/newsfirstlive-kannada/media/post_attachments/wp-content/uploads/2025/01/KOHLI_WATCH_2.jpg)
ಕಿಂಗ್ ಕೊಹ್ಲಿಯ ಗತ್ತೇ ಬೇರೆ, ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲ.. ಆಫ್ ದ ಫೀಲ್ಡ್ನಲ್ಲೂ ಕೊಹ್ಲಿ ರಾಜನಂತೆ ಜೀವನ ನಡೆಸುತ್ತಾರೆ. ಸಾವಿರಾರು ಕೋಟಿಯ ಒಡೆಯ ಕೊಹ್ಲಿ ವಿಲಾಸಿ ಜೀವನ ನಡೆಸುತ್ತಿದ್ದಾರೆ. ಕೊಹ್ಲಿ ಬದುಕು ಎಷ್ಟು ಐಷಾರಾಮಿಯಾಗಿದೆ ಅನ್ನೋದನ್ನ ಈ ಒಂದು ವಾಚ್ ಹೇಳುತ್ತೆ.
ಕೊಹ್ಲಿ ಈ ಹೆಸರಿಗೆ ಒಂದು ಪವರ್ ಇದೆ. ಆನ್ಫೀಲ್ಡ್ನಲ್ಲಿ ಆಡಲಿ, ಬಿಡಲಿ ಆಫ್ ದ ಫೀಲ್ಡ್ನಲ್ಲಿ ಈ ಹೆಸರು ಸದಾ ಸುದ್ದಿಯಲ್ಲೇ ಇರುತ್ತೆ. ಫೀಲ್ಡ್ನಲ್ಲಿ ಅಸಾಧ್ಯ ಅಂದುಕೊಂಡಿದ್ದವನ್ನೆಲ್ಲಾ ಸಾಧಿಸಿ ತೋರಿಸಿ, ಸಾಧನೆಗಳನ್ನ ಮಾಡಿ ಮರೆದಾಡಿರೋ ಕೊಹ್ಲಿ ಆಫ್ ದ ಫೀಲ್ಡ್ನಲ್ಲೂ ಕಿಂಗ್.
ಆಫ್ ದಿ ಫೀಲ್ಡ್ನಲ್ಲೂ ಕೊಹ್ಲಿಯೇ ‘ಕಿಂಗ್’.!
ದೆಹಲಿಯ ಮಿಡಲ್ ಕ್ಲಾಸ್ ಫ್ಯಾಮಿಲಿಯಲ್ಲಿ ಬೆಳೆದು ಬಂದ ವಿರಾಟ್ ಕೊಹ್ಲಿ, ಇಂದು ಸಾವಿರಾರು ಕೋಟಿ ರೂಪಾಯಿ ಒಡೆಯ. ಕೊಹ್ಲಿಯ ಬ್ರ್ಯಾಂಡ್ ವ್ಯಾಲ್ಯೂ 1,912 ಕೋಟಿಗೂ ಅಧಿಕವಾಗಿದೆ. ಕೋಟಿ ಕೋಟಿ ಹಣಗಳಿಸಿರೋ ಕೊಹ್ಲಿ ಜೀವನ ಕೂಡ ಫುಲ್ ಹೈ ಫೈ. ಐಷಾರಾಮಿ ಬಂಗಲೆಗಳು, ಕೋಟಿ ಕೋಟಿ ಬೆಲೆಯ ಕಾರುಗಳು, ದುಬಾರಿ ಬೆಲೆಯ ಬಟ್ಟೆಗಳು, ವಿಲಾಸಿ ಜೀವನ ಇದೆ.
₹4 ಕೋಟಿ 60 ಲಕ್ಷ.. ಇದು ಕೊಹ್ಲಿ ವಾಚ್ನ ಬೆಲೆ..!
ಕೊಹ್ಲಿಯ ವಾಚ್ ಬೆಲೆ 4 ಕೋಟಿ, 60 ಲಕ್ಷ ರೂಪಾಯಿ ಅನ್ನೋದು ನಿಜ. ಕೊಹ್ಲಿ ಬಳಿ ಹಲವಾರು ದುಬಾರಿ ವಾಚ್ಗಳಿವೆ. ಅವುಗಳ ಪೈಕಿ ಈ ವಾಚ್ ಕೊಹ್ಲಿಯ ಫೇವರಿಟ್. ಇದರ ಹೆಸರು ರೊಲೆಕ್ಸ್ ಡೇಟೋನಾ ರೈನ್ಬೋ ಎವೆರೋಸ್ ಗೋಲ್ಡ್ (Rolex Daytona Rainbow Rose gold).
ರೊಲೆಕ್ಸ್ ಡೇಟೋನಾ ರೈನ್ಬೋ ಎವೆರೋಸ್ ಗೋಲ್ಡ್ ವಿಶ್ವದ ಕೆಲವೇ ಕೆಲವು ಟಾಪ್ ಸೆಲಬ್ರಿಟಿಗಳ ಬಳಿ ಈ ವಾಚ್ ಇದೆ. ಕೊಹ್ಲಿ ಬಿಟ್ರೆ ಟೀಮ್ ಇಂಡಿಯಾ ಯಾವೊಬ್ಬ ಕ್ರಿಕೆಟಿಗನ ಬಳಿಯೂ ವಾಚ್ ಇಲ್ಲ. ಎಲ್ಲಾ ವಾಚ್ ಟೈಮ್ ತೋರಿಸುತ್ತೆ. ಅದಕ್ಕೆ ಯಾಕೆ 4 ಕೋಟಿ 60 ಲಕ್ಷ ಹಣ ಕೊಡಬೇಕು ಅನ್ನೋ ಪ್ರಶ್ನೆ ಬರುತ್ತದೆ. ಈ ವಾಚ್ನ ಕೇಸ್, ಡಯಲ್ ಮೀಟರ್, ಬ್ರೈಸ್ಲೈಟ್ ಎಲ್ಲಾ ಫುಲ್ ಸ್ಪೆಷಲ್ ಆಗಿ ಇರುತ್ತದೆ.
56 ವಜ್ರದ ಹರಳಿಂದ ಸ್ಪೆಷಲ್ ಡಿಸೈನ್..!
ಕೊಹ್ಲಿಯ ದುಬಾರಿ ವಾಚ್ನ ಡಯಲ್ ಮೀಟರ್ ಸಂಪೂರ್ಣ ವಜ್ರ ಖಚಿತವಾಗಿದೆ. 18 ಕ್ಯಾರೆಟ್ ಎವರೋಸ್ ಗೋಲ್ಡ್ನಿಂದ ಈ ವಾಚ್ನ ತಯಾರಿಸಲಾಗಿದೆ. ವಾಚ್ನ ಒಳಗೆ ಹಾಗೂ ಹೊರಗೆ ಡಿಸೈನ್ ಮಾಡಲು 56 ವಜ್ರದ ಹರಳುಗಳನ್ನ ಬಳಸಾಗಿದೆ.
ಕೊಹ್ಲಿಯ ದುಬಾರಿ ವಾಚ್ನಲ್ಲಿ ಏನೇನು ಇದೆ?
- 18 ಕ್ಯಾರಟ್ ಎವರೋಸ್ ಗೋಲ್ಡ್ನಿಂದ ತಯಾರಿ
- 56 ವಜ್ರದ ಹರಳುಗಳಿಂದ ಒಳ-ಹೊರಗೆ ಡಿಸೈನ್
- ಗಂಟೆ ಸೂಚಿಸುವ ಮಾರ್ಕ್ಗೂ ವಜ್ರದ ಹರಳು ಬಳಕೆ
- ವಾಚ್ ಹೊರಗೆ ವಜ್ರದ ಹರಳಿಂದ ವಿಶೇಷ ಡಿಸೈನ್
- ಕಾಮನಬಿಲ್ಲಿನಂತೆ 7 ಬಣ್ಣಗಳಿಂದ ಹೊಳೆಯುವ ವಾಚ್
ಇದನ್ನೂ ಓದಿ:ಕೊಹ್ಲಿಯಂತೆ ನಿತೀಶ್ ಕುಮಾರ್ ದೇಹದ ಮೇಲೆ ಟ್ಯಾಟೂ.. ಹುಲಿ, ಯೋಧನ ಚಿತ್ರದ ಹಿಂದಿನ ರಹಸ್ಯ?
ಅಂದ್ಹಾಗೆ ಭಾರತ ಬಿಡಿ.. ವಿಶ್ವದ ಯಾವೊಬ್ಬ ಮಾಜಿ ಅಥವಾ ಹಾಲಿ ಕ್ರಿಕೆಟಿಗನ ಬಳಿ ಇಷ್ಟೊಂದು ದುಬಾರಿಯ ವಾಚ್ ಇಲ್ಲ. ಕ್ರಿಕೆಟ್ ಲೋಕದಲ್ಲಿ ‘ಕಿಂಗ್’ ಅನಿಸಿಕೊಂಡಂತೆ ಕೊಹ್ಲಿ ಮಾತ್ರವೇ ಈ ವಾಚ್ನ ಬಳಸುತ್ತಿದ್ದಾರೆ. ಕೊಹ್ಲಿ ಬಿಟ್ರೆ ಫುಟ್ಬಾಲ್ ಸ್ಟಾರ್ಗಳು ಈ ವಾಚ್ ಹೊಂದಿದ್ದಾರೆ. ಡೇವಿಡ್ ಬೆಕಮ್, ಕ್ರಿಸ್ಟಿಯಾನೋ ರೋನಾಲ್ಡೋ, ಲಿಯೋನಲ್ ಮೆಸ್ಸಿ, ಜೆರಾಲ್ಡ್ ಪಿಕ್, ಆಂಟೊನಿ ಗ್ರೀಜ್‌ಮನ್. ಈ ವಾಚ್ ಹೊಂದಿರೋ ಫುಟ್ಬಾಲ್ ತಾರೆಗಳಾಗಿದ್ದಾರೆ. ಬಾಸ್ಕೆಟ್ ಬಾಲ್ ಸೂಪರ್ ಸ್ಟಾರ್ ಜಿಮ್ಮಿ ಬಟ್ಲರ್ ಕೂಡ ಈ ವಾಚ್ ಬಳಸ್ತಾರೆ.
ಹಾಲಿವುಡ್ನ ಕೆಲ ಸಿಂಗರ್ಸ್ ಹಾಗೂ ನಟರ ಬಳಿ ಈ ವಾಚ್ ಇದೆ. ಈ ಸ್ಟಾರ್ಗಳಿಗೆ 4 ಕೋಟಿ 60 ಲಕ್ಷ ಹಣದ ವಾಚ್ ಮೇಲೆ ವ್ಯಾಮೋಹ ಯಾಕಪ್ಪಾ ಅಂತ ಪ್ರಶ್ನೆ ಹುಟ್ಟಬಹುದು. ಕೋಟಿ-ಕೋಟಿ ಲೆಕ್ಕದಲ್ಲಿ ಕಮಾಯ್ ಮಾಡುವ ಇವರಿಗೆ ಇದು ಬಿಗ್ ಅಮೌಂಟ್ ಏನಲ್ಲ. ಕೊಹ್ಲಿ ವಿಚಾರಕ್ಕೆ ಈ ದುಬಾರಿ ವಾಚ್ ಸ್ಟೇಟ್ಮೆಂಟ್ ಆಫ್ ಸಕ್ಸಸ್. ಸಿಂಬಲ್ ಆಫ್ ಸ್ಟೇಟಸ್ ಎಂದು ಹೇಳಬಹುದು ಅಷ್ಟೇ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ