/newsfirstlive-kannada/media/post_attachments/wp-content/uploads/2024/12/VIRAT_KOHLI-7.jpg)
ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟೆಸ್ಟ್ ಸಿರೀಸ್ ಆರಂಭವಾಗಿದೆ. ಮೊದಲ ಪಂದ್ಯದಲ್ಲೇ ವಿರಾಟ್, ವೀರವೇಶದ ಬ್ಯಾಟಿಂಗ್ ಆಸ್ಟ್ರೇಲಿಯನ್ನರಿಗೆ ನಿದ್ದೆ ಇಲ್ಲದಂತೆ ಮಾಡಿದೆ. ವಿರಾಟ್ ಬ್ಯಾಟಿಂಗ್ ಮಾಡಿದ ಪರಿಗಂತೂ ಆಸ್ಟ್ರೇಲಿಯನ್ ಮಾಜಿ ಕ್ರಿಕೆಟರ್ಸ್ ಕೆಂಡಕಾರುತ್ತಿದ್ದಾರೆ.
ಪರ್ತ್ ಟೆಸ್ಟ್ ಗೆದ್ದ ಟೀಮ್ ಇಂಡಿಯಾ, ಈಗ ಅಡಿಲೇಡ್ನ ಪಿಂಕ್ ಬಾಲ್ ಟೆಸ್ಟ್ಗೆ ಸಿದ್ಧವಾಗುತ್ತಿದೆ. ಡಿಸೆಂಬರ್ 6ರಿಂದ ಆರಂಭ ಆಗಲಿರುವ ಈ ಟೆಸ್ಟ್ ಪಂದ್ಯವನ್ನು ಗೆದ್ದು 4 ವರ್ಷಗಳ ಸೇಡು ತೀರಿಸಿಕೊಳ್ಳುವ ಹೆಬ್ಬಯಕೆಯಲ್ಲಿದೆ. ಈ ನಿಟ್ಟಿನಲ್ಲೇ ಕಾರ್ಯ ಪ್ರವೃತ್ತವಾಗಿರುವ ಟೀಮ್ ಇಂಡಿಯಾ ಆಟಗಾರರು ನೆಟ್ಸ್ನಲ್ಲಿ ಬೆವರಿಳಿಸುತ್ತಿದ್ದಾರೆ. ಆದ್ರೆ, ಅಡಿಲೇಡ್ ಪಿಂಕ್ ಬಾಲ್ ಟೆಸ್ಟ್ ಗೆಲ್ಲೋ ಹಂಬಲದಲ್ಲಿರುವ ಆಸ್ಟ್ರೇಲಿಯನ್ಸ್ಗೆ ಮಾತ್ರ ಕಿಂಗ್ ಕೊಹ್ಲಿಯ ಆತಂಕ ಕಾಡುತ್ತಿದೆ. ಇದಕ್ಕೆಲ್ಲಾ ಕಾರಣ ಪರ್ತ್ ಸೆಂಚುರಿ.
ಇದನ್ನೂ ಓದಿ:13 ವರ್ಷಕ್ಕೆ IPLಗೆ ಆಯ್ಕೆ; ಬದುಕು ಬದಲಿಸಿದ ಹ್ಯಾಟ್ರಿಕ್ ಸಿಕ್ಸ್.. ಅವಮಾನದಿಂದ ವೈಭವ್ ಹೊರ ಬಂದಿದ್ದೇಗೆ?
ಪರ್ತ್ನಲ್ಲಿ ವಿರಾಟ್ ಕೊಹ್ಲಿ ಸಿಡಿಸಿದ ಪವರ್ಫುಲ್ ಸೆಂಚುರಿ ಆಸ್ಟ್ರೇಲಿಯನ್ಸ್ನ ನಿದ್ದೆಗೆಡಿಸಿದೆ. ಹೇಗಪ್ಪ ಚೇಸ್ ಮಾಸ್ಟರ್ ವಿರಾಟ್ ವಿರಾವೇಶಕ್ಕೆ ಬ್ರೇಕ್ ಹಾಕುವುದು ಎಂಬ ತಲೆಕೆಡಿಸಿಕೊಂಡಿದೆ. ಆದ್ರೆ, ಕೊಹ್ಲಿ ಸಾಲಿಡ್ ಬ್ಯಾಟಿಂಗ್ ನೋಡಿದ ಆಸ್ಟ್ರೇಲಿಯಾದ ದಿಗ್ಗಜರು ಮಾತ್ರ, ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಎದುರು ಸಿಡಿದೆದ್ದಿದ್ದಾರೆ. ಪ್ಯಾಟ್ ಕಮಿನ್ಸ್ ನಾಯತ್ವ ಹಾಗೂ ತಂತ್ರಗಾರಿಕೆಯನ್ನೇ ಪ್ರಶ್ನಿಸಿದದ್ದಾರೆ. ಇದಕ್ಕೆಲ್ಲಾ ಕಾರಣ ಸರಣಿ ಸೋಲಿನ ಆತಂಕ.
ವಿರಾಟ್ ಶತಕಕ್ಕೆ ಅಲೆನ್ ಬಾರ್ಡರ್ ಕೆಂಡ..!
ನ್ಯೂಜಿಲೆಂಡ್ ಎದುರಿನ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದ ವಿರಾಟ್, ಆಸ್ಟ್ರೇಲಿಯಾದಲ್ಲಿ ಕಮ್ಬ್ಯಾಕ್ ಮಾಡಿದ್ದಾರೆ. ಮೊದಲ ಪಂದ್ಯದಲ್ಲೇ ಅಬ್ಬರಿಸಿ ಬೊಬ್ಬರೆದಿರುವ ವಿರಾಟ್, ಆಸ್ಟ್ರೇಲಿಯನ್ ಬೌಲರ್ಗಳನ್ನ ಬೆಂಡೆತ್ತಿದ್ದಾರೆ. ಆದ್ರೆ, ಬೆಂಕಿ ಬೌಲಿಂಗ್ ಎದುರು ವಿರಾಟ್ ಸರಾಗವಾಗಿ ರನ್ ಗಳಿಸಿದ ರೀತಿಗೆ ದಿಗ್ಗಜ ಅಲೆನ್ ಬಾರ್ಡರ್ ಆತಂಕ ಹೊರಹಾಕಿದ್ದಾರೆ.
ಕೊಹ್ಲಿ ಆತ್ಮವಿಶ್ವಾಸದಿಂದ ಇರಲು ಬಯಸಲ್ಲ.!
ನಾನು ನಿಜವಾಗಿಯೂ ನಿರಾಸೆಗೊಂಡಿದ್ದೇನೆ. ಪ್ರತಿರೋಧ ತೋರದೆ, ಕೊಹ್ಲಿ ಶತಕ ಗಳಿಸಲು ಮಾಡಿಕೊಟ್ಟ ರೀತಿಯಿಂದ ನನಗೆ ಬೇಸರವಾಗಿದೆ. ಈ ಸರಣಿಯ ಮಂದಿನ ಪಂದ್ಯಗಳಲ್ಲಿ ವಿರಾಟ್, ಆತ್ಮವಿಶ್ವಾಸದಿಂದ ಇರಲು ನಾವು ಬಯಸಲ್ಲ.
ಅಲೆನ್ ಬಾರ್ಡರ್, ಮಾಜಿ ಕ್ರಿಕೆಟರ್
ವಿರಾಟ್ ಪರ್ತ್ನಲ್ಲಿ ಗಳಿಸಿದ ಶತಕ ಆತ್ಮವಿಶ್ವಾಸ ಹೆಚ್ಚಿಸಿಲ್ಲ. ಆಸ್ಟ್ರೇಲಿಯಾ ಪಾಲಿಗೆ ಎಚ್ಚರಿಕೆಯ ಕರೆಗಂಟೆ ಆಗಿದೆ, ಯಾಕಂದ್ರೆ, ಫಾರ್ಮ್ಗೆ ಮರಳಿರುವ ಕೊಹ್ಲಿ, ಎಂದೆಂದಿಗೂ ಡೇಂಜರಸ್. ಅಂಥಹ ಡೇಂಜರಸ್ ಕೊಹ್ಲಿ ಮನದಲ್ಲಿ ಆತ್ಮವಿಶ್ವಾಸ ಮೂಡಿದ್ರೆ, ಎದುರಾಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಇದೇ ಕಾರಣಕ್ಕೆ ಮಾಜಿ ನಾಯಕ ಮೈಕಲ್ ಕ್ಲಾರ್ಕ್, ಆಸ್ಟ್ರೇಲಿಯಾದ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ಗೆ ಮಹತ್ತರ ಟಿಪ್ಸ್ ನೀಡಿದ್ದಾರೆ.
ಕೊಹ್ಲಿ 2ನೇ ಇನ್ನಿಂಗ್ಸ್ನಲ್ಲಿ ಅದ್ಭುತ ಬ್ಯಾಟಿಂಗ್ ನಡೆಸಿದ್ದಾರೆ. ಆತ ಕ್ರೀಸ್‌ಗೆ ಬಂದಾಗ ಒತ್ತಡ ಇತ್ತು. ಹಿಂದೆ ನಾವು ನೋಡಿದ ಕೊಹ್ಲಿ ರೀತಿಯಲ್ಲಿ ಬ್ಯಾಟಿಂಗ್ ಮಾಡಿದ್ರು. ಪರಿಸ್ಥಿತಿಯನ್ನು ಡಾಮಿನೇಟ್ ಮಾಡಿದ ವಿರಾಟ್, ಆತ್ಮವಿಶ್ವಾಸ ಮರಳಿ ಪಡೆದಿದ್ದಾರೆ. ಇಂಥಹ ಉತ್ತಮ ಇನ್ನಿಂಗ್ಸ್ಗಾಗಿ ಕಠಿಣ ಪರಿಶ್ರಮ ಪಟ್ಟಿದ್ದಾರೆ. ನ್ಯಾಚುರಲ್ ಗೇಮ್ ಆಡಿದ್ದಾರೆ. ವಿರಾಟ್ ಇಸ್ ಬ್ಯಾಕ್ ಅನ್ನೋದ್ರಲ್ಲೇ ಡೌಟೇ ಇಲ್ಲ. ಬೆಸ್ಟ್ ಆಟಗಾರರು ಸರಣಿಯ ಆರಂಭದಲ್ಲೇ ರನ್ ಗಳಿಸಲು ಬಯಸುತ್ತಾರೆ. ಈಗ ಮೊದಲ ಪಂದ್ಯದಲ್ಲೇ ರನ್ ಗಳಿಸಿದ ಕೊಹ್ಲಿಯನ್ನು ಸುಮ್ಮನಿರಬೇಕಿದೆ. ಯಾಕಂದ್ರೆ, ಆತನ ಕಾನ್ಫಿಡೆಸ್ ಹೈನಲ್ಲಿದೆ.
ಮೈಕಲ್ ಕ್ಲಾರ್ಕ್, ಆಸ್ಟ್ರೇಲಿಯಾ ಮಾಜಿ ಕ್ಯಾಪ್ಟನ್
ಮ್ಯಾಥ್ಯು ಹೇಡನ್, ಆಸ್ಟ್ರೇಲಿಯಾದ ತಂತ್ರಗಾರಿಕೆಯನ್ನು ಪ್ರಶ್ನಿಸಿದರು. ವಿರಾಟ್ ಕೊಹ್ಲಿಗಾಗಿ ಸೆಟ್ ಮಾಡಿದ್ದ ಫೀಲ್ಡ್ ಪ್ಲೇಸ್ಮೆಂಟ್, ಸ್ಟ್ರಾಟರ್ಜಿ ಬಗ್ಗೆ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಕೊಹ್ಲಿ ಬ್ಯಾಟಿಂಗ್ ಹಸಿವನ್ನು ಕೊಂಡಾಡಿದ್ದಾರೆ. ಆದ್ರೆ, ಇದೇ ಬ್ಯಾಟಿಂಗ್ ಆಸ್ಟ್ರೇಲಿಯಾ ಕ್ಯಾಂಪ್ನಲ್ಲಿ ಆತಂಕವನ್ನೇ ಮೂಡಿಸಿದೆ.
ಆಸ್ಟ್ರೇಲಿಯಾ ಭಯದ ಹಿಂದೆ ಸರಣಿ ಸೋಲುವ ಭೀತಿ..!
ಆಸ್ಟ್ರೇಲಿಯನ್ಸ್ಗೆ ವಿರಾಟ್ ಕೊಹ್ಲಿಯ ಆತಂಕಕ್ಕೆ ಕಾರಣ ಇದೆ. ಅದೇ ತವರಿನಲ್ಲಿ ಬಾರ್ಡರ್ ಗವಾಸ್ಕರ್ ಟೆಸ್ಟ್ ಕೈಚೆಲ್ಲುವ ಭೀತಿ. ಯಾಕಂದ್ರೆ ಬ್ಯಾಕ್ ಟು ಬ್ಯಾಕ್ 2 ಬಾರಿ ಸೋತಿರುವ ಆಸ್ಟ್ರೇಲಿಯಾ, 3ನೇ ಬಾರಿ ಮುಖಭಂಗ ಅನುಭವಿಸಲಿದೆ. ಅದ್ರಲ್ಲೂ ಆಸ್ಟ್ರೇಲಿಯಾ ಹಾಗೂ ಆಸ್ಟ್ರೇಲಿಯನ್ ಕಂಡೀಷನ್ಸ್ನಲ್ಲಿ ಅಬ್ಬರಿಸುವ ವಿರಾಟ್, ಫಾರ್ಮ್ಗೆ ಮರಳಿದ್ದಾರೆ. ಹೀಗಾಗಿ ಕಿಂಗ್ ಕೊಹ್ಲಿಯನ್ನು ಸೈಲೆಂಟ್ ಆಗಿ ಇಡುವುದು ಕಷ್ಟಸಾಧ್ಯ. ಹೀಗಾಗಿ ಸರಣಿ ಸೋಲಿನ ಆತಂಕದಲ್ಲಿರುವ ಆಸ್ಟ್ರೇಲಿಯಾ, ಕೊಹ್ಲಿಯ ಆಟಕ್ಕೆ ಕಡಿವಾಣ ಹಾಕಲು ಇನ್ನಿಲ್ಲದ ಸರ್ಕಸ್ ನಡೆಸ್ತಿದೆ. ಆದ್ರೆ, ಇದು ಎಷ್ಟುರ ಮಟ್ಟಿಗೆ ಸಾಧ್ಯವಾಗುತ್ತೆ ಅನ್ನೋದು ಕಾದುನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ