ವಿಶ್ವ ಕ್ರಿಕೆಟ್ನ ಸಾಮ್ರಾಟ ಕೊಹ್ಲಿಗೂ ಕಾಡಿತ್ತು ಆತಂಕ
ಅಫ್ಘಾನಿಸ್ತಾನ ವಿರುದ್ಧ ಕೊಹ್ಲಿ ಚೊಚ್ಚಲ ಟಿ20 ಶತಕ
2022ರ ಏಷ್ಯಾಕಪ್ ಟೂರ್ನಿ ವೇಳೆ ಕೊಹ್ಲಿಗೆ ಏನಾಗಿತ್ತು?
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 81ನೇ ಶತಕಕ್ಕಾಗಿ ಕಾಯ್ತಿರುವ ಟೀಮ್ ಇಂಡಿಯಾ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ, ಆ ಒಂದು ಶತಕ ಸಿಡಿಸಿದ ಬಳಿಕ ಕಣ್ಣೀರು ಹಾಕಿದ್ರಂತೆ. ಆ ಶತಕ ಯಾವುದು? ಕೊಹ್ಲಿ ಕಣ್ಣಲ್ಲಿ ನೀರು ಬಂದಿದ್ದೇಕೆ? ಅನ್ನೋ ವಿವರ ಹೀಗಿದೆ.
ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ನ ಸಾಮ್ರಾಟ. ಶತಕಗಳ ಸರದಾರ, ಇವರ ಬ್ಯಾಟಿಂಗ್ ರೌದ್ರವತಾರಕ್ಕೆ ಬೌಲರ್ಗಳು ಕಣ್ಣೀರು ಹಾಕಿರೋದು ಗೊತ್ತು. ಕೊಹ್ಲಿ ಕಣ್ಣೀರು ಸುರಿಸಿದ ಕಥೆ ನಿಮಗೆ ಗೊತ್ತಾ? ಅದು 2022ರ ಏಷ್ಯಾಕಪ್ ಟೂರ್ನಿ. ಆ ಟೂರ್ನಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಕೊಹ್ಲಿ ಚೊಚ್ಚಲ ಟಿ20 ಶತಕ ಸಿಡಿಸಿದ್ರು.
ಇದನ್ನೂ ಓದಿ: ಔಟ್ ಆಗಿದ್ಕೆ ಕೋಪ.. ನೀರಿನ ಬಾಕ್ಸ್ಗೆ ಬ್ಯಾಟ್ನಿಂದ ಬಡಿದ ಕೊಹ್ಲಿ -ವಿಡಿಯೋ
ಆ ಶತಕದ ಬಳಿಕ ವಿರಾಟ್ ಕೊಹ್ಲಿ ಕಣ್ಣೀರು ಹಾಕಿದ್ರಂತೆ. ಅಂದ್ಹಾಗೆ ಅಂದು ಕೊಹ್ಲಿ ಕಣ್ಣೀರು ಹಾಕಿದ್ದಕ್ಕೆ ಕಾರಣವೂ ಇದೆ. 2019ರ ನವೆಂಬರ್ ಬಳಿಕ ವಿರಾಟ್ ಕೊಹ್ಲಿ ಶತಕದ ಬರ ಎದುರಿಸಿದ್ರು. ಒಂದಲ್ಲ.. ಎರಡಲ್ಲ.. ಬರೋಬ್ಬರಿ 3 ವರ್ಷಗಳ ಕಾಲ ರನ್ ಬರ ಎದುರಿಸಿದ್ದ ಕೊಹ್ಲಿ ಭಾರೀ ಟೀಕೆಗೆ ಗುರಿಯಾಗಿದ್ದರು.
ಏಷ್ಯಾಕಪ್ನಲ್ಲಿ ಅಫ್ಘನ್ ಎದುರು 66 ಎಸೆತಗಳಲ್ಲೇ ಅಜೇಯ 122 ರನ್ ಸಿಡಿಸಿದ ಕೊಹ್ಲಿ, ಶತಕದ ಬರ ನೀಗಿಸಿಕೊಂಡಿದ್ದರು. ಈ ಶತಕದ ಬಳಿಕ ಆನ್ ಫೀಲ್ಡ್ನಲ್ಲಿ ನಕ್ಕು ನಲಿದಿದ್ದ ವಿರಾಟ್, ಬಳಿಕ ಪತ್ನಿ ಅನುಷ್ಕಾ ಶರ್ಮಾ ಜೊತೆ ಮಾತನಾಡುವಾಗ ಕಣ್ಣೀರು ಹಾಕಿದ್ದರಂತೆ. ಈ ವಿಚಾರವನ್ನು ಸಂದರ್ಶನವೊಂದರಲ್ಲಿ ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಯಂತ್ರ ಇಂಡಿಯಾದಲ್ಲಿ 3 ಸಾವಿರಕ್ಕೂ ಹೆಚ್ಚು ಉದ್ಯೋಗ.. SSLC, ITI ಆದವರಿಗೆ ಅವಕಾಶ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್