newsfirstkannada.com

RCB ಫ್ಯಾನ್ಸ್​ಗೆ ಖುಷಿಯ ಸುದ್ದಿ! ಲಕ್ನೋ ವಿರುದ್ಧ ಸೋತರು ತವರಿನಲ್ಲೇ ದಾಖಲೆ ಬರೆದ ಕಿಂಗ್ ಕೊಹ್ಲಿ! 

Share :

Published April 3, 2024 at 9:16am

    ನಿನ್ನೆ ಲಕ್ನೋ ವಿರುದ್ಧ 28 ರನ್​ಗಳ ಹೀನಾಯ ಸೋಲುಂಡ ಆರ್​ಸಿಬಿ

    ಪಂದ್ಯ ಸೋತರೂ ಚಿನ್ನಸ್ವಾಮಿ ಮೈದಾನದಲ್ಲೇ ದಾಖಲೆ ಬರೆದ ವಿರಾಟ್​ ಕೊಹ್ಲಿ

    ಪಂದ್ಯ ಸೋತ ಬೇಸರದಲ್ಲಿದ್ದ ಫ್ಯಾನ್ಸ್​ಗೆ ಕೊಹ್ಲಿ ದಾಖಲೆ ಕೇಳಿ ಫುಲ್​ ಖುಷ್

ನಿನ್ನೆ ನಡೆದ ಲಕ್ನೋ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಹೀನಾಯ ಸೋಲು ಕಂಡರು ವಿರಾಟ್​ ಕೊಹ್ಲಿ ಮಾತ್ರ ಅಪರೂಪದ ಸಾಧನೆ ಮೆರೆದಿದ್ದಾರೆ. ತವರಿನಲ್ಲೇ ತನ್ನ ದಾಖಲೆಯನ್ನ ಬರೆಯುವ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ನಿನ್ನೆ ಆರ್​ಸಿಬಿ ಮತ್ತು ಲಕ್ನೋ ವಿರುದ್ಧ ಪಂದ್ಯಾಟ ಏರ್ಪಟ್ಟಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ ನಡೆದಿತ್ತು. ಆದರೆ ಕೈಕೊಟ್ಟ ಆರ್​ಸಿಬಿ ಆಟಗಾರರ ಆಟದಿಂದ 28 ರನ್​ಗಳ ಸೋಲುಂಡಿತು. ಆದರೆ ಕೊಹ್ಲಿ ಮಾತ್ರ ನಿನ್ನೆ ಲಕ್ನೋ ವಿರುದ್ಧ ಆಡಿದ ಪಂದ್ಯದಲ್ಲಿ ದಾಖಲೆ ಬರೆದಿದ್ದಾರೆ.

ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ಕೊಹ್ಲಿ 100ನೇ ಟಿ20 ಆಡುವ ಮೂಲಕ ಗುರುತಿಸಿಕೊಂಡಿದ್ದಾರೆ. ಮಾತ್ರವಲ್ಲದೆ, ಒಂದೇ ಸ್ಥಳದಲ್ಲಿ 100 ಟಿ20 ಪಂದ್ಯಗಳನ್ನು ಆಡಿದ ಮೊದಲ ಭಾರತೀಯ ಆಟಗಾರ ಎಂದೆನಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

2008ರಿಂದ ಕೊಹ್ಲಿ ಆಟ

ಇನ್ನು ಕಿಂಗ್​ ಕೊಹ್ಲಿ ಚಿನ್ನಸ್ವಾಮಿಯಲ್ಲಿ 2008ರಿಂದ ಐಪಿಎಲ್​ ಆಡಲು ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ಒಂದೇ ಫ್ರಾಂಚೈಸಿಯಲ್ಲಿ ಆಡುತ್ತಿರುವ ಆಟಗಾರ ಎಂಬ ಮತ್ತೊಂದು ಹೆಗ್ಗಳಿಕೆ ಅವರ ಮೇಲಿದೆ.

ಕೊಹ್ಲಿ ಚಿನ್ನಸ್ವಾಮಿಯಲ್ಲಿ ಬಾರಿಸಿದ ರನ್​ ಎಷ್ಟು?

ಕೊಹ್ಲಿ ಚಿನ್ನಸ್ವಾಮಿಯಲ್ಲಿ 100 ಟಿ20 ಪಂದ್ಯಗಳನ್ನು ಆಡಿದ್ದಲ್ಲದೆ, 3276 ರನ್​ಗಳನ್ನು ಗಳಿಸಿದ್ದಾರೆ. ಕೊಹ್ಲಿ ನಂತರದ ಸ್ಥಾನದಲ್ಲಿ ರೋಹಿತ್​ ಶರ್ಮಾ ಕಾಣಿಸಿಕೊಂಡಿದ್ದಾರೆ. ಇವರು ಮುಂಬೈನ ವಾಂಖೆಡೆಯಲ್ಲಿ 80 ಪಂದ್ಯ ಆಡಿದ್ದಾರೆ. ನಂತರ ಸ್ಥಾನದಲ್ಲಿ ಧೋನಿ ಕಾಣಿಸಿಕೊಂಡಿದ್ದಾರೆ. ಚೆನ್ನೈನ ಚಿದಂಬರಂನಲ್ಲಿ 69 ಪಂದ್ಯವನ್ನಾಡಿದದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RCB ಫ್ಯಾನ್ಸ್​ಗೆ ಖುಷಿಯ ಸುದ್ದಿ! ಲಕ್ನೋ ವಿರುದ್ಧ ಸೋತರು ತವರಿನಲ್ಲೇ ದಾಖಲೆ ಬರೆದ ಕಿಂಗ್ ಕೊಹ್ಲಿ! 

https://newsfirstlive.com/wp-content/uploads/2024/04/Kohli.jpg

Load More