RCBಗೆ ಕೈಕೊಟ್ಟ ವಿರಾಟ್​ ಕೊಹ್ಲಿ.. ಸ್ಟಾರ್ ಬ್ಯಾಟರ್​ನಿಂದ ಅಭಿಮಾನಿಗಳಿಗೆ ಬಿಗ್ ಶಾಕ್

author-image
Bheemappa
Updated On
RCB vs MI ; ಇವತ್ತಿನ ಪಂದ್ಯಕ್ಕೂ ಮೊದಲು ಈ 5 ವಿಚಾರಗಳು ನಿಮಗೆ ಗೊತ್ತಿರಲಿ..!
Advertisment
  • ವಿರಾಟ್​ ಕೊಹ್ಲಿ ಬೆನ್ನಲ್ಲೇ ಮತ್ತೊಂದು ಬಿಗ್ ವಿಕೆಟ್ ಪತನ
  • ತವರಿನಲ್ಲಿ ಭಾರೀ ಮುಖಭಂಗ ಅನುಭವಿಸಿದ ಬೆಂಗಳೂರು
  • ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಆರ್​ಸಿಬಿ ಬ್ಯಾಟರ್ಸ್​

ಗುಜರಾತ್ ಟೈಟನ್ಸ್​ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಕೇವಲ 7 ರನ್​ಗೆ ಔಟ್ ಆಗಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಬಿಗ್ ಶಾಕ್ ಕೊಟ್ಟಿದ್ದಾರೆ. ಇವರ ಬೆನ್ನಲ್ಲೇ ದೇವದತ್​ ಪಡಿಕ್ಕಲ್ ಕೂಡ ಕ್ಲೀನ್ ಬೋಲ್ಡ್ ಆಗಿರುವುದು ಬೇಸರ ತರಿಸಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗುಜರಾತ್ ಟೈಟನ್ಸ್​ ತಂಡದ ಕ್ಯಾಪ್ಟನ್ ಶುಭ್​ಮನ್ ಗಿಲ್​ ಟಾಸ್​ ಗೆದ್ದು ಆರ್​ಸಿಬಿಯನ್ನು ಬ್ಯಾಟಿಂಗ್​ಗೆ ಆಹ್ವಾನ ಮಾಡಿದರು. ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಉತ್ತಮ ಆರಂಭ ಏನೂ ಪಡೆಯಲಿಲ್ಲ. ಆರಂಭದಲ್ಲಿ 1 ಓವರ್​ 4 ಬಾಲ್​ ಆಗಿದ್ದಾಗ ವಿರಾಟ್​ ಕೊಹ್ಲಿ ಕ್ಯಾಚ್ ಕೊಟ್ಟು ಔಟ್ ಆಗಿದ್ದಾರೆ.

ಇದನ್ನೂ ಓದಿ:RCB ಸ್ಫೋಟಕ ಓಪನರ್ ಫಿಲ್ ಸಾಲ್ಟ್, ಸಿರಾಜ್​ ಮಧ್ಯೆ ಘರ್ಷಣೆ.. ಹಿಗ್ಗಾಮುಗ್ಗಾ ಬಾರಿಸಿದ್ದ ಓಪನರ್!

publive-image

2ನೇ ಓವರ್ ಮಾಡಲು ಬಂದ ಅರ್ಷದ್ ಖಾನ್ ಬೌಲಿಂಗ್​ನಲ್ಲಿ ಬಿಗ್ ಶಾಟ್​ ಹೊಡೆದ ವಿರಾಟ್​ ಕೊಹ್ಲಿ, ಬೌಂಡರಿ ಲೈನ್​ ಬಳಿ ಪ್ರಸಿದ್ಧ್ ಕೃಷ್ಣ ಅವರಿಗೆ ಕ್ಯಾಚ್ ಕೊಟ್ಟರು. ಈ ವೇಳೆ ಗ್ಯಾಲರಿಯಲ್ಲಿ ಕುಳಿತ್ತಿದ್ದ ಅಭಿಮಾನಿಗಳೆಲ್ಲಾ ಬೇಸರ ವ್ಯಕ್ತಪಡಿಸಿ ತಲೆ ಮೇಲೆ ಕೈ ಇಟ್ಟುಕೊಂಡರು. ವಿರಾಟ್​ ಕೊಹ್ಲಿ ಅವರು 6 ಎಸೆತಗಳಲ್ಲಿ 1 ಬೌಂಡರಿ ಸಮೇತ ಕೇವಲ 7 ರನ್​ಗೆ ಔಟ್ ಆಗಿ ಭಾರೀ ನಿರಾಸೆ ಮೂಡಿಸಿದ್ದಾರೆ.

ವಿರಾಟ್ ಕೊಹ್ಲಿ ಔಟ್ ಆಗಿ ಬೇಸರಲ್ಲಿದ್ದ ಅಭಿಮಾನಿಗಳಿಗೆ ದೇವದತ್​ ಪಡಿಕ್ಕಲ್ ಕೂಡ ಕ್ಲೀನ್ ಬೋಲ್ಡ್ ಆಗಿ ಬಿಗ್ ಶಾಕ್ ಕೊಟ್ಟು ಬಿಟ್ಟರು. ಆರ್​ಸಿಬಿಯ ಮಾಜಿ ಬೌಲರ್​ ಸಿರಾಜ್​ ಸದ್ಯ ಗುಜರಾತ್​ನಲ್ಲಿ ಆಡುತ್ತಿದ್ದಾರೆ. ಸಿರಾಜ್​ ಬೌಲಿಂಗ್​ನಲ್ಲಿ ದೇವದತ್​ ಪಡಿಕ್ಕಲ್ ಕ್ಲೀನ್ ಬೋಲ್ಡ್ ಆಗಿ ಪೆವಿಲಿಯನ್​ಗೆ ನಡೆದರು. ದೇವದತ್​ ಪಡಿಕ್ಕಲ್ 3 ಎಸೆತಗಳಲ್ಲಿ 1 ಬೌಂಡರಿ ಮಾತ್ರ ಬಾರಿಸಿದರು ಅಷ್ಟೇ. ಆರಂಭದಲ್ಲೇ ಅಂದರೆ 13 ರನ್​ಗೆ ಎರಡು ವಿಕೆಟ್​ ಕಳೆದುಕೊಂಡು ಆರ್​ಸಿಬಿ ಭಾರೀ ಸಂಕಷ್ಟದಲ್ಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment