ವಿರಾಟ್​ ಕೊಹ್ಲಿ ಹಿಂದೆ ಹನುಮನ ಬಲ.. ಸ್ಟಾರ್ ಬ್ಯಾಟರ್​ ಆದ್ರೂ ಆಂಜನೇಯನ ಪರಮಭಕ್ತ!

author-image
Bheemappa
Updated On
ವಿರಾಟ್​ ಕೊಹ್ಲಿ ಹಿಂದೆ ಹನುಮನ ಬಲ.. ಸ್ಟಾರ್ ಬ್ಯಾಟರ್​ ಆದ್ರೂ ಆಂಜನೇಯನ ಪರಮಭಕ್ತ!
Advertisment
  • ವಿರಾಟ್​ ಹೋದಲ್ಲಿ, ಬಂದಲ್ಲಿ ಎಲ್ಲ, ಹನುಮ ಇರಲು ಬಯಸುತ್ತಿದ್ದಾರಾ?
  • ಜಯಂತಿ ದಿನ ಆಂಜನೇಯನ ಫೋಸ್ಟ್ ಮಾಡಿ ಶುಭ ಕೋರಿದ್ದ​ ವಿರಾಟ್​
  • ಸಚಿನ್​ ತೆಂಡೂಲ್ಕರ್​ ಅವರ ಜೊತೆ ಯಾವ ದೇವರ ಮೂರ್ತಿ ಇರುತ್ತಿತ್ತು?

ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ವಿರಾಟ್​ ಕೊಹ್ಲಿಯ ಅಬ್ಬರ ಜೋರಾಗಿದೆ. ಐಪಿಎಲ್​ ಮಾತ್ರವಲ್ಲ, ಕಳೆದೊಂದು ವರ್ಷದಿಂದ ವಿರಾಟ್​ ಕೊಹ್ಲಿ ಸಾಲಿಡ್​ ಪರ್ಫಾಮೆನ್ಸ್​​ ನೀಡ್ತಿದ್ದಾರೆ. ಕೊಹ್ಲಿಯ ಫರ್ಫಾಮೆನ್ಸ್​ ಹಿಂದೆ ಹನುಮನ ಬಲವಿದೆ. ಹನುಮ ಭಕ್ತ ಕೊಹ್ಲಿಯ ಸ್ಪೆಷಲ್ ಸ್ಟೋರಿ ಇಲ್ಲಿದೆ.

ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಬಲ. ಏಕಾಂಗಿಯಾಗಿ ಪಂದ್ಯ ಗೆಲ್ಲಿಸುವ ಶಕ್ತಿವಂತ. ನಂಬಿದವರಿಗಾಗಿ, ಕೈ ಹಿಡಿದವರಿಗಾಗಿ ನಿಲ್ಲುವ, ಏನಾದರೂ ಮಾಡುವ ನಂಬುಗೆಯ ಬಂಟ. ಇಂಥಹ ಬಂಟ ಪುರಾಣಗಳಲ್ಲಿ ಕಂಡಿದ್ದು ಮಾತ್ರ ಶ್ರೀರಾಮನ ಬಂಟ ಹನುಮಂತ.

publive-image

ರಾಮನ ಬಂಟ ಹನುಮಂತ, ರಾಮನ ಆ ಒಂದು ಸಹಾಯಕ್ಕಾಗಿ ನಿಸ್ವಾರ್ಥ ಸೇವೆ. ರಕ್ಷಕನಾಗಿ ಕಡು ಕಷ್ಟದಲ್ಲೂ ಜೊತೆಯಾಗಿದ್ದವರು ಹನುಮಂತ. ಆರ್​ಸಿಬಿ ಪಾಲಿಗೆ ಇಂಥ ಹನುಮಂತ ಯಾರು ಅಂದ್ರೆ, ಕಣ್ಮುಂದೆ ಬರುವುದು ಒನ್​​ ಆ್ಯಂಡ್ ಒನ್ಲಿ ವಿರಾಟ್​ ಮಾತ್ರ. ಯಾಕಂದ್ರೆ, 18 ವರ್ಷಗಳ ಕಾಲ ಕೈಹಿಡಿದ ತಂಡಕ್ಕಾಗಿ ಸೇವೆ ಸಲ್ಲಿಸ್ತಿರುವ ನಿಸ್ವಾರ್ಥಿ.. ಆರ್​ಸಿಬಿಯ ಹನುಮಂತನಾಗಿರುವ ವಿರಾಟ್​, ಅಪ್ಪಟ ಹನುಮ ಭಕ್ತ.

ವಿರಾಟ್​​ ಕೊಹ್ಲಿ ಜೊತೆ ಸದಾ ಇರ್ತಾನೆ ರಾಮನ ಬಂಟ..!

ವಿರಾಟ್ ಕೊಹ್ಲಿ ದೈವ ಭಕ್ತ ಅನ್ನೋದು ಎಲ್ಲರಿಗೂ ಗೊತ್ತು. ರಜಾ ದಿನಗಳಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಪತ್ನಿಯೊಂದಿಗೆ ಭೇಟಿ ನೀಡುವ ಕೊಹ್ಲಿ, ಶಿವನ ಆರಾಧಕ ಅನ್ನೋದು ಗೊತ್ತು. ಅದೇ ಕಾರಣಕ್ಕೆ ಮಹಾಕಾಳೇಶ್ವರನ ಸನ್ನಿಧಿಗೆ ಹೋಗ್ತಾರೆ. ಆದ್ರೆ, ಶಿವನ ಆರಾಧಕನೂ ಆಗಿರುವ ವಿರಾಟ್​, ಶ್ರೀರಾಮನ ಬಂಟನಾಗಿರುವ ಆಂಜನೇಯನ ಪರಮ ಭಕ್ತನೂ ಆಗಿದ್ದಾನೆ.

ಇದನ್ನೂ ಓದಿ: ಮ್ಯಾಚ್​ ನೋಡುತ್ತ.. ನೋಡುತ್ತ.. RCBಗೆ ಕನ್ವರ್ಟ್​ ಆದ ಡೆಲ್ಲಿ ಕ್ಯಾಪಿಟಲ್ಸ್ ಅಭಿಮಾನಿ; ಹೇಗೆ ಗೊತ್ತಾ?

publive-image

ಅಷ್ಟೇ ಅಲ್ಲ.! ವಿರಾಟ್​​ ಕೊಹ್ಲಿ ಜೊತೆ ಸದಾ ಆಂಜನೇಯ ಇರ್ತಾನೆ. ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ಕೊಹ್ಲಿಯ ಜೊತೆ ಶಕ್ತಿಯಾಗಿ ಇರ್ತಾನೆ. ಇದಕ್ಕೆ ಬೆಸ್ಟ್​ ಎಕ್ಸಾಂಪಲ್​ ವಿರಾಟ್​ ಕೊಹ್ಲಿ ಬ್ಯಾಗ್.

ಹನುಮನಿಲ್ಲದೆ ಹೆಜ್ಜೆ ಹಾಕಲ್ಲ ವಿರಾಟ್ ಕೊಹ್ಲಿ..!

ಸಚಿನ್ ಬ್ಯಾಗ್​​ನಲ್ಲಿ ವಿಘ್ನ ನಿವಾರಕ ಗಣೇಶ ಮೂರ್ತಿ ಸದಾ ಇರ್ತಿತ್ತು. ಅದೇ ರೀತಿ ವಿರಾಟ್​ ಕೊಹ್ಲಿಯ ಬ್ಯಾಗ್​​ನಲ್ಲಿ ಹನುಮ ಇರ್ತಾನೆ. ವಿರಾಟ್​ ಹೋದಲ್ಲಿ, ಬಂದಲ್ಲಿ ಹನುಮ ಇರಲು ಬಯಸ್ತಾರೆ. ಇದೇ ಕಾರಣಕ್ಕೆ ಬ್ಯಾಗ್​ನ ಜೀಪ್​​ಗೆ ಹನುಮಾನ್ ಕೀ ಚೈನ್ ಹಾಕಿದ್ದಾರೆ.

ಪ್ರತಿ ದಿನವೂ ಆಂಜನೇಯನ ಆರಾಧನೆ..!

ಹಲವು ದಿನಗಳ ಹಿಂದಷ್ಟೇ ವಿರಾಟ್​, ಹನುಮಜಯಂತಿಗೆ ಇನ್​ಸ್ಟಾಗ್ರಾಮ್​ನಲ್ಲಿ ಆಂಜನೇಯನ ಫೋಟೋ ಫೋಸ್ಟ್ ಮಾಡಿ ವಿಶ್ ಮಾಡಿದ್ದರು. ಯಾವಗಲೂ ಕಮರ್ಶಿಯಲ್ ಫೋಸ್ಟ್​ಗಳನ್ನು ಮಾತ್ರ ಮಾಡ್ತಿದ್ದ ವಿರಾಟ್, ಆಂಜನೇಯನ ಫೋಸ್ಟ್ ಮಾಡಿ ಶುಭಕೋರಿದ್ದು ಅಚ್ಚರಿ ತರಿಸಿತ್ತು. ಆದ್ರೆ, ಕೊಹ್ಲಿಯ ಈ ಭಕ್ತಿ ಹನುಮ ಜಯಂತಿಗೆ ಮಾತ್ರವೇ ಸೀಮಿತಗೊಂಡಿದಲ್ಲ, ಪ್ರತಿ ದಿನ ಕೂಡ ಆಂಜನೇಯನನ್ನ ಆರಾಧಿಸ್ತಾರೆ. ಇಷ್ಟೇ ಅಲ್ಲ, ಹನುಮಾನ್ ಚಾಲೀಸ ಕೇಳುತ್ತಾರೆ.

ವಿರಾಟ್​ ಖಾಸಗಿ ಕಾರ್ಯಕ್ರಮಕ್ಕೆ ಹೋದಾಗ, ಬಂದಾಗ ಆಯೋಜಕರು ಒಂದಿಲ್ಲೊಂದು ಗಿಫ್ಟ್ ಕೊಡ್ತಾನೇ ಇರ್ತಾರೆ. ಆದ್ರೆ, ಅದ್ಯಾವುದು ವಿರಾಟ್​​​​​​, ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳದ ವಿರಾಟ್​, ಹುಟ್ಟುಹಬ್ಬದಂದು ಅಭಿಮಾನಿಯೊಬ್ಬ ಕೊಟ್ಟಿದ್ದ ಆಂಜನೇಯನ ಪೈಟಿಂಗ್ ಫೋಟೋ ಸ್ವೀಕರಿಸಿದರು.

publive-image

ವಿರಾಟ್​ ಯಶಸ್ಸಿನ ಹಿಂದೆ ರಾಮಭಕ್ತ ಹನುಮ..!

ವಿರಾಟ್​ ಕೊಹ್ಲಿಯ ಯಶಸ್ಸಿನ ಉಜ್ಜೈಯಿನಿ ಮಹಾಕಾಳೇಶ್ವರ, ವೃಂದಾವನದ ಪ್ರೇಮಾನಂದ ಮಹಾರಾಜ್​, ನೀಮ್ ಕರೋಲಿ ಬಾಬಾರ ಅನುಗ್ರಹವೊಂದೇ ಅಲ್ಲ. ಶ್ರೀರಾಮನ ಪರಮ ಭಕ್ತನಾಗಿರುವ ಹನುಮಂತನ ಅನುಗ್ರಹ ಇದೆ. ಔಟ್​ ಆಫ್ ಫಾರ್ಮ್​ನಿಂದ ವಿರಾಟ್​​ ಕೊಹ್ಲಿ ಕುಗ್ಗಿ ಹೋದಾಗ ಸ್ಪೂರ್ತಿಯ ಸೆಲೆಯಾಗುವುದು ರಾಮಭಕ್ತ ಹನುಮನೇ ಅನ್ನೋದು ಮರೆಯುವಂತಿಲ್ಲ.

ಸದ್ಯ ಆಂಜನೇಯನ ಕೃಪೆಯಿಂದ ಐಪಿಎಲ್​ನಲ್ಲಿ ಅಬ್ಬರಿಸ್ತಿರುವ ವಿರಾಟ್, ರನ್​ ಭರಾಟೆ ನಡೆಸ್ತಿದ್ದಾರೆ. ಇದೇ ಆಂಜನೇಯನ ಆಶೀರ್ವಾದೊಂದಿಗೆ ಆರ್​ಸಿಬಿ ಕಪ್ ಗೆಲ್ಲಿಸಲಿ ಅನ್ನೋದೆ ಅಭಿಮಾನಿಗಳ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment