/newsfirstlive-kannada/media/post_attachments/wp-content/uploads/2025/04/VIRAT_KOHLI-2-1.jpg)
ರಜತ್ ಪಾಟಿದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ವಿಕೆಟ್ಗಳ ಭರ್ಜರಿ ಗೆಲುವು ಪಡೆದಿದೆ. ಪಂಜಾಬ್ ಜೊತೆಗಿನ 37ನೇ ಐಪಿಎಲ್ ಪಂದ್ಯದಲ್ಲಿ ಆರ್ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತೊಂದು ಅರ್ಧಶತಕ ಬಾರಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಡೇವಿಡ್ ವಾರ್ನರ್ ಅವರ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.
ಮುಲ್ಲನ್ಪುರ್ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ್ದ ಪಂಜಾಬ್ 158 ರನ್ಗಳ ಗುರಿಯನ್ನು ನೀಡಿತತ್ತು. ಈ ಗುತಿ ಬೆನ್ನತ್ತಿದ್ದ ಆರ್ಸಿಬಿ ತಂಡ ಕೇವಲ 3 ವಿಕೆಟ್ಗೆ 159 ರನ್ಗಳನ್ನು ಗಳಿಸುವ ಮೂಲಕ ಗೆಲವು ಸಾಧಿಸಿದೆ. ಪಂದ್ಯದಲ್ಲಿ ಓಪನರ್ ಆಗಿ ಮೈದಾನಕ್ಕೆ ಬಂದ ವಿರಾಟ್ ಕೊಹ್ಲಿ ಅತ್ಯದ್ಭುತವಾದ ಬ್ಯಾಟಿಂಗ್ ಮಾಡಿ, ಹಾಫ್ಸೆಂಚುರಿ ಸಿಡಿಸಿದರು. 3ನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದ ಕನ್ನಡಿಗ ದೇವದತ್ ಪಡಿಕ್ಕಲ್ ಕೂಡ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಈ ಸೀಸನ್ನಲ್ಲಿ ಮೊದಲ ಫಿಫ್ಟಿ ಬಾರಿಸಿದರು. ನಾಯಕ ರಜತ್ ಕೇವಲ 12 ರನ್ಗೆ ವಿಕೆಟ್ ಒಪ್ಪಿಸಿದರೆ, ಕೊಹ್ಲಿ ಜೊತೆ ಸೇರಿ ಜಿತೇಶ್ ಶರ್ಮಾ (11) ತಂಡವನ್ನು ಗಡಿ ದಾಟಿಸಿದರು.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಜೇಯ 73 ರನ್ಗಳನ್ನು ಬಾರಿಸಿದರು. ಪಂಜಾಬ್ ಬೌಲರ್ಗಳನ್ನು ಕಾಡಿದ ವಿರಾಟ್ 43 ಎಸೆತದಲ್ಲಿ ಸಿಕ್ಸರ್ಗಳಿಲ್ಲದೇ 5 ಬೌಂಡರಿಗಳಿಂದ 50 ರನ್ ಚಚ್ಚಿದರು. ಆರ್ಸಿಬಿ ಜಯ ಸಾಧಿಸುವವರೆಗೂ ಕ್ರೀಸ್ನಲ್ಲಿದ್ದ ವಿರಾಟ್ ಕೊಹ್ಲಿ 54 ಎಸೆತಗಳಲ್ಲಿ 7 ಫೋರ್, 1 ಸಿಕ್ಸರ್ನಿಂದ 73 ರನ್ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಇದನ್ನೂ ಓದಿ:6, 6, 6; ಕನ್ನಡಿಗನ ವಿಸ್ಫೋಟಕ ಬ್ಯಾಟಿಂಗ್.. ಪಂಜಾಬ್ ವಿರುದ್ಧ ಪಡಿಕ್ಕಲ್ ಭರ್ಜರಿ ಅರ್ಧಶತಕ
ಐಪಿಎಲ್ ಇತಿಹಾಸದಲ್ಲೇ ಕೊಹ್ಲಿ ಅತ್ಯಧಿಕ 50 ಪ್ಲಸ್ ರನ್ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ. ಈ ಮೊದಲು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರು ಐಪಿಎಲ್ ಇತಿಹಾಸದಲ್ಲಿ 50 ಪ್ಲಸ್ ರನ್ ಗಳಿಸಿದವರಲ್ಲಿ ಮೊದಲಿಗರಾಗಿದ್ದರು. ಡೇವಿಡ್ ವಾರ್ನರ್ 66 ಬಾರಿ ಈ 50 ಪ್ಲಸ್ ರನ್ ಗಳಿಸಿದ್ರೆ, ವಿರಾಟ್ ಕೊಹ್ಲಿ 67 ಸಲ 50 ಪ್ಲಸ್ ರನ್ ಗಳಿಸಿ ಅಗ್ರಸ್ಥಾನ ಪಡೆದಿದ್ದಾರೆ. ಇನ್ನು 3ನೇ ಸ್ಥಾನದಲ್ಲಿ ಶಿಖರ್ ಧವನ್ (53 ಬಾರಿ) ಇದ್ದಾರೆ. ನಂತರ ರೋಹಿತ್ ಶರ್ಮಾ (45) ಸ್ಥಾನ ಪಡೆದಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ