/newsfirstlive-kannada/media/post_attachments/wp-content/uploads/2024/12/KOHLI_BAT.jpg)
ಇಂಡಿಯನ್ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿಯ ದರ್ಬಾರ್ ಅಂತ್ಯ ಆಯಿತಾ, ಗುಡ್ ಬೈ ಹೇಳುವ ದಿನ ಸಮಿಪಿಸಿತಾ ಎನ್ನುವ ಚರ್ಚೆ ಎದ್ದಿದೆ. ಯಾಕಂದ್ರೆ, ಒಂದಲ್ಲ, ಎರಡಲ್ಲ ಬರೋಬ್ಬರಿ ಸತತ 14 ವರ್ಷಗಳಿಂದ ಇದ್ದ ಪಟ್ಟ ಇದೀಗ ಕಳಚಿ ಬಿದ್ದಿದೆ. ಕ್ರಿಕೆಟ್ ಲೋಕದಲ್ಲಿ ಕಿಂಗ್ ಕೊಹ್ಲಿಯ ಆಳ್ವಿಕೆ ಅಂತ್ಯ ಅನ್ನೋ ಸಂದೇಶವನ್ನ ಇದು ರವಾನಿಸಿದೆ.
ಕೊಹ್ಲಿ ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ಈ ಹೆಸರಿಗಿರುವ ಗತ್ತು, ಗೈರತ್ತೇ ಬೇರೆ. ಮಾಡ್ರನ್ ಕ್ರಿಕೆಟ್‌ನ ದೊರೆ, ಕಿಂಗ್, ರನ್ಮಷಿನ್, ರೆಕಾರ್ಡ್ ಬ್ರೇಕರ್, ಶತಕದ ಸರದಾರ. ಒಂದಾ, ಎರಡಾ ಕಳೆದೊಂದು ದಶಕದಲ್ಲಿ ಈ ಕೊಹ್ಲಿ ಮಾಡದ ಸಾಧನೆ ಇಲ್ಲ. ಮುರಿಯದ ದಾಖಲೆ ಇಲ್ಲ. ಆದ್ರೆ, ಕಳೆದ ಕೆಲ ವರ್ಷಗಳಿಂದ ಕೊಹ್ಲಿಯ ಬ್ಯಾಟಿಂಗ್ ಚಾರ್ಮ್ ಕಡಿಮೆ ಆಗಿದೆ. ಪ್ರೈಮ್ ಫಾರ್ಮ್ನಲ್ಲಿದ್ದಾಗ ಹಸಿದ ಹುಲಿಯಂತೆ ಘರ್ಜಿಸಿದ್ದ ಕೊಹ್ಲಿ, ಈಗ ರನ್ ಬರ ಕಾಡುತ್ತಿದೆ.
14 ವರ್ಷಗಳ ಬಳಿಕ ಕಳಚಿ ಬಿತ್ತಾ ಕೊಹ್ಲಿ ಪಟ್ಟ?
ಕ್ರಿಕೆಟ್ ಲೋಕದ ಸುಲ್ತಾನನಾಗಿ ಮರೆದಾಡಿದ್ದ ಕೊಹ್ಲಿಯ ಆಟ ಈ ವರ್ಷವಂತೂ ಹೀನಾಯ ಸ್ಥಿತಿ ತಲುಪಿದೆ. ಪರಿಣಾಮ 14 ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಪಟ್ಟವೂ ಕಳಚಿ ಬಿದ್ದಿದೆ. ಐಸಿಸಿ ಱಂಕಿಂಗ್ ಪಟ್ಟಿಯಲ್ಲಿ 2011ರಿಂದ ಈವರೆಗೆ ಒಂದಿಲ್ಲೊಂದು ಫಾರ್ಮೆಟ್ನಲ್ಲಿ ವಿರಾಟ್ ಕೊಹ್ಲಿ, ಭಾರತದ ಪರ ಟಾಪ್ ಬ್ಯಾಟ್ಸ್ಮನ್ ಆಗಿರುತ್ತಿದ್ದರು. ಆದ್ರೆ, ಈ ವರ್ಷ ಕೊಹ್ಲಿಯ ಹೆಸರು ಯಾವ ಫಾರ್ಮೆಟ್ನಲ್ಲಿಲ್ಲ.
ಕರಿಯರ್ನ ಕರಾಳ ವರ್ಷಗಳಲ್ಲೂ ಕೊಹ್ಲಿ ರಾಜ.!
2020, 2021, 2022... ವಿರಾಟ್ ಕೊಹ್ಲಿ ಕರಿಯರ್ನ ಕರಾಳ ದಿನಗಳು. ಈ ಮೂರು ವರ್ಷಗಳಲ್ಲಿ ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ.. ಈ ಸಮಯದಲ್ಲಿ ಸೆಂಚುರಿ ಸ್ಟಾರ್ಗೆ ಶತಕದ ಬರ ಮಾತ್ರವಲ್ಲ.. ರನ್ ಬರವೂ ಕಾಡಿತ್ತು. ಇನ್ಕನ್ಸಿಸ್ಟೆಂಟ್ ಫಾರ್ಮ್ ಕೊಹ್ಲಿಯನ್ನ ಕಾಡಿತ್ತು. ಆದ್ರೆ, ಆ ಸಂಕಷ್ಟದ ಸಮಯದಲ್ಲೂ ಱಂಕಿಂಗ್ನಲ್ಲಿ ಒಂದಲ್ಲ ಒಂದು ಫಾರ್ಮೆಟ್ನಲ್ಲಿ ಟೀಮ್ ಇಂಡಿಯಾದ ನಂಬರ್ 1 ಬ್ಯಾಟರ್ ಆಗೇ ಕಿಂಗ್ ಕೊಹ್ಲಿ ಉಳಿದಿದ್ದರು. 2020ರಲ್ಲಿ ಮೂರೂ ಫಾರ್ಮೆಟ್ಗೆ ಕಿಂಗ್ ಆಗಿದ್ದ ಕೊಹ್ಲಿ, 2021, 2022ರಲ್ಲಿ ಏಕದಿನ ಫಾರ್ಮೆಟ್ನಲ್ಲಿ ಟಾಪ್ ರೇಟೆಡ್ ಇಂಡಿಯನ್ ಬ್ಯಾಟರ್ ಎನಿಸಿದ್ರು.
2024 ಕರಾಳ ವರ್ಷ.! ಕೊಹ್ಲಿಯ ಕಳಪೆಯಾಟ.!
ಕೊಹ್ಲಿ ಕರಿಯರ್ನ ಅಸಲಿ ಕರಾಳ ವರ್ಷ 2024.. ಈ ವರ್ಷದಲ್ಲಿ ವಿರಾಟ್ ದೇಶ-ವಿದೇಶ ಎರಡೂ ಕಡೆ ವೈಫಲ್ಯ ಅನುಭವಿಸಿದ್ದಾರೆ. 3 ಫಾರ್ಮೆಟ್ನಲ್ಲಿ ರನ್ಗಳಿಸಲು ಪರದಾಡಿದ್ದಾರೆ. ಸೆಂಚುರಿ ಸರದಾರ ಬ್ಯಾಟ್ನಿಂದ ಈ ವರ್ಷ ಬಂದಿರೋದು ಒಂದೇ ಒಂದು ಶತಕ ಅಂದ್ರೆ ನೀವು ನಂಬಲೇ ಬೇಕು. ಅಷ್ಟು ಕಳಪೆಯಾಗಿ ಕೊಹ್ಲಿಯ ಆಟ.
2024ರಲ್ಲಿ ಕೊಹ್ಲಿಯ ಕಳಪೆಯಾಟ.!
ಈ ವರ್ಷದಲ್ಲಿ ವಿರಾಟ್ ಕೊಹ್ಲಿ 3 ಫಾರ್ಮೆಟ್ ಸೇರಿ ಒಟ್ಟು 30 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಕೇವಲ 21.92ರ ಕಳಪೆ ಸರಾಸರಿಯಲ್ಲಿ 614 ರನ್ಗಳಿಸಿದ್ದಾರೆ. 1 ಶತಕ, 2 ಅರ್ಧಶತಕ ಸಿಡಿಸಿದ್ದಾರಷ್ಟೇ.
ಇದನ್ನೂ ಓದಿ: KL ರಾಹುಲ್ ಪಾಲಿಗೆ ಬಾಕ್ಸಿಂಗ್ ‘ಡೇ’ ಟೆಸ್ಟ್ ಸ್ಪೆಷಲ್.. ಧೋನಿಯಿಂದ ಇದನ್ನ ಪಡೆದಿದ್ದ ಕನ್ನಡಿಗ
ಸದ್ಯ ನಡೀತಾ ಇರೋ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯಲ್ಲೂ ವಿರಾಟ್ ಕೊಹ್ಲಿಯ ಆಟ ಅಷ್ಟಕಷ್ಟೇ. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದು ಬಿಟ್ರೆ, ಉಳಿದ 2 ಪಂದ್ಯಗಳಲ್ಲಿ ತಿಣುಕಾಟ ನಡೆಸಿದ್ದಾರೆ. ಈ ವೈಫಲ್ಯದ ಪರಿಣಾಮ, ಱಂಕಿಂಗ್ನಲ್ಲಿ ಗಣನೀಯ ಕುಸಿತ ಕಂಡಿದ್ದಾರೆ.
2011ರಿಂದ ಒಂದಿಲ್ಲೊಂದು ಫಾರ್ಮೆಟ್ನಲ್ಲಿ ಭಾರತದ ಪರ ನಂಬರ್ ಒನ್ ಆಗಿ ಮೆರೆದಾಡಿದ್ದ ವಿರಾಟ್, 14 ವರ್ಷಗಳ ಬಳಿಕ ಸಿಂಹಾಸನದಿಂದ ಇಳಿದಿದ್ದಾರೆ. ಇದನ್ನ ಕೊಹ್ಲಿ ಎರಾ ಅಂತ್ಯ ಎಂದೇ ವ್ಯಾಖ್ಯಾನಿಸಲಾಗ್ತಿದೆ. 2025ರಲ್ಲಾದ್ರೂ ಕೊಹ್ಲಿ ಹಳೆ ಖದರ್ಗೆ ಮರಳ್ತಾರಾ.? ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ