಹುತದಿಂದ KSRTC ಬಸ್​ ಜಸ್ಟ್ ಮಿಸ್​..!

IPL​ನಲ್ಲಿ ಅಬ್ಬರ.. ಟಿ20 ವಿಶ್ವಕಪ್​ನಲ್ಲಿ ಕೊಹ್ಲಿ ಓಪನರ್
ಪ್ರಸಕ್ತ ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ, ಸಾಲಿಡ್ ಫಾರ್ಮ್​ನಲ್ಲಿದ್ದಾರೆ. ಆರಂಭಿಕರಾಗಿ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾರೆ. ಇದೆಲ್ಲಕ್ಕಿಂತ ಮಿಗಿಲಾಗಿ ಟಿ20 ಫಾರ್ಮೆಟ್​ನಲ್ಲಿ ಆರಂಭಿಕರಾಗಿ ವಿರಾಟ್​ ಕೊಹ್ಲಿ ಸಕ್ಸಸ್​ ಕಂಡಿದ್ದಾರೆ. ಜಸ್ಟ್​ ಐಪಿಎಲ್​ನಲ್ಲಿ ಆರ್​ಸಿಬಿ ಪರವೇ ಅಲ್ಲ. ಟೀಮ್ ಇಂಡಿಯಾ ಪರ ಬ್ಯಾಟ್​​​​​​ ಝಳಪಿಸಿರುವ ವಿರಾಟ್​, ರನ್ ಸುನಾಮಿಯೇ ಸೃಷ್ಟಿಸಿದ್ದಾರೆ.

ಟಿ20ಯಲ್ಲಿ ಆರಂಭಿಕನಾಗಿ ಕೊಹ್ಲಿ
ಐಪಿಎಲ್​ನಲ್ಲಿ ಇದುವರೆಗೂ 105 ಪಂದ್ಯಗಳಲ್ಲಿ ಆರಂಭಿಕರಾಗಿ ಆಡಿರೋ ಚೇಸ್ ಮಾಸ್ಟರ್, 45.14ರ ಸರಾಸರಿಯಲ್ಲಿ 3972 ರನ್​ಗಳಿಸಿದ್ದಾರೆ. ಈ ಪೈಕಿ 8 ಶತಕ, 28 ಅರ್ಧಶತಕ ಸೇರಿದ್ದು 136.45ರ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್ ಬೀಸಿದ್ದಾರೆ. ಬ್ಲೂ ಜೆರ್ಸಿಯಲ್ಲಿ ಈವರೆಗೂ 9 ಪಂದ್ಯಗಳಲ್ಲಿ ಇನ್ನಿಂಗ್ಸ್ ಆರಂಭಿಸಿರುವ ವಿರಾಟ್, 400 ರನ್​​​​ ಗಳಿಸಿದ್ದಾರೆ. 57.14ರ ಸರಾಸರಿ ಹಾಗೂ 161.29ರ ಸ್ಟ್ರೈಕ್​ರೇಟ್​ ಹೊಂದಿದ್ದಾರೆ.

ಇದನ್ನೂ ಓದಿ:11 ಬಾರಿ ಚಾಕು ಇರಿದು ನೇಹಾ ಹಿರೇಮಠ್ ಕೊಲೆ; ಲವ್ ಜಿಹಾದ್ ಅನುಮಾನ, ತನಿಖೆಗೆ ಆಗ್ರಹ

ಇಂಟರೆಸ್ಟಿಂಗ್ ಅಂದರೆ ಮೂರು ವರ್ಷಗಳ ಕಾಲ ರನ್ ಬರ ಎದುರಿಸಿದ್ದ ವಿರಾಟ್, ಕಮ್​ಬ್ಯಾಕ್ ಮಾಡಲು ಸಹಾಯವಾದ 2022ರ ಏಷ್ಯಾಕಪ್​ನ ಅಫ್ಗಾನ್ ಮ್ಯಾಚ್​ನಲ್ಲಿ ಬ್ಯಾಟ್ ಬೀಸಿದ್ದು ಆರಂಭಿಕನಾಗಿ. ಈ ಒಂದೇ ಕಾರಣಕ್ಕೆ ವಿರಾಟ್, ರೋಹಿತ್ ಜೊತೆ ಟಿ20 ವಿಶ್ವಕಪ್​ನಲ್ಲಿ ಆಡಲು ನಿರ್ಧರಿಸಿಲ್ಲ. ಇದಕ್ಕೆ ಇನ್ನೂ ಹಲವು ಕಾರಣಗಳಿವೆ.

ಕೊಹ್ಲಿ ಓಪನರ್ ಆಗಿ ಯಾಕೆ..?
ಐಪಿಎಲ್​ನಲ್ಲಿ ಗಿಲ್, ಜೈಸ್ವಾಲ್​ರ ವೈಫಲ್ಯ ಕಾಣುತ್ತಿದ್ದಾರೆ. ಹೀಗಾಗಿ ಫಾರ್ಮ್​ನಲ್ಲಿರುವ ವಿರಾಟ್​ ಆರಂಭಿಕರಾಗಲು ಸೂಕ್ತ. ಪವರ್​ ಪ್ಲೇನಲ್ಲಿ ಪವರ್​ ಫುಲ್ ಬ್ಯಾಟಿಂಗ್ ನಡೆಸ್ತಿರುವ ವಿರಾಟ್, ಮಿಡಲ್ ಆರ್ಡರ್​ನಲ್ಲಿ ರನ್ ಪೇರಿಸಲು ಪರದಾಟ ನಡೆಸ್ತಿದ್ದಾರೆ. ಹೀಗಾಗಿ ಆರಂಭಿಕರಾಗಿ ಬ್ಯಾಟ್ ಬೀಸಿದ್ರೆ, ಫೀಲ್ಡಿಂಗ್ ರಿಸ್ಟ್ರಿಕ್ಷನ್ ಅಡ್ವಾಂಟೇಜ್ ಸಿಗಲಿದೆ. ಸ್ಪಿನ್ ವಿಕ್ನೇಸ್ ಹೊಂದಿರುವ ವಿರಾಟ್​​ ಕೊಹ್ಲಿಗೆ ವೆಸ್ಟ್ ಇಂಡೀಸ್ ಕಂಡಿಷನ್ಸ್​ ಸೂಟ್ ಆಗಲ್ಲ. ಹೀಗಾಗಿ 3ನೇ ಕ್ರಮಾಂಕದ ಬದಲಿಗೆ ಆರಂಭಿಕ ಸ್ಥಾನವೇ ಸೂಕ್ತ. ರೋಹಿತ್​​ಗೆ ಉತ್ತಮ ಜೊತೆಗಾರ ವಿರಾಟ್​​​​​ ಆಗಿದ್ದಾರೆ. ಇದೆಲ್ಲಕ್ಕಿಂತ ಮಿಗಿಲಾಗಿ ಟಾಫ್ ಆರ್ಡರ್ ಫೇಲ್ಯೂರ್ ಆದಾಗ ಆ್ಯಂಕರ್​ ರೋಲ್ ಪ್ಲೇ ಮಾಡುವ ಕೊಹ್ಲಿ, ಪರಿಸ್ಥಿತಿಗೆ ತಕ್ಕಂತೆ ಲಾಂಗ್ ಇನ್ನಿಂಗ್ಸ್​ ಕಟ್ಟಬಲ್ಲರು.

ಇದನ್ನೂ ಓದಿ:ಐಪಿಎಲ್​​ನಲ್ಲಿ ಸತತ ಹೀನಾಯ ಸೋಲು, RCB ದುಸ್ಥಿತಿಗೆ ಇವರಿಬ್ಬರೇ ಪ್ರಮುಖ ಕಾರಣ..!

ಇದು ಸಹಜವಾಗೇ ಟೀಮ್ ಇಂಡಿಯಾಗೆ ವರದಾನ ಆಗುತ್ತೆ. ಹೀಗಾಗಿಯೇ ಟಿ20 ವಿಶ್ವಕಪ್​ನಲ್ಲಿ ರೋಹಿತ್ ಜೊತೆ ವಿರಾಟ್​ ಕೊಹ್ಲಿ ಇನ್ನಿಂಗ್ಸ್​ ಆರಂಭಿಸುವುದು ಬಿಸಿಸಿಐ ಆ್ಯಂಡ್ ಮ್ಯಾನೇಜ್​ಮೆಂಟ್ ಲೆಕ್ಕಚಾರ. ಒಟ್ನಲ್ಲಿ, ಕೊನೆ ಟಿ20 ವಿಶ್ವಕಪ್​ ಆಡುವ ಹೊಸ್ತಿಲಿಲ್ಲ ಇರುವ ವಿರಾಟ್​, ನಿಜಕ್ಕೂ ಚುಟುಕು ವಿಶ್ವಕಪ್ ಸಮರದಲ್ಲಿ ನಯಾ ರೋಲ್​ನಲ್ಲಿ ಆಡ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟಿ20 ವಿಶ್ವಕಪ್​​​ನಲ್ಲಿ ರೋಹಿತ್​ಗೆ ವಿರಾಟ್ ಸಾಥಿ; ಮಹತ್ವದ ನಿರ್ಧಾರದ ಹಿಂದಿನ ಅಸಲಿ ಲೆಕ್ಕಾಚಾರ ಇಲ್ಲಿದೆ..!

https://newsfirstlive.com/wp-content/uploads/2023/09/Rohit_Kohli.jpg

Load More