/newsfirstlive-kannada/media/post_attachments/wp-content/uploads/2025/04/Virat_Kohli_50.jpg)
ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದಲ್ಲಿ ಅತ್ಯುನ್ನತ ಸ್ಥಾನ ಪಡೆದಿರುವ ಏಕೈಕ ಆಟಗಾರ ಎಂದು ಹೇಳಬಹುದು. ಏಕೆಂದರೆ ಬ್ಯಾಟಿಂಗ್ನಲ್ಲಿ ಅವರು ಮಾಡದ ಸಾಧನೆ ಯಾವುದು ಇಲ್ಲ. ಕ್ರಿಕೆಟ್ನಲ್ಲಿ ಎಲ್ಲ ದಾಖಲೆಗಳಲ್ಲಿ ಕೊಹ್ಲಿ ಹೆಸರು ಇದ್ದೇ ಇರುತ್ತದೆ. ಸದ್ಯ ಇದೀಗ ಈ ರೆಕಾರ್ಡ್ಸ್ಗೆ ಮತ್ತೊಂದು ಸೇರಿಕೊಂಡಿದೆ. ಅದೇ ಟಿ20 ಪಂದ್ಯಗಳಲ್ಲಿ ಕಿಂಗ್ ಕೊಹ್ಲಿ 100 ಬಾರಿ ಹಾಫ್ಸೆಂಚುರಿಗಳನ್ನು ಬಾರಿಸಿದ್ದಾರೆ.
ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 100ನೇ ಟಿ20 ಅರ್ಧಶತಕ ಗಳಿಸಿದರು. ಈ ಮಹತ್ತರ ಮೈಲಿಗಲ್ಲು ತಲುಪಿದ ಭಾರತದ ಮೊದಲ ಆಟಗಾರ ಹಾಗೂ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎನ್ನುವ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಇದೀಗ ಪಾತ್ರರಾಗಿದ್ದಾರೆ. ಪ್ರಥಮ ಸ್ಥಾನಕ್ಕೆ ಹೋಗಬೇಕು ಎಂದರೆ ಕೊಹ್ಲಿ ಇನ್ನು 9 ಅರ್ಧಶತಕ ಗಳಿಸಬೇಕಾಗಿದೆ.
ಇದನ್ನೂ ಓದಿ:RCB ಓಪನರ್ ವಿಸ್ಫೋಟಕ ಬ್ಯಾಟಿಂಗ್.. ರಾಯಲ್ಸ್ ವಿರುದ್ಧ ಫಿಲಿಪ್ ಸಾಲ್ಟ್ ಘರ್ಜನೆ
ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 39 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ನಿಂದ ಅರ್ಧಶತಕ ಪೂರೈಸಿದರು. ಇದರಿಂದ ತಮ್ಮ ವೃತ್ತಿ ಜೀವನದಲ್ಲಿ 100ನೇ ಹಾಫ್ಸೆಂಚುರಿ ಗಳಿಸಿದರು. ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅವರು ಟಿ20 ಪಂದ್ಯಗಳಲ್ಲಿ ಒಟ್ಟು 108 ಅರ್ಧಶತಕಗಳನ್ನು ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಬಾಬರ್ ಅಜಮ್ 90 ಅರ್ಧಶತಕಗಳನ್ನು ಗಳಿಸಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಟಿ20 ಅಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ವಿಶ್ವದ ಬ್ಯಾಟ್ಸ್ಮನ್ಗಳು
ಆಸ್ಟ್ರೇಲಿಯಾದ ಡೇವಿಡ್ ವಾರ್ನರ್- 108
ಭಾರತದ ವಿರಾಟ್ ಕೊಹ್ಲಿ- 100
ಪಾಕಿಸ್ತಾನದ ಬಾಬರ್ ಅಜಮ್- 90
ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್- 88
ಇಂಗ್ಲೆಂಡ್ನ ಜೋಶ್ ಬಟ್ಲರ್- 86
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ