/newsfirstlive-kannada/media/post_attachments/wp-content/uploads/2024/06/VIRAT_KOHLI-15.jpg)
ವಿಶ್ವಕಪ್​ ಟೂರ್ನಿಯ ಲೀಗ್​ ಸ್ಟೇಜ್​​ನಲ್ಲಿ ಸೈಲೆಂಟ್​ ಆಗಿದ್ದ ಕಿಂಗ್​ ಕೊಹ್ಲಿ, ಕೆರಬಿಯನ್​ ನಾಡಿಗೆ ಕಾಲಿಟ್ಟ ಬೆನ್ನಲ್ಲೇ ಫುಲ್​​ ವೈಲೆಂಟ್​​ ಆಗಿದ್ದಾರೆ. ನೆಟ್ಸ್​ನಿಂದಲೇ ಎದುರಾಳಿಗಳಿಗೆ ಖಡಕ್​ ವಾರ್ನಿಂಗ್​ ಕೊಟ್ಟಿದ್ದಾರೆ. ವಿಂಡೀಸ್​ನ ಬಿರು ಬಿಸಿಲಿಗೆ ಡೋಂಟ್​​ಕೇರ್​​ ಎಂದಿರುವ ವಿರಾಟ್​ ಉಗ್ರರೂಪ ಎತ್ತಿದ್ದಾರೆ. ಬಾರ್ಬಡೋಸ್​​ನಲ್ಲಿ ಕಿಂಗ್​ ​ಕೊಹ್ಲಿ ನಡೆಸಿದ ಅಭ್ಯಾಸ ಹಲವು ಕಥೆಗಳನ್ನ ಹೇಳ್ತಿದೆ.
ಟಿ20 ವಿಶ್ವಕಪ್​ ಟೂರ್ನಿಯ ಮೆಗಾಫೈಟ್​​ಗಳಿಗೆ ವೇದಿಕೆ ಸಜ್ಜಾಗಿದೆ. ಸೂಪರ್-​​ 8 ಹಂತದ ಅಗ್ನಿಪರೀಕ್ಷೆಗೆ ಟೀಮ್​ ಇಂಡಿಯಾದ ತಯಾರಿ ಆರಂಭವಾಗಿದೆ. ಯುಎಸ್​ಎನಿಂದ ಬಾರ್ಬಡೋಸ್​​​ಗೆ ಬಂದಿಳಿದಿರುವ ಟೀಮ್​ ಇಂಡಿಯಾ ಅಭ್ಯಾಸದ ಅಖಾಡಕ್ಕೆ ಧುಮುಕಿದೆ. ಬಾರ್ಬಡೋಸ್​ನ ನೆಟ್ಸ್​ನಲ್ಲಿ ಟೀಮ್​ ಇಂಡಿಯಾದ ರಣಕಲಿಗಳು ಬೆವರಿಳಿಸಿದ್ದಾರೆ. ವಿರಾಟ್​​ ಕೊಹ್ಲಿಯ ಅಭ್ಯಾಸವನ್ನ ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ.
/newsfirstlive-kannada/media/post_attachments/wp-content/uploads/2024/06/VIRAT_KOHLI-11.jpg)
ವಿಶ್ವಕಪ್​ನಲ್ಲಿ ಕೊಹ್ಲಿ ಅಟ್ಟರ್​ಫ್ಲಾಪ್​ ಶೋ.!
ಈ ಬಾರಿ ಟಿ20 ವಿಶ್ವಕಪ್​ ಅಖಾಡದಲ್ಲಿ ಬಹುನಿರೀಕ್ಷೆಯಿಟ್ಟಿದ್ದ ಕೊಹ್ಲಿ ಅಟ್ಟರ್​ಪ್ಲಾಫ್​ ಆಗಿದ್ದಾರೆ. ಚುಟುಕು ವಿಶ್ವಕಪ್​ನ ಡಾನ್​ ಅನಿಸಿಕೊಂಡಿದ್ದ ಕೊಹ್ಲಿ, ಆಡಿದ 3 ಪಂದ್ಯಗಳಲ್ಲಿ ಸಿಂಗಲ್​ ಡಿಜಿಟ್​ ಗಡಿ ದಾಟೋಕೆ ಆಗದೇ ತಿಣುಕಾಡಿದ್ದಾರೆ. 3 ಪಂದ್ಯಗಳಲ್ಲಿ ಕೇವಲ 5 ರನ್​ಗಳಿಸುವಷ್ಟರಲ್ಲಿ ಸುಸ್ತಾಗಿದ್ದಾರೆ. ವಿಶ್ವವನ್ನೇ ಗೆದ್ದ ವೀರನಿಗೆ ಈ ಮೂರು ಪಂದ್ಯಗಳ ಫ್ಲಾಪ್​​ ಪ್ರದರ್ಶನದ ಬೇಸರ, ಹತಾಶೆ ಸದ್ಯ ಬಿಡದೇ ಕಾಡ್ತಿದೆ.
ಹಸಿದ ಹೆಬ್ಬುಲಿಯಾದ ವಿರಾಟ್​​ ಕೊಹ್ಲಿ.!
ಆಡಿದ ಮೂರು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿರುವ ವಿರಾಟ್​ ಕೊಹ್ಲಿಯಲ್ಲಿ ಇದೀಗ ರನ್​ ದಾಹ ಶುರುವಾಗಿದೆ. ಅಕ್ಷರಶಃ ಕಿಂಗ್​​​ ಕೊಹ್ಲಿ ಹಸಿದ ಹೆಬ್ಬುಲಿಯಂತಾಗಿದ್ದಾರೆ. ಬಾರ್ಬಡೋಸ್​​ನಲ್ಲಿ ನಡೆಸಿದ ಮೊದಲ ಪ್ರಾಕ್ಟಿಸ್​​ ಸೆಷನ್​​ ಈ ಕತೆಯನ್ನ ಹೇಳ್ತಿದೆ. ವೆಸ್ಟ್​ ಇಂಡೀಸ್​ನ ಬಿರು ಬಿಸಿಲಿಗೆ ಡೋಂಟ್​ಕೇರ್​​ ಎಂದಿರುವ ವಿರಾಟ್​ ಕೊಹ್ಲಿ 1 ಗಂಟೆಗೂ ಹೆಚ್ಚು ಕಾಲ ಕಠಿಣ ಅಭ್ಯಾಸ ನಡೆಸಿದ್ದಾರೆ. ಕೊಹ್ಲಿಯ ಅಗ್ರೆಸ್ಸಿವ್​ ಕಂಡು ತಂಡದ ಸಹ ಅಟಗಾರರೇ ಶಾಕ್​ ಆಗಿದ್ದಾರೆ.
ಬೂಮ್ರಾ, ಹಾರ್ದಿಕ್​​ ಬೌಲಿಂಗ್​ಗೆ ಬ್ಯಾಟಿಂಗ್​.!
ನಿಜ ಹೇಳಬೇಕಂದ್ರೆ, ನಿನ್ನೆ ಟೀಮ್​ ಇಂಡಿಯಾಗಿದ್ದು optional training ಸೆಷನ್​. ಆದ್ರೂ, ತಂಡದ ಎಲ್ಲ ಆಟಗಾರರು ಅಭ್ಯಾಸಕ್ಕೆ ಬಂದಿದ್ರು. ಆದ್ರೆ, ಉಳಿದೆಲ್ಲ ಆಟಗಾರರಿಗಿಂತ​ ಕೊಹ್ಲಿ ಹೆಚ್ಚು ಅಭ್ಯಾಸ ನಡೆಸಿದ್ದಾರೆ. ಆರಂಭದಲ್ಲಿ ಥ್ರೋಡೌನ್​ ಎಸೆತಗಳನ್ನ ಎದುರಿಸಿದ ವಿರಾಟ್​, ಬಳಿಕ ಜಸ್​ಪ್ರಿತ್​ ಬೂಮ್ರಾ, ಹಾರ್ದಿಕ್​ ಪಾಂಡ್ಯರ ಬೌಲಿಂಗ್​ ಫೇಸ್​ ಮಾಡಿದ್ದಾರೆ. ಆ ನಂತರದಲ್ಲಿ ಸ್ಪಿನ್ನರ್​ಗಳನ್ನ ಎದುರಿಸಿದ್ದು ಕುಲ್​​ದೀಪ್​ ಯಾದವ್​, ಅಕ್ಷರ್​ ಪಟೇಲ್​ರ ಬೌಲಿಂಗ್​ಗೆ ಸಮರ್ಥವಾಗಿ ಬ್ಯಾಟ್​ ಬೀಸಿದ್ದಾರೆ.
/newsfirstlive-kannada/media/post_attachments/wp-content/uploads/2024/01/Virat-Kohli_ODI.jpg)
ಸೂಪರ್​ 8 ಹಂತದಲ್ಲಿ ವಿರಾಟ ರೂಪ ದರ್ಶನ.?
ವಿರಾಟ್​ ಕೊಹ್ಲಿಯ ಪ್ರಾಕ್ಟಿಸ್​​ ಸೆಷನ್​​ ಹಲವು ಕಥೆಗಳನ್ನ ಹೇಳ್ತಿದೆ. ಸತತ ವೈಫಲ್ಯ ಕಂಡಿರೋ ಕೊಹ್ಲಿ, ಎಷ್ಟು ಫೇಸ್ಟ್ರೆಟ್​ ಆಗಿದ್ದಾರೆ ಅನ್ನೋದಕ್ಕೆ ಇದೇ ಬೆಸ್ಟ್​ ಎಕ್ಸಾಂಪಲ್​. ಸಖತ್​ ಸೀರಿಯಸ್​ ಆಗಿರುವ ವಿರಾಟ್​ ಕೊಹ್ಲಿಯಲ್ಲಿ ಮುಂದಿನ ಪಂದ್ಯಗಳಲ್ಲಿ ಪರ್ಫಾಮ್​ ಮಾಡಬೇಕು ಅನ್ನೋ ಹಸಿವು ಎದ್ದು ಕಾಣ್ತಿದೆ. ಇದನ್ನ ನೋಡಿದ್ರೆ, ಸೂಪರ್​ 8 ಹಂತದಲ್ಲಿ ಕೊಹ್ಲಿಯ ಬ್ಯಾಟ್​​ ಘರ್ಜಿಸಲಿದೆ ಅನ್ನೋ ಯೋಚನೆ ಯಾರಲ್ಲೂ ಬರದೆ ಇರೋಕೆ ಸಾಧ್ಯಾನೆ ಇಲ್ಲ.
ವಿರಾಟ್​ ಕೊಹ್ಲಿಯ ಜೊತೆ ಜೊತೆಗೆ ಯಶಸ್ವಿ ಜೈಸ್ವಾಲ್​ ಕೂಡ ನೆಟ್ಸ್​ನಲ್ಲಿ ಹೆಚ್ಚು ಹೊತ್ತು ಸ್ಪೆಂಡ್​ ಮಾಡಿದ್ದಾರೆ. ಇದು ಜೈಸ್ವಾಲ್​ ಪ್ಲೇಯಿಂಗ್​ ಇಲೆವೆನ್​ಗೆ ಎಂಟ್ರಿ ಕೊಡೋ ಸೂಚನೆಯನ್ನೂ ನೀಡಿದೆ. ಜೈಸ್ವಾಲ್​ ಓಪನರ್​​ ಆಗಿ ಕಣಕ್ಕಿಳಿದ್ರೆ, ಕೊಹ್ಲಿ ನಂಬರ್​​ 3 ಸ್ಲಾಟ್​ನಲ್ಲಿ ಬ್ಯಾಟ್​ ಬೀಸಲಿದ್ದಾರೆ. ಸೂಪರ್​ 8 ಹಂತಕ್ಕೆ ಭರ್ಜರಿ ಅಭ್ಯಾಸವನ್ನ ನಡೆಸಿರೋ ಕೊಹ್ಲಿಗೆ, ಖಾಯಂ ಸ್ಲಾಟ್​ನಲ್ಲಿ ಆಡೋ ಅವಕಾಶ ಸಿಕ್ಕಿದ್ರೆ​ ಆತ್ಮವಿಶ್ವಾಸವೂ ಹೆಚ್ಚಲಿದೆ. ವೀಕ್ನೆಸ್​ಗಳ ಮೇಲೆ ವರ್ಕೌಟ್​ ಮಾಡಿರೋ ಕೊಹ್ಲಿ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದ್ರೆ, ರಾಜನನ್ನ ಕಟ್ಟಿ ಹಾಕೋಕೆ ಯಾರಿಂದ ಸಾಧ್ಯನಾ.?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us