/newsfirstlive-kannada/media/post_attachments/wp-content/uploads/2024/05/VIRAT_KOHLI_BATTING_1.jpg)
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ಖರೀದಿಸಿ ಬಲಿಷ್ಠ ತಂಡ ಕಟ್ಟಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ತಯಾರಿ ಮಾಡಿಕೊಂಡಿದೆ. ಕಳೆದ 17 ಸೀಸನ್ಗಳಿಂದ ಇರೋ ಕಪ್ ಕೊರಗು ಈ ಬಾರಿ ನೀಗುತ್ತೆ. ಐಪಿಎಲ್ ಟ್ರೋಫಿ ನಮ್ಮದಾಗುತ್ತೆ ಅನ್ನೋ ಕನಸು ಆರ್ಸಿಬಿ ಮ್ಯಾನೇಜ್ಮೆಂಟ್ದ್ದಾಗಿದೆ. ಹರಾಜಿನ ದೊಡ್ಡ ಜವಾಬ್ದಾರಿ ಮುಗಿಸಿ ಸಮಾಧಾನದ ನಿಟ್ಟುಸಿರು ಬಿಟ್ಟ ಬೆನ್ನಲ್ಲೇ ಅಸಮಾಧಾನದ ಬಿಸಿ ಫ್ರಾಂಚೈಸಿಗೆ ಮುಟ್ಟಿದೆ.
ಸದ್ಯ ಆರ್ಸಿಬಿ ಮ್ಯಾನೇಜ್ಮೆಂಟ್ಗೆ ಟೆನ್ಶನ್ ತಂದಿಟ್ಟಿರೋದು, ಕಿಂಗ್ ಕೊಹ್ಲಿ ಕೋಪ.! ಹರಾಜು ಅಂತ್ಯಗೊಂಡ ಬೆನ್ನಲ್ಲೇ ವಿರಾಟ್ ಕೊಹ್ಲಿ ಮ್ಯಾನೇಜ್ಮೆಂಟ್ ಮೇಲೆ ಅಸಮಾಧಾನ ಗೊಂಡಿದ್ದಾರೆ ಅನ್ನೋ ಶಾಕಿಂಗ್ ಸುದ್ದಿ ಹೊರ ಬಿದ್ದಿದೆ. ಆಟಗಾರರ ಖರೀದಿ ವಿಚಾರದಲ್ಲಿ ಫ್ರಾಂಚೈಸಿ ಮಾಡಿದ ಯಡವಟ್ಟುಗಳು, ಕಿಂಗ್ ಕೊಹ್ಲಿಯ ಪಿತ್ತ ನೆತ್ತಿಗೇರಿಸಿದೆ ಅನ್ನೋದು ತಂಡದ ಮೂಲಗಳ ಮಾಹಿತಿಯಾಗಿದೆ. ಕೊಹ್ಲಿ ಕೋಪಕ್ಕೆ ಹಲವು ಕಾರಣಗಳಿವೆ.
ಸಿರಾಜ್ ಕೈ ಬಿಟ್ಟಿದ್ದಕ್ಕೆ ಕೊಹ್ಲಿ ಅಸಮಾಧಾನ
ಮೊಹಮ್ಮದ್ ಸಿರಾಜ್ ಆಕ್ಷನ್ ಕಣಕ್ಕೆ ಬರ್ತಾರೆ ಅನ್ನೋದನ್ನ ಯಾರೂ ನಿರೀಕ್ಷೆನೇ ಮಾಡಿರಲಿಲ್ಲ. ರಿಟೈನ್ ಮಾಡಿಕೊಳ್ಳುವಲ್ಲಿ ಎಡವಿದ ಆರ್ಸಿಬಿ, ಆಕ್ಷನ್ನಲ್ಲೂ ಖರೀದಿಸೋ ಗೋಜಿಗೆ ಹೋಗಲಿಲ್ಲ. ಕನಿಷ್ಠ ಒಂದು ಬಾರಿ ಕೂಡ ಬಿಡ್ ಮಾಡಲಿಲ್ಲ. 3 RTM ಅವಕಾಶವಿದ್ರೂ, ಮ್ಯಾನೇಜ್ಮೆಂಟ್ ಸೈಲೆಂಟ್ ಆಗಿ ಕುಳಿತುಬಿಟ್ಟಿತು. 2017ರಿಂದ ಆರ್ಸಿಬಿಯ ಭಾಗವಾಗಿದ್ದ ಸಿರಾಜ್ನ ಬಿಟ್ಟುಕೊಟ್ಟಿದ್ದು, ಕೊಹ್ಲಿಗೆ ಬೇಸರ ತರಿಸಿದೆ.
ತಂಡದ ಬ್ಯಾಕ್ಬೋನ್ ಆಗಿದ್ದ ಆಟಗಾರರನನ್ನ ಖರೀದಿಸಲು ಆರ್ಸಿಬಿ ಫ್ರಾಂಚೈಸಿ ಮುಂದಾಗಲೇ ಇಲ್ಲ. RTM ಅವಕಾಶವಿದ್ರೂ ನೋ ಎಂದ ಮ್ಯಾನೇಜ್ಮೆಂಟ್ ಅತ್ಯುತ್ತಮ ಆಟಗಾರನನ್ನ ಉದಾರವಾಗಿ ಮುಂಬೈಗೆ ದಾನ ಮಾಡ್ತು. ಇದ್ರಿಂದ ಫ್ಯಾನ್ಸ್ಗೆ ಆದ ನೋವು, ಬೇಸರ ಅಷ್ಟಿಷ್ಟಲ್ಲ. ಅಭಿಮಾನಿಗಳಿಗೆ ಮಾತ್ರವಲ್ಲ.. ಕಿಂಗ್ ಕೊಹ್ಲಿಗೂ ಕೂಡ ವಿಲ್ ಜಾಕ್ಸ್ ಬಿಟ್ಟು ಕೊಟ್ಟಿದ್ದು ಬೇಸರ ತರಿಸಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: IPL ಮೆಗಾ ಹರಾಜು; ಆರ್ಸಿಬಿಯಿಂದ ಕೊಹ್ಲಿ ಆಪ್ತನ ಕೈ ಬಿಡಲು ಕಾರಣವೇನು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ