ಖುಷಿಯಲ್ಲಿ ತಾಯಿ ಜೊತೆ ಸಖತ್​ ಸ್ಟೆಪ್ಸ್​ ಹಾಕಿದ ಕೊಹ್ಲಿ; ವಿರಾಟ್​ ಡ್ಯಾನ್ಸ್​ ವಿಡಿಯೋ ವೈರಲ್​!

author-image
Ganesh Nachikethu
Updated On
ಖುಷಿಯಲ್ಲಿ ತಾಯಿ ಜೊತೆ ಸಖತ್​ ಸ್ಟೆಪ್ಸ್​ ಹಾಕಿದ ಕೊಹ್ಲಿ; ವಿರಾಟ್​ ಡ್ಯಾನ್ಸ್​ ವಿಡಿಯೋ ವೈರಲ್​!
Advertisment
  • ಟೀಮ್ ಇಂಡಿಯಾದ ಸ್ಟಾರ್​ ಬ್ಯಾಟರ್​​​ ವಿರಾಟ್​ ಕೊಹ್ಲಿ..!
  • ಕೊಹ್ಲಿ ಕ್ರಿಕೆಟ್​ ಮಾತ್ರವಲ್ಲ ಡ್ಯಾನ್ಸ್​​​ ಮಾಡೋದ್ರಲ್ಲೂ ಎತ್ತಿದ ಕೈ
  • ತಾಯಿ ಸರೋಜ್​​ ಕೊಹ್ಲಿ ಜತೆ ಸಖತ್​ ಸ್ಟೆಪ್ಸ್​ ಹಾಕಿದ ವಿರಾಟ್

ಟೀಮ್ ಇಂಡಿಯಾದ ಸ್ಟಾರ್​ ಬ್ಯಾಟರ್​​​ ವಿರಾಟ್​ ಕೊಹ್ಲಿ. ಇವರು ಕೇವಲ ಕ್ರಿಕೆಟ್​ ಮಾತ್ರವಲ್ಲ ಎಂಜಾಯ್​ ಮಾಡೋದ್ರಲ್ಲೂ ಎತ್ತಿದ ಕೈ. ಅದರಲ್ಲೂ ಕೊಹ್ಲಿ ಅವರಿಗೆ ಡ್ಯಾನ್ಸ್​ ಮಾಡೋದು ಎಂದರೆ ಬಹಳ ಇಷ್ಟ. ಮೈದಾನದಲ್ಲೂ ಎಷ್ಟೋ ಬಾರಿ ಡ್ಯಾನ್ಸ್​ ಮಾಡಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇದರ ಮಧ್ಯೆ ಕೊಹ್ಲಿ ತನ್ನ ತಾಯಿಯೊಂದಿಗೆ ಸಖತ್​ ಸ್ಟೆಪ್ಸ್​ ಹಾಕಿರೋ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲೇನಿದೆ?

ವಿಡಿಯೋದಲ್ಲಿ ಕೊಹ್ಲಿ ತನ್ನ ತಾಯಿ ಸರೋಜ್ ಕೊಹ್ಲಿ ಜೊತೆ ಡ್ಯಾನ್ಸ್ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿ ಫ್ಯಾನ್ಸ್​ ಫುಲ್​ ಖುಷ್​​ ಆಗಿದ್ದಾರೆ. ಈ ವಿಡಿಯೋ ಕೊಹ್ಲಿ ಮದುವೆಯದ್ದು ಎಂದು ಹೇಳಲಾಗುತ್ತಿದೆ. ಮದುವೆ ಬಳಿಕ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಕೊಹ್ಲಿ ತನ್ನ ತಾಯಿ ಜೊತೆಗೆ ಹಳೆ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ.


">October 6, 2024

ಪಂಜಾಬಿ ಹಾಡಿಗೆ ಟೀಮ್ ಇಂಡಿಯಾದ ಸೂಪರ್ ಸ್ಟಾರ್‌ ಸ್ಟೆಪ್ಸ್‌ ಹಾಕಿದ್ದು, ಈ ಸಂದರ್ಭದಲ್ಲಿ ಕೊಹ್ಲಿ ಬ್ಲ್ಯಾಕ್​​​​ ಕುರ್ತಾ ಧರಿಸಿದ್ದಾರೆ. ಡ್ಯಾನ್ಸ್​ ಮಾಡುತ್ತಾ ತಾವೇ ಹತ್ತಿರ ಬಂದು ತನ್ನ ತಾಯಿ ಕರೆದುಕೊಂಡು ಸ್ಟೆಪ್ಸ್​ ಹಾಕಿದ್ದು ವಿಶೇಷ.

ಕೊಹ್ಲಿ, ಅನುಷ್ಕಾಗೆ ಮದುವೆ ಆಗಿ 7 ವರ್ಷ

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮದುವೆಯಾಗಿ ಬರೋಬ್ಬರಿ 7 ವರ್ಷಗಳು ಆಗಿವೆ. ಸದ್ಯ ಈ ಜೋಡಿಗೆ ಇಬ್ಬರು ಮಕ್ಕಳು ಇದ್ದಾರೆ. ಮಗಳ ಹೆಸರು ವಾಮಿಕಾ ಮತ್ತು ಮಗನಿಗೆ ಅಕಾಯ್​​ ಎಂದು ಹೆಸರು ಇಡಲಾಗಿದೆ.

ಇದನ್ನೂ ಓದಿ:ಆರ್​​​ಸಿಬಿ ಉಳಿಸಿಕೊಳ್ಳೋ ಅಚ್ಚರಿ ಆಟಗಾರರು ಇವರೇ! ಸ್ಟೋರಿ ಓದಿದ್ರೆ ಸರ್ಪ್ರೈಸ್​ ಆಗ್ತೀರಾ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment