newsfirstkannada.com

RCB ಅಭಿಮಾನಿಗಳಿಗೆ ಡಬಲ್ ಧಮಾಕಾ.. ಕೊನೆಗೂ ಮರಳಿದ ಕಿಂಗ್‌ ಕೊಹ್ಲಿ; ಬರ್ತಿದ್ದಂಗೆ ಹೇಳಿದ್ದೇನು?

Share :

Published March 17, 2024 at 1:50pm

Update March 17, 2024 at 2:13pm

    ಮಾರ್ಚ್​ 19ರಂದು ನಡೆಯಲಿದೆ RCB ಅನ್​ಬಾಕ್ಸ್​ ಇವೆಂಟ್

    ಈಗಾಗಲೇ ಹಲವು ಆಟಗಾರರು ತಂಡವನ್ನು ಸೇರಿಕೊಂಡಿದ್ದಾರೆ

    ಮೊದಲ ಪಂದ್ಯದಲ್ಲಿ ಚೆನ್ನೈ ಜೊತೆ ಕಾದಾಡಲಿದೆ ಬೆಂಗಳೂರು

ಐಪಿಎಲ್ ರಣ ಕಣ ಪ್ರಾರಂಭವಾಗಲು ಇನ್ನೇನು ಐದು ದಿನಗಳು ಮಾತ್ರ ಬಾಕಿ ಉಳಿದಿದ್ದು ಇದೀಗ ಆರ್​ಸಿಬಿ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ವಿದೇಶದಿಂದ ಭಾರತಕ್ಕೆ ಮರಳಿದ್ದಾರೆ. ಮಾ. 19ರಂದು ಆರ್​ಸಿಬಿ ಅನ್​ಬಾಕ್ಸ್​ ಇವೆಂಟ್ ಬೆನ್ನಲ್ಲೇ​ 22ರಂದು ಚೆನ್ನೈ ಜೊತೆ ಬೆಂಗಳೂರು ಕಾದಾಟ ನಡೆಸಲಿದೆ. ಇದಕ್ಕೂ ಮೊದಲೇ ಕಿಂಗ್ ಕೊಹ್ಲಿ ರೆಡ್​ ಆರ್ಮಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಸದ್ಯ ವಿದೇಶದಿಂದ ವಿಮಾನದ ಮೂಲಕ ವಿರಾಟ್ ಕೊಹ್ಲಿ ಅವರು ಮುಂಬೈನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಈ ವೇಳೆ ಅವರು ಏರ್​​ಪೋರ್ಟ್​ನಿಂದ ಹೊರ ಬರುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ವಿರಾಟ್ ಬರುವಾಗ ಹೇಗಿದ್ದೀರಿ ಎಂದು ಪ್ರಶ್ನೆ ಮಾಡಿದಾಗ ‘ಬಹುತ್ ಬಡಿಯಾ’ ಎಂದು ಹೇಳಿದ್ದಾರೆ. ಇನ್ನೇನು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಅನ್​ಬಾಕ್ಸ್ ಈವೆಂಟ್​ ಇದೇ 19 ರಂದು ಅದ್ಧೂರಿಯಾಗಿ ನಡೆಯಲಿದೆ. ಅಲ್ಲದೇ ಮರು ದಿನವೇ ಚೆನ್ನೈ ವಿರುದ್ಧ ಬೆಂಗಳೂರು ಮೊದಲ ಪಂದ್ಯ ಆಡಲಿದೆ. ಈ ಎರಡು ಕಾರ್ಯಕ್ರಮಕ್ಕೂ ಮೊದಲೇ ವಿರಾಟ್ ಕೊಹ್ಲಿ ಆರ್​ಸಿಬಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರ ಹೆರಿಗೆ ವಿದೇಶದಲ್ಲಿ ಆಗಿದ್ದ ಕಾರಣ ಇಂಗ್ಲೆಂಡ್​ ಜೊತೆಗಿನ ಟೆಸ್ಟ್​ ಸರಣಿ ಬಿಟ್ಟು ತೆರಳಿದ್ದರು. ಬಳಿಕ ವಿದೇಶದಲ್ಲೇ ವಿರಾಟ್ ದಂಪತಿಗೆ ಗಂಡು ಮಗು ಜನಿಸಿದ್ದು ಆ ಮಗುವಿಗೆ ಅಕಾಯ್ ಎಂದು ನಾಮಕರಣ ಮಾಡಲಾಗಿದೆ. ಸದ್ಯ ಎಲ್ಲವೂ ಅಂದುಕೊಂಡಂತೆ ನಡೆದಿದ್ದರಿಂದ ಕಿಂಗ್ ಕೊಹ್ಲಿ ಇನ್ನೇನಿದ್ರೂ ಆರ್​ಸಿಬಿ ತಂಡದಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಲು ರೆಡಿಯಾಗಿದ್ದಾರೆ ಎಂದು ಹೇಳಲಾಗ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB ಅಭಿಮಾನಿಗಳಿಗೆ ಡಬಲ್ ಧಮಾಕಾ.. ಕೊನೆಗೂ ಮರಳಿದ ಕಿಂಗ್‌ ಕೊಹ್ಲಿ; ಬರ್ತಿದ್ದಂಗೆ ಹೇಳಿದ್ದೇನು?

https://newsfirstlive.com/wp-content/uploads/2024/03/VIRAT_KOHLI_RCB.jpg

Load More