IPL; ಫ್ಯಾನ್ಸ್​ಗೆ ಬೇಸರ ತರಿಸಿದ ಸ್ಟಾರ್ ಪ್ಲೇಯರ್ಸ್​.. ಕೊಹ್ಲಿ, ಶ್ರೇಯಸ್ ಬ್ಯಾಟಿಂಗ್​ ಕಿಕ್​ ಕೊಟ್ಟಿತಾ? ​ ​

author-image
Bheemappa
Updated On
IPL; ಫ್ಯಾನ್ಸ್​ಗೆ ಬೇಸರ ತರಿಸಿದ ಸ್ಟಾರ್ ಪ್ಲೇಯರ್ಸ್​.. ಕೊಹ್ಲಿ, ಶ್ರೇಯಸ್ ಬ್ಯಾಟಿಂಗ್​ ಕಿಕ್​ ಕೊಟ್ಟಿತಾ? ​ ​
Advertisment
  • ಟೂರ್ನಿಯಲ್ಲಿ 40 ಸಿಕ್ಸರ್​ಗಳನ್ನು ಚಚ್ಚಿರುವ ಬ್ಯಾಟ್ಸ್​ಮನ್
  • ಐಪಿಎಲ್​ ಫ್ರಾಂಚೈಸಿಗಳ ಪಾಲಿಗೆ ಅದೃಷ್ಟ ಖುಲಾಯಿಸಿತಾ?
  • IPL​ ಸೀಸನ್​- 18 ರಲ್ಲಿ ದುಬಾರಿ ಆಟಗಾರ ಯಾರು ಹೇಳಿ!

ಸೀಸನ್​​-18ರ ಐಪಿಎಲ್​​ ಅದ್ಧೂರಿ ಅಂತ್ಯ ಕಂಡಿದೆ. ಐಪಿಎಲ್​ ಮುಗಿದು ಮೂರ್ನಾಲ್ಕು ದಿನ ಮುಗಿದರೂ, ಚರ್ಚೆ ಮಾತ್ರ ನಿಂತಿಲ್ಲ. ಕೆಲ ಸೂಪರ್ ಸ್ಟಾರ್ ಆಟಗಾರರ ಪರ್ಫಾಮೆನ್ಸ್​ ಬಗ್ಗೆ ಮಾತ್ರ ಚರ್ಚೆಯ ಕೇಂದ್ರ ಬಿಂದುವಾಗಿದೆ. ₹20 ಕೋಟಿಯ ಈ ವೀರರ ಕಥೆಯಂತೂ ನಿಜಕ್ಕೂ ಭಿನ್ನ.

ಸೀಸನ್​​-18ರ ಐಪಿಎಲ್​​ ಸೂಪರ್​ ಡೂಪರ್​​ ಹಿಟ್​ ಆಗಿದೆ. ಬ್ಲಾಕ್​ ​ಬಸ್ಟರ್​ ಪಂದ್ಯಗಳು, ಸೆನ್ಸೇಷನಲ್​ ಇನ್ನಿಂಗ್ಸ್​​ಗಳು, ರಣರೋಚಕ ಅಂತ್ಯಗಳು ಅಭಿಮಾನಿಗಳಿಗೆ ಸಖತ್​ ಕಿಕ್​ ಕೊಟ್ಟಿದೆ. ಕೆಲ ಆಟಗಾರರ ಆಟ ಅಭಿಮಾನಿಗಳಿಗೆ ಮನರಂಜನೆ ಬಾಡೂಟ ಉಣಬಡಿಸಿದ್ರೆ. ಕೆಲ ಆಟಗಾರರ ಆಟ ಫ್ಯಾನ್ಸ್​ಗೆ ಬೇಸರ ತರಿಸಿದೆ. ಅದ್ರಲ್ಲೂ ಕೆಲ ದುಬಾರಿ ಆಟಗಾರರ ದುಬಾರಿ ಆಟ ಕೆಲ ಫ್ರಾಂಚೈಸಿಗಳಿಗೆ ನುಂಗಲಾರದ ತುತ್ತಾದ್ರೆ, ಕೆಲ ಫ್ರಾಂಚೈಸಿಗಳ ಪಾಲಿಗಂತೂ ಅದೃಷ್ಟ ಖುಲಾಯಿಸುವಂತೆ ಮಾಡಿದೆ.

publive-image

ಕಿಂಗ್​ ಕೊಹ್ಲಿಯ ಆಟಕ್ಕೆ ಈ ಸಲ ಒಲಿಯಿತು ಕಪ್..!

ವಿರಾಟ್ ಕೊಹ್ಲಿ ₹21 ಕೋಟಿ ಒಡೆಯ. ಸೀಸನ್​ ಆರಂಭದಿಂದ ಹಿಡಿದು ಅಂತ್ಯದ ತನಕ ವೀರಾವೇಶದ ಬ್ಯಾಟಿಂಗ್ ನಡೆಸಿದ ವಿರಾಟ್​, ಈ ಸಲ ಕಪ್ ನಮ್ದೇ ಎಂಬ ಘೋಷವಾಕ್ಯ ನಿಜವಾಗಿಸುವಲ್ಲಿ ನಿಜಕ್ಕೂ ಮಹತ್ವದ ಪಾತ್ರವನ್ನೇ ವಹಿಸಿದರು. 15 ಪಂದ್ಯಗಳಿಂದ 657 ರನ್ ಕೊಳ್ಳೆ ಹೊಡೆದಿದ್ದ ವಿರಾಟ್​, 8 ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದರು. ಇಂಟ್ರೆಸ್ಟಿಂಗ್ ಅಂದ್ರೆ, ಈ 8 ಪಂದ್ಯಗಳಲ್ಲಿ ಆರ್​ಸಿಬಿ ಜಯಭೇರಿ ಬಾರಿಸಿತ್ತು. ವಿರಾಟ್ ಕೊಹ್ಲಿಯ ಈ ಆಟ ಆರ್​ಸಿಬಿಯನ್ನು ಪ್ಲೇ ಆಫ್​ಗೆ ಕೊಡೊಯ್ಯವಂತೆ ಮಾತ್ರವೇ ಮಾಡಲಿಲ್ಲ. 18 ವರ್ಷಗಳ ಕನಸು ನನಸಾಗುವಂತೆಯೂ ಮಾಡಿದೆ.

26.75 ಕೋಟಿ ಒಡೆಯನ ‘ಶ್ರೇಯಸ್ಸು’ ಪಂಜಾಬ್​​ಗೆ ಪ್ರತಿಫಲ.!

26.75 ಕೋಟಿ. ಈ ದುಬಾರಿ ಮೊತ್ತಕ್ಕೆ ಪಂಜಾಬ್ ಕಿಂಗ್ಸ್​ ಸೇರಿದ್ದ ಶ್ರೇಯಸ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇತ್ತು. ಆದ್ರೆ, ಈ ನಿರೀಕ್ಷೆಗೆ ತಕ್ಕ ಆಟವಾಡಿದ ಮುಂಬೈಕರ್ ಶ್ರೇಯಸ್​, ನಾಯಕನಾಗಿ ಒಂದ್ಕಡೆ ಗಮನ ಸೆಳೆದ್ರೆ. ಮತ್ತೊಂದ್ಕಡೆ ಬ್ಯಾಟಿಂಗ್​​​​ನಲ್ಲಿ ಘರ್ಜಿಸಿದರು. 17 ಪಂದ್ಯಗಳಿಂದ 604 ರನ್ ಚಚ್ಚಿದ್ದ ಅಯ್ಯರ್, 175.07ರ ಬ್ಯಾಟಿಂಗ್ ಸ್ಟ್ರೈಕ್​​ರೇಟ್​ನಲ್ಲಿ ಬ್ಯಾಟ್​ ಬೀಸಿದರು. ನಾಯಕನಾಗಿ ಜವಾಬ್ದಾರಿಯುವ ಆಟವಾಡಿದ್ದ ಅಯ್ಯರ್, ಪಂಜಾಬ್ ಕಿಂಗ್ಸ್​ ತಂಡವನ್ನು ಫೈನಲ್​​ಗೆ ಕೊಂಡೊಯ್ದಿದ್ದರು. ಆದ್ರೆ, ಫೈನಲ್​ನಲ್ಲಾದ ಮಿಸ್ ಫೈರ್ ಟ್ರೋಫಿ ಇಲ್ಲದಂತೆ ಮಾಡಿತ್ತು.

ದುಬಾರಿ ಆಟಗಾರನ ದುಬಾರಿ ಆಟ.. ಲಕ್ನೋ ಪಾತಾಳ..!

ಐಪಿಎಲ್ ಇತಿಹಾಸದ ದುಬಾರಿ ಆಟಗಾರ ರಿಷಭ್ ಪಂತ್, ಲಕ್ನೋ ತಂಡದ ನಾಯಕ ಬೇರೆ. ಆದ್ರೆ, ನಾಯಕನಾಗಿ ಲಕ್ನೋ ತಂಡದ ಪಾಲಿನ ಅದೃಷ್ಟದ ಕಣವಾಗಬೇಕಿದ್ದ ರಿಷಭ್ ಪಂತ್, 14 ಪಂದ್ಯಗಳಿಂದ ಗಳಿಸಿದ ರನ್.. ಕೇವಲ 269. ಇಂಟ್ರೆಸ್ಟಿಂಗ್ ಅಂದ್ರೆ, ಕೊನೆ ಲೀಗ್​ ಮ್ಯಾಚ್​ನಲ್ಲಿ ಸಿಡಿಸಿದ ಅಜೇಯ 118 ರನ್ ಬಿಟ್ರೆ, ಉಳಿದ 13 ಪಂದ್ಯಗಳಿಂದ ರಿಷಭ್ ಬ್ಯಾಟ್​ನಿಂದ ಬಂದ ರನ್​ಗಳು ಕೇವಲ 151. ಈ ದುಬಾರಿ ಆಟಕ್ಕೆ ಲಕ್ನೋ ಕುಸಿದಿದ್ದು ಪಾತಾಳಕ್ಕೆ.

ಫೈಟರ್ ಪೂರನ್ ಏಕಾಂಗಿ ಹೋರಾಟಕ್ಕೆ ಒಲಿಯಲಿಲ್ಲ ಲಕ್!

ಲಕ್ನೋ ತಂಡದಲ್ಲಿ ಪಂತ್​ ಬಳಿಕ ಅತಿ ಹೆಚ್ಚು ಮೊತ್ತ ಪಡೆದ ಆಟಗಾರ ನಿಕೋಲಸ್ ಪೂರನ್, ಹಣಕ್ಕೆ ತಕ್ಕ ಆಟವಾಡಿದ ಪೂರನ್, ನಿಜಕ್ಕೂ ಫೈಟರ್​ನಂತೆಯೇ ಅಬ್ಬರಿಸಿದ್ರು. ಬಹುತೇಕ ಪಂದ್ಯಗಳಲ್ಲಿ ಸಿಂಗಲ್ ಹ್ಯಾಂಡ್​​ನಲ್ಲೇ ಮ್ಯಾಚ್ ಗೆಲ್ಲಿಸಿದ್ರು. 196.25ರ ಸ್ಟ್ರೈಕ್​ರೇಟ್​ನಲ್ಲಿ 524 ರನ್ ಚಚ್ಚಿದ್ದ ಪೂರನ್​, ಟೂರ್ನಿಯಲ್ಲಿ 40 ಸಿಕ್ಸರ್​ಗಳನ್ನು ಚಚ್ಚಿದ್ರೂ, ಲಕ್ ಮಾತ್ರ ಸಿಗಲಿಲ್ಲ.

ಇದನ್ನೂ ಓದಿ:ಮಗನೇ ಹೋದ ಮೇಲೆ ಹಣ ಏನ್ ಮಾಡಲಿ..? ಮನೋಜ್​ ತಂದೆಗೆ 25 ಲಕ್ಷ ರೂಪಾಯಿಯ ಚೆಕ್ ವಿತರಣೆ

publive-image

ಆಗೊಮ್ಮೆ ಈಗೊಮ್ಮೆ ಅಬ್ಬರದಲ್ಲೇ ಮುಗೀತು ಕ್ಲಾಸೆನ್ ಕಥೆ..!

ಹೆನ್ರಿಚ್ ಕ್ಲಾಸೆನ್.. ಈ ಪವರ್ ಹಿಟ್ಟರ್ ಬ್ಯಾಟರ್​ಗೆ ಸನ್ ರೈಸರ್ಸ್ ಹೈದ್ರಾಬಾದ್​, 23 ಕೋಟಿ ನೀಡಿ ರಿಟೈನ್ ಮಾಡಿಕೊಂಡಿತ್ತು. ಇದಕ್ಕೆ ತಕ್ಕಂತೆ ಸನ್ ರೈಸರ್ಸ್ ತಂಡದ ಟಾಪ್ ಸ್ಕೋರರ್ ಆಗಿದ್ದಾರೆ. ಆದ್ರೆ, ಈ ಕ್ಲಾಸೆನ್ ಮುಂಬೈ ಇಂಡಿಯನ್ಸ್​ ಎದುರು 71, ಕೊನೆ ಲೀಗ್​ ಮ್ಯಾಚ್​ನಲ್ಲಿ ಅಜೇಯ 105 ರನ್​ ಚಚ್ಚಿದ್ದು ಬಿಟ್ರೆ, ಇನ್ಯಾವ ಮ್ಯಾಚ್​ನಲ್ಲಿ ಕ್ಲಾಸೆನ್ ಕ್ಲಾಸಿಕ್ ಆಟ ನಡೀಯಲೇ ಇಲ್ಲ. ಪರಿಣಾಮ ಪ್ಲೇ ಆಫ್​​ಗೂ ಹೋಗಲಿಲ್ಲ.

ವೆಂಕಟೇಶ್​​​​​​​​​​​ ಅಯ್ಯರ್​ನ ನಂಬಿಕೊಂಡ ಕೆಕೆಆರ್​ಗೆ ಮೂರುನಾಮ!

ವೆಂಕಟೇಶ್ ಅಯ್ಯರ್.. ಈ ಸೀಸನ್​ನಲ್ಲಿ ಕೆಕೆಆರ್ ನಂಬಿಕೆಟ್ಟ ಆಟಗಾರ ಪೈಕಿ ಈತನಿಗೆ ಅಗ್ರಸ್ಥಾನ. ಯಾಕಂದ್ರೆ, ಈತನಿಗಾಗಿ ಕೆಕೆಆರ್​ ಬರೋಬ್ಬರಿ ಸುರಿಸಿದ ಅಮೌಂಟ್​ 23.75 ಕೋಟಿ ರೂಪಾಯಿ. ಅಂದ್ರೆ, ಮೆಗಾ ಹರಾಜಿನಲ್ಲಿ 3ನೇ ಗರಿಷ್ಠ ಮೊತ್ತ. ಈ ಮೊತ್ತಕ್ಕೆ ವೆಂಕಟೇಶ್ ಅಯ್ಯರ್ ಗಳಿಸಿದ ರನ್, ಕೇವಲ 142. ಅಪ್ಪಿತಪ್ಪಿ ಈತನ ಆರ್​ಸಿಬಿ, 20 ಕೋಟಿಗೆ ಬಿಡ್ ಮಾಡಿದ್ರೆ, ಈ ಸಲನೂ ಆರ್​ಸಿಬಿಗೆ ಕಪ್ ಮರೀಚಿಕೆಯೇ ಆಗ್ತಿತ್ತು. ಆದ್ರೆ, ಅದೃಷ್ಟವಶಾತ್ ಕೆಕೆಆರ್​ ಖರೀದಿಸಿ ಬೆಪ್ಪಾಗಿದ್ದು ಸುಳ್ಳಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment