/newsfirstlive-kannada/media/post_attachments/wp-content/uploads/2024/08/Kohli_Kolkata.jpg)
ಕೋಲ್ಕತ್ತಾ: ಇತ್ತೀಚೆಗೆ ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಕೊಂದು ಹಾಕಲಾಯ್ತು. ಈ ಕೃತ್ಯವನ್ನು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಖಂಡಿಸಿದ್ದಾರೆ.
ಕೊಹ್ಲಿ ಹೇಳಿದ್ದೇನು..?
ಇದು ಬಹಳ ನೋವಿನ ವಿಚಾರ. ಈ ಸುದ್ದಿ ಕೇಳಿ ನನಗೆ ಆಘಾತ ಆಯ್ತು. ಈ ರೀತಿಯ ಕೆಟ್ಟ ಸಮಾಜದ ಭಾಗವಾಗಿದ್ದಕ್ಕೆ ನನಗೆ ನಾಚಿಕೆ ಆಗುತ್ತಿದೆ. ನಾವು ನಮ್ಮ ಆಲೋಚನೆ ಬದಲಾಯಿಸಬೇಕಿದೆ. ಹೆಣ್ಣು ಮತ್ತು ಗಂಡನ್ನು ಸಮಾನವಾಗಿ ನೋಡಬೇಕಿದೆ. ಕೃತ್ಯವನ್ನು ತಡೆಯದೆ ನೋಡುತ್ತಾ ನಿಂತಿದ್ದವರು ಹೇಡಿಗಳು ಎಂದು ಭಾವಿಸುತ್ತೇನೆ. ಇಂಥದ್ದೇ ಘಟನೆ ನಿಮ್ಮ ಮನೆ ಹೆಣ್ಣುಮಕ್ಕಳಿಗೆ ನಡೆದಾಗ ನೋಡುತ್ತಾ ಸುಮ್ಮನೇ ಇರ್ತೀರಾ? ಎಂಬ ಪ್ರಶ್ನೆಯನ್ನು ಕೊಹ್ಲಿ ಕೇಳಿದ್ದಾರೆ. ಕೊಹ್ಲಿ ಆಕ್ರೋಶದ ನುಡಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
We want #JusticeForMoumita
PM Narendra Modi, pls. impose President Rules in Bengal.#ViratKohli#KolkataDoctorDeathCasepic.twitter.com/33mOtUFtlP— Stranger (@amarDgreat)
We want #JusticeForMoumita
PM Narendra Modi, pls. impose President Rules in Bengal.#ViratKohli#KolkataDoctorDeathCasepic.twitter.com/33mOtUFtlP— Stranger (@amarDgreat) August 18, 2024
">August 18, 2024
ಇನ್ನು, ಈ ಕೃತ್ಯವನ್ನು ಖಂಡಿಸಿ ನ್ಯಾಯಕ್ಕಾಗಿ ಆಗ್ರಹಿಸಿ ಇಡೀ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಕೂಡಲೇ ಅತ್ಯಾಚಾರಿಗಳನ್ನು ಬಂಧಿಸಿ ತಮ್ಮ ಮುಂದೆ ಹಾಜರುಪಡಿಸಿ ಎಂದು ಹೈಕೋರ್ಟ್ ಆದೇಶಿಸಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಇದನ್ನೂ ಓದಿ: IPL 2025: ಆರ್ಸಿಬಿ ಹೊಸ ರೀಟೈನ್ ಲಿಸ್ಟ್ ಲೀಕ್; ಉತ್ತಮ ಪ್ರದರ್ಶನ ನೀಡಿದ್ದ ಸ್ಟಾರ್ ಆಟಗಾರರೇ ಔಟ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ