ವಿರಾಟ್​​ ಬ್ಯಾಟಿಂಗ್​ ವೈಫಲ್ಯಕ್ಕೆ ಕಾರಣವೇನು.. ಕೊಹ್ಲಿ ಬಗ್ಗೆ ಮಾಜಿ ಕ್ರಿಕೆಟರ್​ ಶಾಕಿಂಗ್ ಹೇಳಿಕೆ!

author-image
Bheemappa
Updated On
ವಿರಾಟ್​​ ಬ್ಯಾಟಿಂಗ್​ ವೈಫಲ್ಯಕ್ಕೆ ಕಾರಣವೇನು.. ಕೊಹ್ಲಿ ಬಗ್ಗೆ ಮಾಜಿ ಕ್ರಿಕೆಟರ್​ ಶಾಕಿಂಗ್ ಹೇಳಿಕೆ!
Advertisment
  • ಸರಣಿ ಆರಂಭಕ್ಕೂ ಮುನ್ನ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಸಿದ್ದ ವಿರಾಟ್
  • ವಿರಾಟ್ ಕೊಹ್ಲಿ ಬ್ಯಾಟಿಂಗ್​ ವೈಫಲ್ಯ, ಒತ್ತಡದಲ್ಲಿದ್ದ ಸ್ಟಾರ್ ಕ್ರಿಕೆಟರ್
  • ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಒಟ್ಟು ಎಷ್ಟು ರನ್​ ಗಳಿಸಿದರು?

ಶ್ರೀಲಂಕಾ ಎದುರಿನ ಸರಣಿಯಲ್ಲಿ ಟೀಮ್ ಇಂಡಿಯಾ ಸೋತಾಗಿದೆ. ಹೀನಾಯ ಮುಖಭಂಗ ಅನುಭವಿಸಿದೆ. ಈ ಸರಣಿ ಆರಂಭಕ್ಕೂ ಮುನ್ನ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಹಾಕಿದ್ದ ಕಿಂಗ್ ಕೊಹ್ಲಿ ಠುಸ್​ ಪಟಾಕಿಯಾದ್ರು. ಆರಂಭಕ್ಕೂ ಮುನ್ನ ಕಿಂಗ್ ಕೊಹ್ಲಿಯನ್ನ ಕೊಲೊಂಬೊ ಕಿಂಗ್​ ಅಂತೆಲ್ಲ ಗುಣಗಾನ ಮಾಡಲಾಯ್ತು. ಆದ್ರೆ, ಈಗ ಏನಾಯ್ತು ಕೊಹ್ಲಿಗೆ ಎಂಬ ಪ್ರಶ್ನೆ ಎದುರಾಗಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ಓದಲು ಕನಸು ಕಾಣುವ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​.. ಬೆಂಗಳೂರಲ್ಲೇ ಇದೆ ಅವಕಾಶ; ಹೇಗೆ?

ವಿರಾಟ್​ ಕೊಹ್ಲಿಗೆ ಏನಾಗಿದೆ..? ಇದು ಕ್ರಿಕೆಟ್​​ ಅಭಿಮಾನಿಗಳನ್ನ ಕಾಡುತ್ತಿರುವ ಪ್ರಶ್ನೆ. ಇದಕ್ಕೆ ಕಾರಣ ಬ್ಯಾಟಿಂಗ್ ಕಿಂಗ್​ ವಿರಾಟ್, ಶ್ರೀಲಂಕಾ ಎದುರಿನ ಏಕದಿನ ಪಂದ್ಯಗಳಲ್ಲಿ ನೀಡಿದ ಪರ್ಫಾಮೆನ್ಸ್​.

ಇದನ್ನೂ ಓದಿ: ಅಂದು ಮೇರಿ ಕೋಮ್​​ಗೂ ಎದುರಾಗಿತ್ತು ಅನರ್ಹ ಭೀತಿ.. 4 ಗಂಟೆಯಲ್ಲಿ 2 kg ತೂಕ ಇಳಿಸಿದ್ದ ಛಲಗಾರ್ತಿ..!

publive-image

ಟಿ20 ವಿಶ್ವಕಪ್​ನ ಫೈನಲ್​ನಲ್ಲಿ ಮಿಂಚಿದ್ದ ವಿರಾಟ್, ಫೇವರಿಟ್ ಗ್ರೌಂಡ್ ಕೊಲೊಂಬೊನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸ್ತಾರೆ ಅನ್ನೋ ನಿರೀಕ್ಷೆ ಇತ್ತು. ವಿರಾಟ್​ ಕೊಹ್ಲಿ ಫ್ಯಾನ್ಸ್​ ಅಂತೂ ಶತಕದ ಮೇಲೆ ಶತಕ ಸಿಡಿಸ್ತಾರೆ ಅನ್ನೋ ಬೆಟ್ಟದಷ್ಟು ನಿರೀಕ್ಷೆ ಹೊಂದಿದ್ದರು. ಆದ್ರೆ, ಅಭಿಮಾನಿಗಳ ಆ ನಿರೀಕ್ಷೆ ಹುಸಿಯಾಗಿದೆ. ವಿರಾಟ್ ವೈಫಲ್ಯದ ಪರಿಗೆ ಇದು ನಿಜವಾಗ್ಲೂ ಕಿಂಗ್ ಕೊಹ್ಲಿ ಆಟನಾ ಅನ್ನೋ ಅನುಮಾನ ಹುಟ್ಟಿಸಿದೆ.

3 ಪಂದ್ಯವೂ ಎಲ್​​ಬಿಡಬ್ಲೂ!

24,14,20.. ಇದು ಯಾವುದೋ ಹೆಲ್ಪ್​​​ಲೈನ್​ ನಂಬರ್​ ಅಲ್ಲ. ಶ್ರೀಲಂಕಾ ಎದುರಿನ ಏಕದಿನ ಸರಣಿಯ 3 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ, ಗಳಿಸಿದ ರನ್. ಕೊಲೊಂಬೊದಲ್ಲಿ ನಾನೇ ವೀರ, ಶೂರ ಅನ್ನೋ ರೇಂಜ್​ನಲ್ಲಿ ಅಖಾಡಕ್ಕೆ ಧುಮುಕಿ ಮುಖಭಂಗ ಅನುಭವಿಸಿದ ಕೊಹ್ಲಿ ಕಳಪೆಯಾಟದ ಪ್ರತಿಬಿಂಬ.

ಕೊಲೊಂಬೊದಲ್ಲಿ ಸಾಲಿಡ್ ಟ್ರ್ಯಾಕ್ ರೆಕಾರ್ಡ್​ ಹೊಂದಿದ್ದ ವಿರಾಟ್, ಈ ಸಲನೂ ಅದನ್ನೇ ರಿಪೀಟ್ ಮಾಡ್ತಾರೆ ಅನ್ನೋ ಎಕ್ಸ್​ಪೆಕ್ಟೇಷನ್ ಇತ್ತು. ಆದ್ರೆ, ಮೊದಲ ಪಂದ್ಯದಲ್ಲಿ ತಿಣುಕಾಡಿ 24 ರನ್​ ಗಳಿಸಿದ್ದಾಗ ಹಸರಂಗಗೆ ವಿಕೆಟ್ ಒಪ್ಪಿಸಿದ ಕೊಹ್ಲಿ, 2ನೇ ಪಂದ್ಯದಲ್ಲಿ 19 ಎಸೆತ ಎದುರಿಸಿದ ವಿರಾಟ್ 14 ರನ್​ ಗಳಿಸಿದ್ದಾಗ ಯಂಗ್ ವಂಡರ್ಸೆಗೆ ಬಲಿಯಾದರು.

2 ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದ ವಿರಾಟ್, ಮೂರನೇ ಮ್ಯಾಚ್ ಆದ್ರೂ, ಅಬ್ಬರಿಸಲ್ವಾ..? ಸ್ಪಿನ್​​ಗೆ ಟಕ್ಕರ್ ನೀಡದೆ ಇರ್ತಾರಾ.? ಅನ್ನೋ ಭರವಸೆ ಫ್ಯಾನ್ಸ್​ಗೆ ಇದ್ದೇ ಇತ್ತು. ಆದ್ರೆ, 3ನೇ ಬಾರಿ ವಿರಾಟ್, 20 ರನ್​ಗೆ ಔಟಾದರು. ಈ ಸಲನೂ ವಿರಾಟ್​ ವಿಕೆಟ್ ಒಪ್ಪಿಸಿದ್ದು ವೆಲ್ಲಲೆಗೆ ಗೆ, ಅದು ಕೂಡ ಸೇಮ್​ ಟು ಸೇಮ್​.. ಹಿಂದಿನ 2 ಬಾರಿಯಂತೆ ಎಲ್​ಬಿ. ಕೊಹ್ಲಿಯ ಈ ಶೋಚನೀಯ ವೈಫಲ್ಯವೇ ಕೊಹ್ಲಿಗೆ ಏನಾಗಿದೆ ಎಂಬ ಪ್ರಶ್ನೆ ಉದ್ಬವಿಸುವಂತೆ ಮಾಡಿದೆ.

ಕೊಹ್ಲಿ ವೈಫಲ್ಯ ಸೀಕ್ರೆಟ್‌ ಬಿಚ್ಚಿಟ್ಟ ಪಾಕ್‌ ಕ್ರಿಕೆಟಿಗ..!

ಕೊಲಂಬೊ ಪಿಚ್ ಸ್ಲೋ ಇತ್ತು. ಬ್ಯಾಟರ್​ಗಳಿಗೆ ಬಿಗ್ ಚಾಲೆಂಜ್ ಆಗಿ ಇತ್ತು. ಆದ್ರೆ. ಇಂತಹ ಟೆಸ್ಟಿಂಗ್ ಟ್ರ್ಯಾಕ್​​ಗಳಲ್ಲಿ ವಿರಾಟ್​, ಈ ಹಿಂದೆ ಬ್ಯಾಟ್ ಝಳಪಿಸಿದ್ದಿದೆ. ಆದ್ರೆ, ಈ ಸೀರಿಸ್​ನಲ್ಲಿ ವಿರಾಟ್​ ಕೊಹ್ಲಿ ಔಟಾದ ರೀತಿ ನೋಡಿದ್ರೆ, ಲಂಕಾ ಸರಣಿ ಸಿರೀಯಸ್ ಆಗಿ ತೆಗೆದುಕೊಂಡಿದ್ರಾ..? ಇದಕ್ಕಾಗಿ ಪೂರ್ವ ತಯಾರಿಯನ್ನ ಮಾಡಿದ್ರಾ ಅನ್ನೋ ಅನುಮಾನ ಉದ್ಬವಿಸದ ಇರಲ್ಲ.

ವಿರಾಟ್‌ ಕೊಹ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌. ವಿಶ್ವದ ನಂ.1 ಬ್ಯಾಟ್ಸ್‌ಮನ್‌. ಆದರೆ, ವಿರಾಟ್​​ ಕೊಹ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದಿದ್ದಾರೆ. ಅಯ್ಯರ್ & ದುಬೆ ಆಗಿದ್ದರೆ ಅರ್ಥವಾಗುವಂತಹದ್ದಾಗಿದೆ. ಆದ್ರೆ, ಇದು ವಿರಾಟ್ ಕೊಹ್ಲಿಗೆ ಸಂಭವಿಸಿದೆ. ಇದರರ್ಥ ಸರಿಯಾಗಿ ಅಭ್ಯಾಸ ನಡೆಸಿಲ್ಲ.

ಬಸಿತ್ ಅಲಿ, ಪಾಕ್ ಮಾಜಿ ಕ್ರಿಕೆಟರ್

publive-image

ಪಾಕ್ ಮಾಜಿ ಕ್ರಿಕೆಟರ್​ ಹೇಳ್ತಿರುವ ಈ ಮಾತು ನಿಜಕ್ಕೂ ಒಪ್ಪುವಂತದ್ದೇ ಆಗಿದೆ. ಯಾಕಂದ್ರೆ, ಟಿ20 ವಿಶ್ವಕಪ್​ ಫೈನಲ್​ ಬೆನ್ನಲ್ಲೇ ವಿರಾಟ್, ಲಂಡನ್​ಗೆ ತೆರಳಿದ್ದರು. ಲಂಕಾ ಸರಣಿಗೆ ಆಗಮಿಸುವ ಹಂಬಲವೂ ವಿರಾಟ್​ಗೆ ಇರಲಿಲ್ಲ. ಆದ್ರೆ, ಗಂಭೀರ್​​​​​​​​​​​​​​​​​​​​​​​​​​​​​​​​ ಒತ್ತಡಕ್ಕೆ ಮಣಿದು ನೇರವಾಗಿ ಶ್ರೀಲಂಕಾ ಸರಣಿಗೆ ಹಾಜರಾದ್ರು. ಪಂದ್ಯಕ್ಕೂ ಮುನ್ನ 2 ದಿನ ಅಭ್ಯಾಸ ನಡೆಸಿದ್ರಷ್ಟೇ.

ಇದನ್ನೂ ಓದಿ: ಶ್ರೀ ಕ್ಷೇತ್ರಕ್ಕೆ ಹೋಗಿ ಬಂದ ಬೆನ್ನಲ್ಲೇ ಬಿಗ್​​ ಅಪ್​ಡೇಟ್ಸ್​​ ಕೊಟ್ಟ ರಾಕಿಂಗ್ ಸ್ಟಾರ್ ಯಶ್

ಇದು ವಿರಾಟ್​ ಕೊಹ್ಲಿ ವೈಫಲ್ಯ ಕಂಡ ಸರಣಿ ಮಾತ್ರವೇ ಅಲ್ಲ. ವಿರಾಟ್​ ಕೊಹ್ಲಿ ವಿಕ್ನೇಸ್​ನ ಮತ್ತಷ್ಟು ಎಕ್ಸ್​ಫೋಸ್ ಮಾಡಿದ ಸರಣಿ ಕೂಡ ಹೌದು. ಕೊಹ್ಲಿಯ, ಸ್ಪಿನ್ ವಿಕ್ನೇಸ್ ಮತ್ತೊಮ್ಮೆ ಬಟಾಬಯಲಾಗಿದೆ. ಈ ವಿಕ್ನೇಸ್​ನ ಶೀಘ್ರವೇ ಮೆಟ್ಟಿ ನಿಂತರಷ್ಟೇ ಕೊಹ್ಲಿಗೆ ಉಳಿಗಾಲ.. ಇಲ್ಲಿದಿದ್ರೆ, ಯುವ ಪಡೆಗೆ ಜಾಗ ಬಿಟ್ಟು ಕೊಡಬೇಕಾದ ಕಾಲ ಶೀಘ್ರವೇ ಬರಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment