/newsfirstlive-kannada/media/post_attachments/wp-content/uploads/2024/06/Kohli-Batting.jpg)
ಬಾರ್ಬಡೋಸ್ ಬ್ರಿಡ್ಜ್‌ಟೌನ್ ಮೈದಾನದಲ್ಲಿ ನಡೆಯುತ್ತಿರೋ 2024ರ ಟಿ20 ವಿಶ್ವಕಪ್ ಫೈನಲ್ ಹೈವೋಲ್ಟೇಜ್ ಪಂದ್ಯದಲ್ಲಿ ಸೌತ್ ಆಫ್ರಿಕಾ, ಟೀಮ್ ಇಂಡಿಯಾ ಮುಖಾಮುಖಿ ಆಗಿವೆ. ಟಾಸ್ ಗೆದ್ದ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಫಸ್ಟ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಏಡನ್ ಮರ್ಕ್ರಮ್ ನಾಯಕತ್ವದ ಸೌತ್ ಆಫ್ರಿಕಾ ಬೌಲಿಂಗ್ ಮಾಡುತ್ತಿದೆ.
ಟೀಮ್ ಇಂಡಿಯಾದ ಪರ ಓಪನರ್ ಆಗಿ ಬಂದ ಕ್ಯಾಪ್ಟನ್ ರೋಹಿತ್ ಶರ್ಮಾ ಎಂದಿನಂತೆ ಅಬ್ಬರಿಸಲು ಮುಂದಾದ್ರು. ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಶುರು ಮಾಡಿದ ರೋಹಿತ್ ಕೇಶವ್ ಮಹಾರಾಜ್ ಬೌಲಿಂಗ್ನಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಚಚ್ಚಿದ್ರು. ಬಳಿಕ ಮತ್ತೊಂದು ಬೌಂಡರಿ ಬಾರಿಸಲು ಹೋಗಿ ರೋಹಿತ್ ಕ್ಯಾಚ್ ಕೊಟ್ಟರು.
ತಾನು ಆಡಿದ 3 ಬಾಲ್ನಲ್ಲಿ 2 ಫೋರ್ ಸಮೇತ 9 ರನ್ ಗಳಿಸಿ ಪೆವಿಲಿಯನ್ಗೆ ತೆರಳಿದ್ರು. ಐಸಿಸಿ ಮೆಗಾ ಟೂರ್ನಮೆಂಟ್ನಲ್ಲಿ ಸಿಕ್ಕ ಅವಕಾಶವನ್ನೂ ಕೈ ಚೆಲ್ಲಿದ ರೋಹಿತ್ ಶರ್ಮಾ ಎಂದು ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ.
ಪಂತ್ನಿಂದ ಬೇಜವಾಬ್ದಾರಿ ಆಟ..!
ಇನ್ನೊಂದೆಡೆ ಆರಂಭಿಕ ಆಘಾತಕ್ಕೆ ಸಿಲುಕಿದ ಟೀಮ್ ಇಂಡಿಯಾಗೆ ಆಸರೆ ಆಗಬೇಕಿದ್ದ ರಿಷಭ್ ಪಂತ್ ಬೇಜವಾಬ್ದಾರಿಯಿಂದ ಬ್ಯಾಟಿಂಗ್ ಮಾಡಿದ್ರು. ರೋಹಿತ್ ಔಟಾದ ಬೆನ್ನಲ್ಲೇ ಕ್ರೀಸ್ಗೆ ಬಂದ ಪಂತ್ ಕೇಶವ್ ಮಹಾರಾಜ್ ಬೌಲಿಂಗ್ ಅನಗತ್ಯ ಹೊಡೆತಕ್ಕೆ ಕೈ ಹಾಕಿ ಕ್ಯಾಚ್ ನೀಡಿದ್ರು. ಈ ವಿಚಾರಕ್ಕೆ ಸಿಟ್ಟಿಗೆದ್ದಿರೋ ಟೀಮ್ ಇಂಡಿಯಾ ಫ್ಯಾನ್ಸ್ ಪಂತ್ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ.
ನೀನು ದೊಡ್ಡ ಫ್ರಾಡ್. ನಿನಗೆ ಅವಕಾಶ ನೀಡಿದ ಬಿಸಿಸಿಐಗೆ ನಾಚಿಕೆ ಆಗಬೇಕು. ಇಂಪಾರ್ಟೆಂಟ್ ಪಂದ್ಯಗಳಲ್ಲಿ ಆಡದೆ ಮೋಸ ಮಾಡುತ್ತಿರೋ ನಿನಗೂ ನಾಚಿಕೆ ಆಗಬೇಕು ಎಂದು ಪಂತ್ ವಿರುದ್ಧ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಬ್ಬರಿಸಿದ ಅಕ್ಷರ್ ಪಟೇಲ್..!
ಸಾಲು ಸಾಲು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಮ್ ಇಂಡಿಯಾಗೆ ಅಕ್ಷರ್ ಪಟೇಲ್ ಬಲ ತುಂಬಿದ್ರು. ಭಾರೀ ಒತ್ತಡದ ಮಧ್ಯೆ ಕೊಹ್ಲಿಗೆ ಸಾಥ್ ನೀಡಿ ಸಿಕ್ಸರ್ಗಳ ಸುರಿಮಳೆಗೈದರು. ತಾನು ಆಡಿದ 31 ಬಾಲ್ನಲ್ಲಿ 4 ಭರ್ಜರಿ ಸಿಕ್ಸರ್, 1 ಫೋರ್ ಸಮೇತ 47 ರನ್ ಚಚ್ಚಿದ್ರು. ಕೊನೆಗೆ ಡಿಕಾಕ್ನಿಂದ ರನೌಟ್ ಆದ್ರು. ಇವರ ಸ್ಟ್ರೈಕ್ ರೇಟ್ 150ಕ್ಕೂ ಹೆಚ್ಚು ಇತ್ತು.
ಟೀಮ್ ಇಂಡಿಯಾ ಸೇವಿಯರ್ ಕೊಹ್ಲಿ..!
ಓಪನರ್ ಆಗಿ ಬಂದಿದ್ದ ಕೊಹ್ಲಿ ಕೊನೆವರೆಗೂ ಕ್ರೀಸ್ನಲ್ಲಿ ನಿಂತು ಬ್ಯಾಟ್ ಬೀಸಿದ್ರು. ಒತ್ತಡದ ಮಧ್ಯೆ ಕೂಡ ಸ್ಟ್ರೈಕ್ ರೊಟೇಟ್ ಮಾಡುತ್ತಾ ವಿಕೆಟ್ ಬೀಳಿಸದೆ ಅತ್ಯುತ್ತಮ ಆಟ ಆಡಿದ್ರು. ತಾನು ಆಡಿದ 59 ಬಾಲ್ನಲ್ಲಿ 2 ಭರ್ಜರಿ ಸಿಕ್ಸರ್, ಬ್ಯಾಕ್ ಟು ಬ್ಯಾ 6 ಫೋರ್ ಸಮೇತ 76 ರನ್ ಸಿಡಿಸಿದ್ರು.
ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ