/newsfirstlive-kannada/media/post_attachments/wp-content/uploads/2025/05/VIRAT_KOHLI-3.jpg)
ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್, ರನ್ ಮಷಿನ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ ಅವರು ಅಧಿಕೃತವಾಗಿ ಟೆಸ್ಟ್ ಕ್ರಿಕೆಟ್ಗೆ ಗುಡ್ಬೈ ಹೇಳಿದ್ದಾರೆ. 14 ವರ್ಷಗಳಿಂದ ಆಡಿರುವ ಟೆಸ್ಟ್ ಕ್ರಿಕೆಟ್ನಿಂದ ಈಗ ಹಿಂದೆ ಸರಿಯುತ್ತಿರುವುದು ಸುಲಭವಲ್ಲ. ಆದರೆ ಈಗ ಇದು ಸರಿಯಾದ ಸಮಯ ಎಂದು ಭಾವಿಸುತ್ತೇನೆ ಎಂದು ಭಾವುಕರಾಗಿ ಹೇಳಿದ್ದಾರೆ.
ತಮ್ಮ ಇನ್ಸ್ಟಾದಲ್ಲಿ ಭಾವುಕ ನುಡಿಗಳನ್ನು ಪೋಸ್ಟ್ ಮಾಡಿರುವ ವಿರಾಟ್ ಕೊಹ್ಲಿ ಅವರು, 14 ವರ್ಷಗಳ ಹಿಂದೆ ಟೆಸ್ಟ್ ಕ್ರಿಕೆಟ್ ಆಡಲು ಪ್ರಾರಂಭಿಸಿದೆ. ಪ್ರಾಮಾಣಿಕವಾಗಿ ಹೇಳಬೇಕು ಎಂದರೆ ಇಷ್ಟೊಂದು ದೊಡ್ಡ ಮಟ್ಟಕ್ಕೆ ಕರೆದುಕೊಂಡು ಹೋಗುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಟೆಸ್ಟ್ ಪಂದ್ಯ ಕೇವಲ ಆಟವಾಗಿರಲಿಲ್ಲ. ಇದು ನನ್ನನ್ನು ಪ್ರತಿ ಹಂತದಲ್ಲೂ ಪರೀಕ್ಷಿಸಿ, ರೂಪಿಸಿತು. ಜೀವನ ಪರ್ಯಾಂತ ಆಗುವಂತಹ ಪಾಠಗಳನ್ನು ಕಲಿಸಿತು ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: RCB ಕ್ಯಾಂಪ್ನಿಂದ ಫ್ಯಾನ್ಸ್ಗೆ ಗುಡ್ನ್ಯೂಸ್.. ಬೆಂಗಳೂರು ತಂಡಕ್ಕೆ ಬಂತು ಆನೆಬಲ
ಟೆಸ್ಟ್ ಆಡುವುದು ಎಂದರೆ ಆಳವಾದ ವೈಯಕ್ತಿಕವಾದ ಅಂಶ ಒಳಗೊಂಡಿರುತ್ತದೆ. ಟೆಸ್ಟ್ ದೀರ್ಘದಿನಗಳವರೆ ಶಾಂತವಾಗಿ ಆಡುವುದರ ಜೊತೆಗೆ ಅಲ್ಲಿ ಜಂಜಾಟ ಕೂಡ ಇರುತ್ತದೆ. ಇದನ್ನು ಯಾರು ಕೂಡ ನೋಡುವುದಿಲ್ಲ. ಆದರೆ ಶಾಶ್ವತವಾಗಿ ನಿಮ್ಮೊಂದಿಗೆ ಉಳಿಯುವ ಸಣ್ಣ ಕ್ಷಣವಾಗಿರುತ್ತವೆ. ಈ ಫಾರ್ಮೆಟ್ನಿಂದ ಹೊರ ಬರುತ್ತಿದ್ದೇನೆ ಎಂದರೆ ಅಷ್ಟು ಸುಲಭವಲ್ಲ. ಆದರೆ ಈ ಸಮಯದಲ್ಲಿ ನನ್ನ ನಿರ್ಧಾರ ಸರಿಯಾಗಿ ಇದೆ ಎಂದು ಅನಿಸುತ್ತದೆ ಎಂದು ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್ಗೆ ನನ್ನಲ್ಲಿದ್ದ ಎಲ್ಲ ಕೌಶಲ್ಯಗಳನ್ನು ಧಾರೆ ಎರೆದಿದ್ದೇನೆ. ಅದರಂತೆ ನಾನು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನದ್ದನ್ನು ಅದು ನೀಡಿದೆ. ಟೆಸ್ಟ್ನಲ್ಲಿ ನನ್ನ ಆಟವನ್ನು ನೋಡಿ ಮೆಚ್ಚಿಕೊಂಡು ಪ್ರಶಂಸಿದ್ದಕ್ಕೆ ಹಾಗೂ ಮೈದಾನದಲ್ಲಿ ಪ್ರೋತ್ಸಾಹಿಸಿದ್ದಕ್ಕೆ ಪ್ರತಿಯೊಬ್ಬರಿಗೂ ನಾನು ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಯಾವಾಗಲೂ ಟೆಸ್ಟ್ ವೃತ್ತಿ ಜೀವನವನ್ನು ನಗುವಿನೊಂದಿಗೆ ನೆನಪಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
View this post on Instagram
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ