/newsfirstlive-kannada/media/post_attachments/wp-content/uploads/2024/05/ABD-KOHLI.jpg)
ಇವರಿಬ್ಬರದ್ದು ದೇಶ, ಭಾಷೆ, ಗಡಿಯನ್ನೇ ಮೀರಿದ ಗೆಳೆತನ. ರನ್ಭೂಮಿಯಲ್ಲಿ ಕಿಂಗ್ ಕೊಹ್ಲಿ, ಮಿಸ್ಟರ್ 360 ಎಬಿ ಡಿವಿಲಿಯರ್ಸ್ ಜೊತೆಯಾಗಿ ನಿಂತ್ರೆ, ಎದುರಾಳಿ ಪಡೆ ಧೂಳಿಪಟವಾಗ್ತಿತ್ತು. ಕ್ರಿಕೆಟ್ ಫೀಲ್ಡ್ನಲ್ಲಿ ಶುರುವಾದ ಗೆಳೆತನ ಸಪ್ತ ಸಾಗರದಾಚೆಗೂ ಸದ್ದು ಮಾಡಿತ್ತು. ಎಲ್ಲರ ಕಣ್ಣು ಕುಕ್ಕುವಂತಿದ್ದ ಈ ಜೀವದ ಗೆಳೆಯರ ಗೆಳೆತನದಲ್ಲಿ ಬಿರುಕು ಮೂಡಿತ್ತಂತೆ. ಎಬಿಡಿ ಮೇಲೆ ಗರಂ ಆಗಿದ್ದ ಕಿಂಗ್ ಕೊಹ್ಲಿ ಮಾತಾಡೋದನ್ನೇ ನಿಲ್ಲಿಸಿಬಿಟ್ಟಿದ್ರಂತೆ..
ಎಬಿ ಡಿವಿಲಿಯರ್ಸ್-ವಿರಾಟ್ ಕೊಹ್ಲಿ.. ಕ್ರಿಕೆಟ್ ದುನಿಯಾದ ಬೆಸ್ಟ್ ಫ್ರೆಂಡ್ಸ್. ಈ ಗ್ರೇಟ್ ಬ್ಯಾಟರ್ಸ್, RCB ಪರ ಜೊತೆಯಾಗಿ ಅಬ್ಬರಿಸುತ್ತಿದ್ರೆ, ಮೈದಾನದಲ್ಲಿ ಫ್ಯಾನ್ಸ್ ಹುಚ್ಚೆದ್ದು ಕುಣಿತಿದ್ರು. ಆನ್ಫೀಲ್ಡ್ನಲ್ಲಿ ಅದ್ಭುತ ಜೊತೆಯಾಟದ ಮೂಲಕ ಮಿಂಚುತ್ತಿದ್ದ ಇವರಿಬ್ಬರು, ಆಫ್ ದ ಫೀಲ್ಡ್ನಲ್ಲೂ ಸಖತ್ ಮಸ್ತಿ ಮಾಡ್ತಿದ್ತು. ಒಬ್ಬರ ಆಟವನ್ನ ಮತ್ತೊಬ್ಬರು ಹೊಗಳೋದು, ತಪ್ಪಾದಾಗ ತಿದ್ದೋದು, ಗೆದ್ದಾಗ ಸಂಭ್ರಮಿಸೋದು, ಬಿದ್ದಾಗ ಬೆಂಬಲಕ್ಕೆ ನಿಲ್ಲೋದು ಇವರಿಬ್ಬರ ಗೆಳೆತನದಲ್ಲಿ ಕಾಮನ್.
ಇದನ್ನೂ ಓದಿ: 11 ದಿನಗಳ ಅಂತರದಲ್ಲಿ ಮತ್ತೊಂದು ಟ್ರೋಫಿ ಗೆದ್ದ ನಾಯಕ ಜಿತೇಶ್ ಶರ್ಮಾ..
ಇವರಿಬ್ಬರ ಗೆಳೆತನ ಶುರುವಾಗಿದ್ದು, ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ನಿಂದ. ಇದೀಗ ಎಲ್ಲಾ ಮಾದರಿಗೂ ಎಬಿ ಡಿವಿಲಿಯರ್ಸ್ ನಿವೃತ್ತಿ ಹೇಳಿ ವರ್ಷಗಳೇ ಉರುಳಿವೆ. ಇವರಿಬ್ಬರ ಗೆಳೆತನ ಮಾತ್ರ ಹಾಗೇ ಉಳಿದಿದೆ. ಒಬ್ಬರ ಮೇಲೊಬ್ಬರ ಪ್ರೀತಿ, ಅಭಿಮಾನವನ್ನ ತಮ್ಮ ಮಾತಿನಿಂದಲೇ ಆಗಾಗ ವ್ಯಕ್ತಪಡಿಸ್ತಾರೆ. ಆರಂಭದಿಂದ ಹಿಡಿದು ಈವರೆಗೆ ಇಬ್ಬರ ಗೆಳೆತನ ಹಾಗೇ ಇದೆ. ಈ ಜೀವದ ಗೆಳೆಯರ ನಡುವೆ ಕೆಲ ತಿಂಗಳ ಮನಸ್ತಾಪ ಉಂಟಾಗಿತ್ತಂತೆ. ಎಬಿಡಿ ಮೇಲೆ ಸಿಟ್ಟಾಗಿದ್ದ ಕೊಹ್ಲಿ ತಿಂಗಳುಗಟ್ಟಲೇ ಮಾತನಾಡೋದನ್ನೇ ನಿಲ್ಲಿಸಿಬಿಟ್ಟಿದ್ರಂತೆ.
ಎಬಿಡಿ ಮೇಲೆ ವಿರಾಟ್ ಕೊಹ್ಲಿಗೆ ಕೋಪ..
ಎಲ್ಲರ ಕಣ್ಣಿಗೂ ಕೊಹ್ಲಿ-ಎಬಿಡಿ ಈಗಲೂ ಜೀವದ ಗೆಳೆಯರಾಗೇ ಕಾಣಿಸಿಕೊಂಡಿದ್ದಾರೆ. ಕೊಹ್ಲಿ ಎಬಿಡಿ ಪಾಲಿಗೆ ಪ್ರೀತಿಯ ಬಿಸ್ಕೆಟ್ ಆಗಿದ್ರೆ, ಎಬಿಡಿ ಕೊಹ್ಲಿ ಪಾಲಿಗೆ ಎಲಿಯನ್ ಡಿವಿಲಿಯರ್ಸ್. ಎಬಿಡಿ ಮಾಡಿದ ಒಂದು ತಪ್ಪಿನಿಂದ ಕೋಪಗೊಂಡಿದ್ದ ಕೊಹ್ಲಿ ಮಾತಾಡೋದನ್ನ ನಿಲ್ಲಿಸಿಬಿಟ್ಟಿದ್ರಂತೆ. ಈ ಸುದ್ದಿಯನ್ನ ಎಬಿಡಿಯೇ ರಿವೀಲ್ ಮಾಡಿದ್ದಾರೆ.
ಕೊಹ್ಲಿ ಮತ್ತೆ ನನ್ನ ಜೊತೆ 6 ತಿಂಗಳಿನಿಂದ ಸಂಪರ್ಕದಲ್ಲಿದ್ದಾರೆ. ಅವರ ಒಳ್ಳೆಯತನಕ್ಕೆ ಧನ್ಯವಾದ. ನಾನು ಕಾಲೆಳೆಯಲು ಹೋಗಿ ಯಡವಟ್ಟು ಮಾಡಿದ್ದೆ. 2ನೇ ಮಗುವಿನ ವಿಚಾರದಲ್ಲಿ. ಕೊಹ್ಲಿ ಮತ್ತೆ ನನ್ನೊಂದಿಗೆ ಮಾತನಾಡಲು ಆರಂಭಿಸಿದ ಬಳಿಕ ನನಗೆ ಸಮಾಧಾನ ಅನ್ನಿಸಿದೆ ಎಬಿಡಿ ಹೇಳಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ಆಟದ ವೇಳೆ ವಿರಾಟ್ ಕೊಹ್ಲಿ ತಿನ್ನುವ ಚಾಕೊಲೇಟ್ ಬೆಲೆ ಎಷ್ಟು?
ಅದಕ್ಕೆ ಕಾರಣ 2ನೇ ಮಗುವಿನ ವಿಚಾರವನ್ನು ಕೊಹ್ಲಿ ಕುಟುಂಬ ತುಂಬಾ ಪ್ರೈವೇಟ್ ಆಗಿ ಮೆಂಟೇನ್ ಮಾಡಿತ್ತು. ಈ ಸೀಕ್ರೆಟ್ ಅನ್ನ ಎಬಿಡಿ ತಮ್ಮ ಪಾಡ್ಕಾಸ್ಟ್ನಲ್ಲಿ ರಿವೀಲ್ ಮಾಡಿಬಿಟ್ರು. ಆಪ್ತ ಗೆಳೆಯನೇ ಹೀಗೆ ಮಾಡಿದ್ದು ಕೊಹ್ಲಿಗೆ ಕೋಪ ತರಿಸಿತ್ತು. ಕೆಲ ತಿಂಗಳ ಕಾಲ ಕೊಹ್ಲಿ ಮಾತನಾಡೋದನ್ನೇ ನಿಲ್ಲಿಸಿದ್ದಕ್ಕೆ ಇದೇ ಕಾರಣ. ಬಳಿಕ ಎಬಿಡಿ ಬಹಿರಂಗವಾಗೇ ಕ್ಷಮೆಯಾಚಿಸಿದ್ರು.
ಎಬಿಡಿ ಕ್ಷಮೆ ಬಳಿಕ ಕೊಹ್ಲಿ ಕರಗಿದ್ದು ಆಯ್ತು. ದೂರಾಗಿದ್ದ ಜೀವದ ಗೆಳೆಯರು ಈಗ ಮತ್ತೆ ಒಂದಾಗಿರೋದು ಆಗಿದೆ. ಮುಂದೆ ಈ ದಿಗ್ಗಜರ ಗೆಳೆತನದ ಮೇಲೆ ಯಾವುದೇ ಕೆಟ್ಟ ಕಣ್ಣು ಬೀಳದಿರಲಿ ಅನ್ನೋದು ಕ್ರಿಕೆಟ್ ಅಭಿಮಾನಿಗಳ ಆಶಯ.
ಇದನ್ನೂ ಓದಿ: ಪತ್ನಿಯ ಹುಟ್ಟುಹಬ್ಬದಂದು ಕಣ್ಣೀರು.. ಸೋತು ಗೆದ್ದ ಕನ್ನಡಿಗ ಕರುಣ್ ನಾಯರ್..
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ