ಕೊಹ್ಲಿ + ಫ್ಯಾನ್ಸ್ + ಚಿನ್ನಸ್ವಾಮಿ = ಡೆಡ್ಲಿ ಕಾಂಬಿನೇಷನ್
ವಿರಾಟ್ ವೈಲೆಂಟ್.. ಫ್ಯಾನ್ಸ್ ಖುಷ್.. ಎದುರಾಳಿಗೆ ನಡುಕ
ಚಿನ್ನಸ್ವಾಮಿಯಲ್ಲಿ ಇಂದು ಕೊಹ್ಲಿಯ ಅಬ್ಬರ ಗ್ಯಾರಂಟಿ
ಬೆಂಗಳೂರಿನ ಚಿನ್ನಸ್ವಾಮಿ ಮೈದಾನ ವಿರಾಟ್ ಕೊಹ್ಲಿ ಕಿಂಗ್ಡಮ್. ಇಲ್ಲಿ ಕಿಂಗ್ ಕೊಹ್ಲಿ ಎಂಟ್ರಿ ಕೊಟ್ರೆ ಸಾಕು ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟುತ್ತದೆ. ಕೊಹ್ಲಿ ಹುಟ್ಟಿದ್ದು ಕರ್ನಾಟಕದಲ್ಲಲ್ಲ. ಆದ್ರೂ ಮನೆ ಮಗನಂತೆ ಆರಾಧಿಸ್ತಾರೆ. ಬೆಂಗಳೂರನ್ನ ಪರ್ಸನಲಿ ಇಷ್ಟ ಪಡುವ ವಿರಾಟ್ಗೆ ಚಿನ್ನಸ್ವಾಮಿಯೇ ಫೇವರಿಟ್. ಯಾಕಂದ್ರೆ ಇಲ್ಲಿ ಕಣಕ್ಕಿಳಿದಾಗ ಕೊಹ್ಲಿ, ವಿರಾಟರೂಪ ಎತ್ತುತ್ತಾರೆ.
ಐಪಿಎಲ್ ಸೀಸನ್-17ರ ಫೀವರ್ ಜೋರಾಗಿದೆ. ಆರ್ಸಿಬಿ ಅಭಿಮಾನಿಗಳ ಉತ್ಸಾಹದ ಮುಂದೆ ಬೆಂಗಳೂರಿನಲ್ಲಿ ಬಿಸಿಲ ತಾಪವೇ ಮಾಯವಾಗಿದೆ. ಇದಕ್ಕೆಲ್ಲಾ ಕಾರಣ ಬೆಂಗಳೂರಿನಲ್ಲಿ ನಡೆದ ಮೊದಲ ಪಂದ್ಯದಲ್ಲೇ ದತ್ತು ಪುತ್ರ ತೋರಿದ ಬ್ಯಾಟಿಂಗ್ ಝಲಕ್.
ಪಂಜಾಬ್ ಎದುರಿನ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿರುವ ವಿರಾಟ್, ಸಾಲಿಡ್ ಟಚ್ನಲ್ಲಿದ್ದಾರೆ. ಕೊಹ್ಲಿಯ ಪವರ್ ಫುಲ್ ಬ್ಯಾಟಿಂಗ್ ಕಣ್ತುಂಬಿಕೊಂಡ ಫ್ಯಾನ್ಸ್ ಎಕ್ಸ್ಪೆಕ್ಟೇಷನ್ ಈಗ ಡಬಲ್ ಆಗಿದೆ. ಅತ್ತ ಎದುರಾಳಿ ತಂಡಗಳ ಎದೆಯಲ್ಲಿ ನಡುಕ ಶುರುವಾಗಿದೆ.
ಚಿನ್ನಸ್ವಾಮಿಯಲ್ಲಿ ಇಂದು ಕೊಹ್ಲಿಯ ಅಬ್ಬರ ಗ್ಯಾರಂಟಿ..!
ಚಿನ್ನಸ್ವಾಮಿಯ ಚಿನ್ನ.. ಅಭಿಮಾನಿಗಳ ನೆಚ್ಚಿನ ಕಿಂಗ್, ಅದು ಒನ್ ಆ್ಯಂಡ್ ಒನ್ಲಿ ವಿರಾಟ್ ಕೊಹ್ಲಿ. ಇದೇ ವಿರಾಟ್ ಕೊಹ್ಲಿ, ಇಂದು ಕೊಲ್ಕತ್ತಾ ಎದುರು ರೈಡ್ ಮಾಡೋದು ಖಾಯಂ. ಈ ಕಾನ್ಫಿಡೆನ್ಸ್ಗೆ ಕಾರಣ ಚಿನ್ನಸ್ವಾಮಿ ಮೈದಾನ. ಹೌದು.., ಚಿನ್ನಸ್ವಾಮಿ ಸ್ಟೇಡಿಯಂ ಕೊಹ್ಲಿಯ ಫೇವರಿಟ್ ಗ್ರೌಂಡ್. ಈ ಗ್ರೌಂಡ್ನಲ್ಲಿ ಕಿಂಗ್ ಕೊಹ್ಲಿ ಮೋಸ್ಟ್ ಡೇಂಜರಸ್.
ಚಿನ್ನಸ್ವಾಮಿಯಲ್ಲಿ ವಿರಾಟ್ ಕೊಹ್ಲಿ..!
ಚಿನ್ನಸ್ವಾಮಿಯಲ್ಲಿ 83 ಪಂದ್ಯಗಳನ್ನಾಡಿರುವ ವಿರಾಟ್, 2777 ರನ್ ಸಿಡಿಸಿದ್ದಾರೆ. 39.67ರ ಸರಾಸರಿಯಲ್ಲಿ ರನ್ ಗಳಿಸಿರುವ ವಿರಾಟ್, 141.10ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಚಿನ್ನಸ್ವಾಮಿಯಲ್ಲಿ ರನ್ ಹೊಳೆಯನ್ನೇ ಹರಿಸಿರುವ ವಿರಾಟ್ ಕೊಹ್ಲಿ, ಸೆಂಚೂರಿ ಮೇಲೆ ಸೆಂಚುರಿ ಸಿಡಿಸಿದ್ದಾರೆ. ಭಯಾನಕ ಆಟವಾಡೋದ್ರಲ್ಲಿ ಸದಾ ಮುಂದಿರ್ತಾರೆ. ಐಪಿಎಲ್ನಲ್ಲಿ ವಿರಾಟ್ ಸಿಡಿಸಿರುವ 7 ಐಪಿಎಲ್ ಶತಕಗಳ ಪೈಕಿ 4 ಸೆಂಚುರಿ ಚಿನ್ನಸ್ವಾಮಿಯಲ್ಲೇ ದಾಖಲಾಗಿವೆ.
ಚಿನ್ನಸ್ವಾಮಿಯ ಸೆಂಚುರಿ ಸ್ಟಾರ್
ಪಂಜಾಬ್ ಎದುರಿನ ಪಂದ್ಯದಲ್ಲಿ ಕೇವಲ 50 ಎಸೆತಗಳಲ್ಲಿ 113 ರನ್ ಚಚ್ಚಿದ್ದ ವಿರಾಟ್, ಗುಜರಾತ್ ಲಯನ್ಸ್ ವಿರುದ್ಧ 55 ಎಸೆತಗಳಿಂದ 109 ರನ್ ಕೊಳ್ಳೆ ಹೊಡೆದಿದ್ದರು. ಪುಣೆ ಸೂಪರ್ ಜೈಂಟ್ಸ್ ಎದುರು 58 ಎಸೆತಗಳಲ್ಲಿ ಅಜೇಯ 108 ರನ್ ಬಾರಿಸಿದ್ದ ವಿರಾಟ್, ಕಳೆದ ಸೀಸನ್ನಲ್ಲಿ ಗುಜರಾತ್ ಟೈಟನ್ಸ್ ಎದುರು 61 ಎಸೆತಗಳಲ್ಲಿ ಅಜೇಯ 101 ರನ್ ದಾಖಲಿಸಿದ್ರು.
ಫ್ಯಾನ್ಸ್ ಮುಂದೆ ಆಡೋದು ಕಿಂಗ್ ಕೊಹ್ಲಿಗೆ ಬಲು ಇಷ್ಟ..!
ವಿರಾಟ್ ಕೊಹ್ಲಿ ಆ್ಯಂಡ್ ಆರ್ಸಿಬಿ ಫ್ಯಾನ್ಸ್, ಚಿನ್ನಸ್ವಾಮಿ ಗ್ರೌಂಡ್.. ಈ ಕಾಂಬಿನೇಷನ್ ನಿಜಕ್ಕೂ ಡೆಡ್ಲಿ.. ಆರ್ಸಿಬಿ ಅಭಿಮಾನಿಗಳ ಜೊತೆ ಎಮೋಷನಲಿ ಕನೆಕ್ಟ್ ಆಗಿರೋ ವಿರಾಟ್ಗೆ, ನಮ್ಮ ಅಭಿಮಾನಿಗಳ ಮುಂದೆ ಬ್ಯಾಟ್ ಬೀಸೋದು ಅಂದ್ರೆ ಎಲ್ಲಿಲ್ಲದ ಇಷ್ಟ. ಹೀಗಾಗಿ ಫ್ಯಾನ್ಸ್ ಹುರಿದುಂಬಿಸಿದಷ್ಟು ಕಿಂಗ್ ಕೊಹ್ಲಿಯ ಬ್ಯಾಟಿಂಗ್ ಘರ್ಜನೆ ಜೋರಾಗೋದು ಫಿಕ್ಸ್.
ಅಭಿಮಾನಿಗಳ ಕನಸು ನನಸೂ ಮಾಡೋಕೆ ಪಣತೊಟ್ಟಿರೋ ವಿರಾಟ್, ತವರಿನಲ್ಲೇ ಹೆಚ್ಚು ಪಂದ್ಯಗಳನ್ನ ಗೆದ್ದು, ಫ್ಲೇ ಆಫ್ ಹಾದಿ ಸುಗಮವಾಗಿಸೋ ಲೆಕ್ಕಚಾರದಲ್ಲಿದ್ದಾರೆ. ಸಾಲಿಡ್ ಟಚ್ನಲ್ಲಿರೋ ಕೊಹ್ಲಿ ಇಂದು ಕೆಕೆಆರ್ ಎದುರು ಘರ್ಜಿಸ್ತಾರಾ ಕಾದು ನೊಡೋಣ.
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್