/newsfirstlive-kannada/media/post_attachments/wp-content/uploads/2024/06/KOHLI-20.jpg)
ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ಎರಡನೇ ಬಾರಿಗೆ ಚಾಂಪಿಯನ್ ಆಗಿದೆ. ಫೈನಲ್ ಪಂದ್ಯದಲ್ಲಿ ಕಿಂಗ್ ವಿರಾಟ್ ಕೊಹ್ಲಿ 76 ರನ್‌ಗಳ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಕಂಬ್ಯಾಕ್ ಮಾಡಿದ ಕೊಹ್ಲಿ ವಿಶ್ವಕಪ್ ಗೆಲ್ಲುತ್ತಿದ್ದಂತೆಯೇ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಇದು ನನ್ನ ಕೊನೆಯ ವಿಶ್ವಕಪ್ ಎಂದು ಕೊಹ್ಲಿ ಹೇಳಿದ್ದಾರೆ. ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯುವ ಕನಸು ಕಂಡಿದ್ದ ಕೊಹ್ಲಿ, ಭಾರತಕ್ಕಾಗಿ ಕೊನೆಯ ಬಾರಿಗೆ ಟಿ20 ಪಂದ್ಯವನ್ನು ಆಡಿದೆ ಎಂದು ಹೇಳುವ ಮೂಲಕ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಇದನ್ನೂ ಓದಿ:ಸೌತ್ ಆಫ್ರಿಕಾಗೆ ಕೊನೆಯ 5 ಓವರ್ಗೆ 29 ರನ್ ಬೇಕಿತ್ತು ಅಷ್ಟೇ.. ಆಮೇಲೆ ನಡೆದ ಮ್ಯಾಜಿಕ್ ಹೇಗಿತ್ತು..!
‘ಇದು ನನ್ನ ಕೊನೆಯ ವಿಶ್ವಕಪ್..’
ಪಂದ್ಯದ ನಂತರ ಮಾತನಾಡಿರುವ ಕೊಹ್ಲಿ, ‘ಇದು ನನ್ನ ಕೊನೆಯ ವಿಶ್ವಕಪ್, ನಾವು ಸಾಧಿಸಲು ಬಯಸಿದ್ದು ಇದನ್ನೇ. ಒಂದು ದಿನ ನೀವು ರನ್ ಗಳಿಸುತ್ತಿಲ್ಲ ಎಂದು ಭಾವಿಸುತ್ತೀರಿ ಮತ್ತು ಅದು ಆಗುತ್ತದೆ. ದೇವರು ಏನು ಮಾಡಿದರೂ ಒಳ್ಳೆಯದನ್ನೇ ಮಾಡುತ್ತಾನೆ. ಇವತ್ತಿನ ಪಂದ್ಯದಲ್ಲಿ ನಾವು ಸೋತಿದ್ದರೂ ನಿವೃತ್ತಿಯನ್ನು ಘೋಷಿಸುತ್ತಿದ್ದೆ ಎಂದು ಕೊಹ್ಲಿ ಹೇಳಿದ್ದಾರೆ.
ರೋಹಿತ್ ಶರ್ಮಾ ಹೊಗಳಿದ ಕೊಹ್ಲಿ
ರೋಹಿತ್ ಶರ್ಮಾ ಹೆಚ್ಚು ಟಿ20 ವಿಶ್ವಕಪ್ ಆಡಿದ್ದಾರೆ. ನನಗೆ ಇದು 6ನೇ ವಿಶ್ವಕಪ್. ರೋಹಿತ್ ಈ ಗೆಲುವಿಗೆ ಹೆಚ್ಚು ಅರ್ಹರು. ನಾವು ತುಂಬಾ ಕಷ್ಟಪಟ್ಟಿದ್ದೇವೆ, ಇಂದು ಸಂತೋಷವಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ.
ಇದನ್ನೂ ಓದಿ:ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮೊದಲು ದಿಢೀರ್ ಸಭೆ ಕರೆದ ಐಸಿಸಿ.. ಏನಾಯ್ತು..?
ಟಿ20 ವಿಶ್ವಕಪ್ 2024ರ ಫೈನಲ್‌ಗೂ ಮುನ್ನ ವಿರಾಟ್ ಕೊಹ್ಲಿ 7 ಇನ್ನಿಂಗ್ಸ್‌ಗಳಲ್ಲಿ 75 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ವಿಶ್ವಕಪ್‌ನ ಅಂತಿಮ ಪಂದ್ಯದಲ್ಲಿ ಕೊಹ್ಲಿ 76 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಅವರ ವೃತ್ತಿಜೀವನದ ಅಂತಿಮ ಪಂದ್ಯದಲ್ಲೂ ಆಡಿದರು. ಇದಕ್ಕಾಗಿ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಕೂಡ ಒಲಿದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ