ವಿರಾಟ್ ಕೊಹ್ಲಿ ಬಿಟ್ಟರೇ ಮೆಲ್ಬರ್ನ್​ನಲ್ಲಿ ರೋಹಿತ್, ರಾಹುಲ್, ಪಂತ್ ಅನ್​ಲಕ್ಕಿ.. ಹೇಗಿದೆ ಸಾಧನೆ?

author-image
Bheemappa
Updated On
ಭಾರತ WTC ಫೈನಲ್ ಪ್ರವೇಶಕ್ಕೆ ಒಂದೇ ದಾರಿ; ಸಮೀಕರಣ ಏನ್ ಹೇಳ್ತಿದೆ..?
Advertisment
  • ಗಿಲ್ ಹಾಗೂ ಜೈಸ್ವಾಲ್ ಈ ಇಬ್ಬರಿಗೂ 4ನೇ ಟೆಸ್ಟ್ ಅಗ್ನಿ ಪರೀಕ್ಷೆ
  • ಟೆಸ್ಟ್ ಪಂದ್ಯದ ಹಿನ್ನಡೆಗೆ ಈ ಟಾಪ್ ಸಿಕ್ಸ್​​ ಬ್ಯಾಟರ್​ಗಳು​ ಕಾರಣ
  • ವಿರಾಟ್​ ಕೊಹ್ಲಿ ಬ್ಯಾಟಿಂಗ್ ಆಸಿಸ್​ನ ಮೆಲ್ಬರ್ನ್​ನಲ್ಲಿ ಹೇಗಿದೆ..?

ಆಸ್ಟ್ರೇಲಿಯಾದ ಮೆಲ್ಬರ್ನ್​ನಲ್ಲಿ ನಡೆಯಲಿರುವ ಬಾಕ್ಸಿಂಗ್​ ಡೇ ಟೆಸ್ಟ್ ಪಂದ್ಯ, ಟೀಮ್ ಇಂಡಿಯಾ ಪಾಲಿಗೆ ಅತ್ಯಂತ ಮಹತ್ವದ ಪಂದ್ಯ. ಈ ಪಂದ್ಯ ಗೆದ್ರೆ ರೋಹಿತ್ ಶರ್ಮಾ ಪಡೆಗೆ, ಜೀವ ಬಂದಂತಾಗುತ್ತದೆ. ತಂಡದ ಪ್ರಮುಖ ಆಟಗಾರರ ಟೆಸ್ಟ್ ಕರಿಯರ್ ಕೂಡ ಉಳಿಯುತ್ತದೆ. ಟೀಮ್ ಇಂಡಿಯಾ ಈ ಪಂದ್ಯವನ್ನ ಗೆಲ್ಲಬೇಕು ಅಂದ್ರೆ, ಕಿಂಗ್ ಕೊಹ್ಲಿ ಅಬ್ಬರಿಸಲೇಬೇಕು.

ಬಾಕ್ಸಿಂಗ್ ಡೇ ಟೆಸ್ಟ್​.. ಇದು ಕೇವಲ ಪಂದ್ಯವಲ್ಲ, ಟೀಮ್ ಇಂಡಿಯಾಕ್ಕೆ ಅತ್ಯಂತ ಪ್ರತಿಷ್ಠೆಯ ಕದನ. ಈ ಟೆಸ್ಟ್ ಗೆಲ್ಲಲು ರೋಹಿತ್ ಪಡೆ, ಶಕ್ತಿ ಮೀರಿ ಪ್ರಯತ್ನಿಸಲಿದೆ. ಯಾಕಂದ್ರೆ ಈ ಪಂದ್ಯದಲ್ಲಿ, ಟೀಮ್ ಇಂಡಿಯಾ ವರ್ಲ್ಡ್ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​​​ ಭವಿಷ್ಯ ಮಾತ್ರ ಅಡಗಿಲ್ಲ. ಆಟಗಾರರಿಗೂ ಈ ಪಂದ್ಯ, ಅಳಿವು ಉಳಿನ ಪ್ರಶ್ನೆಯಾಗಿದೆ. ಈ ಪಂದ್ಯದಲ್ಲಿ ಗೆದ್ರೆ ಸೇಫ್, ಇಲ್ಲದಿದ್ದರೆ ತಂಡಕ್ಕೆ ಸರ್ಜರಿ ಆಗೋದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾಗಿ ತಂಡ ಈಗ ಕಿಂಗ್ ಕೊಹ್ಲಿಯನ್ನೇ ನಂಬಿಕೊಂಡಿದೆ.

publive-image

ಮೆಲ್ಬರ್ನ್​​ನಲ್ಲಿ 'ವಿರಾಟ್' ಕೊಹ್ಲಿ ಆರ್ಭಟ..!

ಮೆಲ್ಬರ್ನ್​ನಲ್ಲಿ ಕಿಂಗ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ನಡೆಸಿದ್ದಾರೆ. ಅತ್ಯುತಮ ದಾಖಲೆ ಹೊಂದಿದ್ದಾರೆ. ಆಡಿರುವ 3 ಪಂದ್ಯಗಳಲ್ಲಿ ವಿರಾಟ್, 1 ಶತಕ, 2 ಅರ್ಧಶತಕಗಳ ನೆರವಿನಿಂದ 316 ರನ್​ಗಳಿಸಿದ್ದಾರೆ. ಕೊಹ್ಲಿಯ ಬ್ಯಾಟಿಂಗ್ ಌವರೇಜ್ 53. ಕೊಹ್ಲಿಯ ಈ ಆಟದಿಂದಲೇ ತಂಡ, ಎಂಸಿಜಿಯಲ್ಲಿ ಕೊಹ್ಲಿ ಅಬ್ಬರವನ್ನ ನಿರೀಕ್ಷಿಸುತ್ತಿರೋದು.

ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಪಂತ್ ಪರಾಕ್ರಮ ನಡೆಯುತ್ತಾ..?

ಡೈನಾಮಿಕ್ ಬ್ಯಾಟ್ಸ್​ಮನ್ ರಿಷಬ್ ಪಂತ್, ಸದ್ಯ ಆಸಿಸ್​​ ಪ್ರವಾಸದಲ್ಲಿ ಸೈಲೆಂಟ್ ಆಗಿದ್ದಾರೆ. ಬಾಕ್ಸಿಂಗ್ ಡೇ ಟೆಸ್ಟ್​ ಪಂದ್ಯದಲ್ಲಿ ಪಂತ್ ಬ್ಯಾಟಿಂಗ್​ನಲ್ಲಿ ಪಂಚ್ ಕೊಟ್ರೆ, ಎದುರಾಳಿಗಳನ್ನ ಸೋಲಿಸೋದು ಕಷ್ಟವೇನಲ್ಲ. ಆದ್ರೆ ಮೆಲ್ಬರ್ನ್​ ಕ್ರಿಕೆಟ್ ಗ್ರೌಂಡ್​ನಲ್ಲಿ ಪಂತ್, 4 ಇನ್ನಿಂಗ್ಸ್​ ಆಡಿ 101 ರನ್​ಗಳಿಸಿದ್ದಾರೆ. ಒಂದೇ ಒಂದು ಫಿಫ್ಟಿ ಸಹ ಸ್ಕೋರ್ ಮಾಡಿಲ್ಲ. ಇದೇ ಈಗ ಟೀಮ್​ ಮ್ಯಾನೇಜ್ಮೆಂಟ್​ಗೆ ದೊಡ್ಡ ಚಿಂತೆಯಾಗಿದೆ.

MCGಯಲ್ಲಿ ರೋಹಿತ್ ಶರ್ಮಾ 'ಹಿಟ್' ಆಗ್ಲಿಲ್ಲ..!

ಕ್ಯಾಪ್ಟನ್ ರೋಹಿತ್ ಶರ್ಮಾಗೆ MCG ಟೆಸ್ಟ್ ಡು ಆರ್ ಡೈ ಪಂದ್ಯವಾಗಲಿದೆ. ರೋಹಿತ್ ತಂಡವನ್ನ ಗೆಲ್ಲಿಸಬೇಕು..! ಜೊತೆಗೆ ತಾನೂ ಬ್ಯಾಟಿಂಗ್​ನಲ್ಲಿ ಮಿಂಚಬೇಕು. ರೋಹಿತ್ ಈ ಪಂದ್ಯದಲ್ಲಿ ಫೇಲ್ ಆಗಿದ್ದೇ ಆದ್ರೆ, ತನ್ನ ಟೆಸ್ಟ್ ಕರಿಯರ್​ಗೆ ಫುಲ್ ಸ್ಟಾಪ್ ಬೀಳುವ ಸಾಧ್ಯತೆ ಇದೆ. ಹಾಗಾಗಿ ರೋಹಿತ್ MCGಯಲ್ಲಿ ಹಿಟ್ ಆಗಲೇಬೇಕು. ಈ ಗ್ರೌಂಡ್​ನಲ್ಲಿ ರೋಹಿತ್ 1 ಟೆಸ್ಟ್ ಪಂದ್ಯ ಆಡಿ, ಒಂದು ಅರ್ಧಶತಕ ಸಹ ಸಿಡಿಸಿದ್ದಾರೆ.

ಕೆ.ಎಲ್.ರಾಹುಲ್ ​​ರನ್​ಗಳಿಕೆ ಜಸ್ಟ್ ಸಿಂಗಲ್ ಡಿಜಿಟ್..!

ಕರ್ನಾಟಕ ಬ್ಯಾಟ್ಸ್​ಮನ್​ ಕೆ.ಎಲ್.ರಾಹುಲ್, ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ನಿಜ. ಆದ್ರೆ ಮೆಲ್ಬರ್ನ್​​​ ಗ್ರೌಂಡ್​​, ರಾಹುಲ್ ಪಾಲಿಗೆ ಅನ್​ಲಕ್ಕಿ. ಈ ಗ್ರೌಂಡ್​ನಲ್ಲಿ ರಾಹುಲ್ ಆಡಿರುವ ಎರಡೂ ಇನ್ನಿಂಗ್ಸ್​ಗಳಲ್ಲೂ ಡಬಲ್ ಡಿಜಿಟ್ ರನ್ ಹೊಡೆದಿಲ್ಲ. ರಾಹುಲ್ ಗಳಿಸಿರೋದು ಜಸ್ಟ್ 4 ರನ್ ಮಾತ್ರ.

ಇದನ್ನೂ ಓದಿ:20 ಸಿಕ್ಸ್,​ ಕೇವಲ 97 ಎಸೆತಗಳಲ್ಲಿ ಡಬಲ್​ ಹಂಡ್ರೆಡ್​​.. ಡೆಲ್ಲಿ ಪ್ಲೇಯರ್​ ಬ್ಯಾಟಿಂಗ್​​ಗೆ ಕ್ರಿಕೆಟ್ ಲೋಕ ಫಿದಾ

publive-image

ಗಿಲ್, ಜೈಸ್ವಾಲ್​ಗೆ MCG ಟೆಸ್ಟ್ ಅಗ್ನಿಪರೀಕ್ಷೆ..!

ಶಭ್ಮನ್ ಗಿಲ್ MCGಯಲ್ಲಿ 2 ಇನ್ನಿಂಗ್ಸ್ ಆಡಿ 80 ರನ್​ ಸಿಡಿಸಿದ್ದಾರೆ. ಆದ್ರೆ ಯಶಸ್ವಿ ಜೈಸ್ವಾಲ್, ಮೆಲ್ಬರ್ನ್​ನಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯ ಆಡಿಲ್ಲ. ಗಿಲ್ ಮತ್ತು ಜೈಸ್ವಾಲ್ ಇಬ್ಬರಿಗೂ ಈ ಟೆಸ್ಟ್ ಅಗ್ನಿ ಪರೀಕ್ಷೆ. ಇಬ್ಬರ ಮೇಲೆ ಹೆಚ್ಚಿದೆ ನಿರೀಕ್ಷೆ. ಸೀನಿಯರ್ ಪ್ಲೇಯರ್ಸ್​​ ರನ್​ ಬರ ಎದುರಿಸುತ್ತಿರುವಾಗ, ಗಿಲ್-ಜೈಸ್ವಾಲ್ ಪುಟಿದೇಳಬೇಕು.

ಅಡಿಲೇಡ್ ಟೆಸ್ಟ್ ಸೋಲು ಮತ್ತು ಬ್ರಿಸ್ಬೇನ್ ಟೆಸ್ಟ್ ಪಂದ್ಯದ ಹಿನ್ನಡೆಗೆ, ಟೀಮ್ ಇಂಡಿಯಾದ ಟಾಪ್ ಸಿಕ್ಸ್​​ ಬ್ಯಾಟರ್ಸ್​ ಕಾರಣ. ಹಾಗಾಗಿ ಮೆಲ್ಬರ್ನ್​ಲ್ಲಿ ಬ್ಯಾಟ್ಸ್​ಮನ್ ಉತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ಮಾಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment