ಈ ಬಾರಿ ಕೊಹ್ಲಿ ಗತ್ತು ಬೇರೆ ಲೆವೆಲ್​​ನಲ್ಲೇ ಇದೆ.. ಆರ್​ಸಿಬಿ ಅಭಿಮಾನಿಗಳು ಓದಲೇಬೇಕಾದ ಸ್ಟೋರಿ..!

author-image
Ganesh
Updated On
ಈ ಬಾರಿ ಕೊಹ್ಲಿ ಗತ್ತು ಬೇರೆ ಲೆವೆಲ್​​ನಲ್ಲೇ ಇದೆ.. ಆರ್​ಸಿಬಿ ಅಭಿಮಾನಿಗಳು ಓದಲೇಬೇಕಾದ ಸ್ಟೋರಿ..!
Advertisment
  • ಕೊಹ್ಲಿಯ ಕ್ಲಾಸ್​ ಆಟಕ್ಕೆ ಕ್ರಿಕೆಟ್​ ಲೋಕ ಫಿದಾ
  • ಚೇಸಿಂಗ್​​ಗೆ ಕಿಂಗ್​ ಕೊಹ್ಲಿಯೇ​ ಮಾಸ್ಟರ್​​..!
  • ಪಂಜಾಬ್​ಗೆ ಕಿಂಗ್​​​ ಕೊಹ್ಲಿ ‘ಸ್ವೀಟ್​’ ಪಂಚ್​..!

ಐಪಿಎಲ್ ಸೀಸನ್​​ 18ರಲ್ಲಿ ಕಿಂಗ್​ ಕೊಹ್ಲಿಯ ಕ್ಲಾಸ್​ ಆಟದ ಅಬ್ಬರ ಜೋರಾಗಿದೆ. ವಿರಾಟನ ಮಾಸ್ಟರ್​​ ಕ್ಲಾಸ್​​ ಇನ್ನಿಂಗ್ಸ್​ಗಳಿಗೆ ಕ್ರಿಕೆಟ್​ ಲೋಕ ಸಲಾಂ ಅಂತಿದೆ. ಪರ್ಫೆಕ್ಟ್​ ಇನ್ನಿಂಗ್ಸ್​ ಕಟ್ತಿರೋ ವಿರಾಟ್​ ಚೇಸಿಂಗ್​ಗೆ ನಾನೇ ಮಾಸ್ಟರ್​​ ಅನ್ನೋದನ್ನ ಪದೇ ಪದೆ ನಿರೂಪಿಸ್ತಿದ್ದಾರೆ. ಇಲ್ಲಿ ಅಬ್ಬರವಿಲ್ಲ, ಆರ್ಭಟವಿಲ್ಲ. ಸೈಲೆಂಟ್​ ಆಟದಿಂದಲೇ ಸ್ವೀಟ್​ ವಿಲನ್​ ಆಗಿ ವಿರಾಟ್​​ ಎದುರಾಳಿಗಳನ್ನ ಕಾಡ್ತಿದ್ದಾರೆ.

ಸೀಸನ್​​ 18ರ ಐಪಿಎಲ್​ನಲ್ಲಿ ನಂಬರ್​ 18ರದ್ದೇ ದರ್ಬಾರ್​​. ಐಪಿಎಲ್​ ಟೂರ್ನಿ ಅಧಿಪತಿ ಕಿಂಗ್​ ಕೊಹ್ಲಿ ಈ ಸೀಸನ್​ನಲ್ಲೂ ಬೊಂಬಾಟ್​ ಪ್ರದರ್ಶನ ಮುಂದುವರೆದಿದೆ. ಪಂದ್ಯದಿಂದ ಪಂದ್ಯಕ್ಕೆ ಕೊಹ್ಲಿಯ ಬ್ಯಾಟ್​​ನ ಸೌಂಡ್​​ ಜೋರಾಗಿದೆ. ಬೌಂಡರಿ, ಸಿಕ್ಸರ್​ಗಳ ಅಬ್ಬರದ ಆಟದ ನಡುವೆ ಕಿಂಗ್​ ಕೊಹ್ಲಿಯ ಕ್ಲಾಸಿಕ್​ ಇನ್ನಿಂಗ್ಸ್​​ಗಳು ಕ್ರಿಕೆಟ್​​ ಲೋಕದ ಮನ ಗೆದ್ದಿವೆ. ಅದ್ರಲ್ಲೂ ಚೇಸಿಂಗ್​ ವೇಳೆ ಕಟ್ತಿರೋ ಇನ್ನಿಂಗ್ಸ್​ಗಳಂತೂ ಕೊಹ್ಲಿನ ಯಾಕೆ ಚೇಸಿಂಗ್​ ಮಾಸ್ಟರ್​ ಅಂತಾರೆ ಅನ್ನೋದಕ್ಕೆ ನಿದರ್ಶನದಂತಿವೆ.

ಇದನ್ನೂ ಓದಿ: ಶತಕದ ಹಿಂದಿನ ಗುಟ್ಟು ಬಿಚ್ಚಿಟ್ಟ ವೈಭವ್ ಸೂರ್ಯವಂಶಿ; ಕನಸು ನನಸಾದ ಕ್ಷಣದ ಬಗ್ಗೆ ಹೇಳಿದ್ದೇನು..?

publive-image

ಚೇಸಿಂಗ್​​ಗೆ ಕಿಂಗ್​ ಕೊಹ್ಲಿಯೇ​ ಮಾಸ್ಟರ್​

ಕೊಹ್ಲಿಯನ್ನ ಚೇಸ್​ ಮಾಸ್ಟರ್​ ಸುಮ್ಮನೇ ಕರೆಯಲ್ಲ. ಸೆಕೆಂಡ್​ ಬ್ಯಾಟಿಂಗ್​ಗಿಳಿದ್ರೆ ಕೊಹ್ಲಿಯಂತೆ ಪರ್ಫೆಕ್ಟ್ದ್ ಇನ್ನಿಂಗ್ಸ್​ ಕಟ್ಟೋ ಕಲೆ ವಿಶ್ವದ ಬೇರ್ಯಾವ ಕ್ರಿಕೆಟರ್​ ಬಳಿನೂ ಇಲ್ಲ ಬಿಡಿ. ತನ್ನ ಇನ್ನಿಂಗ್ಸ್​ ಮಾತ್ರವಲ್ಲ.. ತಂಡವನ್ನ ಗೆಲುವಿನ ದಡ ಸೇರಿಸೋಕೆ ಪಕ್ಕಾ ಪ್ಲಾನ್​ ಮಾಡಿಕೊಂಡೆ ವಿರಾಟ್ ಬ್ಯಾಟಿಂಗ್​​ಗೆ ಬರೋದು. ಆ ಪ್ಲಾನ್​ನ ಅಷ್ಟೇ ಚನ್ನಾಗಿ ಎಕ್ಸಿಕ್ಯೂಟ್​ ಮಾಡ್ತಾರೆ ಕೂಡ.. ಈ ಸೀಸನ್​ನ 4 ಇನ್ನಿಂಗ್ಸ್​ಗಳು, ಆರ್​​ಸಿಬಿಯ 4 ಗೆಲುವುಗಳೇ ಇದಕ್ಕೆ ಸಾಕ್ಷಿ.

ಹೋಮ್​​ಗ್ರೌಂಡ್​​ನಲ್ಲಿ ಡೆಲ್ಲಿಗೆ ಡಿಚ್ಚಿ

ಕೊಹ್ಲಿನ ಚೇಸಿಂಗ್​ ಮಾಸ್ಟರ್​​ ಅನ್ನೋದಕ್ಕೆ ಡೆಲ್ಲಿ ವಿರುದ್ಧದ ಪಂದ್ಯಕ್ಕಿಂತ ಬೇರೆ ಪಂದ್ಯ ಬೇಕಾ.? 163 ರನ್​​ ಟಾರ್ಗೆಟ್​ ಚೇಸ್​ ಮಾಡ್ತಿದ್ದ ಆರ್​​ಸಿಬಿ 26 ರನ್​ಗಳಿಸುವಷ್ಟರಲ್ಲೇ 3 ವಿಕೆಟ್​ ಕಳೆದುಕೊಂಡಿತ್ತು. ಆಗ ಕೂಲ್​ & ಕಾಮ್​​ ಇನ್ನಿಂಗ್ಸ್​ ಕಟ್ಟಿದ ವಿರಾಟ್​​ ಡೆಲ್ಲಿಯನ್ನ ಉಡಾಯಿಸಿದ್ರು. ಕೊಹ್ಲಿಯ ಹಾಫ್​ ಸೆಂಚುರಿ ಇನ್ನಿಂಗ್ಸ್​​ ಆರ್​​ಸಿಬಿ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿತು.

ಇದನ್ನೂ ಓದಿ: ವೈಭವ್​​ಗೆ ದಾರಿ ತೋರಿಸಿದ ಸಾಹುಕಾರ ಇವರೇ.. ನೆಟ್ಸ್​ನಲ್ಲಿ ದ್ರಾವಿಡ್​ ನೀಡ್ತಿದ್ದ ಟಾರ್ಗೆಟ್​ ಏನಾಗಿತ್ತು..?

publive-image

ಪಂಜಾಬ್​ಗೆ ಕೊಹ್ಲಿ ‘ಸ್ವೀಟ್​’ ಪಂಚ್​.!

ಮುಲ್ಲನ್​ಪುರದಲ್ಲಿ ನಡೆದ ಪಂದ್ಯದಲ್ಲಿ ಆರ್​​ಸಿಬಿ ಗೆದ್ದಿದ್ದಕ್ಕಿಂತ ಅಭಿಮಾನಿಗಳಿಗೆ ಹೆಚ್ಚು ಇಷ್ಟವಾಗಿದ್ದು, ಕೊಹ್ಲಿಯ ಚೇಸಿಂಗ್​​.! ಕೊಹ್ಲಿಯ ಆಟದಲ್ಲಿ ಅಬ್ಬರ ಇರಲಿಲ್ಲ.. ಆದ್ರೂ, ಕೂಲ್​ & ಕಾಮ್​ ಆಗಿ ಇನ್ನಿಂಗ್ಸ್​ ಕಟ್ಟಿದ ಕೊಹ್ಲಿ ಕೊನೆಯಲ್ಲಿ ಪಂಜಾಬ್​ಗೆ ಸ್ವೀಟ್​ ವಿಲನ್​ ಆದ್ರು. 7 ಬೌಂಡರಿ, 1 ಸಿಕ್ಸರ್​ ಸಿಡಿಸಿದ ವಿರಾಟ್​ ಕೊಹ್ಲಿ 54 ಎಸೆತಗಳಲ್ಲಿ ಅಜೇಯ 73 ರನ್​ ಸಿಡಿಸಿದ್ರು.

ಪಿಂಕ್​ ಸಿಟಿಯಲ್ಲಿ ಪವರ್​​ಫುಲ್​ ಆಟ.!

ರಾಜಸ್ಥಾನ್​ ವಿರುದ್ಧದ ಪಂದ್ಯದಲ್ಲೂ ಚೇಸಿಂಗ್​​ನಲ್ಲಿ ವಿರಾಟ್​​ ಮಿಂಚಿದ್ರು. ಪಿಂಕ್​ ಸಿಟಿ ಜೈಪುರದಲ್ಲಿ ಪವರ್​​ಫುಲ್​ ಆಟವಾಡಿದ್ದ ವಿರಾಟ 45 ಎಸೆತಕ್ಕೆ ಅಜೇಯ 62 ರನ್​ ಸಿಡಿಸಿದ್ರು. ಈ ಕ್ಯಾಲ್ಕ್ಯುಲೇಟೆಡ್​ ಇನ್ನಿಂಗ್ಸ್​ನಲ್ಲಿ 4 ಆಕರ್ಷಕ ಬೌಂಡರಿ, 2 ಭರ್ಜರಿ ಸಿಕ್ಸರ್​​ಗಳಿದ್ವು. ಓಪನರ್​ ಆಗಿ ಕಣಕ್ಕಿಳಿದ ಕೊಹ್ಲಿ ಸುದೀರ್ಘ 74 ನಿಮಿಷಗಳ ಕಾಲ ಬ್ಯಾಟಿಂಗ್​ ನಡೆಸಿದ್ರು. ತಂಡವನ್ನ ಗೆಲುವಿನ ದಡ ಸೇರಿಸೋವರೆಗೆ ದಣಿಯಲೇ ಇಲ್ಲ.

ಕ್ರಿಕೆಟ್​ ಕಾಶಿಯಲ್ಲಿ ‘ಕಿಂಗ್’​ ಮೆರೆದಾಟ

ಈ ಸೀಸನ್​ನ ಮೊದಲ ಪಂದ್ಯದಲ್ಲೇ ಕೊಹ್ಲಿ ತನ್ನ ಮಾಸ್ಟರ್​​ ಕ್ಲಾಸ್​ ಇನ್ನಿಂಗ್ಸ್​ನ ಪರಿಚಯ ಮಾಡಿಸಿದ್ರು. ಭಾರತದ ಕ್ರಿಕೆಟ್​ ಕಾಶಿ ಈಡನ್​ ಗಾರ್ಡನ್ಸ್​ನಲ್ಲಿ ಮೆರೆದಾಡಿದ್ದ ಕಿಂಗ್​ ಕೊಹ್ಲಿ ಕೆಕೆಆರ್​​ ಬೌಲರ್​​ಗಳ ಮೇಲೆ ರೈಡ್​ ಮಾಡಿದ್ರು. 36 ಎಸೆತಗಳಲ್ಲೇ ಅಜೇಯ 59 ರನ್​ ಸಿಡಿಸಿದ ವಿರಾಟ್​ ಆರ್​​ಸಿಬಿ ಗೆಲುವಿನ ಕಡೆಗೆ ಗೈಡ್​ ಮಾಡಿದ್ರು.

ಇದನ್ನೂ ಓದಿ: ಅಪ್ಪನ ಕನಸು ನನಸು.. ಪುತ್ರ ವೈಭವ್​​ಗೆ ಕ್ರಿಕೆಟ್ ಕಲಿಸಲು ಜಮೀನನ್ನೇ ಮಾರಿದ್ದ ತಂದೆ..!

publive-image

ಈ ಸೀಸನ್​​ನ 3 ಪಂದ್ಯಗಳು ಮಾತ್ರವಲ್ಲ, ಐಪಿಎಲ್​ ಇತಿಹಾಸದಲ್ಲಿ ಚೇಸಿಂಗ್​ ಅಂತಾ ಬಂದಾಗಲೆಲ್ಲಾ ಕೊಹ್ಲಿ ಜೋರಾಗೇ ಬ್ಯಾಟ್​ ಝಳಪಿಸಿದ್ದಾರೆ. ಚೇಸಿಂಗ್​ ವೇಳೆ ಆಡಿದ 120 ಇನ್ನಿಂಗ್ಸ್​ಗಳಲ್ಲಿ 40.83ರ ಸಾಲಿಡ್​ ಎವರೇಜ್​ನಲ್ಲಿ 3768 ರನ್​ಗಳಿಸಿದ್ದಾರೆ. ಇದ್ರಲ್ಲಿ 25 ಹಾಫ್​ ಸೆಂಚುರಿಗಳಿದ್ರೆ, 2 ಆಕರ್ಷಕ ಶತಕಗಳಿವೆ.

ಚೇಸಿಂಗ್​ನಲ್ಲಿ ಕಿಂಗ್​ ಅನ್ನೋದನ್ನ ಈ ಸೀಸನ್​ನಲ್ಲಿ ಕೊಹ್ಲಿ ಮತ್ತೆ ಮತ್ತೆ ನಿರೂಪಿಸ್ತಿದ್ದಾರೆ. ಅಬ್ಬರವಿಲ್ಲ.. ಆರ್ಭಟವಿಲ್ಲ.. ತನ್ನ ಕೂಲ್​ ಕಾಮ್​ ಆಟದಿಂದಲೇ ವಿರಾಟ್​ ಕೊಹ್ಲಿ, ಎದುರಾಳಿ ತಂಡಗಳ ಪಾಲಿಗೆ ಸ್ವೀಟ್​ ವಿಲನ್​ ಆಗಿರೋದಂತೂ ಸುಳ್ಳಲ್ಲ.

ಇದನ್ನೂ ಓದಿ: ‘ಅಪ್ಪ ನನಗಾಗಿ ಕೆಲಸ ಬಿಟ್ಟರು, ಅಮ್ಮ ಬರೀ 3 ತಾಸು ನಿದ್ರೆ ಮಾಡ್ತಿದ್ದಳು..’ ವೈಭವ್ ಕಷ್ಟದ ಬದುಕು ಹೇಗಿತ್ತು..?

Advertisment