IPL​ ಗೆಲುವಿನೊಂದಿಗೆ ಕಿಂಗ್​ ಕೊಹ್ಲಿ ಅಪರೂಪದ ಸಾಧನೆ.. ವಿರಾಟ್​ ಮುತ್ತಿಟ್ಟ ಟ್ರೋಫಿಗಳು!

author-image
Bheemappa
Updated On
IPL​ ಗೆಲುವಿನೊಂದಿಗೆ ಕಿಂಗ್​ ಕೊಹ್ಲಿ ಅಪರೂಪದ ಸಾಧನೆ.. ವಿರಾಟ್​ ಮುತ್ತಿಟ್ಟ ಟ್ರೋಫಿಗಳು!
Advertisment
  • ನಾಯಕನಾಗಿ 2017ರಿಂದ 2021ರ ತನಕ ಟೆಸ್ಟ್ ಚಾಂಪಿಯನ್ ಪಟ್ಟ
  • ವಿರಾಟ್ ಕೊಹ್ಲಿ ಮಾಡಿರುವ ಅಪರೂಪದ ಸಾಧನೆಗಳು ಇಲ್ಲಿ ಇವೆ!
  • ಯಾವ ಆಟಗಾರ ಮಾಡದ ಸಾಧನೆ ಮಾಡಿರುವ ವಿರಾಟ್ ಕೊಹ್ಲಿ

ವಿರಾಟ್​ ಕೊಹ್ಲಿ ವಿಶ್ವ ಕ್ರಿಕೆಟ್​ ಲೋಕದ ಸಾಮ್ರಾಟ. ಇದೀಗ ಸಾಮ್ರಾಟ ವಿರಾಟ್​ ಕೊಹ್ಲಿಯ ಕಿರೀಟಕ್ಕೆ ಐಪಿಎಲ್​ನ ಮುಕುಟವೂ ದಕ್ಕಿದೆ. ಈಗ ಕಿಂಗ್ ಕೊಹ್ಲಿ ಎಲ್ಲವನ್ನೂ ಸಾಧಿಸಿದ ಧೀರ. ಪ್ರತಿ ಫಾರ್ಮೆಟ್​​ನಲ್ಲಿ ಅಲ್ಟಿಮೇಟ್​​ ಕಿರೀಟಗಳಿಗೆ ಮುತ್ತಿಕ್ಕಿದ ವೀರ.

ಕಿಂಗ್ ಕೊಹ್ಲಿಯ ಬಹುಕಾಲದ ಕನಸು ಕೊನೆಗೂ ಈಡೇರಿದೆ. ಕಳೆದ 17 ವರ್ಷಗಳು ಮರೀಚಿಕೆಯಾಗಿದ್ದ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವಲ್ಲಿ ಸಫಲರಾಗಿದ್ದಾರೆ. ಜೆರ್ಸಿ ನಂಬರ್​ 18ರ ವರ್ಷವೇ ಟ್ರೋಫಿಗೆ ಮುತ್ತಿಟ್ಟಿರುವ ಕಿಂಗ್ ಕೊಹ್ಲಿ ಕಾಡಿದ್ದ ಕೊರಗು, ನೋವು, ಮನದಯಾತನೆಗೆ ಅಂತ್ಯ ಸಿಕ್ಕಿದೆ. ಕ್ರೀಡಾ ಜಗತ್ತಿಗೆ ನಿಷ್ಠೆ, ಬದ್ಧತೆಯ ಪಾಠ ಮಾಡಿದ ಕನ್ನಡಿಗರ ಮನೆಮಗನಿಗೆ ಟ್ರೋಫಿ ಒಲಿಯುವುದರೊಂದಿಗೆ ಅಭಿಮಾನಿಗಳ ಕನಸು ನೆರವೇರಿದೆ.

publive-image

2025ರ ಐಪಿಎಲ್ ಫೈನಲ್‌ನಲ್ಲಿ ಪಂಜಾಬ್ ಎದುರು ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಬಹು ವರ್ಷಗಳಿಂದ ಕಾಡಿದ್ದ ಟ್ರೋಫಿ ಕೊರಗಿನ ಬರ ನೀಗಿಸಿಕೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೊರಗು ಮಾತ್ರವಲ್ಲ. ವಿರಾಟ್​ ಕೊಹ್ಲಿ ಸತತ 18 ವರ್ಷಗಳಿಂದ ಪಟ್ಟಿದ್ದ ಕಠಿಣ ಶ್ರಮಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದೆ.

ಇದು ತಂಡಕ್ಕೆ ದಕ್ಕಿದ ಗೆಲುವಷ್ಟೇ ಅಲ್ಲ. ಆರ್‌ಸಿಬಿ ಅಭಿಮಾನಿಗಳ ಜಯ. ಇದು 18 ವರ್ಷಗಳ ಕಾಯುವಿಕೆ. ಈ ಅವಧಿಯಲ್ಲಿ ನನ್ನ ಯೌವನ, ಮೇರು ಮಟ್ಟದ ಆಟ, ಅನುಭವ ಧಾರೆ ಎರೆದಿದ್ದೇನೆ. ಪ್ರತಿ ವರ್ಷ ಗೆಲುವಿಗೆ ನನ್ನಿಂದ ಏನೆಲ್ಲಾ ಸಾಧ್ಯವೊ ಎಲ್ಲವನ್ನೂ ಕೊಟ್ಟಿದ್ದೇನೆ. ಕೊನೆಗೂ ಗೆದ್ದಿರುವುದು ನಂಬಲ ಸಾಧ್ಯವಾದ ಅನುಭವ. ಇಂಥ ಸುದಿನವನ್ನ ನಿರೀಕ್ಷಿಸಿರಲಿಲ್ಲ.

ವಿರಾಟ್​ ಕೊಹ್ಲಿ, ಆರ್​ಸಿಬಿ ಸ್ಟಾರ್ ಪ್ಲೇಯರ್

ವಿರಾಟ್ ಒಂದಲ್ಲ.. ಎರಡಲ್ಲ.. ಬರೋಬ್ಬರಿ 18 ವರ್ಷಗಳ ಕಾಲ ಆರ್​ಸಿಬಿಗಾಗಿ ಆಡಿದ್ರು. ಪ್ರತಿ ಸೀಸನ್​ನಲ್ಲಿ ಟ್ರೋಫಿ ಗೆಲುವಿಗಾಗಿಯೇ ಹೋರಾಡಿದವರು. ಆದ್ರೀಗ ಆ ಹೋರಾಟದಲ್ಲಿ ಕೊನೆಗೂ ಗೆದ್ದ ವಿರಾಟ್, ಐಪಿಎಲ್ ಟ್ರೋಫಿ ಗೆಲುವಿನೊಂದಿಗೆ ವಿಶೇಷ ಸಾಧನೆಯನ್ನು ಮಾಡಿದ್ದಾರೆ. ಅಷ್ಟೇ ಅಲ್ಲ, ವಿಶ್ವ ಕ್ರಿಕೆಟ್​ನಲ್ಲಿ ಯಾರೂ ಮಾಡದ ವಿಶೇಷ ಸಾಧನೆಯನ್ನು ಮಾಡಿದ್ದಾರೆ.

ವಿಶ್ವ ಕ್ರಿಕೆಟ್​ನ ವಿಕ್ರಮಾಧಿತ್ಯ ವಿರಾಟ್ ಕೊಹ್ಲಿ..!

ವಿಶ್ವ ಕ್ರಿಕೆಟ್​ನಲ್ಲಿ ಲೆಜೆಂಡರಿ ಆಟಗಾರರನ್ನೇ ಕಂಡಿದ್ದೇವೆ. ಐಸಿಸಿ ಟ್ರೋಫಿಗಳನ್ನು ಗೆದ್ದು ಲೆಜೆಂಡ್ಸ್​ ಎನಿಸಿಕೊಂಡವರಿದ್ದಾರೆ. ಟನ್ ಗಟ್ಟಲೆ ರನ್ಸ್​ ಹೊಡೆದು ಶ್ರೇಷ್ಠರಾದವರು ಇದ್ದಾರೆ. ಆದ್ರೆ, ಈ ಎರಡರ ಜೊತೆ ಜೊತೆಗೆ ಎಲ್ಲವನ್ನು ಗೆದ್ದವರ ವಿರಾಟ್ ಕೊಹ್ಲಿ. ಇದಕ್ಕೆ ಸಾಕ್ಷಿಯೇ ಅಂಡರ್​-19 ವಿಶ್ವಕಪ್ ಗೆಲುವಿನಿಂದ ಹಿಡಿದು ಐಪಿಎಲ್ ಟ್ರೋಫಿ ವರೆಗೆ ಗೆದ್ದ ಟ್ರೋಫಿಗಳು.. ಕೊಹ್ಲಿ ಧಕ್ಕಿದ ಮುಕುಟಗಳು.

ವಿಕ್ರಮಾಧಿತ್ಯ ಕೊಹ್ಲಿ..!

  • ಕೊಹ್ಲಿ ಸಾರಥ್ಯದಲ್ಲಿ 2008ರ ಅಂಡರ್​-19 ಏಕದಿನ ವಿಶ್ವಕಪ್​ ಗೆಲುವು
  • ಆಟಗಾರನಾಗಿ 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಜಯಭೇರಿ
  • ಟೆಸ್ಟ್​ ನಾಯಕನಾಗಿ 2017ರಿಂದ 2021ರ ತನಕ ಟೆಸ್ಟ್ ಚಾಂಪಿಯನ್ ಪಟ್ಟ
  • 2024ರಲ್ಲಿ ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ​ ಚಾಂಪಿಯನ್
  • ಆಟಗಾರನಾಗಿ 2025ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಗರಿ

ಇದನ್ನೂ ಓದಿ:IPLನಲ್ಲಿ ಅಟ್ಟರ್​​ಫ್ಲಾಪ್​​​.. ಮಹತ್ವದ ಟೂರ್ನಿಯಲ್ಲಿ ವೈಫಲ್ಯ ಅನುಭವಿಸಿದ್ರೆ ವಿಕೆಟ್​ ಕೀಪರ್​ಗೆ ಗೇಟ್​ ಪಾಸ್?​

publive-image

ಈ ಎಲ್ಲಾ ಟ್ರೋಫಿಗಳಿಗೆ ಮುತ್ತಿಟ್ಟಿರುವ ವಿರಾಟ್​, ಐಪಿಎಲ್ ಟ್ರೋಫಿಯ ಗೆಲುವಿನೊಂದಿಗೆ ತಾನಾಡಿದ ಎಲ್ಲವನ್ನು ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆ ಮೂಲಕ ವಿಶ್ವ ಕ್ರಿಕೆಟ್​ನಲ್ಲಿ ಯಾವ ಆಟಗಾರನೂ ಮಾಡದ ಸಾಧನೆ ಮಾಡಿರುವ ವಿರಾಟ್​​​​​​​​​​​​​​​​​​​​​​​​​, ನಿಜಕ್ಕೂ ವಿಶ್ವ ಕ್ರಿಕೆಟ್​ನ ಒನ್ ಆ್ಯಂಡ್ ಒನ್ಲಿ ಮಾಸ್ಟರ್ ಪೀಸ್​ ಅಲ್ಲದೆ ಮತ್ತೇನು.. ನೀವೇ ಹೇಳಿ..?

ಏಕದಿನ, ಟೆಸ್ಟ್, ಟಿ20 ಎಲ್ಲಕ್ಕೂ ಸೈ ಎಂದಿದ್ದ ವಿರಾಟ್​​ಗೆ, ಐಪಿಎಲ್​ ಎಂಬ ಮಿಲಿಯನ್ ಡಾಲರ್ ಟೂರ್ನಿಯ ಟ್ರೋಫಿ ಸಿಗಲಿಲ್ಲ ಎಂಬ ಕೊರಗು ಕಾಡಿತ್ತು. ಆದ್ರೀಗ ಆ ಕೊರಗು ನೀಗಿಸಿಕೊಂಡಿರುವ ವಿರಾಟ್, ತನ್ನ ಕ್ರಿಕೆಟ್​ ವೃತ್ತಿ ಜೀವನದಲ್ಲಿ ಈಗ ಎಲ್ಲವನ್ನು ಪಡೆದ ಆಟಗಾರನಾಗಿ ನಿಂತಿರುವುದು ಕಠಿಣ ಪರಿಶ್ರಮ ಹಾಗೂ ಬದ್ಧತೆಗೆ ಸಿಕ್ಕಿರುವ ಪ್ರತಿಫಲವೇ ಆಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment