ವಿರಾಟ್, ಅನುಷ್ಕಾ ಕುಡಿಯುವ ನೀರು ಫ್ರಾನ್ಸ್​ನಿಂದ ಬರುತ್ತೆ! ಒಂದು ಲೀಟರ್​ಗೆ ಎಷ್ಟು ಬೆಲೆ ಗೊತ್ತಾ?

author-image
Gopal Kulkarni
Updated On
ವಿರಾಟ್, ಅನುಷ್ಕಾ ಕುಡಿಯುವ ನೀರು ಫ್ರಾನ್ಸ್​ನಿಂದ ಬರುತ್ತೆ! ಒಂದು ಲೀಟರ್​ಗೆ ಎಷ್ಟು ಬೆಲೆ ಗೊತ್ತಾ?
Advertisment
  • ವಿರಾಟ್ ಕೊಹ್ಲಿ, ಅನುಷ್ಕಾ ಯಾವ ಬ್ರ್ಯಾಂಡ್ ನೀರು ಕುಡಿಯುತ್ತಾರೆ ಗೊತ್ತಾ?
  • ಫ್ರಾನ್ಸ್​ನಿಂದ ಆಮದಾಗುವ ಆ ನೀರಿಗೆ ಅಷ್ಟೊಂದು ಬೆಲೆ ಇರುವುದ್ಯಾಕೆ ?
  • ಆ ಬ್ರ್ಯಾಂಡ್​ ಒಂದು ಲೀಟರ್ ಬಾಟಲಿಯ ಬೆಲೆಯಾದರೂ ಎಷ್ಟು ಗೊತ್ತಾ?

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇಬ್ಬರೂ ಕೂಡ ತಮ್ಮ ಫಿಟ್​ನೆಸ್​ ಬಗ್ಗೆ ಬಹಳ ಗಮನಕೊಡುತ್ತಾರೆ. ವರ್ಕೌಟ್​ನಿಂದ ಹಿಡಿದು ಆರೋಗ್ಯಕರ ನಿದ್ದೆಯವರೆಗೂ ಈ ಜೋಡಿ ತುಂಬಾ ಕಟ್ಟುನಿಟ್ಟಾದ ಜೀವನ ಶೈಲಿ ಪಾಲಿಸಿಕೊಂಡು ಬರುತ್ತಿದೆ. ಹೆಲ್ತ್ ಮತ್ತು ಲೈಫ್​ ಸ್ಟೈಲ್ ವಿಷಯಕ್ಕೆ ಬಂದರೆ ವಿರಾಟ್ ಹಾಗೂ ಅನುಷ್ಕಾ ತುಂಬಾ ಕಟ್ಟುನಿಟ್ಟು.

ಇದನ್ನೂ ಓದಿ:ಆಗ ಮಾಸ್ಟರ್ ಮೈಂಡ್ ಎಂದು ಕರೆಸಿಕೊಂಡ ವ್ಯಕ್ತಿ ಈಗ ನಿರುದ್ಯೋಗಿ! ಇವರ ಕಥೆ ಎಂತವರಿಗೂ ಕೂಡ ಸ್ಪೂರ್ತಿ

ಜನರು ಆಗಾಗ ತಮ್ಮ ಡಯಟ್​ನಲ್ಲಿ ಬದಲಾವಣೆಯನ್ನು ಮಾಡುತ್ತಾರೆ. ಭಾರತ ಕ್ರಿಕೆಟ್​ ಟೀಮ್​ನ ಮಾಜಿ ನಾಯಕ ಕೂಡ ತಮ್ಮ ಕುಡಿಯುವ ನೀರಿನಲ್ಲಿ ಬದಲಾವಣೆಯನ್ನು ಮಾಡುತ್ತಿರುತ್ತಾರೆ. ಈ ಜೋಡಿ ಕುಡಿಯುವ ಮಿನರಲ್ ವಾಟರ್​ನ ಬ್ರ್ಯಾಂಡ್​ ಆಗಾಗ ಬದಲಾಗುತ್ತಿರುತ್ತದೆ. ಅನುಷ್ಕಾ ಮತ್ತು ವಿರಾಟ್ ಕುಡಿಯುವ ನೀರು ವಿಶೇಷವಾದದ್ದು, ಬೇರೆ ದೇಶದಿಂದ ಆಮದು ಆಗುವಂತದ್ದು ಹಾಗೂ ಅದು ಸಾಮಾನ್ಯ ಜನರ ಕೈಗೆಟುಕದ ದರದಲ್ಲಿರುವಂತದ್ದು.

publive-image

ಇದನ್ನೂ ಓದಿ:ಎರಡು ರೋಲ್ಸ್ ರಾಯ್ಸ್, 10 ಮರ್ಸಿಡಿಸ್ ಕಾರ್​ಗಳಿಗೆ ಸಮ ಈ ಕೋಣದ ಬೆಲೆ! ಇದರ ರೇಟ್ ಎಷ್ಟು ಕೋಟಿ ಗೊತ್ತಾ?

ವಿರಾಟ್ ಹಾಗೂ ಅನುಷ್ಕಾ ಕುಡಿಯಲು ಇವೈನ್ ನ್ಯಾಚುರಲ್ ಸ್ಪ್ರಿಂಗ್ ವಾಟರ್​ ಹೆಚ್ಚು ಬಳಸುತ್ತಾರೆ.ಇದು ಮೂಲತಃ ಫ್ರಾನ್ಸ್​ನಿಂದ ಬರುವಂತಹ ಮಿನರಲ್ ವಾಟರ್, ಯಾವುದೇ ಕೆಮಿಕಲ್ ಮಿಕ್ಸ್​ ಇಲ್ಲದ ಪರಿಶುದ್ಧ ನೀರು ಎಂದು ಕೂಡ ಹೇಳಲಾಗುತ್ತದೆ.
ಈ ನೀರಿನ ಒಂದು ಬಾಟಲ್​ಗೆ ಸುಮಾರು 600 ರೂಪಾಯಿಗಳು. ದಿನಕ್ಕೆ ನೀವು ಎರಡು ಲೀಟರ್ ಈ ನೀರು ಕುಡಿದಲ್ಲಿ ತಗಲುವ ವೆಚ್ಚ 1200 ರೂಪಾಯಿಗಳು ಆದ್ರೆ ಅಮೆಜಾನ್​ನಲ್ಲಿ ಒಂದು ಡಜನ್ ಅಂದ್ರೆ 12 ಬಾಟಲ್​ಗಳಿಗೆ 4200 ರೂಪಾಯಿ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment