/newsfirstlive-kannada/media/post_attachments/wp-content/uploads/2023/07/Rohit_Kohli_Test-1.jpg)
ಇಂಗ್ಲೆಂಡ್‌ನಲ್ಲಿ ನಡೆಯಲಿರುವ 5 ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡ ಪ್ರಕಟಕ್ಕೂ ಮುನ್ನ ಮೇ 7 ರಂದು ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದರು. ರೋಹಿತ್ ಟೆಸ್ಟ್ ಪಂದ್ಯಗಳಲ್ಲಿ ಆರಂಭಿಕರಾಗಿ ಬ್ಯಾಟಿಂಗ್ಗೆ ಬರುತ್ತಿದ್ದರು. ರೋಹಿತ್ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ಐದು ದಿನಗಳ ಬೆನ್ನಲ್ಲೇ ಕೊಹ್ಲಿ ಕೂಡ ಅದೇ ಹಾದಿ ತುಳಿದರು.
ಇಬ್ಬರು ಸ್ಟಾರ್ ದಿಗ್ಗಜರ ನಿವೃತ್ತಿ ಬೆನ್ನಲ್ಲೆ, ಅವರ ಸ್ಥಾನಕ್ಕೆ ಯಾರು ಬರುತ್ತಾರೆ ಎಂಬ ಕುತೂಹಲ ಹೆಚ್ಚಾಗಿತ್ತು. ಇದೀಗ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡಿರುವ ತಂಡದಲ್ಲಿ ಉತ್ತರ ಸಿಕ್ಕಿದೆ. ರೋಹಿತ್ ಶರ್ಮಾ ಬದಲಿಗೆ ಸಾಯಿ ಸುದರ್ಶನ್ ಬಂದಿದ್ದಾರೆ.
ಇದನ್ನೂ ಓದಿ: ಖಾಸಗಿ ಶಾಲೆಗಳ ಪುನಾರಂಭಕ್ಕೂ ಕೊರೊನಾ ಕಂಟಕ.. ಪೋಷಕರಿಗೆ ಖಡಕ್ ಸೂಚನೆ
ಇಂಗ್ಲೆಂಡ್ ಪ್ರವಾಸಕ್ಕೆ ಬಿಸಿಸಿಐ ಸಾಯಿ ಸುದರ್ಶನ್ ಅವರನ್ನು ಆಯ್ಕೆ ಮಾಡಿದೆ. ರೋಹಿತ್ ಶರ್ಮಾ ಬದಲಿಗೆ ಸಾಯಿ ಸುದರ್ಶನ್ ಆರಂಭಿಕರಾಗಿ ಆಡಬಹುದು. ಸಾಯಿ ಸುದರ್ಶನ್ ಐಪಿಎಲ್ 2025ರಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಪ್ರಸ್ತುತ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ. ಸಾಯಿ ಸುದರ್ಶನ್ 13 ಪಂದ್ಯಗಳಲ್ಲಿ 628 ರನ್ ಗಳಿಸಿದ್ದಾರೆ.
ಕೊಹ್ಲಿ ಬದಲಿಗೆ ಕರುಣ್ ನಾಯರ್
ಕೊಹ್ಲಿಯ ಸ್ಥಾನಕ್ಕೆ ಕರುಣ್ ನಾಯರ್ ಅವರನ್ನು ಆಯ್ಕೆ ಮಾಡಲಾಗಿದೆ. ಕರುಣ್ ನಾಯರ್ ತಂಡದಲ್ಲಿ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡ್ತಾರೆ ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲ. ಆದರೆ ತಂಡದಲ್ಲಿ ವಿರಾಟ್ ಸ್ಥಾನ ಖಾಲಿಯಾದ ಕರುಣ್ ನಾಯರ್ ಅವರನ್ನು ಕರೆತರಲಾಗಿದೆ. ಕರುಣ್, ಸುಮಾರು ಎಂಟು ವರ್ಷಗಳ ಹಿಂದೆ ಟೀಂ ಇಂಡಿಯಾಗಾಗಿ ಕೊನೆಯ ಟೆಸ್ಟ್ ಪಂದ್ಯ ಆಡಿದ್ದರು. ಕೊಹ್ಲಿ ಬದಲಿಗೆ ನಾಯಕ ಶುಭಮನ್ ಗಿಲ್ ಟೆಸ್ಟ್‌ನಲ್ಲಿ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬರಬಹುದು.
ಇದನ್ನೂ ಓದಿ: ಪ್ಲೇ-ಆಫ್ಗೆ ಬಂತು ಆನೆಬಲ.. ಬಲಿಷ್ಠ ಸ್ಟಾರ್ ವೇಗಿಗೆ ಮತ್ತೆ ವೆಲ್ಕಮ್ ಹೇಳಿದ ಆರ್ಸಿಬಿ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್