ಸೇಫ್ ಹ್ಯಾಂಡ್ ಯಾರದ್ದು.. ಕ್ಯಾಚ್ ಹಿಡಿಯೋದರಲ್ಲಿ ಕೊಹ್ಲಿ, ರೋಹಿತ್​, ಗಿಲ್, ಜಡೇಜಾ ಇವರಲ್ಲಿ ಯಾರು ಬೆಸ್ಟ್​?

author-image
Bheemappa
Updated On
ಸೇಫ್ ಹ್ಯಾಂಡ್ ಯಾರದ್ದು.. ಕ್ಯಾಚ್ ಹಿಡಿಯೋದರಲ್ಲಿ ಕೊಹ್ಲಿ, ರೋಹಿತ್​, ಗಿಲ್, ಜಡೇಜಾ ಇವರಲ್ಲಿ ಯಾರು ಬೆಸ್ಟ್​?
Advertisment
  • ತಂಡದಲ್ಲಿ ಇಲ್ಲದಿದ್ರೂ ಶಿಖರ್ ಧವನ್ ಇಲ್ಲಿ ಸ್ಥಾನ ಪಡೆದಿದ್ದಾರೆ
  • ವಿರಾಟ್​ ಕೊಹ್ಲಿ ಎಷ್ಟು ಕ್ಯಾಚ್​ಗಳನ್ನು ಕೈಚೆಲ್ಲಿದ್ದಾರೆ ಗೊತ್ತಾ..?
  • ರೋಹಿತ್, ಶಮಿ, ಚಹಲ್, ಕುಲ್​ದೀಪ್ ಯಾರು ಸೂಪರ್?

ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ ಲೋಕದ ಸಾಮ್ರಾಟ. ಈತನ ಅಪ್ರತಿಮ ಆಟಕ್ಕೆ ಎದುರಾಳಿಗಳು ಖಲ್ಲಾಸ್ ಆಗಿದ್ದಾರೆ. ದಾಖಲೆಗಳು ಪುಡಿ ಪುಡಿಯಾಗಿವೆ. ಬ್ಯಾಟಿಂಗ್​ನಲ್ಲಿ ಕಿಂಗ್ ಎನಿಸಿಕೊಳ್ಳುವ ವಿರಾಟ್, ಫೀಲ್ಡಿಂಗ್​ನಲ್ಲೂ ರಾಜನೇ. ಆನ್​​ಫೀಲ್ಡ್​ನಲ್ಲಿ ಕ್ರಿಕೆಟ್​ ಲೋಕದ ಸುಲ್ತಾನನನ್ನ ಮೀರಿಸೋ ಮತ್ತೊಬ್ಬ ಟೀಮ್​ ಇಂಡಿಯಾದಲ್ಲಿ ಇಲ್ಲವೇ ಇಲ್ಲ.

ಇದನ್ನೂ ಓದಿ:ಅಮೆರಿಕದಲ್ಲಿ ಒಳ್ಳೆ ಜಾಬ್, ಡಿಸೆಂಬರ್​ನಲ್ಲಿ ಮದುವೆ.. ಆದ್ರೆ ದುರಂತ ಅಂತ್ಯಕಂಡ ಯುವಕ; ಕಾರಣವೇನು?

ಟೀಮ್ ಇಂಡಿಯಾದ ಗ್ರೇಟ್ ಫೀಲ್ಡರ್​ ಆ್ಯಂಡ್ ಕ್ಯಾಚರ್ ಯಾರು.? ಈ ಪ್ರಶ್ನೆ ಎದುರಾದಾಗೆಲ್ಲ ಬಹುತೇಕರ ಉತ್ತರ ಒಂದೇ. ಅದೇ ರವೀಂದ್ರ ಜಡೇಜಾ. ಆನ್​ಫೀಲ್ಡ್​​ನಲ್ಲಿ ಚಿರತೆಯಂತೆ ಫೀಲ್ಡಿಂಗ್​ ಮಾಡೋದ್ರಲ್ಲಿ ಜಡೇಜಾ ಪಂಟರ್​. ಟೀಮ್​ ಇಂಡಿಯಾದ ಆಟಗಾರರು, ಫ್ಯಾನ್ಸ್​ ಮಾತ್ರವಲ್ಲ. ಎದುರಾಳಿ ಪಡೆಗಳೂ ಕೂಡ ಜಡೇಜಾ ಬೆಸ್ಟ್​ ಫೀಲ್ಡರ್​ ಅನ್ನೋದನ್ನ ಒಪ್ಪಿವೆ. ಆದ್ರೆ, ಫೀಲ್ಡಿಂಗ್​ನ ಅಸಲಿ ಕಿಂಗ್ ಜಡೇಜಾ ಅಲ್ಲ, ರವೀಂದ್ರ ಜಡೇಜಾರನ್ನೂ ಮೀರಿಸಿದ ಗನ್​ ಫೀಲ್ಡರ್​, ಟೀಮ್ ಇಂಡಿಯಾದಲ್ಲಿ ಮತ್ತೊಬ್ಬರು ಇದ್ದಾರೆ.

ಇದನ್ನೂ ಓದಿ: ಸಲ್ಲು ಭಾಯ್​ ಬಾಡಿಗಾರ್ಡ್​ಗೆ ಕೋಟಿ ಕೋಟಿ ರೂಪಾಯಿ ಸ್ಯಾಲರಿ..! ಇವರಿಗೆ ಏನೆಂದು ಕರೆಯುತ್ತಾರೆ ಗೊತ್ತಾ..?

publive-image

ಟೀಮ್ ಇಂಡಿಯಾದ ನಂ.1 ಫೀಲ್ಡರ್​​​​ ವಿರಾಟ್.!

ಕೊಹ್ಲಿ ವಿಶ್ವ ಶ್ರೇಷ್ಠ ಬ್ಯಾಟ್ಸ್​ಮನ್ ಮಾತ್ರವೇ ಅಲ್ಲ. ಗ್ರೇಟ್​ ಫೀಲ್ಡರ್​ ಕೂಡ ಹೌದು. ಒಂದೇ ಮಾತಲ್ಲಿ ಹೇಳುವುದಾದ್ರೆ, ಟೀಮ್ ಇಂಡಿಯಾದ ಕ್ಯಾಚಿಂಗ್​​ ಕಿಂಗ್​ ವಿರಾಟ್​ ಕೊಹ್ಲಿ. ಗ್ರೇಟ್​​​​​​ ಫೀಲ್ಡರ್​ ಎನಿಸಿಕೊಳ್ಳುವ ಜಡೇಜಾ, ವಿರಾಟ್ ಹಿಡಿದ ಕ್ಯಾಚ್​ಗಳ ಸಂಖ್ಯೆಯ ಅರ್ಧದಷ್ಟು ಹಿಡಿದಿಲ್ಲ ಅಂದ್ರೆ, ನೀವ್ ನಂಬಲೇಬೇಕು. ಇದಕ್ಕೆ ಸಾಕ್ಷಿ ಏಕದಿನ ಫಾರ್ಮೆಟ್​ನಲ್ಲಿ 2019ರಿಂದ ಇದುವರೆಗಿನ ಅಂಕಿಅಂಶಗಳು.

2019ರಿಂದ ODIನಲ್ಲಿ ವಿರಾಟ್ ಕ್ಯಾಚಿಂಗ್ ಸಾಧನೆ

2019ರಿಂದ ವಿರಾಟ್, ಏಕದಿನ ಫಾರ್ಮೆಟ್​ನಲ್ಲಿ 48 ಕ್ಯಾಚ್ ಹಿಡಿದಿದ್ದು, ದುರಾದೃಷ್ಟವಶಾತ್​​ 7 ಕ್ಯಾಚ್​ಗಳನ್ನ ಕೈಚೆಲ್ಲಿದ್ದಾರೆ. ಶೇಖಡ 87.30ರಷ್ಟು ಕ್ಯಾಚ್​ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದೇ ಗನ್ ಫೀಲ್ಡರ್​ ಜಡೇಜಾ, 2019ರಿಂದ ಏಕದಿನ ಫಾರ್ಮೆಟ್​​ನಲ್ಲಿ ಹಿಡಿದ ಕ್ಯಾಚ್​ಗಳ ಸಂಖ್ಯೆ ಜಸ್ಟ್​ 23 ಮಾತ್ರ. 4 ಕ್ಯಾಚ್​ಗಳನ್ನ ಡ್ರಾಪ್ ಮಾಡಿರುವ ಜಡೇಜಾರ ಕ್ಯಾಚಿಂಗ್ ಪರ್ಸೆಟೇಜ್​​​ 85ರಷ್ಟಿದೆ.

ಏಕದಿನದಿಂದ ದೂರವಾದ್ರೂ 3ನೇ ಸ್ಥಾನದಲ್ಲಿ ಧವನ್​!​​​​​​​​​

ವೈಸ್ ಕ್ಯಾಪ್ಟನ್​ ಶುಭ್​ಮನ್ ಗಿಲ್​​​​​​​​​​​​​​​​​​​​​​​​​​​​​​​​​​​​​​​​​​​ ಕೂಡ ಫೀಲ್ಡಿಂಗ್​ನಲ್ಲಿ ಕಮಾಲ್ ಮಾಡಿದ್ದಾರೆ. 2019ರ ಜನವರಿಯಲ್ಲಿ ಏಕದಿನ ಫಾರ್ಮೆಟ್​ಗೆ ಡೆಬ್ಯು ಮಾಡಿದ ಈ ಯಂಗ್​ಗನ್, ಈ 5 ವರ್ಷಗಳ ಅವಧಿಯಲ್ಲಿ ಟೀಮ್ ಇಂಡಿಯಾದ ಸೇಫೆಸ್ಟ್​ ಹ್ಯಾಂಡ್​ಗಳಲ್ಲಿ ಒಬ್ಬರಾಗಿದ್ದಾರೆ. ವಿರಾಟ್ ಬಳಿಕ ಅತಿ ಹೆಚ್ಚು ಕ್ಯಾಚ್ ಪಡೆದ ಹೆಗ್ಗಳಿಕೆ ಶುಭ್​ಮನ್ ಗಿಲ್​ಗೆ ಸೇರುತ್ತೆ.

2019ರಿಂದ ODIನಲ್ಲಿ ಶುಭ್​ಮನ್​​ ಕ್ಯಾಚಿಂಗ್ ಸಾಧನೆ

2019ರಿಂದ ಇದುವರೆಗೆ ಶುಭ್​ಮನ್, ಏಕದಿನ ಕ್ರಿಕೆಟ್​ನಲ್ಲಿ 30 ಕ್ಯಾಚ್​ಗಳನ್ನ ಹಿಡಿದಿದ್ರೆ, 6 ಕ್ಯಾಚ್​ಗಳನ್ನ ಮಾತ್ರ ಡ್ರಾಪ್ ಮಾಡಿದ್ದಾರೆ. ಇದರೊಂದಿಗೆ ಅತಿ ಹೆಚ್ಚು ಕ್ಯಾಚ್ ಹಿಡಿದ 2ನೇ ಆಟಗಾರ ಎನಿಸಿಕೊಂಡಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ, 2022ರ ಡಿಸೆಂಬರ್ ಬಳಿಕ ಏಕದಿನ ಕ್ರಿಕೆಟ್​ನಿಂದ ದೂರ ಉಳಿದಿರೋ ಧವನ್, ಅತಿ ಹೆಚ್ಚು ಕ್ಯಾಚ್ ಹಿಡಿದ ಟೀಮ್ ಇಂಡಿಯಾ ಆಟಗಾರರ ಪೈಕಿ 3ನೇ ಸ್ಥಾನದಲ್ಲಿದ್ದಾರೆ. ಶಿಖರ್, 28 ಕ್ಯಾಚ್ ಹಿಡಿದು, 3 ಡ್ರಾಪ್ ಮಾಡಿದ್ದಾರೆ.

ಕ್ಯಾಚಿಂಗ್​​ ವಿಚಾರದಲ್ಲಿ ಕ್ಯಾಪ್ಟನ್ ರೋಹಿತ್ ಡಲ್..!

ಕ್ಯಾಪ್ಟನ್ ರೋಹಿತ್ ಶರ್ಮಾ, ಫೀಲ್ಡಿಂಗ್ ಆ್ಯಂಡ್ ಕ್ಯಾಚಿಂಗ್​ನಲ್ಲಿ ನಿರಾಸೆ ಮೂಡಿಸಿದ್ದಾರೆ. ನಾಯಕನಾಗಿ ಫೀಲ್ಡಿಂಗ್​ನಲ್ಲಿ ಸ್ಪೂರ್ತಿ ಆಗಬೇಕಿರುವ ರೋಹಿತ್, ಸೇಫ್​ ಹ್ಯಾಂಡ್​ ಅಲ್ಲ ಅನ್ನೋದನ್ನ ಈ ಅಂಕಿ ಅಂಶಗಳು ಬಟಾಬಯಲು ಮಾಡಿವೆ.

2019ರಿಂದ ODIನಲ್ಲಿ ರೋಹಿತ್ ಕ್ಯಾಚಿಂಗ್ ಸಾಧನೆ

2019ರಿಂದ ಇದುವರೆಗೆ ಒಟ್ಟಾರೆ 24 ಕ್ಯಾಚ್​ಗಳನ್ನ ಪಡೆದಿರುವ ರೋಹಿತ್, 13 ಕ್ಯಾಚ್​ಗಳನ್ನ ಡ್ರಾಪ್​ ಮಾಡಿದ್ದಾರೆ. ಶೇಖಡ 64.90ರಷ್ಟು ಕ್ಯಾಚ್ ಹಿಡಿಯಲಷ್ಟೇ ಶಕ್ತರಾಗಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ, ಟೀಮ್ ಇಂಡಿಯಾದ ಬೌಲರ್​ಗಳಾದ ಶಮಿ, ಚಹಲ್​, ಕುಲ್​ದೀಪ್ ಯಾದವ್​​​​​​​​​​​​​, ರೋಹಿತ್​ಗಿಂತ ಬೆಸ್ಟ್​ ಅಂತಾ ನಿರೂಪಿಸಿದ್ದಾರೆ.

ಇದನ್ನೂ ಓದಿ: ಊಟದಲ್ಲಿ ಇಲ್ಲದ ಉಪ್ಪಿನ ಕಾಯಿ.. ಹೋಟೆಲ್​ಗೆ 35,000 ರೂಪಾಯಿ ದಂಡ ವಿಧಿಸಿದ ಕೋರ್ಟ್​

publive-image

ಚಹಲ್​ಗಿಂತ​​ ರೋಹಿತ್ ಕಳಪೆ..!​​​​​​​​​​​​​​​​?

ಮೊಹಮ್ಮದ್ ಶಮಿ 15 ಕ್ಯಾಚ್ ಹಿಡಿದು, 3 ಕ್ಯಾಚ್ ಡ್ರಾಪ್ ಮಾಡುವ ಮೂಲಕ 83.30 ಕ್ಯಾಚಿಂಗ್ ಎಫೆಶಿಯನ್ಸಿ ಹೊಂದಿದ್ದಾರೆ. ಯಜುವೇಂದ್ರ ಚಹಲ್, 10 ಕ್ಯಾಚ್ ಹಿಡಿದು 3 ಕ್ಯಾಚ್ ಡ್ರಾಪ್ ಮಾಡುವ ಮೂಲಕ ಶೇಕಡಾ 76.90ರ ಸಕ್ಸಸ್ ರೇಟ್ ಹೊಂದಿದ್ದಾರೆ.

ಇದನ್ನೂ ಓದಿ: ಮೆಟ್ಟೂರು‌ ಡ್ಯಾಂನಿಂದ ಕಾವೇರಿಗೆ ನೀರು.. ಕೃಷ್ಣೆಯಲ್ಲಿ ಕೊಚ್ಚಿ ಹೋಗ್ತಿದ್ದವನ ರಕ್ಷಣೆ; ತುಂಗಭದ್ರೆಯಿಂದ ಕಂಪ್ಲಿಗೆ ಕಂಟಕ..!

ಆದ್ರೆ, ಇವರಿಬ್ಬರ ಕ್ಯಾಚಿಂಗ್ ಪರ್ಸಂಟೇಜ್​​ಗೆ ಹೋಲಿಸಿದ್ರೆ, ರೋಹಿತ್ ಶರ್ಮಾ ಸಾಧನೆ ಕಳಪೆಯಾಗಿದೆ. ಮುಂಬರುವ ದಿನಗಳಲ್ಲಿ ಮಹತ್ವದ ಟೂರ್ನಿಗಳನ್ನಾಡಲು ಸಜ್ಜಾಗ್ತಿರೋ ಕ್ಯಾಪ್ಟನ್​ ರೋಹಿತ್​ ಶರ್ಮಾ ಎಚ್ಚೆತ್ತುಕೊಳ್ಳಬೇಕಿದೆ. ತಂಡಕ್ಕೆ ಎಕ್ಸಾಂಪಲ್​ ಸೆಟ್ ಮಾಡಬೇಕಾದ ನಾಯಕನೇ ಫೀಲ್ಡಿಂಗ್​ ವಿಚಾರದಲ್ಲಿ ಎಡವಿದ್ರೆ, ತಂಡ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment