/newsfirstlive-kannada/media/post_attachments/wp-content/uploads/2024/07/Kohli_Rohit-2.jpg)
ಸುಮಾರು 17 ವರ್ಷಗಳ ತಪ್ಪಸ್ಸಿನ ಬಳಿಕ 2024ರ ಐಸಿಸಿ ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ ತವರಿಗೆ ವಾಪಸ್ ಆಗಿದೆ. ಭಾರತಕ್ಕೆ ಬಂದಿಳಿದ ಟೀಮ್ ಇಂಡಿಯಾ ಆಟಗಾರರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಆಟಗಾರರು ಕುಣಿದು ಕುಪ್ಪಳಿಸಿದ್ರು.
ಇಂದು ಮುಂಬೈನ ವಾಂಖೆಡೆಯಲ್ಲಿ ಟಿ20 ವಿಶ್ವಕಪ್ ವಿಜಯೋತ್ಸವದ ಮೆರವಣಿಗೆ ಆಯೋಜನೆ ಮಾಡಲಾಗಿತ್ತು. ಸಂಜೆ 6 ಗಂಟೆಯಿಂದಲೇ ಮರೈನ್ ಡ್ರೈವ್‌ನಿಂದ ವಾಂಖೆಡೆ ಕ್ರೀಡಾಂಗಣದವರೆಗೆ ಟೀಮ್ ಇಂಡಿಯಾ ವಿಕ್ಟರಿ ಪರೇಡ್ ನಡೆಸಿತು.
Kohli giving the national flag to Rohit , forces him to come forward and then asks Rajeev Shukla to get aside so that Kohli and Rohit can celebrate together
My idolo ?❤️ pic.twitter.com/L1ZJ5cMqpO
— VK18 (@tomarvt18) July 4, 2024
ಇನ್ನು, ವಿಕ್ಟರಿ ಪರೇಡ್ ಸಂದರ್ಭದಲ್ಲಿ ಓಪನ್ ಬಸ್ನಲ್ಲಿ ಹಿಂದೆ ನಿಂತಿದ್ದ ಕ್ಯಾಪ್ಟನ್ ರೋಹಿತ್ ಶರ್ಮಾ ಅವರನ್ನು ವಿರಾಟ್ ಕೊಹ್ಲಿ ಕೈ ಹಿಡಿದು ಕರೆ ತಂದರು. ಕೈ ಹಿಡಿದು ಕರೆ ತಂದು ಟ್ರೋಫಿ ಎತ್ತಿ ಹಿಡಿದ ಸೆಲಬ್ರೇಟ್ ಮಾಡಿದ್ರು. ರೋಹಿತ್ ಕೈ ಹಿಡಿದು ಕರೆ ತಂದ ಕೊಹ್ಲಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಫ್ಯಾನ್ಸ್ ಎಷ್ಟು ಕ್ಯೂಟ್ ಇದು ಎಂದು ಕಾಮೆಂಟ್ಸ್ ಮಾಡುತ್ತಿದ್ದಾರೆ.
ಇದನ್ನೂ ಓದಿ:ಫ್ಯಾಮಿಲಿ ಜತೆ ಕೊಹ್ಲಿ ಟಿ20 ವಿಶ್ವಕಪ್ ವಿಜಯೋತ್ಸವ.. ಅನುಷ್ಕಾ ಶರ್ಮಾ ಬಾರದಿರಲು ಕಾರಣವೇನು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ