/newsfirstlive-kannada/media/post_attachments/wp-content/uploads/2025/04/KL_RAHUL_KOHLI-1-1.jpg)
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇನ್ನೇನು ಕೆಲವೇ ಕ್ಷಣಗಳಲ್ಲಿ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಅಖಾಡಕ್ಕೆ ಧುಮಕಲಿವೆ. ಅಭಿಮಾನಿಗಳು ಕೂಡ ಈ ಹೈವೋಲ್ಟೇಜ್​ ಮ್ಯಾಚ್ ನೋಡಲು ಈಗಾಗಲೇ ಸ್ಟೇಡಿಯಂನತ್ತ ಆಗಮಿಸಿದ್ದಾರೆ. ಇದರ ನಡುವೆ ಆರ್​ಸಿಬಿಯ ಸ್ಟಾರ್ ಬ್ಯಾಟ್ಸ್​ಮನ್​ ವಿರಾಟ್ ಕೊಹ್ಲಿ ಅವರು, ಕೆ.ಎಲ್​ ರಾಹುಲ್​ ಬಳಿಗೆ ಹೋಗಿ ಡ್ಯಾನ್ಸ್ ಮಾಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್​ ಟೀಮ್​ನ ಸ್ಟಾರ್ ಬ್ಯಾಟರ್ ಆಗಿರುವ ಕನ್ನಡಿಗ ಕೆ.ಎಲ್ ರಾಹುಲ್ ಅವರು ಅಭ್ಯಾಸ ಮುಗಿಸಿಕೊಂಡು ಬೌಂಡರಿ ಲೈನ್​ ಬಳಿ ನಿಂತಿರುತ್ತಾರೆ. ಈ ವೇಳೆ ಕೆ.ಎಲ್ ರಾಹುಲ್​ ಇರುವಲ್ಲಿಗೆ ಬರುತ್ತಾ ಆರ್​ಸಿಬಿಯ ಸ್ಟಾರ್​ ಕಿಂಗ್​ ಕೊಹ್ಲಿ ಡ್ಯಾನ್ಸ್​ ಮಾಡಿದ್ದಾರೆ. ರಾಹುಲ್​ ಅವರ ಬಳಿ ಬರುತ್ತಿದ್ದಂತೆ ಕೊಹ್ಲಿ ಡ್ಯಾನ್ಸ್​ ಮಾಡಿರುವುದು ಫ್ಯಾನ್ಸ್​ಗೆ ಕುತೂಹಲ ಮೂಡಿಸಿದೆ. ಬಳಿಕ ಹ್ಯಾಂಡ್​ಶೇಕ್ ಮಾಡಿ ಇಬ್ಬರು ಸ್ಟಾರ್​ ಬ್ಯಾಟ್ಸ್​​​ಮನ್​ಗಳು ಪರಸ್ಪರ ತಬ್ಬಿಕೊಂಡು ಪಂದ್ಯದ ಬಗ್ಗೆ ಚರ್ಚೆ ಮಾಡಿದ್ದಾರೆ.
ಕೆ.ಎಲ್ ರಾಹುಲ್​ ಬಳಿ ಕೊಹ್ಲಿ ಡ್ಯಾನ್ಸ್​ ಮಾಡಿರುವುದು ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ನೆಟ್ಟಿಗರು ಹಲವಾರು ಕಮೆಂಟ್ಸ್​​ಗಳನ್ನು ಮಾಡುತ್ತ, ಕೆಲವರು ರೀಟ್ವೀಟ್ ಮಾಡಿ ಖುಷಿ ಪಡುತ್ತಿದ್ದಾರೆ. ಕ್ರಿಕೆಟ್​ನಲ್ಲಿ ಕೆ.ಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಒಳ್ಳೆಯ ಸ್ನೇಹಿತರು. ಟೀಮ್​ ಇಂಡಿಯಾದಲ್ಲಿ ಇಬ್ಬರು ಬ್ಯಾಟಿಂಗ್ ಮಾಡುವಾಗ ಒಬ್ಬರನೊಬ್ಬರು ಪ್ರೋತ್ಸಾಹಿಸಿದ್ದು ಇದೆ.
ಐಪಿಎಲ್ 2025ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 8 ಪಂದ್ಯಗಳಿಂದ 6ರಲ್ಲಿ ಗೆಲುವು ಪಡೆದು ಉಳಿದ ಎರಡರಲ್ಲಿ ಸೋಲುಂಡಿದೆ. ಇದರಿಂದ ಪಾಯಿಂಟ್ ಪಟ್ಟಿಯಲ್ಲಿ ಗುಜರಾತ್​ ನಂತರದ 2ನೇ ಸ್ಥಾನದಲ್ಲಿದ್ದಾರೆ. ಆರ್​ಸಿಬಿ ಕೂಡ 9 ಪಂದ್ಯಗಳನ್ನು ಆಡಿದ್ದು 6 ಪಂದ್ಯಗಳನ್ನು ಗೆದ್ದು ತವರಿನಲ್ಲಿ ಆಡಿದ ಮೂರು ಮ್ಯಾಚ್​ಗಳಲ್ಲಿ ಸೋತು ಈಗ ಪಾಯಿಂಟ್​ ಪಟ್ಟಿಯಲ್ಲಿ ಡೆಲ್ಲಿ ನಂತರದ ಸ್ಥಾನ 3ನೇ ಸ್ಥಾನದಲ್ಲಿದೆ.
Virat Kohli fans and KL rahul fans fighting each other is the most heart breaking thing for me 💔 #RCBvsDC#IPL2025pic.twitter.com/2kQpxp4Fk0
— Rahulian 🐦 (@KlRahulNTR)
Virat Kohli fans and KL rahul fans fighting each other is the most heart breaking thing for me 💔 #RCBvsDC#IPL2025pic.twitter.com/2kQpxp4Fk0
— Rahulian 🐦 (@KlRahulNTR) April 27, 2025
">April 27, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ