ಟೆಸ್ಟ್​ ಕ್ರಿಕೆಟ್​​ಗೆ ಮತ್ತೆ ಕಿಂಗ್ ಕೊಹ್ಲಿ ಕ್ಯಾಪ್ಟನ್..? ಟೀಂ ಇಂಡಿಯಾದಲ್ಲಿ ಹೊಸ ಸಂಚಲನ..!

author-image
Ganesh
Updated On
ಟೆಸ್ಟ್​ ಕ್ರಿಕೆಟ್​​ಗೆ ಮತ್ತೆ ಕಿಂಗ್ ಕೊಹ್ಲಿ ಕ್ಯಾಪ್ಟನ್..? ಟೀಂ ಇಂಡಿಯಾದಲ್ಲಿ ಹೊಸ ಸಂಚಲನ..!
Advertisment
  • ಹೊಸ ವರ್ಷ... ಟೀಮ್​ ಇಂಡಿಯಾಗೆ ಹೊಸ ನಾಯಕ
  • ಟೀಮ್​ ಇಂಡಿಯಾದಲ್ಲಿ ಶುರುವಾಯ್ತು ಪಟ್ಟಕ್ಕಾಗಿ ಫೈಟ್​
  • ‘ನಾನೂ ನಾಯಕ’.. ವಿರಾಟ್​​ ಕೊಹ್ಲಿ ಮತ್ತೆ ಪಟ್ಟದಾಸೆ..!

ಟೀಮ್​ ಇಂಡಿಯಾದ ಟೆಸ್ಟ್​ ನಾಯಕ ರೋಹಿತ್​ ಶರ್ಮಾ ತಲೆದಂಡಕ್ಕೆ ಕೌಂಟ್​​ಡೌನ್​ ಶುರುವಾಗಿದೆ. ಬೆನ್ನಲ್ಲೇ ನಾಯಕನ ಪಟ್ಟವೇರಲು ಫೈಟ್​ ಶುರುವಾಗಿದೆ. ಇಷ್ಟು ದಿನ ಜಸ್​ಪ್ರಿತ್​ ಬೂಮ್ರಾ ಏಕಾಂಗಿಯಾಗಿ ನಾಯಕತ್ವದ ರೇಸ್​ನಲ್ಲಿದ್ರು. ಅಚ್ಚರಿ ಎಂಬಂತೆ ಕಿಂಗ್​ ಕೊಹ್ಲಿ ನಾಯಕತ್ವದ ಸಿಂಹಾಸನಕ್ಕೆ ಟವಲ್​ ಹಾಕಿದ್ದಾರೆ. ಕೊಹ್ಲಿ ಎಂಟ್ರಿ ಬಿಸಿಸಿಐ ಬಾಸ್​ಗಳನ್ನ ಇಕ್ಕಟ್ಟಿಗೆ ಸಿಲುಕಿಸಿದೆ.

ಟೀಮ್​ ಇಂಡಿಯಾಗೆ ಹೊಸ ನಾಯಕ

ರೋಹಿತ್​ ಶರ್ಮಾ ವಿರುದ್ಧ ಆಕ್ರೋಶ ವ್ಯಕ್ತವಾಗ್ತಿದ್ದು, ನಾಯಕತ್ವದ ಬದಲಾವಣೆಯ ಕೂಗು ಜೋರಾಗಿದೆ. ರೋಹಿತ್​ ಶರ್ಮಾ ತಲೆದಂಡಕ್ಕೆ ಭಾರತೀಯ ಕ್ರಿಕೆಟ್​​ ವಲಯ ಆಗ್ರಹಿಸ್ತಾ ಇದೆ. ಇದ್ರ ಬಿಸಿ ಬಿಸಿಸಿಐಗೆ ತಟ್ಟಿದ್ದು, ಬಾರ್ಡರ್​ -ಗವಾಸ್ಕರ್​ ಟೆಸ್ಟ್​ ಸರಣಿ ಬಳಿಕ ನಾಯಕನ ಬದಲಾವಣೆಗೆ ಬಿಸಿಸಿಐ ಚಿಂತಿಸುತ್ತಿದೆ. ಬಿಸಿಸಿಐ ವಲಯದಲ್ಲಿ ಈ ಬಗ್ಗೆ ಚರ್ಚೆ ಆರಂಭವಾದ ಬೆನ್ನಲ್ಲೇ, ಪಟ್ಟವೇರಲು ಫೈಟ್ ಶುರುವಾಗಿದೆ.

ಇದನ್ನೂ ಓದಿ:ಚೀನಾ ಮತ್ತೆ ಪ್ರಕ್ಷುಬದ್ಧ! ಮತ್ತೊಂದು ಹೊಸ ವೈರಸ್ ಸೃಷ್ಟಿ.. ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ..

publive-image

‘ನಾನೂ ನಾಯಕ’.. ಕೊಹ್ಲಿ ಮತ್ತೆ ಆಸೆ

ರೋಹಿತ್​ ಶರ್ಮಾ ನಾಯಕನ ಸ್ಥಾನ ತ್ಯಜಿಸೋ ಮುನ್ನವೇ ಪಟ್ಟಕ್ಕಾಗಿ ಫೈಟ್​​ ಶುರುವಾಗಿದೆ. ಅಚ್ಚರಿ ಎಂಬಂತೆ ಮಾಜಿ ಕ್ಯಾಪ್ಟನ್​, ತಂಡದ ಸೀನಿಯರ್​ ಪ್ಲೇಯರ್​​ ವಿರಾಟ್​ ಕೊಹ್ಲಿ ರೇಸ್​ಗೆ ಎಂಟ್ರಿ ಕೊಟ್ಟಿದ್ದಾರೆ. ಮೆಲ್ಬೋರ್ನ್ ಟೆಸ್ಟ್​ ಪಂದ್ಯದಲ್ಲಿ ರೋಹಿತ್​ ಫೀಲ್ಡ್​ನಲ್ಲಿದ್ರೂ ಅನ್ ​​ಅಫಿಶಿಯಲಿ ವಿರಾಟ್​ ಕೊಹ್ಲಿ ನಾಯಕತ್ವದ ಜವಾಬ್ದಾರಿ ನಿರ್ವಹಿಸಿದ್ರು. ಫೀಲ್ಡ್​ ಪ್ಲೇಸ್​ಮೆಂಟ್​, ಬೌಲರ್​ಗಳ ಜೊತೆಗೆ ಮಾತುಕತೆ ಎಲ್ಲ ವಿಚಾರದಲ್ಲೂ ಫುಲ್​ ಆ್ಯಕ್ಟಿವ್​ ಆಗಿ ಕೊಹ್ಲಿ ಭಾಗಿಯಾಗಿದ್ರು. ತಮ್ಮ ನಡೆಯಿಂದಲೇ ಮತ್ತೆ ಟೆಸ್ಟ್​ ನಾಯಕತ್ವದ ಜವಾಬ್ದಾರಿ ಹೊರಲು ನಾನ್​ ರೆಡಿ ಅನ್ನೋ ಸಂದೇಶ ರವಾನಿಸಿದ್ರು.

ಟೆಸ್ಟ್​ ಕ್ರಿಕೆಟ್​​ನಲ್ಲಿ ವಿರಾಟ್​ ಕೊಹ್ಲಿ ಟೀಮ್​ ಇಂಡಿಯಾ ಕಂಡ ಮೋಸ್ಟ್​ ಸಕ್ಸಸ್​​ಫುಲ್​ ಕ್ಯಾಪ್ಟನ್​. ವಿರಾಟ್​ ಕ್ಯಾಪ್ಟನ್​ ಆಗಿದ್ದ ಅವಧಿಯಲ್ಲಿ ಟೀಮ್​ ಇಂಡಿಯಾ ದೇಶ-ವಿದೇಶದಲ್ಲಿ ಪಾರಮ್ಯ ಮೆರೆದಿತ್ತು. ಭಾರತೀಯ ಕ್ರಿಕೆಟ್​ ತಂಡದ ಆಡೋ ಶೈಲಿಯೇ ಬದಲಾಗಿತ್ತು. ಸಕ್ಸಸ್​ ಕೂಡ ಸಿಕ್ಕಿತ್ತು. ಕೊಹ್ಲಿ ಪಟ್ಟ ತ್ಯಜಿಸಿದ ಮೇಲೆ ಟೀಮ್​ ಇಂಡಿಯಾ ಪರ್ಫಾಮೆನ್ಸ್​ ಕುಸಿತ ಕಂಡಿದೆ. 2024ರಲ್ಲಂತೂ ಪಾತಾಳಕ್ಕೆ ಕುಸಿದಿದೆ. ಹೀಗಾಗಿಯೇ ಮತ್ತೆ ನಾಯಕನಾಗಿ ಭಾರತ ತಂಡವನ್ನ ಯಶಸ್ಸಿನ ಉತ್ತುಂಗಕ್ಕೇರಿಸೋದು ಕೊಹ್ಲಿಯ ಕನಸಾಗಿದೆ. ಈಗಾಗಲೇ ಮತ್ತೆ ಕ್ಯಾಪ್ಟನ್ಸಿ ವಹಿಸಿಕೊಳ್ಳಲು ಸಿದ್ಧ ಎಂಬ ಸಂದೇಶವನ್ನ ಬಿಸಿಸಿಐಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ರೋಹಿತ್ ಇಲ್ಲದಿದ್ದರೂ ಬದಲಾಗಲಿಲ್ಲ ಹಣೆಬರಹ.. ಸಿಡ್ನಿ ಟೆಸ್ಟ್​ನಲ್ಲಿ ಭಾರತಕ್ಕೆ ಭಾರೀ ಹಿನ್ನೆಡೆ..!

publive-image

ನಾಯಕತ್ವದ ಲಾಬಿ ಹಿಂದಿದ್ಯಾ ಸ್ಥಾನದ ಲೆಕ್ಕಾಚಾರ?

ರೋಹಿತ್​ ಶರ್ಮಾರಂತೆ, ವಿರಾಟ್​ ಕೊಹ್ಲಿಯ ಪರ್ಫಾಮೆನ್ಸ್​ ಕೂಡ ಹೀನಾಯವಾಗಿದೆ. ಕಳೆದೊಂದು ವರ್ಷದಿಂದ ರನ್​ಗಳಿಕೆಗೆ ಪರದಾಟ ನಡೆಸ್ತಿದ್ದಾರೆ. ಕೊಹ್ಲಿಯ ನಿರ್ಗಮನಕ್ಕೂ ಕೌಂಟ್​ಡೌನ್​ ಶುರುವಾಗಿರೋ ಈ ಸಂದರ್ಭದಲ್ಲಿ ಟೀಮ್​ ಇಂಡಿಯಾದ ನಾಯಕತ್ವದ ರೇಸ್​ಗೆ ಎಂಟ್ರಿ ನೀಡಿರೋದ್ರ ಹಿಂದೆ ಸ್ಥಾನ ಉಳಿಸಿಕೊಳ್ಳೋ ಲೆಕ್ಕಾಚಾರ ಇದ್ಯಾ ಎಂಬ ಅನುಮಾನ ಮೂಡಿದೆ. ನಾಯಕನಾದ್ರೆ, ತಂಡದಿಂದ ಡ್ರಾಪ್​ ಆಗಲ್ಲ. ಸ್ಥಾನ ಭದ್ರಪಡಿಸಿಕೊಳ್ಳಬಹುದು ಅನ್ನೋ ಕಾರಣಕ್ಕೆ ನಾಯಕತ್ವದ ಮೇಲೆ ಒಲವು ತೋರ್ತಿದ್ದಾರಾ ಎಂಬ ಪ್ರಶ್ನೆ ಹುಟ್ಟಿದೆ.

ಯಾರ ಮೇಲೆ ಬಾಸ್​ಗಳ ಒಲವು?

ವಿರಾಟ್​​ ಕೊಹ್ಲಿ ರೇಸ್​​ಗೆ ಎಂಟ್ರಿ ಕೊಡೋಕೆ ಮುನ್ನ ಜಸ್​ಪ್ರಿತ್​ ಬೂಮ್ರಾ ನಾಯಕನ ಸೀಟ್​ನ ರಿಸರ್ವ್​ ಮಾಡಿದ್ದಾರೆ. ಪರ್ತ್​ ಟೆಸ್ಟ್​ನಲ್ಲಿ ಟೀಮ್​ ಇಂಡಿಯಾವನ್ನ ಗೆಲ್ಲಿಸಿದ ಜಸ್​ಪ್ರಿತ್​ ಬೂಮ್ರಾ ನಾನೇ ಮುಂದಿನ ನಾಯಕ ಎಂಬ ಸಂದೇಶ ಸಾರಿದ್ದಾರೆ. ಅದಕ್ಕೂ ಹಿಂದೆ ಹಲವು ಬಾರಿ ಬಹಿರಂಗವಾಗಿ ನಾಯಕನಾಗೋ ಆಸೆಯನ್ನ ಬೂಮ್ರಾ ಹೊರ ಹಾಕಿದ್ರು. ಇದೀಗ ಸಿಕ್ಕ ಅವಕಾಶದಲ್ಲಿ ಸಕ್ಸಸ್​​ ಕೂಡ ಕಂಡಿರೋ ಬೂಮ್ರಾ ಪಟ್ಟವನ್ನೇರಲು ತುದಿಗಾಲಲ್ಲಿ ನಿಂತಿದ್ದಾರೆ.

ಇದನ್ನೂ ಓದಿ:ರೋಹಿತ್ ಶರ್ಮಾ​ರನ್ನು​ ಡ್ರಾಪ್ ಮಾಡಿದ್ದೇಕೆ? ದೊಡ್ಡ ಹೇಳಿಕೆ ಕೊಟ್ಟ ಜಸ್​​ಪ್ರಿತ್ ಬುಮ್ರಾ..!

publive-image

ಬೂಮ್ರಾ ನಾಯಕತ್ವ ವಹಿಸಿಕೊಳ್ಳಲು ರೆಡಿಯಾದ ಬೆನ್ನಲ್ಲೇ, ಕೊಹ್ಲಿ ಕೂಡ ರೇಸ್​ಗೆ ಎಂಟ್ರಿ ಕೊಟ್ಟಿರೋದು ಸದ್ಯ ಬಿಸಿಸಿಐನ ಸಂಕಷ್ಟಕ್ಕೆ ಸಿಲುಕಿಸಿದೆ. ಇಬ್ಬರು ಸೀನಿಯರ್​ಗಳ ಪೈಕಿ ಯಾರಿಗೆ ಮಣೆ ಹಾಕೋದು ಎಂಬ ಗೊಂದಲ ಶುರುವಾಗಿದೆ. ಯಾರನ್ನೇ ರಿಜೆಕ್ಟ್​ ಮಾಡಿದ್ರೂ, ಡ್ರೆಸ್ಸಿಂಗ್​ ರೂಮ್​​ನಲ್ಲಿ ಅಸಮಾಧಾನ ಭುಗಿಲೇಳೋ ಸಾಧ್ಯತೆಯಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment