RCB ಮ್ಯಾನೇಜ್​ಮೆಂಟ್​ ಮೇಲೆ ವಿರಾಟ್ ಕೊಹ್ಲಿ ಕೋಪ ಮಾಡಿಕೊಂಡ್ರಾ.. ಕಾರಣವೇನು?

author-image
Bheemappa
Updated On
RCB ಮ್ಯಾನೇಜ್​ಮೆಂಟ್​ ಮೇಲೆ ವಿರಾಟ್ ಕೊಹ್ಲಿ ಕೋಪ ಮಾಡಿಕೊಂಡ್ರಾ.. ಕಾರಣವೇನು?
Advertisment
  • ಮ್ಯಾನೇಜ್​ಮೆಂಟ್​​ಗೆ ಟೆನ್ಶನ್​ ತಂದಿಟ್ಟಿತಾ ಕೊಹ್ಲಿಯ ಕೋಪ?
  • ವಿರಾಟ್ ಕೊಹ್ಲಿ ಕೋಪಕ್ಕೆ ಆ 3 ಕಾರಣಗಳು ಇಲ್ಲಿ ನೀಡಲಾಗಿದೆ
  • ಆಕ್ಷನ್​ನಲ್ಲಿ ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿ ಏನ್ ಮಾಡಿತು?

ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಹರಾಜು ಮುಗೀತು. ಡಿಸೆಂಟ್​​ ತಂಡವನ್ನ ಕಟ್ಟಿದ್ದೂ ಆಯ್ತು ಅನ್ನೋ ಖುಷಿಯಲ್ಲಿದ್ದ ಆರ್​​ಸಿಬಿ ಮ್ಯಾನೇಜ್​ಮೆಂಟ್​​ಗೆ ಆಘಾತವಾಗಿದೆ. ಇದೀಗ ಪ್ಲೇ ಬೋಲ್ಡ್​​ ಆರ್ಮಿಯಲ್ಲಿ ಅಸಮಾಧಾನ ಶುರುವಾಗಿ ಅಂತೆ.! ಬೇರಾರೂ ಅಲ್ಲ.. ತಂಡದ ಮೇನ್​ ಪ್ಲೇಯರ್​​​ ಕಿಂಗ್​ ಕೊಹ್ಲಿಗೆ ಮ್ಯಾನೇಜ್​ಮೆಂಟ್​ ಮೇಲೆ ಕೋಪವಂತೆ. ಯಾಕಪ್ಪ ಈ ಕೋಪ, ತಾಪ ಎಲ್ಲಾ ಅಂತೀರಾ?.

IPL ಮೆಗಾ ಹರಾಜಿನಲ್ಲಿ ಡಿಸೆಂಟ್​ ತಂಡ ಕಟ್ಟಿರೋ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಐಪಿಎಲ್​ ಸೀಸನ್-​ 18ಕ್ಕೆ ರೆಡಿಯಾಗಿದೆ. ಕಳೆದ 17 ಸೀಸನ್​ಗಳಿಂದ ಇರೋ ಕಪ್​ ಕೊರಗು ಈ ಬಾರಿ ನೀಗುತ್ತೆ. ಐಪಿಎಲ್​​ ಟ್ರೋಫಿ ನಮ್ಮದಾಗುತ್ತೆ ಅನ್ನೋ ಕನಸು ಆರ್​​ಸಿಬಿ ಮ್ಯಾನೇಜ್​ಮೆಂಟ್​​ದ್ದಾಗಿದೆ. ಹರಾಜಿನ ದೊಡ್ಡ ಜವಾಬ್ದಾರಿ ಮುಗಿಸಿ ಸಮಾಧಾನದ ನಿಟ್ಟುಸಿರು ಬಿಟ್ಟ ಬೆನ್ನಲ್ಲೇ ಅಸಮಾಧಾನದ ಬಿಸಿ ಫ್ರಾಂಚೈಸಿಗೆ ಮುಟ್ಟಿದೆ.

ಇದನ್ನೂ ಓದಿ: ಹಿಂದಿಯಲ್ಲಿ ಟ್ವೀಟ್ ಖಾತೆ ತೆರೆದ RCB.. ಕನ್ನಡಿಗರು, ಅಭಿಮಾನಿಗಳು ಆಕ್ರೋಶ

publive-image

ಹರಾಜಿನಲ್ಲಿ ಯಡವಟ್ಟು, ಕೊಹ್ಲಿಗೆ ಅಸಮಾಧಾನ.?

ಸದ್ಯ ಆರ್​​ಸಿಬಿ ಮ್ಯಾನೇಜ್​ಮೆಂಟ್​​ಗೆ ಟೆನ್ಶನ್​ ತಂದಿಟ್ಟಿರೋದು, ಕಿಂಗ್​ ಕೊಹ್ಲಿಯ ಕೋಪ.! ಹರಾಜು ಅಂತ್ಯಗೊಂಡ ಬೆನ್ನಲ್ಲೇ ವಿರಾಟ್​​ ಕೊಹ್ಲಿ ಮ್ಯಾನೇಜ್​ಮೆಂಟ್​ ಮೇಲೆ ಅಸಮಾಧಾನ ಗೊಂಡಿದ್ದಾರೆ ಅನ್ನೋ ಶಾಕಿಂಗ್​ ಸುದ್ದಿ ಹೊರ ಬಿದ್ದಿದೆ. ಆಟಗಾರರ ಖರೀದಿ ವಿಚಾರದಲ್ಲಿ ಫ್ರಾಂಚೈಸಿ ಮಾಡಿದ ಯಡವಟ್ಟುಗಳು, ಕಿಂಗ್​ ಕೊಹ್ಲಿಯ ಪಿತ್ತ ನೆತ್ತಿಗೇರಿಸಿದೆ ಅನ್ನೋದು ತಂಡದ ಮೂಲಗಳ ಮಾಹಿತಿಯಾಗಿದೆ. ಕೊಹ್ಲಿ ಕೋಪಕ್ಕೆ ಹಲವು ಕಾರಣಗಳಿವೆ.

ಕಾರಣ ನಂ.1- ಕೆ.ಎಲ್​ ರಾಹುಲ್​ ಖರೀದಿಸುವಲ್ಲಿ ವಿಫಲ..!

ಐಪಿಎಲ್​ ಆಕ್ಷನ್​ಗೂ ಮುನ್ನ ಕೆ.ಎಲ್​ ರಾಹುಲ್,​ ಆರ್​​ಸಿಬಿಗೆ ಬಂದೇ ಬರ್ತಾರೆ ಅನ್ನೋದು ಎಲ್ಲರ ಲೆಕ್ಕಾಚಾರವಾಗಿತ್ತು. ತಂಡಕ್ಕೆ ಬೇಕಿದ್ದ ವಿಕೆಟ್​ ಕೀಪರ್, ನಾಯಕ, ಬ್ಯಾಟ್ಸ್​ಮನ್​ ಎಲ್ಲದಕ್ಕೂ ರಾಹುಲ್​ ಉತ್ತರವಾಗಿದ್ದರು. ಲೋಕಲ್​ ಬಾಯ್​ ಅನ್ನೋದ್ರ ಜೊತೆಗೆ ಕೊಹ್ಲಿಯ ಆಪ್ತ ಅನ್ನೋ ವಿಚಾರ ಕೂಡ, ರಾಹುಲ್​ ಬೆಂಗಳೂರು ತಂಡವನ್ನ ಸೇರ್ತಾರೆ ಅನ್ನೋ ನಿರೀಕ್ಷೆಯನ್ನ ಹೆಚ್ಚಿಸಿತ್ತು. ಆದ್ರೆ 83 ಕೋಟಿ ಬಿಗ್​ ಪರ್ಸ್​​ ಇಟ್ಟುಕೊಂಡು ಆಕ್ಷನ್​ ಅಖಾಡಕ್ಕಿಳಿದ ಆರ್​​ಸಿಬಿ, ರಾಹುಲ್​ಗೆ ₹10.50 ಕೋಟಿವರೆಗೆ ಮಾತ್ರ ಬಿಡ್​​ ಮಾಡ್ತು. 14 ಕೋಟಿಗೆ ಸಿಗ್ತಿದ್ದ ರಾಹುಲ್ ಖರೀದಿಸದೇ ಬಿಡ್ತು. ಇದು ಕೊಹ್ಲಿಯ ಅಸಮಾಧಾನಕ್ಕೆ ಕಾರಣವಾಗಿದ್ಯಂತೆ.

ಕಾರಣ ನಂ.2- ಮೊಹಮ್ಮದ್​ ಸಿರಾಜ್​ಗೆ ಗುಡ್​ ಬೈ

ಮೊಹಮ್ಮದ್​ ಸಿರಾಜ್​ ಆಕ್ಷನ್​ ಕಣಕ್ಕೆ ಬರ್ತಾರೆ ಅನ್ನೋದನ್ನ ಯಾರೂ ನಿರೀಕ್ಷೆನೇ ಮಾಡಿರಲಿಲ್ಲ. ರಿಟೈನ್​ ಮಾಡಿಕೊಳ್ಳುವಲ್ಲಿ ಎಡವಿದ ಆರ್​​ಸಿಬಿ, ಆಕ್ಷನ್​​ನಲ್ಲೂ ಖರೀದಿಸೋ ಗೋಜಿಗೆ ಹೋಗಲಿಲ್ಲ. ಕನಿಷ್ಠ ಒಂದು ಬಾರಿ ಕೂಡ ಬಿಡ್​ ಮಾಡಲಿಲ್ಲ. 3 RTM​ ಅವಕಾಶವಿದ್ರೂ, ಮ್ಯಾನೇಜ್​ಮೆಂಟ್​ ಸೈಲೆಂಟ್​ ಆಗಿ ಕುಳಿತುಬಿಟ್ಟಿತು. 2017ರಿಂದ ಆರ್​​ಸಿಬಿಯ ಭಾಗವಾಗಿದ್ದ ಸಿರಾಜ್​ನ ಬಿಟ್ಟುಕೊಟ್ಟಿದ್ದು, ಕೊಹ್ಲಿಗೆ ಬೇಸರ ತರಿಸಿದೆ ಅಂತೆ.

ಕಾರಣ ನಂ.3- ವಿಲ್​ ಜಾಕ್ಸ್​​ ಖರೀದಿಗೂ ಮುಂದಾಗಲಿಲ್ಲ.!

ಇಂಗ್ಲೆಂಡ್​ನ ಸ್ಫೋಟಕ ಬ್ಯಾಟರ್​​​ ವಿಲ್​ ಜಾಕ್ಸ್​​, ಕಳೆದ ಸೀಸನ್​ನಲ್ಲಿ ಬೊಂಬಾಟ್​ ಆಟವಾಡಿದ್ರು. ವಿಲ್​ ಜಾಕ್ಸ್​ ಬ್ಯಾಟಿಂಗ್​ ವೈಖರಿಗೆ ಕಿಂಗ್​ ಕೊಹ್ಲಿಯೇ ಫಿದಾ ಆಗಿದ್ರು. ಸೆಂಚುರಿ ಸಿಡಿಸಿದ್ದ ವೇಳೆ ಇನ್ನೊಂದು ತುದಿಯಲ್ಲಿ ಬ್ಯಾಟಿಂಗ್​ ನಡೆಸ್ತಿದ್ದ ಕೊಹ್ಲಿ, ವಿಲ್​ ಜಾಕ್ಸ್​ ಅಬ್ಬರಕ್ಕೆ ಅಕ್ಷರಶಃ ಶಾಕ್​ ಆಗಿ ಬಿಟ್ಟಿದ್ರು.

ಇಂತಾ ಟ್ಯಾಲೆಂಟೆಡ್​ ಆಟಗಾರರನನ್ನ ಖರೀದಿಸುವಲ್ಲಿ ಆರ್​​ಸಿಬಿ ಫ್ರಾಂಚೈಸಿ ಮುಂದಾಗಲೇ ಇಲ್ಲ. RTM​​ ಅವಕಾಶವಿದ್ರೂ ನೋ ಎಂದ ಮ್ಯಾನೇಜ್​ಮೆಂಟ್​​ ಅತ್ಯುತ್ತಮ ಆಟಗಾರನನ್ನ ಉದಾರವಾಗಿ ಮುಂಬೈಗೆ ದಾನ ಮಾಡ್ತು. ಇದ್ರಿಂದ ಫ್ಯಾನ್ಸ್​ಗೆ ಆದ ನೋವು, ಬೇಸರ ಅಷ್ಟಿಷ್ಟಲ್ಲ.. ಅಭಿಮಾನಿಗಳಿಗೆ ಮಾತ್ರವಲ್ಲ.. ಕಿಂಗ್​ ಕೊಹ್ಲಿಗೂ ಕೂಡ ವಿಲ್​ ಜಾಕ್ಸ್​​ ಬಿಟ್ಟು ಕೊಟ್ಟಿದ್ದು ಬೇಸರ ತರಿಸಿದೆ.

ಇದನ್ನೂ ಓದಿ:IPL 2025: ಆರ್​ಸಿಬಿಯಲ್ಲಿ 5 ಸರ್​​ಪ್ರೈಸ್ ಎಂಟ್ರಿಗಳ ಹಿಂದಿನ ಸೀಕ್ರೆಟ್ ರಿವೀಲ್..!

publive-image

ಇಷ್ಟೇ ಅಲ್ಲ, ಆಲ್​​ರೌಂಡರ್​ ಗ್ಲೇನ್​ ಮ್ಯಾಕ್ಸ್​ವೆಲ್​ನ ಕೂಡ ಕಡಿಮೆ ಬೆಲೆಗೆ ಮತ್ತೆ ತಂಡಕ್ಕೆ ಕರೆ ತರೋ ಅವಕಾಶ ಆರ್​​ಸಿಬಿಗಿತ್ತು. ಆದ್ರೆ, ಆಕ್ಷನ್​ ಟೇಬಲ್​ನಲ್ಲಿದ್ದ ಮ್ಯಾನೇಜ್​ಮೆಂಟ್​​ ಕೈ ಕಟ್ಟಿ ಕುಳಿತಿತ್ತು. ಮ್ಯಾನೇಜ್​ಮೆಂಟ್​ನ ಈ ನಡೆ ಕೊಹ್ಲಿಯ ಬೇಸರಕ್ಕೆ ಕಾರಣವಾಗಿದೆ.

ಕೋಪಗೊಂಡಿರೋ ಕೊಹ್ಲಿ ನಾಯಕನಾಗ್ತಾರಾ.?

ಆರ್​​ಸಿಬಿ ಫ್ರಾಂಚೈಸಿ ಹರಾಜಿನಲ್ಲಿ ಕ್ಯಾಪ್ಟನ್​ ಮೆಟಿರಿಯಲ್​ ಶಾಂಪಿಂಗ್​ನಲ್ಲಿ ಎಡವಿದೆ. ಕೊಹ್ಲಿ ಬಿಟ್ರೆ ಆರ್​​ಸಿಬಿ ಬಳಿ ನಾಯಕನ ಪಟ್ಟಕ್ಕೇ ಬೇರೆ ಆಟಗಾರನೇ ಇಲ್ಲ. ಆದ್ರೆ, ಕೊಹ್ಲಿಗೆ ಬೇಕಾದ ಆಟಗಾರರನ್ನ ಆರ್​​ಸಿಬಿ ಮ್ಯಾನೇಜ್​ಮೆಂಟ್​​ ಖರೀದಿಸಿಲ್ಲ. ಇದ್ರಿಂದ ಕೊಹ್ಲಿ ಈಗಾಗಲೇ ಅಸಮಾಧಾನಗೊಂಡಿದ್ದಾರೆ. ಮ್ಯಾನೇಜ್​ಮೆಂಟ್ ಮೇಲೆ ಬೇಸರಗೊಂಡಿರುವ ಕಿಂಗ್​ ಕೊಹ್ಲಿಗೆ ಈಗೇನಾದ್ರೂ, ಕ್ಯಾಪ್ಟನ್ಸಿ ಆಫರ್​ ಮಾಡಿದ್ರೆ ಒಪ್ಪೋದು ಅನುಮಾನವೇ. ಕೊಹ್ಲಿಯ ಕೋಪ ಕಡಿಮೆಯಾಗುವವರೆಗೆ ಫ್ರಾಂಚೈಸಿ ಕಾಯಲೇಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment