ಬೆಂಗಳೂರು ಪೊಲೀಸರ ಖುಷಿ ಪಡಿಸಿದ ಕಿಂಗ್ ಕೊಹ್ಲಿ.. ರನ್ ಮಷಿನ್ ಸರಳತೆಗೆ ಸೆಲ್ಯೂಟ್ ಹೊಡೆದ ಅಧಿಕಾರಿಗಳು

author-image
Ganesh
Updated On
ಬೆಂಗಳೂರು ಪೊಲೀಸರ ಖುಷಿ ಪಡಿಸಿದ ಕಿಂಗ್ ಕೊಹ್ಲಿ.. ರನ್ ಮಷಿನ್ ಸರಳತೆಗೆ ಸೆಲ್ಯೂಟ್ ಹೊಡೆದ ಅಧಿಕಾರಿಗಳು
Advertisment
  • ಪೊಲೀಸರ ಮನವಿಗೆ ‘ಆಗಲ್ಲ’ ಎನ್ನಲಿಲ್ಲ ವಿರಾಟ್
  • ಬೆಂಗಳೂರಿಗೆ ವಿರಾಟ್ ಯಾಕೆ ಬಂದಿದ್ದಾರೆ ಗೊತ್ತಾ?
  • ಏಷ್ಯಾ ಕಪ್​​ನಲ್ಲಿ ಕೊಹ್ಲಿ ಮೇಲೆ ಭಾರೀ ನಿರೀಕ್ಷೆ​​

ಯೋ ಯೋ ಟೆಸ್ಟ್​ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬಂದಿದ್ದ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್​​ಮನ್ ವಿರಾಟ್ ಕೊಹ್ಲಿ ನಗರದ ಪೊಲೀಸ್ ಅಧಿಕಾರಿಗಳನ್ನು ಫುಲ್ ಖುಷ್ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳ ಮನವಿಯಂತೆ ವಿರಾಟ್ ಕೊಹ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

ಪೊಲೀಸರ ಗ್ರೂಪ್ ಫೋಟೋಗೆ ವಿರಾಟ್ ಸಾಥ್ ನೀಡಿದ್ದು, ಭದ್ರತಾ ಪಡೆಗಳು ಫುಲ್ ಖುಷ್ ಆಗಿದ್ದಾರೆ. ಅಂದ್ಹಾಗೆ ವಿರಾಟ್ ಕೊಹ್ಲಿ ಫಿಟ್ನೆಸ್​ ಟೆಸ್ಟ್​ಗೆ ಒಳಪಡಲು ವಿರಾಟ್ ಬೆಂಗಳೂರಿಗೆ ಬಂದಿದ್ದಾರೆ. ಈ ಪರೀಕ್ಷೆಯಲ್ಲಿ ಜಸ್ಟ್ ಪಾಸ್ ಆಗಿರುವ ವಿರಾಟ್, ಮುಂದಿನ ಏಷ್ಯಾ ಕಪ್​​ ಪಂದ್ಯಗಳಲ್ಲಿ ಆಟಲಿದ್ದಾರೆ.

ಆಗಸ್ಟ್ 30 ರಿಂದ ಏಷ್ಯಾ ಕಪ್ ಪಂದ್ಯಗಳು ನಡೆಯಲಿವೆ. ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಆಯೋಜನೆಗೊಳ್ಳುವ ಪಂದ್ಯದಲ್ಲಿ ವಿರಾಟ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ರೋಹಿತ್ ಶರ್ಮಾ (ಕ್ಯಾಪ್ಟನ್​​), ಶುಭ್ಮನ್​​ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ವೈಸ್​​ ಕ್ಯಾಪ್ಟನ್​), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಏಷ್ಯಕಪ್ ತಂಡದಲ್ಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment